← Genesis (38/50) → |
1. | ಆ ಕಾಲದಲ್ಲಿ ಆದದ್ದೇನಂದರೆ, ಯೆಹೂದನು ತನ್ನ ಸಹೋದರರ ಬಳಿ ಯಿಂದ ಇಳಿದುಹೋಗಿ ಅದುಲ್ಲಾಮ್ಯನವನಾದ ಹೀರನ ಬಳಿಗೆ ಹೋದನು. |
2. | ಅಲ್ಲಿ ಯೆಹೂದನು ಕಾನಾನ್ಯನಾದ ಶೂಗನ ಮಗಳನ್ನು ನೋಡಿ ಅವಳನ್ನು ತಕ್ಕೊಂಡು ಅವಳನ್ನು ಕೂಡಿದನು. |
3. | ಅವಳು ಗರ್ಭಿಣಿ ಯಾಗಿ ಮಗನನ್ನು ಹೆತ್ತಳು. ಯೆಹೂದನು ಅವನಿಗೆ ಏರ ಎಂದು ಹೆಸರಿಟ್ಟನು. |
4. | ಆಕೆಯು ತಿರಿಗಿ ಗರ್ಭಿಣಿ ಯಾಗಿ ಮಗನನ್ನು ಹೆತ್ತು ಅವನಿಗೆ ಓನಾನ ಎಂದು ಹೆಸರಿಟ್ಟಳು. |
5. | ಆಕೆಯು ಮತ್ತೊಂದು ಸಾರಿ ಮಗನನ್ನು ಹೆತ್ತು ಅವನಿಗೆ ಶೇಲಹ ಎಂದು ಹೆಸರಿಟ್ಟಳು. ಆಕೆಯು ಅವನನ್ನು ಹೆತ್ತಾಗ ಯೆಹೂದನು ಕಜೀಬೂರಿನ ಲ್ಲಿದ್ದನು. |
6. | ಇದಾದ ಮೇಲೆ ಯೆಹೂದನು ತನ್ನ ಚೊಚ್ಚಲ ಮಗನಾದ ಏರನಿಗೆ ಹೆಂಡತಿಯನ್ನು ತಕ್ಕೊಂಡನು. ಆಕೆಯ ಹೆಸರು ತಾಮಾರ್. |
7. | ಆದರೆ ಯೆಹೂದನ ಚೊಚ್ಚಲ ಮಗನಾದ ಏರನು ಕರ್ತನ ದೃಷ್ಟಿಯಲ್ಲಿ ದುಷ್ಟನಾಗಿದ್ದದರಿಂದ ಕರ್ತನು ಅವನನ್ನು ಸಾಯಿಸಿದನು. |
8. | ಆಗ ಯೆಹೂದನು ಓನಾನನಿಗೆ--ನಿನ್ನ ಸಹೋದರನ ಹೆಂಡತಿಯ ಬಳಿಗೆ ಹೋಗಿ ಅವಳನ್ನು ಮದುವೆಯಾಗಿ ನಿನ್ನ ಅಣ್ಣನಿಗೆ ಸಂತತಿಯನ್ನು ಉಂಟು ಮಾಡು ಅಂದನು. |
9. | ಆದರೆ ಓನಾನನು ಆ ಸಂತತಿಯು ತನ್ನದಾಗತಕ್ಕದ್ದಲ್ಲವೆಂದು ತಿಳಿದುಕೊಂಡು ತನ್ನ ಅಣ್ಣನ ಹೆಂಡತಿಯ ಬಳಿಗೆ ಹೋದಾಗ ತನ್ನ ಅಣ್ಣನಿಗೆ ಸಂತತಿಯನ್ನು ಉಂಟುಮಾಡದ ಹಾಗೆ ತನ್ನ ವೀರ್ಯ ವನ್ನು ಭೂಮಿಯ ಮೇಲೆ ಚೆಲ್ಲಿದನು. |
