← Genesis (39/50) → |
1. | ಯೋಸೇಫನನ್ನು ಐಗುಪ್ತಕ್ಕೆ ತಕ್ಕೊಂಡು ಹೋದರು. ಅವನನ್ನು ಅಲ್ಲಿಗೆ ತಕ್ಕೊಂಡು ಹೋದ ಇಷ್ಮಾಯೇಲ್ಯರ ಕೈಯಿಂದ ಐಗುಪ್ತದವನೂ ಫರೋಹನ ಉದ್ಯೋಗಸ್ಥನೂ ಮೈಗಾವಲಿನವನೂ ಅಧಿಪತಿಯೂ ಆದ ಪೋಟೀಫರನು ಅವನನ್ನು ಕೊಂಡುಕೊಂಡನು. |
2. | ಕರ್ತನು ಯೋಸೇಫನ ಸಂಗಡ ಇದದ್ದರಿಂದ ಅವನು ಏಳಿಗೆಯಾಗಿ ಐಗುಪ್ತದವನಾದ ತನ್ನ ಯಜಮಾನನ ಮನೆಯಲ್ಲಿ ಇದ್ದನು. |
3. | ಕರ್ತನು ಅವನ ಸಂಗಡ ಇದ್ದಾನೆಂದೂ ಅವನು ಮಾಡಿದ್ದನ್ನೆಲ್ಲಾ ಕರ್ತನು ಅವನ ಕೈಯಿಂದ ಅಭಿವೃದ್ಧಿಮಾಡಿದನೆಂದೂ ಅವನ ಯಜಮಾನನು ನೋಡಿದನು. |
4. | ಆದದರಿಂದ ಯೋಸೇಫನು ಅವನ ದೃಷ್ಟಿಯಲ್ಲಿ ಕೃಪೆಹೊಂದಿ ಅವನ ಸೇವೆಮಾಡಿದನು. ಪೋಟೀಫರನು ಅವನನ್ನು ತನ್ನ ಮನೆಯ ಮೇಲೆ ಮೇಲ್ವಿಚಾರಕನನ್ನಾಗಿ ಮಾಡಿ ತನಗಿದ್ದದ್ದನ್ನೆಲ್ಲಾ ಅವನ ಕೈಗೆ ಒಪ್ಪಿಸಿದನು. |
5. | ಅವನನ್ನು ಮನೆಯಲ್ಲಿಯೂ ತನಗಿದ್ದ ಎಲ್ಲಾದರ ಮೇಲೆಯೂ ಮೇಲ್ವಿಚಾರಕನನ್ನಾಗಿ ಮಾಡಿದಂದಿನಿಂದ ಕರ್ತನು ಆ ಐಗುಪ್ತದವನ ಮನೆಯನ್ನು ಯೋಸೇಫನ ನಿಮಿತ್ತ ವಾಗಿ ಆಶೀರ್ವದಿಸಿದನು. ಮನೆಯಲ್ಲಿಯೂ ಹೊಲ ದಲ್ಲಿಯೂ (ಅವನಿಗಿದ್ದ) ಎಲ್ಲಾದರ ಮೇಲೆಯೂ ಕರ್ತನ ಆಶೀರ್ವಾದವಿತ್ತು. |
6. | ಹೀಗಿರುವದರಿಂದ ಅವನು ತನಗಿದ್ದದ್ದನ್ನೆಲ್ಲಾ ಯೋಸೇಫನಿಗೆ ಒಪ್ಪಿಸಿ ತಾನು ತಿನ್ನುವ ರೊಟ್ಟಿಯ ವಿಷಯದಲ್ಲಿ ಹೊರತು ಬೇರೆ ಯಾವದರ ವಿಷಯದಲ್ಲೂ ಚಿಂತಿಸಲಿಲ್ಲ. ಯೋಸೇಫನು ಸುರೂಪಿಯೂ ಸೌಂದರ್ಯವಂತನೂ ಆಗಿದ್ದನು. |
7. | ಇವುಗಳಾದ ಮೇಲೆ ಯೋಸೇಫನ ಯಜಮಾನನ ಹೆಂಡತಿಯು ಅವನ ಮೇಲೆ ಕಣ್ಣುಹಾಕಿ--ನನ್ನ ಸಂಗಡ ಮಲಗು ಅಂದಳು. |
