← Genesis (36/50) → |
1. | ಎದೋಮ್ ಎಂಬ ಏಸಾವನ ವಂಶಾವಳಿಗಳು ಇವೇ: |
2. | ಏಸಾವನು ಕಾನಾನ್ಯರ ಕುಮಾರ್ತೆಯರನ್ನು ಅಂದರೆ ಹಿತ್ತಿಯನಾದ ಏಲೋನನ ಮಗಳಾದ ಆದಾ, ಹಿವ್ವಿಯನಾದ ಸಿಬೆಯೋನನ ಮಗಳಾದ ಅನಾಹಳ ಮಗಳಾಗಿದ್ದ ಒಹೊಲೀಬಾಮ, |
3. | ಇಷ್ಮಾಯೇಲನ ಮಗಳೂ ನೆಬಾಯೋತನ ಸಹೋ ದರಿಯೂ ಆಗಿದ್ದ ಬಾಸೆಮತ್ ಇವರನ್ನು ತನ್ನ ಹೆಂಡತಿಯರನ್ನಾಗಿ ತಕ್ಕೊಂಡನು. |
4. | ಆದಾ ಎಂಬಾಕೆಯು ಏಸಾವನಿಗೆ ಎಲೀಫಜನನ್ನು ಹೆತ್ತಳು. ಬಾಸೆಮತಳು ರೆಗೂವೇಲನನ್ನು ಹೆತ್ತಳು. |
5. | ಒಹೊಲೀಬಾಮಳು ಯೆಗೂಷನನ್ನು ಯಳಾಮನನ್ನು ಕೋರಹನನ್ನು ಹೆತ್ತಳು. ಇವರು ಕಾನಾನ್ ದೇಶದಲ್ಲಿ ಏಸಾವನಿಗೆ ಹುಟ್ಟಿದ ಕುಮಾರರು. |
6. | ತರುವಾಯ ಏಸಾವನು ತನ್ನ ಹೆಂಡತಿಯರನ್ನೂ ಕುಮಾರ ಕುಮಾರ್ತೆಯರನ್ನೂ ತನ್ನ ಮನೆಯಲ್ಲಿದ್ದ ಎಲ್ಲಾ ಮನುಷ್ಯರನ್ನೂ ತನ್ನ ಹಿಂಡುಗಳನ್ನೂ ತನ್ನ ಎಲ್ಲಾ ದನಗಳನ್ನೂ ಕಾನಾನ್ ದೇಶದಲ್ಲಿ ತಾನು ಸಂಪಾದಿಸಿದ್ದ ಎಲ್ಲಾ ಸಂಪತ್ತನ್ನೂ ತೆಗೆದುಕೊಂಡು ತನ್ನ ಸಹೋದರನಾದ ಯಾಕೋಬನ ಎದುರಿನಿಂದ ಮತ್ತೊಂದು ದೇಶಕ್ಕೆ ಹೋದನು. |
7. | ಅವರು ಕೂಡಿ ಇರುವದಕ್ಕೆ ಆಗದಷ್ಟು ಅವರ ಸಂಪತ್ತು ಅಭಿವೃದ್ಧಿ ಯಾಗಿತ್ತು. ಅವರ ಹಿಂಡುಗಳಿಗೋಸ್ಕರ ಅವರು ಪ್ರವಾಸವಾಗಿದ್ದ ದೇಶವು ಅವರಿಗೆ ಸಾಲದೆ ಹೋಯಿತು. |
8. | ಹೀಗೆ ಏಸಾವನು ಸೇಯಾರ್ ಪರ್ವತದಲ್ಲಿ ವಾಸವಾಗಿದ್ದನು. ಏಸಾವನೇ ಎದೋಮನು. |
9. | ಸೇಯಾರ್ ಪರ್ವತದಲ್ಲಿರುವ ಎದೋಮ್ಯರ ತಂದೆಯಾದ ಏಸಾವನ ವಂಶಾವಳಿಗಳು ಇವೇ: |