10. | ಅವನು ಮಾಡಿದ್ದು ಕರ್ತನ ದೃಷ್ಟಿಯಲ್ಲಿ ಮೆಚ್ಚಿಕೆಯಾಗಿರಲಿ ಲ್ಲವಾದದ್ದರಿಂದ ಆತನು ಇವನನ್ನೂ ಸಾಯಿಸಿದನು. |
11. | ಆಗ ಯೆಹೂದನು ತನ್ನ ಸೊಸೆಯಾದ ತಾಮಾರ ಳಿಗೆ--ನನ್ನ ಮಗನಾದ ಶೇಲಹನು ದೊಡ್ಡವನಾಗುವ ವರೆಗೆ ವಿಧವೆಯಾಗಿದ್ದು ನಿನ್ನ ತಂದೆಯ ಮನೆಯಲ್ಲಿ ಇರು ಅಂದನು. ಯಾಕಂದರೆ ಇವನು ಸಹ ತನ್ನ ಸಹೋದರರ ಹಾಗೆ ಸತ್ತಾನೆಂದು ಅಂದುಕೊಂಡನು. ತಾಮಾರಳು ಹೋಗಿ ತನ್ನ ತಂದೆಯ ಮನೆಯಲ್ಲಿ ವಾಸಮಾಡಿದಳು. |
12. | ಬಹಳ ದಿನಗಳಾದ ಮೇಲೆ ಯೆಹೂದನ ಹೆಂಡತಿಯಾಗಿದ್ದ ಶೂಗನ ಮಗಳು ಸತ್ತಳು. ಯೆಹೂ ದನು ಆದರಣೆ ಹೊಂದಿದ ಮೇಲೆ ತಾನೂ ತನ್ನ ಸ್ನೇಹಿತನಾಗಿರುವ ಅದುಲ್ಲಾಮ್ಯನಾದ ಹೀರನೂ ತನ್ನ ಕುರಿಗಳ ಉಣ್ಣೆಯನ್ನು ಕತ್ತರಿಸುವವರ ಬಳಿಗೆ ತಿಮ್ನಾತಿಗೆ ಹೋದನು. |
13. | ಆಗ ತಾಮಾರಳಿಗೆ--ಇಗೋ, ನಿನ್ನ ಮಾವನು ತನ್ನ ಕುರಿಗಳ ಉಣ್ಣೆಯನ್ನು ಕತ್ತರಿಸುವದಕ್ಕೆ ತಿಮ್ನಾತಿಗೆ ಹೋಗುತ್ತಿದ್ದಾನೆ ಎಂದು ತಿಳಿಸಿದಾಗ |
14. | ಆಕೆಯು ವಿಧವೆಯ ವಸ್ತ್ರಗಳನ್ನು ತೆಗೆದಿಟ್ಟು ಮುಸುಕು ಹಾಕಿ ಮುಚ್ಚಿಕೊಂಡು ತಿಮ್ನಾತಿನ ಮಾರ್ಗದಲ್ಲಿರುವ ಬಹಿರಂಗ ಸ್ಥಳದಲ್ಲಿ ಕೂತು ಕೊಂಡಳು; ಯಾಕಂದರೆ ಶೇಲಹನು ದೊಡ್ಡವನಾ ಗಿದ್ದರೂ ತನ್ನನ್ನು ಅವನಿಗೆ ಹೆಂಡತಿಯಾಗಿ ಕೊಡಲಿಲ್ಲ ವೆಂದು ನೋಡಿದಳು. |
15. | ಯೆಹೂದನು ಅವಳನ್ನು ನೋಡಿದಾಗ ಅವಳು ಮುಖಮುಚ್ಚಿಕೊಂಡಿದ್ದರಿಂದ ಅವಳು ಸೂಳೆಯೆಂದು ನೆನಸಿಕೊಂಡನು. |
16. | ಮಾರ್ಗ ದಿಂದ ಆಕೆಯ ಕಡೆಗೆ ತಿರುಗಿಕೊಂಡು ಅವನು--ನನ್ನನ್ನು ನಿನ್ನ ಬಳಿಗೆ ಬರಗೊಡಿಸು ಅಂದನು. (ಯಾಕಂದರೆ ಅವಳು ತನ್ನ ಸೊಸೆಯೆಂದು ಅವನಿಗೆ ತಿಳಿದಿರಲಿಲ್ಲ). ಅವಳು--ನೀನು ನನ್ನ ಬಳಿಗೆ ಬಂದರೆ ನನಗೆ ಏನು ಕೊಡುವಿ ಅಂದಳು. |
