← Genesis (37/50) → |
1. | ಯಾಕೋಬನು ತನ್ನ ತಂದೆ ಪ್ರವಾಸಿಯಾಗಿದ್ದ ಕಾನಾನ್ ದೇಶದಲ್ಲಿ ವಾಸ ವಾಗಿದ್ದನು. |
2. | ಇವು ಯಾಕೋಬನ ವಂಶಾವಳಿಗಳು: ಯೋಸೇಫನು ಹದಿನೇಳು ವರುಷದವನಾಗಿದ್ದಾಗ ತನ್ನ ಸಹೋದರರ ಸಂಗಡ ಮಂದೆಯನ್ನು ಮೇಯಿಸು ತ್ತಿದ್ದನು. ಆ ಹುಡುಗನು ತನ್ನ ತಂದೆಯ ಹೆಂಡತಿ ಯರಾಗಿದ್ದ ಬಿಲ್ಹಳ ಮತ್ತು ಜಿಲ್ಪಳ ಕುಮಾರರ ಸಂಗಡ ಇದ್ದನು. ಯೋಸೇಫನು ಅವರ ಕೆಟ್ಟತನದ ಸುದ್ದಿಯನ್ನು ತನ್ನ ತಂದೆಗೆ ತಿಳಿಸುತ್ತಿದ್ದನು. |
3. | ಆದರೆ ಯೋಸೇಫನು ಇಸ್ರಾಯೇಲನಿಗೆ ಮುಪ್ಪಿನಲ್ಲಿ ಹುಟ್ಟಿದ ಮಗನಾಗಿ ದ್ದರಿಂದ ಅವನು ತನ್ನ ಎಲ್ಲಾ ಮಕ್ಕಳಿಗಿಂತ ಅವನನ್ನು ಹೆಚ್ಚು ಪ್ರೀತಿಮಾಡಿ ಅವನಿಗೆ ಅನೇಕ ಬಣ್ಣದ ಅಂಗಿ ಯನ್ನು ಮಾಡಿಸಿದನು. |
4. | ತಮ್ಮ ತಂದೆಯು ಅವನನ್ನು ಅವನ ಎಲ್ಲಾ ಸಹೋದರರಿಗಿಂತ ಹೆಚ್ಚು ಪ್ರೀತಿ ಮಾಡುತ್ತಾನೆಂದು ಅವನ ಸಹೋದರರು ನೋಡಿ ಅವನನ್ನು ದ್ವೇಷಿಸಿ ಅವನ ಸಂಗಡ ಸಮಾಧಾನವಾಗಿ ಮಾತಾಡಲಾರದೆ ಇದ್ದರು. |
5. | ಯೋಸೇಫನು ಒಂದು ಕನಸನ್ನು ಕಂಡು ತನ್ನ ಸಹೋದರರಿಗೆ ತಿಳಿಸಿದಾಗ ಅವರು ಅವನನ್ನು ಇನ್ನೂ ಹೆಚ್ಚಾಗಿ ದ್ವೇಷಿಸಿದರು. |
6. | ಅವನು ಅವರಿಗೆ ನಾನು ಕಂಡ ಈ ಕನಸನ್ನು ಹೇಳುತ್ತೇನೆ, ಕೇಳಿರಿ. |
7. | ಇಗೋ, ನಾವು ಹೊಲದಲ್ಲಿ ಸಿವುಡುಗಳನ್ನು ಕಟ್ಟುತ್ತಾ ಇದ್ದೆವು; ಆಗ ಇಗೋ, ನನ್ನ ಸಿವುಡು ಎದ್ದು ನಿಂತಿತು; ಆಗ ಇಗೋ, ನಿಮ್ಮ ಸಿವುಡುಗಳು ತಿರುಗಿ ಕೊಂಡು ನನ್ನ ಸಿವುಡಿಗೆ ಅಡ್ಡಬಿದ್ದವು ಅಂದನು. |
