← Genesis (40/50) → |
1. | ಇವುಗಳಾದ ಮೇಲೆ ಐಗುಪ್ತದ ಅರಸನ ಪಾನದಾಯಕನೂ ರೊಟ್ಟಿಗಾರನೂ ಐಗು ಪ್ತದ ಅರಸನಾದ ತಮ್ಮ ಪ್ರಭುವಿಗೆ ಅಪರಾಧ ಮಾಡಿದರು. |
2. | ಆಗ ಫರೋಹನು ಪಾನದಾಯಕರಲ್ಲಿ ಮುಖ್ಯಸ್ಥನೂ ರೊಟ್ಟಿಗಾರರಲ್ಲಿ ಮುಖ್ಯಸ್ಥನೂ ಆಗಿದ್ದ ಅವನ ಇಬ್ಬರು ಉದ್ಯೋಗಸ್ಥರ ಮೇಲೆ ಕೋಪಿಸಿ ಕೊಂಡು |
3. | ಅವರನ್ನು ಮೈಗಾವಲಿನವರ ಅಧಿಪತಿಯ ಮನೆಯೊಳಗೆ ಕಾವಲಿರಿಸಿದನು. ಅದು ಯೋಸೇಫನು ಬಂಧಿಸಲ್ಪಟ್ಟ ಸ್ಥಳವಾಗಿತ್ತು. |
4. | ಮೈಗಾವಲಿನ ಅಧಿ ಪತಿಯು ಅವರನ್ನು ನೋಡಿಕೊಳ್ಳುವದಕ್ಕೆ ಯೋಸೇಫ ನನ್ನು ನೇಮಿಸಿದ್ದರಿಂದ ಅವನು ಅವರಿಗೆ ಸೇವೆಮಾಡು ತ್ತಿದ್ದನು. ಅವರು ಕೆಲವು ಕಾಲ ಸೆರೆಯಲ್ಲಿದ್ದರು. |
5. | ಅವರಿಬ್ಬರಿಗೂ ಅಂದರೆ ಐಗುಪ್ತದೇಶದ ಅರಸನು ಸೆರೆಯಲ್ಲಿ ಹಾಕಿಸಿದ್ದ ಪಾನದಾಯಕನಿಗೂ ರೊಟ್ಟಿ ಗಾರನಿಗೂ ಒಂದೇ ರಾತ್ರಿ ಕನಸುಬಿತ್ತು. ಅವರವರ ಕನಸಿನ ಪ್ರಕಾರ ಅರ್ಥವಿತ್ತು. |
6. | ಆಗ ಯೋಸೇಫನು ಬೆಳಿಗ್ಗೆ ಅವರ ಬಳಿಗೆ ಬಂದು ಅವರನ್ನು ನೋಡಿದಾಗ ಇಗೋ, ಅವರು ವ್ಯಸನವುಳ್ಳವರಾಗಿದ್ದರು. |
7. | ಅವನು ತನ್ನ ಸಂಗಡ ತನ್ನ ಯಜಮಾನನ ಸೆರೆಯಲ್ಲಿದ್ದ ಫರೋಹನ ಅಧಿಕಾರಿಗಳನ್ನು--ನಿಮ್ಮ ಮುಖಗಳು ಇಂದು ವ್ಯಸನವುಳ್ಳವುಗಳಾಗಿರುವದು ಯಾಕೆ ಎಂದು ಕೇಳಿದನು. |
8. | ಅವರು ಯೋಸೇಫನಿಗೆ--ನಾವು ಕನಸನ್ನು ಕಂಡಿದ್ದೇವೆ; ಆದರೆ ಅದರ ಅರ್ಥವನ್ನು ನಮಗೆ ಹೇಳುವವರಿಲ್ಲ ಅಂದರು. ಯೋಸೇಫನು ಅವರಿಗೆ ಅರ್ಥ ಹೇಳುವದು ದೇವರದಲ್ಲವೋ ಎಂದು ಹೇಳಿ ಅವುಗಳನ್ನು ನನಗೆ ಹೇಳಿರಿ ಅಂದನು. |
9. | ಆಗ ಮುಖ್ಯ ಪಾನದಾಯಕನು ತನ್ನ ಕನಸನ್ನು ಯೋಸೇಫನಿಗೆ ತಿಳಿಸುವವನಾಗಿ ಅವನಿಗೆ--ನನ್ನ ಕನಸಿನಲ್ಲಿ ಇಗೋ, ನನ್ನ ಮುಂದೆ ಒಂದು ದ್ರಾಕ್ಷೇ ಬಳ್ಳಿಯಿತ್ತು. |
10. | ಆ ದ್ರಾಕ್ಷೇ ಬಳ್ಳಿಯಲ್ಲಿ ಮೂರು ಕೊಂಬೆಗಳಿದ್ದವು. ಅವು ಚಿಗುರಿ ಹೂವು ಅರಳಿ ಅದರ ಗೊಂಚಲುಗಳು ಹಣ್ಣಾದವು. |
11. | ಫರೋಹನ ಪಾತ್ರೆಯು ನನ್ನ ಕೈಯಲ್ಲಿರಲಾಗಿ ನಾನು ಆ ದ್ರಾಕ್ಷೇ ಹಣ್ಣುಗಳನ್ನು ತೆಗೆದು ಫರೋಹನ ಪಾತ್ರೆಯಲ್ಲಿ ಹಿಂಡಿ ಆ ಪಾತ್ರೆಯನ್ನು ಫರೋಹನ ಕೈಯಲ್ಲಿ ಕೊಟ್ಟೆನು ಅಂದನು. |
12. | ಅದಕ್ಕೆ ಯೋಸೇಫನು--ಅದರ ಅರ್ಥ ಏನಂದರೆ, ಆ ಮೂರು ಕೊಂಬೆಗಳು ಮೂರು ದಿನಗಳಾಗಿವೆ. |
