← Genesis (4/50) → |
1. | ಆದಾಮನು ತನ್ನ ಹೆಂಡತಿಯಾದ ಹವ್ವಳನ್ನು ಕೂಡಿದನು. ಆಗ ಆಕೆಯು ಗರ್ಭಿಣಿಯಾಗಿ ಕಾಯಿನನನ್ನು ಹೆತ್ತು--ನಾನು ಕರ್ತ ನಿಂದ ಒಬ್ಬ ಮನುಷ್ಯನನ್ನು ಪಡೆದಿದ್ದೇನೆ ಅಂದಳು. |
2. | ತರುವಾಯ ಆಕೆಯು ಅವನ ಸಹೋದರನಾದ ಹೇಬೆಲನನ್ನು ಹೆತ್ತಳು. ಹೇಬೆಲನು ಕುರಿ ಕಾಯುವವನಾ ದನು, ಕಾಯಿನನು ವ್ಯವಸಾಯಮಾಡುವವನಾದನು. |
3. | ಕಾಲಾಂತರದಲ್ಲಿ ಸಂಭವಿಸಿದ್ದೇನಂದರೆ, ಕಾಯಿ ನನು ಹೊಲದ ಫಲವನ್ನು ಕರ್ತನಿಗೆ ಕಾಣಿಕೆಯಾಗಿ ತಂದನು. |
4. | ಹೇಬೆಲನು ಸಹ ತನ್ನ ಮಂದೆಯಿಂದ ಕೊಬ್ಬಿದ ಚೊಚ್ಚಲಾದವುಗಳನ್ನು ತಂದನು. ಆಗ ಕರ್ತನು ಹೇಬೆಲನನ್ನೂ ಅವನ ಕಾಣಿಕೆಯನ್ನೂ ಗೌರವಿಸಿದನು. |
5. | ಆದರೆ ಕಾಯಿನನನ್ನೂ ಅವನ ಕಾಣಿಕೆಯನ್ನೂ ಆತನು ಗೌರವಿಸಲಿಲ್ಲ. ಆಗ ಕಾಯಿ ನನು ಬಹು ಕೋಪಗೊಂಡನು, ಅವನ ಮುಖವು ಕಳೆಗುಂದಿತು. |
6. | ಆಗ ಕರ್ತನು ಕಾಯಿನನಿಗೆ--ಯಾಕೆ ಕೋಪಗೊಂಡಿದ್ದೀ? ಯಾಕೆ ನಿನ್ನ ಮುಖವು ಕಳೆಗುಂದಿತು? |
7. | ನೀನು ಒಳ್ಳೆಯದನ್ನು ಮಾಡಿದರೆ ಅಂಗೀಕರಿಸಲ್ಪಡುವದಿಲ್ಲವೇ? ನೀನು ಒಳ್ಳೆಯದನ್ನು ಮಾಡದೆ ಹೋದರೆ ಪಾಪವು ಬಾಗಲಲ್ಲಿ ಹೊಂಚಿ ಕೊಂಡಿರುವದು; ನಿನ್ನ ಮೇಲೆ ಅದಕ್ಕೆ ಆಶೆ ಇರುವದು, ನೀನು ಅದನ್ನು ಆಳಬೇಕು ಎಂದು ಹೇಳಿದನು. |
8. | ಆಗ ಕಾಯಿನನು ತನ್ನ ಸಹೋದರನಾದ ಹೇಬೆಲನ ಸಂಗಡ ಮಾತನಾಡಿದನು; ತರುವಾಯ ಆದದ್ದೇ ನಂದರೆ, ಅವರು ಹೊಲದಲ್ಲಿದ್ದಾಗ ಕಾಯಿನನು ತನ್ನ ಸಹೋದರನಾದ ಹೇಬೆಲನಿಗೆ ವಿರುದ್ಧವಾಗಿ ಎದ್ದು ಅವನನ್ನು ಕೊಂದುಹಾಕಿದನು. |
9. | ಆಗ ಕರ್ತನು ಕಾಯಿನನಿಗೆ--ನಿನ್ನ ಸಹೋದರ ನಾದ ಹೇಬೆಲನು ಎಲ್ಲಿ ಅಂದನು. ಅದಕ್ಕವನು-- ನಾನು ಅರಿಯೆನು; ನನ್ನ ಸಹೋದರನನ್ನು ನಾನು ಕಾಯುವವನೋ ಅಂದನು. |