8. | ಆಗ ಅವನ ಸಹೋದರರು ಅವನಿಗೆ--ನೀನು ನಮ್ಮನ್ನು ನಿಶ್ಚಯವಾಗಿಯೂ ಆಳುವಿಯೋ ಇಲ್ಲವೆ ನಿಜವಾಗಿ ನಮ್ಮ ಮೇಲೆ ದೊರೆತನ ಮಾಡುವಿಯೋ ಎಂದು ಹೇಳಿ ಅವನ ಕನಸುಗಳಿಗಾಗಿಯೂ ಅವನ ಮಾತುಗಳಿಗಾಗಿಯೂ ಅವನನ್ನು ಮತ್ತಷ್ಟು ಹಗೆ ಮಾಡಿದರು. |
9. | ಇದಲ್ಲದೆ ಅವನು ಇನ್ನೊಂದು ಕನಸನ್ನು ಕಂಡು ತನ್ನ ಸಹೋದರರಿಗೆ--ಇಗೋ, ಇನ್ನೊಂದು ಕನಸನ್ನು ಕಂಡಿದ್ದೇನೆ; ಇಗೋ, ಸೂರ್ಯನೂ ಚಂದ್ರನೂ ಹನ್ನೊಂದು ನಕ್ಷತ್ರಗಳೂ ನನಗೆ ಅಡ್ಡಬಿದ್ದವು ಅಂದನು. |
10. | ಅವನು ತನ್ನ ತಂದೆಗೂ ತನ್ನ ಸಹೋದರರಿಗೂ ಅದನ್ನು ತಿಳಿಸಿದಾಗ ಅವನ ತಂದೆಯು ಅವನನ್ನು ಗದರಿಸಿ ಅವನಿಗೆ--ನೀನು ಕಂಡ ಈ ಕನಸು ಏನು? ನಾನೂ ನಿನ್ನ ತಾಯಿಯೂ ನಿನ್ನ ಸಹೋದರರೂ ನಿಜವಾಗಿ ನಿನ್ನ ಮುಂದೆ ಅಡ್ಡಬೀಳುವದಕ್ಕೆ ಬರಬೇಕೋ ಅಂದನು. |
11. | ಆಗ ಅವನ ಸಹೋದರರು ಅವನ ಮೇಲೆ ಹೊಟ್ಟೆಕಿಚ್ಚು ಪಟ್ಟರು. ಆದರೆ ಅವನ ತಂದೆ ಆ ಮಾತನ್ನು ಮನಸ್ಸಿನಲ್ಲಿ ಇಟ್ಟುಕೊಂಡನು. |
12. | ಆಗ ಅವನ ಸಹೋ ದರರು ಶೆಕೆಮಿನಲ್ಲಿ ತಮ್ಮ ತಂದೆಯ ಮಂದೆಯನ್ನು ಮೇಯಿಸುವದಕ್ಕೆ ಹೋದರು. |
13. | ಆದದರಿಂದ ಇಸ್ರಾಯೇಲನು ಯೋಸೇಫನಿಗೆ--ನಿನ್ನ ಸಹೋದ ರರು ಶೆಕೆಮಿನಲ್ಲಿ ಮಂದೆಯನ್ನು ಮೇಯಿಸುತ್ತಾರಲ್ಲಾ; ಅವರ ಬಳಿಗೆ ನಾನು ನಿನ್ನನ್ನು ಕಳುಹಿಸುತ್ತೇನೆ ಹೋಗು ಅಂದನು. ಅದಕ್ಕೆ ಅವನು--ನಾನು ಇಲ್ಲಿದ್ದೇನೆ ಅಂದನು. |
14. | ಯಾಕೋಬನು ಅವನಿಗೆ--ಹೋಗಿ ನಿನ್ನ ಸಹೋದರರ ಕ್ಷೇಮಸಮಾಚಾರವನ್ನೂ ಮಂದೆಗಳ ಕ್ಷೇಮಸಮಾಚಾರವನ್ನೂ ತಿಳಿದುಕೊಂಡು ಬಂದು ನನಗೆ ತಿಳಿಸು ಎಂದು ಹೇಳಿ ಹೆಬ್ರೋನ್ ತಗ್ಗಿನಿಂದ ಕಳುಹಿಸಿದನು. ಆಗ ಅವನು ಶೆಕೆಮಿಗೆ ಬಂದನು. |