8. | ಆದರೆ ಅವನು ಅದಕ್ಕೆ ಒಪ್ಪದೆ ತನ್ನ ಯಜಮಾನನ ಹೆಂಡತಿಗೆ--ಇಗೋ, ನನ್ನ ಯಜಮಾನನು ತನ್ನ ಮನೆಯಲ್ಲಿರು ವದನ್ನು ತಿಳುಕೊಳ್ಳದೆ ತನಗಿದ್ದದ್ದನ್ನೆಲ್ಲಾ ನನಗೆ ಒಪ್ಪಿಸಿದ್ದಾನೆ. |
9. | ಈ ಮನೆಯಲ್ಲಿ ನನಗಿಂತ ದೊಡ್ಡವ ನಾರೂ ಇಲ್ಲ. ನೀನು ಅವನ ಹೆಂಡತಿಯಾಗಿರುವದ ರಿಂದ ನಿನ್ನನ್ನಲ್ಲದೆ ನನಗೆ ಮತ್ತೇನೂ ಮರೆಮಾಡಲಿಲ್ಲ. ಹಾಗಿರುವಲ್ಲಿ ನಾನು ಈ ದೊಡ್ಡ ದುಷ್ಕೃತ್ಯಮಾಡಿ ದೇವರಿಗೆ ವಿರೋಧವಾಗಿ ಪಾಪಮಾಡುವದು ಹೇಗೆ ಅಂದನು. |
10. | ಅವಳು ಪ್ರತಿದಿನ ಯೋಸೇಫನ ಸಂಗಡ ಮಾತನಾಡಿದಾಗ್ಯೂ ಅವನು ಅವಳ ಕೂಡ ಮಲಗುವದಕ್ಕಾದರೂ ಅವಳ ಹತ್ತಿರ ಇರುವದ ಕ್ಕಾದರೂ ಕಿವಿಗೊಡದೆ ಹೋದನು. |
11. | ಹೀಗಿರುವಲ್ಲಿ ಅವನು ತನ್ನ ಕೆಲಸ ಮಾಡುವದಕ್ಕೆ ಮನೆಯನ್ನು ಪ್ರವೇಶಿಸಿದಾಗ ಮನೆಯವರಲ್ಲಿ ಒಬ್ಬರೂ ಮನೆ ಯಲ್ಲಿರಲಿಲ್ಲ. |
12. | ಆಗ ಆಕೆಯು ಅವನ ವಸ್ತ್ರವನ್ನು ಹಿಡುಕೊಂಡು--ನನ್ನ ಸಂಗಡ ಮಲಗು ಅಂದಳು. ಆದರೆ ಅವನು ತನ್ನ ವಸ್ತ್ರವನ್ನು ಅವಳ ಕೈಯಲ್ಲಿ ಬಿಟ್ಟು ಹೊರಗೆ ಓಡಿಹೋದನು. |
13. | ಅವನು ತನ್ನ ವಸ್ತ್ರ ವನ್ನು ತನ್ನ ಕೈಯಲ್ಲಿ ಬಿಟ್ಟುಬಿಟ್ಟದ್ದನ್ನೂ ಹೊರಗೆ ಓಡಿಹೋದದನ್ನೂ ಅವಳು ಕಂಡು |
14. | ತನ್ನ ಮನೆಯ ಮನುಷ್ಯರನ್ನು ಕರೆದು ಅವರಿಗೆ--ನೋಡಿರಿ, ಅವನು (ಗಂಡಸು) ನಮ್ಮನ್ನು ಹಾಸ್ಯಮಾಡುವದಕ್ಕೆ ಇಬ್ರಿಯನನ್ನು ನಮ್ಮಲ್ಲಿಗೆ ತಂದಿದ್ದಾನೆ. ಅವನು ನನ್ನ ಸಂಗಡ ಮಲಗುವದಕ್ಕೆ ನನ್ನ ಬಳಿಗೆ ಬಂದನು. ಆಗ ನಾನು ದೊಡ್ಡ ಶಬ್ದದಿಂದ ಕೂಗಿದೆನು. |