17. | ಅವನು--ಮಂದೆಯಿಂದ ನಿನಗೆ ಮೇಕೆಯ ಮರಿಯನ್ನು ಕಳುಹಿ ಸುತ್ತೇನೆ ಅಂದನು. ಅವಳು--ನೀನು ಅದನ್ನು ಕಳುಹಿಸುವವರೆಗೆ ಈಡುಕೊಡುವಿಯೋ ಅಂದಳು. |
18. | ಅದಕ್ಕೆ ಅವನು--ನಿನಗೆ ಕೊಡತಕ್ಕ ಈಡು ಏನು ಅಂದಾಗ ಅವಳು--ನಿನ್ನ ಮುದ್ರೆಯೂ ನಿನ್ನ ಕಡಗ ಗಳೂ ನಿನ್ನ ಕೈಯಲ್ಲಿರುವ ಕೋಲು ಅಂದಳು. ಆಗ ಅವನು ಅವುಗಳನ್ನು ಆಕೆಗೆ ಕೊಟ್ಟು ಆಕೆಯ ಬಳಿಗೆ ಹೋದನು. ಹೀಗೆ ಅವಳು ಅವನಿಂದ ಗರ್ಭಿಣಿಯಾದಳು. |
19. | ತರುವಾಯ ಅವಳು ಎದ್ದು ಹೋಗಿ ಮುಸುಕನ್ನು ತೆಗೆದಿಟ್ಟು ತನ್ನ ವಿಧವೆಯ ವಸ್ತ್ರಗಳನ್ನು ಹಾಕಿಕೊಂಡಳು. |
20. | ಯೆಹೂದನು ಆ ಸ್ತ್ರೀಯ ಕೈಯಿಂದ ಈಡು ತಕ್ಕೊಳ್ಳುವದಕ್ಕೆ ತನ್ನ ಸ್ನೇಹಿತನಾದ ಅದುಲ್ಲಾಮ್ಯನ ಕೈಯಿಂದ ಮೇಕೆಯ ಮರಿಯನ್ನು ಕಳುಹಿಸಿದಾಗ ಆಕೆಯು ಸಿಗಲಿಲ್ಲ. |
21. | ಅದುಲ್ಲಾಮ್ಯನು ಆಕೆಯ ಊರಿನವರನ್ನು--ಬಹಿರಂಗ ಮಾರ್ಗದ ಬಳಿಯಲ್ಲಿದ್ದ ಸೂಳೆ ಎಲ್ಲಿ ಎಂದು ಕೇಳಿದಾಗ ಅವರು--ಈ ಸ್ಥಳದಲ್ಲಿ ಯಾವ ಸೂಳೆಯೂ ಇರಲಿಲ್ಲ ಅಂದರು. |
22. | ಆಗ ಅವನು ಯೆಹೂದನ ಬಳಿಗೆ ತಿರಿಗಿ ಬಂದು--ಆಕೆಯು ನನಗೆ ಸಿಕ್ಕಲಿಲ್ಲ, ಇದಲ್ಲದೆ ಆ ಸ್ಥಳದ ಮನುಷ್ಯರು--ಈ ಸ್ಥಳದಲ್ಲಿ ಸೂಳೆಯು ಇರಲಿಲ್ಲ ಎಂದು ಹೇಳಿದರು. |
23. | ಆಗ ಯೆಹೂದನು--ನಾವು ನಾಚಿಕೆಗೆ ಒಳಗಾಗದ ಹಾಗೆ ಅವಳು ಅದನ್ನು ತಕ್ಕೊಂಡು ಹೋಗಲಿ; ಇಗೋ, ಈ ಮೇಕೆಯ ಮರಿಯನ್ನು ನಾನು ಕಳುಹಿಸಿ ದೆನು, ಆದರೆ ಆಕೆಯು ನಿನಗೆ ಸಿಕ್ಕಲಿಲ್ಲ ಅಂದನು. |