15. | ಒಬ್ಬಾನೊಬ್ಬ ಮನುಷ್ಯನು ಯೋಸೇಫ ನನ್ನು ಕಂಡಾಗ ಇಗೋ, ಅವನು ಹೊಲದಲ್ಲಿ ಅಲೆಯುತ್ತಿದ್ದನು. ಆ ಮನುಷ್ಯನು ಅವನಿಗೆ--ನೀನು ಏನು ಹುಡುಕುತ್ತೀ ಎಂದು ಕೇಳಿದನು. |
16. | ಅದಕ್ಕೆ ಅವನು--ನನ್ನ ಸಹೋದರರನ್ನು ಹುಡುಕುತ್ತಿದ್ದೇನೆ; ಅವರು ತಮ್ಮ ಮಂದೆಗಳನ್ನು ಎಲ್ಲಿ ಮೇಯಿಸು ತ್ತಾರೆಂದು ನನಗೆ ಹೇಳು ಎಂದು ಬೇಡಿಕೊಂಡನು. |
17. | ಆ ಮನುಷ್ಯನು--ಅವರು ಇಲ್ಲಿಂದ ಹೊರಟು ಹೋದರು. ಯಾಕಂದರೆ ಅವರು--ನಾವು ದೋತಾ ನಿಗೆ ಹೋಗೋಣ ಎಂದು ಹೇಳುತ್ತಿದ್ದದ್ದನ್ನು ನಾನು ಕೇಳಿಸಿಕೊಂಡೆನು ಅಂದನು. ಆಗ ಯೋಸೇಫನು ತನ್ನ ಸಹೋದರರನ್ನು ಹುಡಿಕಿಕೊಂಡು ಹೋಗಿ ದೋತಾನಿನಲ್ಲಿ ಅವರನ್ನು ಕಂಡುಕೊಂಡನು. |
18. | ಅವರು ದೂರದಿಂದ ಅವನನ್ನು ನೋಡಿದಾಗ ಅವನು ಅವರ ಸವಿಾಪಕ್ಕೆ ಬರುವದಕ್ಕೆ ಮುಂಚೆಯೇ ಅವರು ಅವನನ್ನು ಕೊಂದುಹಾಕಬೇಕೆಂದು ಅವ ನಿಗೆ ವಿರೋಧವಾಗಿ ಒಳಸಂಚುಮಾಡಿಕೊಂಡರು. |
19. | ಅವರು--ಇಗೋ, ಈ ಕನಸಿನವನು ಬರುತ್ತಿದ್ದಾನೆ; |
20. | ಬನ್ನಿರಿ, ಈಗ ಅವನನ್ನು ಕೊಂದು--ಯಾವದೋ ಒಂದು ಕಾಡುಮೃಗವು ಅವನನ್ನು ತಿಂದುಬಿಟ್ಟಿತೆಂದು ಹೇಳೋಣ; ತರುವಾಯ ಅವನ ಕನಸುಗಳು ಏನಾಗುವವೋ ನೋಡೋಣ ಎಂದು ಒಬ್ಬರಿಗೊಬ್ಬರು ಮಾತನಾಡಿಕೊಂಡರು. |
21. | ಆದರೆ ರೂಬೇನನು ಅದನ್ನು ಕೇಳಿ ಅವನನ್ನು ಅವರ ಕೈಗಳಿಂದ ತಪ್ಪಿಸಿ--ಅವನನ್ನು ಕೊಲ್ಲುವದು ಬೇಡ ಅಂದನು. |