13. | ಇನ್ನು ಮೂರು ದಿನಗಳಾದ ಮೇಲೆ ಫರೋಹನು ನಿನ್ನ ತಲೆಯನ್ನು ಎತ್ತಿ ನಿನ್ನನ್ನು ತಿರಿಗಿ ನಿನ್ನ ಸ್ಥಳದಲ್ಲಿ ಇಡುವನು. ನೀನು ಮೊದಲು ಅವನ ಪಾನದಾಯಕನಾಗಿದ್ದ ಹಾಗೆ ಫರೋಹನ ಪಾತ್ರೆಯನ್ನು ಅವನ ಕೈಗೆ ಕೊಡುವಿ. |
14. | ಆದರೆ ನೀನು ಸುಖದಿಂದಿರುವಾಗ ನನ್ನನ್ನು ನೆನಸಿಕೊಂಡು ನನಗೆ ದಯೆತೋರಿಸಿ ಫರೋಹನ ಮುಂದೆ ನನ್ನ ವಿಷಯ ತಿಳಿಸಿ ಈ ಸೆರೆಯೊಳಗಿಂದ ನನ್ನನ್ನು ಹೊರಗೆ ಬರಮಾಡಬೇಕು. |
15. | ನಾನು ನಿಜವಾಗಿಯೂ ಇಬ್ರಿ ಯರ ದೇಶದೊಳಗಿಂದ ಕದಿಯಲ್ಪಟ್ಟೆನು. ಇಲ್ಲಿಯೂ ಸಹ ನನ್ನನ್ನು ಸೆರೆಯಲ್ಲಿ ಹಾಕುವದಕ್ಕೆ ನಾನು ಏನೂ ಮಾಡಲಿಲ್ಲ ಅಂದನು. |
16. | ಯೋಸೇಫನು ಒಳ್ಳೇ ಅರ್ಥವನ್ನು ಹೇಳಿದನೆಂದು ಮುಖ್ಯ ರೊಟ್ಟಿಗಾರನು ನೋಡಿದಾಗ ಅವನು ಯೋಸೇಫನಿಗೆ--ನನ್ನ ಕನಸಿನಲ್ಲಿಯೂ ಇಗೋ, ಮೂರು ರೊಟ್ಟಿಯ ಪುಟ್ಟಿಗಳು ನನ್ನ ತಲೆಯ ಮೇಲಿದ್ದವು; |
17. | ಮೇಲಿನ ಪುಟ್ಟಿಯಲ್ಲಿ ಫರೋಹನಿ ಗೋಸ್ಕರ ರೊಟ್ಟಿಗಾರರು ಮಾಡುವ ಎಲ್ಲಾ ವಿಧವಾದ ಆಹಾರವಿತ್ತು. ನನ್ನ ತಲೆಯ ಮೇಲಿದ್ದ ಪುಟ್ಟಿಯೊ ಳಗಿಂದ ಪಕ್ಷಿಗಳು ಅದನ್ನು ತಿಂದವು ಅಂದನು. |
18. | ಅದಕ್ಕೆ ಯೋಸೇಫನು ಪ್ರತ್ಯುತ್ತರವಾಗಿ--ಅದರ ಅರ್ಥವು ಇದೇ--ಆ ಮೂರು ಪುಟ್ಟಿಗಳು ಮೂರು ದಿನಗಳು. |
19. | ಇನ್ನು ಮೂರು ದಿನಗಳಾದ ಮೇಲೆ ಫರೋಹನು ನಿನ್ನ ತಲೆಯನ್ನು ತೆಗೆಸಿ ನಿನ್ನನ್ನು ಮರದ ಮೇಲೆ ತೂಗಹಾಕಿಸುವನು. ಪಕ್ಷಿಗಳು ನಿನ್ನ ಮಾಂಸವನ್ನು ತಿಂದುಬಿಡುವವು ಅಂದನು. |
20. | ಮೂರನೆಯ ದಿನದಲ್ಲಿ ಫರೋಹನ ಜನನದ ದಿನವಾಗಿದ್ದರಿಂದ ಅವನು ತನ್ನ ಸೇವಕರೆಲ್ಲರಿಗೆ ಔತಣವನ್ನು ಮಾಡಿಸಿ ಮುಖ್ಯ ಪಾನದಾಯಕನನ್ನೂ ಮುಖ್ಯ ರೊಟ್ಟಿಗಾರನನ್ನೂ ತನ್ನ ಸೇವಕರ ಮುಂದೆ ನಿಲ್ಲಿಸಿದನು. |
21. | ಯೋಸೇಫನು ಅವರಿಗೆ ಅವರ ಕನಸಿನ ಅರ್ಥ ಹೇಳಿದಂತೆ ಮುಖ್ಯಪಾನದಾಯಕನನ್ನು ತಿರಿಗಿ ಉದ್ಯೋಗದಲ್ಲಿ ಇರಿಸಿದ್ದರಿಂದ ಅವನು ಫರೋ ಹನ ಕೈಗೆ ಪಾತ್ರೆಯನ್ನು ಕೊಡುವವನಾದನು. |
22. | ಆದರೆ ಮುಖ್ಯ ರೊಟ್ಟಿಗಾರನನ್ನು ತೂಗಹಾಕಿಸಿದನು. |
23. | ಆದಾ ಗ್ಯೂ ಪಾನದಾಯಕಾರ ಮುಖ್ಯಸ್ಥನು ಯೋಸೇಫನನ್ನು ಜ್ಞಾಪಕಮಾಡಿಕೊಳ್ಳದೆ ಅವನನ್ನು ಮರೆತುಬಿಟ್ಟನು. |
← Genesis (40/50) → |