10. | ಆತನು--ನೀನು ಮಾಡಿದ್ದೇನು? ನಿನ್ನ ಸಹೋದರನ ರಕ್ತದ ಸ್ವರವು ಭೂಮಿಯಿಂದ ನನ್ನನ್ನು ಕೂಗುತ್ತದೆ. |
11. | ಆದದರಿಂದ ಈಗ ನಿನ್ನ ಕೈಯಿಂದ ನಿನ್ನ ಸಹೋದರನ ರಕ್ತವನ್ನು ಕುಡಿಯುವದಕ್ಕೆ ತನ್ನ ಬಾಯನ್ನು ತೆರೆದ ಭೂಮಿಯ ದೆಸೆಯಿಂದ ನೀನು ಶಪಿಸಲ್ಪಟ್ಟವನಾದಿ. |
12. | ನೀನು ಭೂಮಿಯನ್ನು ವ್ಯವಸಾಯಮಾಡುವಾಗ ಇನ್ನು ಮೇಲೆ ಅದು ತನ್ನ ಸಾರವನ್ನು ಕೊಡುವದಿಲ್ಲ. ನೀನು ಭೂಮಿಯಲ್ಲಿ ಅಲೆದಾಡುವವನಾಗಿಯೂ ತಿರುಗಾಡು ವವನಾಗಿಯೂ ಇರುವಿ ಅಂದನು. |
13. | ಆಗ ಕಾಯಿನನು ಕರ್ತನಿಗೆ--ನನ್ನ ಶಿಕ್ಷೆಯು ನಾನು ತಾಳಲಾರದಷ್ಟು ದೊಡ್ಡದಾಗಿದೆ. |
14. | ಇಗೋ, ನೀನು ಈ ದಿನ ನನ್ನನ್ನು ಈ ಸ್ಥಳದಿಂದ ಹೊರಡಿಸಿದ್ದೀ, ನಿನ್ನ ಮುಖಕ್ಕೆ ನಾನು ಮರೆಯಾಗಿರಬೇಕು; ಭೂಮಿಯಲ್ಲಿ ಅಲೆಯು ವವನೂ ತಿರುಗಾಡುವವನೂ ಆಗಿರಬೇಕು; ಇದಲ್ಲದೆ ನನ್ನನ್ನು ಕಂಡವರೆಲ್ಲಾ ಕೊಲ್ಲುವರು ಅಂದನು. |
15. | ಆದದರಿಂದ ಕರ್ತನು ಅವನಿಗೆ--ಕಾಯಿನನನ್ನು ಕೊಲ್ಲುವವನು ಯಾವನೋ ಅವನು ಏಳರಷ್ಟು ಪ್ರತಿದಂಡನೆ ಹೊಂದುವನು ಎಂದು ಹೇಳಿದನು. ಕಾಯಿನನನ್ನು ಕಂಡವರು ಕೊಲ್ಲದ ಹಾಗೆ ಕರ್ತನು ಅವನ ಮೇಲೆ ಒಂದು ಗುರುತು ಇಟ್ಟನು. |
16. | ಕಾಯಿನನು ಕರ್ತನ ಸನ್ನಿಧಿಯಿಂದ ಹೊರಟು ಏದೆನಿನ ಪೂರ್ವದಿಕ್ಕಿನಲ್ಲಿದ್ದ ನೋದು ಎಂಬ ದೇಶ ದಲ್ಲಿ ವಾಸಿಸಿದನು. |
17. | ಕಾಯಿನನು ತನ್ನ ಹೆಂಡತಿಯನ್ನು ಕೂಡಿದನು; ಆಕೆಯು ಗರ್ಭಿಣಿಯಾಗಿ ಹನೋಕನನ್ನು ಹೆತ್ತಳು. ಆಗ ಕಾಯಿನನು ಒಂದು ಪಟ್ಟಣವನ್ನು ಕಟ್ಟಿ ತನ್ನ ಮಗನಾದ ಹನೋಕನ ಹೆಸರನ್ನು ಆ ಪಟ್ಟಣಕ್ಕೆ ಇಟ್ಟನು. |
18. | ಹನೋಕನಿಂದ ಈರಾದನು ಹುಟ್ಟಿದನು; ಈರಾದನಿಂದ ಮೆಹೂಯಾಯೇಲನು ಹುಟ್ಟಿದನು; ಮೆಹೂಯಾಯೇಲನಿಂದ ಮೆತೂಷಾ ಯೇಲನು ಹುಟ್ಟಿದನು; ಮೆತೂಷಾಯೇಲನಿಂದ ಲೆಮೆಕನು ಹುಟ್ಟಿದನು. |