22. | ರೂಬೇನನು ಅವನನ್ನು ಅವರ ಕೈಗಳಿಂದ ತಪ್ಪಿಸಿ ತನ್ನ ತಂದೆಯ ಬಳಿಗೆ ತಿರಿಗಿ ಕರೆದುಕೊಂಡು ಹೋಗುವ ಹಾಗೆ ಅವರಿಗೆ--ರಕ್ತ ಚೆಲ್ಲಬೇಡಿರಿ, ಕಾಡಿನಲ್ಲಿರುವ ಈ ತಗ್ಗಿನಲ್ಲಿ ಅವನನ್ನು ಹಾಕಿರಿ; ಆದರೆ ಅವನ ಮೇಲೆ ಕೈಹಾಕಬೇಡಿರಿ ಅಂದನು. |
23. | ಯೋಸೇಫನು ತನ್ನ ಸಹೋದರರ ಬಳಿಗೆ ಬಂದಾಗ ಅವರು ಯೋಸೇಫನ ಮೇಲಿದ್ದ ಬಣ್ಣದ ಅಂಗಿಯನ್ನು ತೆಗೆದರು. |
24. | ಅವನನ್ನು ತಕ್ಕೊಂಡು ತಗ್ಗಿನಲ್ಲಿ ಹಾಕಿದರು; ಆ ತಗ್ಗು ನೀರಿಲ್ಲದೆ ಬರಿದಾಗಿತ್ತು. |
25. | ಅವರು ಊಟಕ್ಕೆ ಕೂತುಕೊಂಡಾಗ ತಮ್ಮ ಕಣ್ಣುಗಳನ್ನೆತ್ತಿ ನೋಡಲಾಗಿ ಇಗೋ, ಇಷ್ಮಾಯೇಲ್ಯರ ಗುಂಪು ಗಿಲ್ಯಾದಿನಿಂದ ಬರುತ್ತಿತ್ತು. ಅವರ ಒಂಟೆಗಳು ಸಾಂಬ್ರಾಣಿ ಸುಗಂಧತೈಲ ರಕ್ತಬೋಳಗಳನ್ನು ಹೊರು ತ್ತಿದ್ದವು. ಅವರು ಅವುಗಳನ್ನು ಐಗುಪ್ತಕ್ಕೆ ತೆಗೆದು ಕೊಂಡು ಹೋಗುತ್ತಿದ್ದರು. |
26. | ಆಗ ಯೆಹೂದನು ತನ್ನ ಸಹೋದರರಿಗೆ--ನಾವು ನಮ್ಮ ಸಹೋದರನನ್ನು ಕೊಂದುಹಾಕಿ ಅವನ ರಕ್ತವನ್ನು ಮರೆಮಾಡುವದರಲ್ಲಿ ಲಾಭವೇನು? |
27. | ಬನ್ನಿರಿ, ಇಷ್ಮಾಯೇಲ್ಯರಿಗೆ ಅವನನ್ನು ಮಾರೋಣ. ನಾವು ಅವನ ಮೇಲೆ ಕೈಹಾಕಬಾರದು. ಯಾಕಂದರೆ ಅವನು ನಮ್ಮ ಸಹೋದರನೂ ನಮ್ಮ ಮಾಂಸವೂ ಆಗಿದ್ದಾನೆ ಅಂದನು. ಅದಕ್ಕೆ ಅವನ ಸಹೋದರರು ಒಪ್ಪಿದರು. |
28. | ಈ ಪ್ರಕಾರ (ಮಿದ್ಯಾನ್ಯರ ವರ್ತಕರು ಹಾದುಹೋಗುತ್ತಿದ್ದಾಗ) ಅವರು ಯೋಸೇಫನನ್ನು ತಗ್ಗಿನಿಂದ ಮೇಲೆತ್ತಿ ಇಷ್ಮಾಯೇಲ್ಯ ರಿಗೆ ಅವನನ್ನು ಇಪ್ಪತ್ತು ಬೆಳ್ಳಿಯ ನಾಣ್ಯಗಳಿಗೆ ಮಾರಿದರು, ಅವರು ಯೋಸೇಫನನ್ನು ಐಗುಪ್ತಕ್ಕೆ ಕರಕೊಂಡು ಹೋದರು. |