15. | ನಾನು ನನ್ನ ಸ್ವರವನ್ನೆತ್ತಿ ಕೂಗಿದ್ದನ್ನು ಅವನು ಕೇಳಿ ತನ್ನ ವಸ್ತ್ರವನ್ನು ನನ್ನ ಬಳಿಯಲ್ಲೇ ಬಿಟ್ಟು ಹೊರಗೆ ಓಡಿಹೋದನು ಅಂದಳು. |
16. | ತನ್ನ ಯಜಮಾನನು ಮನೆಗೆ ಬರುವ ವರೆಗೆ ಆಕೆಯು ಅವನ ವಸ್ತ್ರವನ್ನು ತನ್ನ ಬಳಿಯಲ್ಲಿಯೇ ಇಟ್ಟುಕೊಂಡಳು. |
17. | ಅವನು ಬಂದಾಗ ಅವನಿಗೂ ಅದರಂತೆಯೇ ಹೇಳುವವ ಳಾಗಿ--ನೀನು ನಮ್ಮ ಬಳಿಗೆ ತಂದ ಇಬ್ರಿಯ ಸೇವಕನು ನನ್ನನ್ನು ಹಾಸ್ಯಮಾಡುವದಕ್ಕೆ ನನ್ನ ಬಳಿಗೆ ಬಂದನು; |
18. | ಆದರೆ ನಾನು ನನ್ನ ಸ್ವರವನ್ನೆತ್ತಿ ಕೂಗಿಕೊಂಡಾಗ ಅವನು ತನ್ನ ವಸ್ತ್ರವನ್ನು ನನ್ನ ಬಳಿಯಲ್ಲಿ ಬಿಟ್ಟು ಹೊರಗೆ ಓಡಿಹೋದನು ಅಂದಳು. |
19. | ನಿನ್ನ ಸೇವಕನು ಹೀಗೆ ನನಗೆ ಮಾಡಿದನೆಂಬದಾಗಿ ತನ್ನ ಹೆಂಡತಿ ಹೇಳಿದ್ದನ್ನು ಕೇಳಿ ಅವನ ಕೋಪವು ಉರಿಯಿತು. |
20. | ಆಗ ಯೋಸೇಫನ ಯಜಮಾನನು ಅವನನ್ನು ಹಿಡುಕೊಂಡು ರಾಜನ ಕೈದಿಗಳು ಬಂಧಿಸಲ್ಪಡುವ ಸೆರೆಮನೆಯಲ್ಲಿ ಹಾಕಿದನು. ಯೋಸೇಫನು ಆ ಸೆರೆಮನೆಯಲ್ಲಿದ್ದನು. |
21. | ಆದರೆ ಕರ್ತನು ಯೋಸೇಫನ ಸಂಗಡ ಇದ್ದು ಅವನ ಮೇಲೆ ಕರುಣೆಯಿಟ್ಟು ಸೆರೆಮನೆಯ ಯಜಮಾನನು ಅವನ ಮೇಲೆ ದಯೆತೋರಿಸುವಂತೆ ಮಾಡಿದನು. |
22. | ಆದದರಿಂದ ಸೆರೆಯ ಯಜಮಾನನು ಸೆರೆಮನೆಯಲ್ಲಿ ಬಂಧಿಸಿದ ಕೈದಿಗಳನ್ನೆಲ್ಲಾ ಯೋಸೇಫನಿಗೆ ಒಪ್ಪಿಸಿದನು. ಅವರು ಅಲ್ಲಿ ಮಾಡ ಬೇಕಾದವುಗಳೆನ್ನೆಲ್ಲಾ ಅವನೇ ಮಾಡಿಸುವವನಾ ದನು. |
23. | ಕರ್ತನು ಅವನ ಸಂಗಡ ಇದ್ದದರಿಂದಲೂ ಅವನು ಮಾಡುವದನ್ನು ಕರ್ತನು ಅಭಿವೃದ್ಧಿ ಮಾಡಿದ್ದರಿಂದಲೂ ಸೆರೆಯ ಯಜಮಾನನು ಅವನ ಕೈಗೆ ಒಪ್ಪಿಸಿದ ಯಾವದಕ್ಕೂ ಚಿಂತೆಮಾಡದೆ ಇದ್ದನು. |
← Genesis (39/50) → |