19. | ಲೆಮೆಕನು ಇಬ್ಬರು ಹೆಂಡತಿಯರನ್ನು ಮಾಡಿಕೊಂಡನು. ಒಬ್ಬಳ ಹೆಸರು ಆದಾ, ಮತ್ತೊಬ್ಬಳ ಹೆಸರು ಚಿಲ್ಲಾ. |
20. | ಆದಾ ಯಾಬಾಲನನ್ನು ಹೆತ್ತಳು; ಇವನು ಗುಡಾರಗಳಲ್ಲಿ ವಾಸಿಸುವವನಾಗಿ ದನಕರು ಗಳಿದ್ದವರಿಗೆ ತಂದೆಯಾದನು. |
21. | ಅವನ ಸಹೋದರನ ಹೆಸರು ಯೂಬಾಲನು; ಇವನು ಕಿನ್ನರಿಯನ್ನೂ ಕೊಳಲನ್ನೂ ಬಾರಿಸುವವರೆಲ್ಲರಿಗೆ ತಂದೆಯಾದನು. |
22. | ಚಿಲ್ಲಾ ಸಹ ತೂಬಲ್‌ಕಾಯಿನನನ್ನು ಹೆತ್ತಳು; ಅವನು ಹಿತ್ತಾಳೆ ಕಬ್ಬಿಣ ಕೆಲಸದ ಕಲೆಯಿದ್ದವರೆಲ್ಲರಿಗೆ ಶಿಕ್ಷಣ ಕೊಡುವವನಾಗಿದ್ದನು. ತೂಬಲ್‌ಕಾಯಿನನ ಸಹೋದರಿ ನಯಮಾ ಎಂಬವಳು. |
23. | ಲೆಮೆಕನು ತನ್ನ ಹೆಂಡತಿಯರಾದ ಆದಾ ಚಿಲ್ಲಾ ಎಂಬವರಿಗೆ--ಲೆಮೆಕನ ಹೆಂಡತಿಯರೇ, ನನ್ನ ಮಾತನ್ನು ಕೇಳಿರಿ; ನನ್ನ ಮಾತುಗಳಿಗೆ ಕಿವಿಗೊಡಿರಿ; ನನಗೆ ಗಾಯಮಾಡಿದ ಒಬ್ಬ ಮನುಷ್ಯ ನನ್ನು, ನನಗೆ ಹೊಡೆದ ಒಬ್ಬ ಯೌವನಸ್ಥನನ್ನು ಕೊಂದಿದ್ದೇನೆ. |
24. | ಕಾಯಿನನಿಗಾಗಿ ಏಳರಷ್ಟು ಪ್ರತಿದಂಡನೆಯಾದರೆ ಲೆಮೆಕನಿಗಾಗಿ ಏಳೆಪ್ಪತ್ತು ಸಾರಿ ಪ್ರತಿದಂಡನೆ ನಿಜವಾ ಗಿಯೂ ಆಗುವದು. |
25. | ಇದಲ್ಲದೆ ಆದಾಮನು ತಿರಿಗಿ ತನ್ನ ಹೆಂಡತಿಯನ್ನು ಕೂಡಿದ್ದರಿಂದ ಅವಳು ಮಗನನ್ನು ಹೆತ್ತು ಅವನಿಗೆ ಸೇತನೆಂದು ಹೆಸರಿಟ್ಟಳು. ಯಾಕಂದರೆ--ಕಾಯಿನನು ಕೊಂದುಹಾಕಿದ ಹೇಬೆಲನಿಗೆ ಬದಲಾಗಿ ದೇವರು ನನಗೆ ಬೇರೆ ಸಂತತಿಯನ್ನು ಕೊಟ್ಟನೆಂದು ಆಕೆಯು ಹೇಳಿದಳು. |
26. | ಸೇತನಿಗೂ ಒಬ್ಬ ಮಗನು ಹುಟ್ಟಿದನು; ಅವನಿಗೆ ಎನೋಷ್ ಎಂದು ಹೆಸರಿಟ್ಟನು; ತರುವಾಯ ಮನುಷ್ಯರು ಕರ್ತನ ಹೆಸರನ್ನು ಕರೆದು ಆರಾಧಿಸುವದಕ್ಕೆ ಆರಂಭಿಸಿದರು. |
← Genesis (4/50) → |