29. | ರೂಬೇನನು ತಗ್ಗಿನ ಬಳಿಗೆ ತಿರಿಗಿ ಬಂದಾಗ ಇಗೋ, ಯೋಸೇಫನು ತಗ್ಗಿನಲ್ಲಿ ಇಲ್ಲದ್ದರಿಂದ ತನ್ನ ವಸ್ತ್ರಗಳನ್ನು ಹರಿದು ಕೊಂಡನು. |
30. | ಅವನು ತನ್ನ ಸಹೋದರರ ಬಳಿಗೆ ತಿರಿಗಿಹೋಗಿ--ಆ ಮಗುವು ಇಲ್ಲವಲ್ಲಾ; ಹಾಗಾದರೆ ನಾನು ಎಲ್ಲಿಗೆ ಹೋಗಲಿ ಅಂದನು. |
31. | ಆಗ ಅವರು ಯೋಸೇಫನ ಅಂಗಿಯನ್ನು ತೆಗೆದುಕೊಂಡು ಮೇಕೆಯ ಮರಿಯನ್ನು ಕೊಯ್ದು ಆ ಅಂಗಿಯನ್ನು ರಕ್ತದಲ್ಲಿ ಅದ್ದಿ |
32. | ಆ ಬಣ್ಣದ ಅಂಗಿಯನ್ನು ಕಳುಹಿಸಿಕೊಟ್ಟರು. ಅವರು ಅದನ್ನು ಅವರ ತಂದೆಯ ಬಳಿಗೆ ತಂದು--ಇದು ನಮಗೆ ಸಿಕ್ಕಿತು. ಇದು ನಿನ್ನ ಮಗನ ಅಂಗಿಯೋ ಏನೋ ನೋಡು ಎಂದು ಹೇಳಿದರು. |
33. | ಯಾಕೋಬನು ಅದನ್ನು ಗುರುತು ಹಿಡಿದು--ಇದು ನನ್ನ ಮಗನ ಅಂಗಿ ಹೌದು; ದುಷ್ಟಮೃಗವು ಅವನನ್ನು ತಿಂದುಬಿಟ್ಟಿತು; ಯೋಸೇಫನು ನಿಸ್ಸಂದೇಹವಾಗಿ ತುಂಡು ತುಂಡಾಗಿ ಮಾಡಲ್ಪಟ್ಟಿದ್ದಾನೆ ಅಂದನು. |
34. | ಆಗ ಯಾಕೋಬನು ತನ್ನ ವಸ್ತ್ರಗಳನ್ನು ಹರಿದುಕೊಂಡು ತನ್ನ ನಡುವಿಗೆ ಗೋಣಿಯನ್ನು ಕಟ್ಟಿಕೊಂಡು ತನ್ನ ಮಗನಿಗೋಸ್ಕರ ಬಹುದಿನ ದುಃಖಪಟ್ಟನು. |
35. | ಅವನ ಕುಮಾರ ಕುಮಾರ್ತೆಯರೆಲ್ಲಾ ಅವನನ್ನು ಆದರಿಸಿದಾಗ್ಯೂ ಅವನು ಆದರಣೆ ಹೊಂದಲೊಲ್ಲದೆ--ನನ್ನ ಮಗನ ಬಳಿಗೆ ಸಮಾಧಿಗೆ ದುಃಖದಿಂದಲೇ ಇಳಿದು ಹೋಗು ವೆನು ಅಂದನು. ಹೀಗೆ ಅವನ ತಂದೆ ಅವನಿಗೋಸ್ಕರ ಅತ್ತನು. |
36. | ಇದಲ್ಲದೆ ಆ ಮಿದ್ಯಾನ್ಯರು ಯೋಸೇಫನನ್ನು ಐಗುಪ್ತದಲ್ಲಿ ಫರೋಹನ ಉದ್ಯೋಗಸ್ಥನಾದ ಪೋಟೀಫರನಿಗೆ ಮಾರಿದನು. ಅವನು ಮೈಗಾವಲಿನ ದಳವಾಯಿಯಾಗಿದ್ದನು. |
← Genesis (37/50) → |