10. | ಏಸಾವನ ಕುಮಾರರ ಹೆಸರುಗಳು ಯಾವವಂದರೆ: ಏಸಾವನ ಹೆಂಡತಿಯಾಗಿರುವ ಆದಾಳ ಮಗನಾಗಿರುವ ಎಲೀಫಜನು, ಏಸಾವನ ಹೆಂಡತಿಯಾದ ಬಾಸೆಮತಳ ಮಗನಾದ ರೆಗೂವೇಲನು. |
11. | ಎಲೀಫಜನ ಮಕ್ಕಳು ಯಾರಂದರೆ: ತೇಮಾನ್ ಓಮಾರ್ ಚೆಫೋ ಗತಾಮ್ ಕೆನಜ್; |
12. | ತಿಮ್ನಳು ಏಸಾವನ ಮಗನಾದ ಎಲೀಫಜನಿಗೆ ಉಪಪತ್ನಿ ಯಾಗಿದ್ದು ಅಮಾಲೇಕನನ್ನು ಹೆತ್ತಳು. ಏಸಾವನ ಹೆಂಡತಿಯಾಗಿದ್ದ ಆದಾಳ ಕುಮಾರರು ಇವರೇ. |
13. | ರೆಗೂವೇಲನ ಮಕ್ಕಳು ಯಾರಂದರೆ: ನಹತ್ ಜೆರಹ ಶಮ್ಮಾ ಮಿಜ್ಜಾ; ಇವರು ಏಸಾವನ ಹೆಂಡತಿ ಯಾದ ಬಾಸೆಮತಳ ಕುಮಾರರು. |
14. | ಏಸಾವನ ಹೆಂಡತಿಯಾಗಿದ್ದ ಸಿಬೆಯೋನನ ಮಗಳಾಗಿರುವ ಅನಾಹಳ ಮಗಳಾದ ಒಹೊಲೀ ಬಾಮಳ ಕುಮಾರರು ಯಾರಂದರೆ: ಆಕೆಯು ಏಸಾವನಿಗೆ ಯೆಗೂಷನನ್ನು ಯಳಾಮನನ್ನು ಕೋರಹನನ್ನು ಹೆತ್ತಳು. |
15. | ಏಸಾವನ ಕುಮಾರರ ಮುಖಂಡರು ಯಾರಂದರೆ: ಏಸಾವನ ಚೊಚ್ಚಲ ಮಗನಾಗಿರುವ ಎಲೀಫಜನ ಮಕ್ಕಳಾದ ತೇಮಾನ್ ಓಮಾರ್ ಚೆಫೋ ಕೆನಜ್ |
16. | ಕೋರಹ ಗತಾಮ್ ಅಮಾಲೇಕ್ ಎದೋಮ್ಯ ದೇಶದಲ್ಲಿದ್ದ ಎಲೀಫಜನಿಂದ ಬಂದ ಮುಖಂಡರು ಇವರೇ. ಇವರು ಆದಾಳ ಕುಮಾರರು. |
17. | ಏಸಾವನ ಮಗನಾದ ರೆಗೂವೇಲನ ಕುಮಾರರು ಯಾರಂದರೆ: ನಹತ್, ಜೆರಹ, ಶಮ್ಮಾ, ಮಿಜ್ಜಾ; ಎದೋಮ್ ದೇಶದಲ್ಲಿದ್ದ ರೆಗೂವೇಲನಿಂದ ಬಂದ ಮುಖಂಡರು ಇವರೇ. ಇವರು ಏಸಾವನ ಹೆಂಡತಿ ಯಾದ ಬಾಸೆಮತಳ ಕುಮಾರರು. |
18. | ಏಸಾವನ ಹೆಂಡತಿಯಾದ ಒಹೊಲೀಬಾಮಳ ಕುಮಾರರ ಮುಖಂಡರು ಯಾರಂದರೆ: ಯೆಗೂಷ ಯಳಾಮ ಕೋರಹ ಇವರೇ. ಏಸಾವನ ಹೆಂಡತಿ ಯಾದ ಅನಾಹಳ ಮಗಳಾದ ಒಹೊಲೀಬಾಮಳಿಂದ ಬಂದ ಮುಖಂಡರು. |