24. | ಹೆಚ್ಚುಕಡಿಮೆ ಮೂರು ತಿಂಗಳಾದ ಮೇಲೆ ಯೆಹೂದನಿಗೆ--ನಿನ್ನ ಸೊಸೆಯಾದ ತಾಮಾರಳು ಜಾರತ್ವ ಮಾಡಿದ್ದಾಳೆ; ಜಾರತ್ವದಿಂದ ಗರ್ಭಿಣಿಯಾಗಿ ದ್ದಾಳೆ ಎಂದು ತಿಳಿಸಿದರು. ಆಗ ಯೆಹೂದನು--ಅವಳನ್ನು ಹೊರಗೆ ತನ್ನಿರಿ, ಅವಳು ಸುಡಲ್ಪಡಲಿ ಅಂದನು. |
25. | ಆಕೆಯನ್ನು ಹೊರಗೆ ತಂದಾಗ ಆಕೆಯು ತನ್ನ ಮಾವನಿಗೆ--ಇವು ಯಾವ ಮನುಷ್ಯನವೋ ಆ ಮನುಷ್ಯನಿಂದಲೇ ನಾನು ಗರ್ಭಿಣಿಯಾಗಿದ್ದೇನೆ. ಆದದರಿಂದ ಈ ಮುದ್ರೆಯೂ ಕಡಗಗಳೂ ಕೋಲೂ ಯಾರವೆಂದು ತಿಳಿದುಕೋ ಎಂದು ಕೇಳಿಕೊಂಡಳು. |
26. | ಆಗ ಯೆಹೂದನು ಅವುಗಳನ್ನು ಗುರುತಿಸಿ--ಆಕೆಯು ನನಗಿಂತ ನೀತಿವಂತಳು, ಯಾಕಂದರೆ ನಾನು ನನ್ನ ಮಗನಾದ ಶೇಲಹನಿಗೆ ಅವಳನ್ನು ಕೊಡಲಿಲ್ಲ ಅಂದನು. ಅವನು ಮತ್ತೆ ಆಕೆಯನ್ನು ಅರಿಯಲಿಲ್ಲ. |
27. | ಅವಳು ಹೆರುವ ಸಮಯದಲ್ಲಿ ಇಗೋ, ಅವಳಿ ಮಕ್ಕಳು ಆಕೆಯ ಗರ್ಭದಲ್ಲಿದ್ದರು. ಆಕೆಯು ಹೆರುವಾಗ ಒಂದು (ಮಗುವು) ತನ್ನ ಕೈಚಾಚಿತು. |
28. | ಸೂಲ ಗಿತ್ತಿಯು ಆ ಕೈಗೆ ಕೆಂಪು ನೂಲನ್ನು ಕಟ್ಟಿ--ಇವನು ಮೊದಲು ಹೊರಗೆ ಬಂದನು ಅಂದಳು. |
29. | ಆ ಮಗುವು ತನ್ನ ಕೈಯನ್ನು ಹಿಂದಕ್ಕೆ ಎಳೆದಾಗ ಇಗೋ, ಅವನ ಸಹೋದರನು ಹೊರಗೆ ಬಂದನು. ಆಗ ಅವಳು--ನೀನು ಛೇದಿಸಿದ್ದೇನು? ಈ ದೋಷವು ನಿನ್ನ ಮೇಲೆ ಇರಲಿ ಅಂದಳು. |
30. | ಹೀಗೆ ಅವನಿಗೆ ಪೆರೆಚ್ ಎಂದು ಹೆಸರಾಯಿತು. ತರುವಾಯ ತನ್ನ ಕೈಯಲ್ಲಿ ಕೆಂಪು ನೂಲು ಇದ್ದ ಅವನ ಸಹೋದರನು ಹೊರಗೆ ಬಂದನು. ಅವನಿಗೆ ಜೆರಹ ಎಂದು ಹೆಸರಾಯಿತು. |
← Genesis (38/50) → |