19. | ಇವರು ಎದೋಮ್ ಎಂಬ ಏಸಾವನ ಕುಮಾರರು; ಇವರೇ ಅವರ ಮುಖಂಡರು. |
20. | ಹೋರಿಯನಾದ ಸೇಯಾರನ ಕುಮಾರರೂ ದೇಶದ ನಿವಾಸಿಗಳೂ ಯಾರಂದರೆ: ಲೋಟಾನ್ ಶೋಬಾಲ್ ಸಿಬೆಯೋನ್ ಅನಾಹ |
21. | ದೀಶೋನ್ ಏಚೆರ್ ದೀಶಾನ್ ಇವರು ಎದೋಮ್ ದೇಶದಲ್ಲಿದ್ದ ಸೇಯಾರನ ಮಕ್ಕಳಾದ ಹೋರಿಯರ ಮುಖಂಡರು. |
22. | ಲೋಟಾನನ ಕುಮಾರರು ಯಾರಂದರೆ: ಹೋರಿ ಹೇಮಾಮ್ ಲೋಟಾನನ ಸಹೋದರಿ ಯಾದ ತಿಮ್ನಾ. |
23. | ಶೋಬಾಲನ ಮಕ್ಕಳು ಯಾರಂದರೆ: ಅಲ್ವಾನ್ ಮಾನಹತ್ ಗೇಬಾಲ್ ಶೆಫೋ ಮತ್ತು ಓನಾಮ್. |
24. | ಸಿಬೆಯೋನನ ಮಕ್ಕಳು ಯಾರಂದರೆ: ಅಯ್ಯಾ ಮತ್ತು ಅನಾಹ ಎಂಬವರು. ತನ್ನ ತಂದೆಯಾದ ಸಿಬೆಯೋನನ ಕತ್ತೆಗಳನ್ನು ಕಾಯುವಾಗ ಅರಣ್ಯದಲ್ಲಿ ಹೇಸರಕತ್ತೆಗಳನ್ನು ಕಂಡುಕೊಂಡವನು ಈ ಅನಾಹನೇ. |
25. | ಅನಾಹನ ಮಕ್ಕಳು ಯಾರಂದರೆ: ದೀಶೋನ್ ಮತ್ತು ಅನಾಹನ ಮಗಳಾದ ಒಹೊಲೀಬಾಮಳು. |
26. | ದೀಶೋನನ ಮಕ್ಕಳು ಯಾರಂದರೆ: ಹೆಮ್ದಾನ್ ಎಷ್ಬಾನ್ ಇತ್ರಾನ್ ಕೆರಾನ್. |
27. | ಏಚೆರನ ಮಕ್ಕಳು ಯಾರಂದರೆ: ಬಿಲ್ಹಾನ್ ಜಾವಾನ್ ಆಕಾನ್. |
28. | ದೀಶಾನನ ಮಕ್ಕಳು ಯಾರಂದರೆ: ಊಚ್ ಅರಾನ್. |
29. | ಹೋರಿಯರಿಂದ ಬಂದ ಮುಖಂಡರು ಯಾರಂದರೆ: ಲೋಟಾನ್ ಶೋಬಾಲ್ ಸಿಬೆಯೋನ್ ಅನಾಹ. |
30. | ದೀಶೋನ್ ಏಚೆರ್ ದೀಶಾನ್ ಇವರೇ. ಇವರು ಸೇಯಾರ್ ದೇಶದಲ್ಲಿ ಮುಖಂಡರಾಗಿದ್ದ ಹೋರಿಯರಿಂದ ಬಂದ ಮುಖಂಡರು. |
31. | ಇಸ್ರಾಯೇಲ್ ಮಕ್ಕಳನ್ನು ಯಾವ ಅರಸನೂ ಆಳುವದಕ್ಕಿಂತ ಮುಂಚೆ ಎದೋಮ್ ದೇಶದಲ್ಲಿ ಆಳಿದ ಅರಸರು ಇವರೇ. |
32. | ಎದೋಮಿನಲ್ಲಿ ಬೆಯೋರನ ಮಗನಾದ ಬೆಲಗನು ಆಳಿದನು; ಅವನ ಪಟ್ಟಣದ ಹೆಸರು ದಿನ್ಹಾಬಾ. |
33. | ಬೆಲಗನು ಸತ್ತ ಮೇಲೆ ಅವನ ಬದಲಾಗಿ ಬೊಚ್ರದವನಾದ ಜೆರಹನ ಮಗನಾದ ಯೋಬಾಬನು ಆಳಿದನು. |
34. | ಯೋಬಾ ಬನು ಸತ್ತ ಮೇಲೆ ಅವನ ಬದಲಾಗಿ ತೇಮಾನೀಯ ದೇಶದ ಹುಷಾಮನು ಆಳಿದನು. |
35. | ಹುಷಾಮನು ಸತ್ತ ಮೇಲೆ ಅವನ ಬದಲಾಗಿ ಮೋವಾಬ್ಯರ ಹೊಲದಲ್ಲಿ ಮಿದ್ಯಾನರನ್ನು ಹೊಡೆದ ಬೆದದನ ಮಗನಾದ ಹದದನು ಆಳಿದನು. ಅವನ ಪಟ್ಟಣದ ಹೆಸರು ಅವೀತ್. |
36. | ಹದದನು ಸತ್ತಾಗ ಅವನ ಬದಲಾಗಿ ಮಸ್ರೇಕದವನಾದ ಸಮ್ಲಾಹನು ಆಳಿದನು. |
37. | ಸಮ್ಲಾಹನು ಸತ್ತ ಮೇಲೆ ಅವನ ಬದಲಾಗಿ ನದಿಯ ಬಳಿಯಲ್ಲಿದ್ದ ರೆಹೋಬೋತೂರಿನವನಾದ ಸೌಲನು ಆಳಿದನು. |
38. | ಸೌಲನು ಸತ್ತ ಮೇಲೆ ಅವನ ಬದಲಾಗಿ ಅಕ್ಬೋರನ ಮಗನಾದ ಬಾಳ್ಹಾನಾ ನನು ಆಳಿದನು. |
39. | ಅಕ್ಬೋರನ ಮಗನಾದ ಬಾಳ್ಹಾನಾ ನನು ಸತ್ತ ಮೇಲೆ ಅವನ ಬದಲಾಗಿ ಹದರನು ಆಳಿದನು. ಅವನ ಪಟ್ಟಣದ ಹೆಸರು ಪಾಗು. ಅವನ ಹೆಂಡತಿಯ ಹೆಸರು ಮಹೇಟಬೇಲ್; ಈಕೆಯು ಮೇಜಾಹಾಬನ ಮಗಳಾದ ಮಟ್ರೇದಳ ಮಗಳು. |
40. | ಕುಟುಂಬ ಸ್ಥಳ ಮತ್ತು ಹೆಸರುಗಳ ಪ್ರಕಾರವಾಗಿ ಏಸಾವನ ಮುಖಂಡರ ಹೆಸರುಗಳು ಯಾವವಂದರೆ: ತಿಮ್ನಾ ಅಲ್ವಾ ಯೆತೇತ. |
41. | ಒಹೋಲೀಬಾಮ ಏಲಾ ಪೀನೋನ್. |
42. | ಕೆನಜ್ ತೇಮಾನ್ ಮಿಪ್ಚಾರ |
43. | ಮಗ್ದೀಯೇಲ್ ಗೀರಾಮ್. ತಮ್ಮ ಸ್ವಾಸ್ಥ್ಯದ ದೇಶದಲ್ಲಿ ವಾಸವಾಗಿದ್ದ ಪ್ರಕಾರ ಎದೋಮ್ಯರ ಮುಖಂಡರು ಇವರೇ. ಎದೋಮ್ಯರ ತಂದೆಯಾದ ಏಸಾವನು ಇವನೇ. |
← Genesis (36/50) → |