← Genesis (34/50) → |
1. | ಲೇಯಳು ಯಾಕೋಬನಿಗೆ ಹೆತ್ತ ಮಗಳಾದ ದೀನಳು ದೇಶದ ಸ್ತ್ರೀಯರನ್ನು ನೋಡುವ ದಕ್ಕಾಗಿ ಹೊರಗೆ ಹೋದಳು. |
2. | ದೇಶದ ಪ್ರಭುವಾಗಿದ್ದ ಹಿವ್ವಿಯನಾದ ಹಮೋರನ ಮಗನಾದ ಶೆಕೆಮನು ಆಕೆಯನ್ನು ನೋಡಿ ತೆಗೆದುಕೊಂಡು ಹೋಗಿ ಕೂಡಿ ಅಶುದ್ಧ ಮಾಡಿದನು. |
3. | ಅವನ ಮನಸ್ಸು ಯಾಕೋಬನ ಮಗಳಾದ ದೀನಳನ್ನು ಅಂಟಿಕೊಂಡಿತ್ತು. ಅವನು ಆ ಹುಡುಗಿಯನ್ನು ಪ್ರೀತಿಮಾಡಿ ಆಕೆಯೊಂದಿಗೆ ದಯೆ ಯಿಂದ ಮಾತನಾಡಿದನು. |
4. | ಶೆಕೆಮನು ತನ್ನ ತಂದೆ ಯಾದ ಹಮೋರನಿಗೆ--ಈ ಹುಡುಗಿಯನ್ನು ನನಗೆ ಹೆಂಡತಿಯಾಗಿರುವಂತೆ ತಕ್ಕೋ ಅಂದನು. |
5. | ಯಾಕೋ ಬನು ತನ್ನ ಮಗಳಾದ ದೀನಳನ್ನು ಶೆಕೆಮನು ಅಶುದ್ಧ ಮಾಡಿದನೆಂದು ಕೇಳಿದಾಗ ಅವನ ಮಕ್ಕಳು ದನಗಳ ಸಂಗಡ ಹೊಲದಲ್ಲಿದ್ದರು. ಅವರು ಬರುವ ವರೆಗೆ ಯಾಕೋಬನು ಸುಮ್ಮನಿದ್ದನು. |
6. | ಆಗ ಶೆಕೆಮನ ತಂದೆಯಾದ ಹಮೋರನು ಹೊರಗೆ ಯಾಕೋಬನ ಸಂಗಡ ಮಾತನಾಡುವದಕ್ಕೆ ಬಂದನು. |
7. | ಯಾಕೋಬನ ಮಕ್ಕಳು ಅದನ್ನು ಕೇಳಿದಾಗ ಅವರು ಹೊಲದಿಂದ ಬಂದರು. ಶೆಕೆಮನು ಯಾಕೋಬನ ಮಗಳ ಸಂಗಡ ಮಲಗಿ ಇಸ್ರಾಯೇಲಿ ನಲ್ಲಿ ಅವಮಾನಕರವಾದದ್ದನ್ನು ಮಾಡಿದ್ದರಿಂದ ಆ ಮನುಷ್ಯರು ವ್ಯಸನಪಟ್ಟು ಬಹಳ ಉರಿಗೊಂಡರು. ಅದು ಹಾಗೆ ಆಗಬಾರದಾಗಿತ್ತು. |
8. | ಹಮೋರನು ಅವರಿಗೆ--ನನ್ನ ಮಗನಾದ ಶೆಕೆಮನ ಮನಸ್ಸು ನಿಮ್ಮ ಮಗಳಿಗಾಗಿ ಆಶಿಸುತ್ತದೆ. ಆಕೆಯನ್ನು ಅವನಿಗೆ ಹೆಂಡತಿಯಾಗಿ ಕೊಡಿರಿ ಎಂದು ನಿಮ್ಮನ್ನು ಕೇಳಿಕೊಳ್ಳುತ್ತೇನೆ; |
9. | ನೀವು ನಮ್ಮೊಂದಿಗೆ ಮದುವೆ ಗಳನ್ನು ಮಾಡಿರಿ; ನಿಮ್ಮ ಕುಮಾರ್ತೆಯರನ್ನು ನಮಗೆ ಕೊಡಿರಿ, ನಮ್ಮ ಕುಮಾರ್ತೆಯರನ್ನು ನೀವು ತಕ್ಕೊಳ್ಳಿರಿ. |
10. | ಇದಲ್ಲದೆ ನೀವು ನಮ್ಮ ಸಂಗಡ ವಾಸಮಾಡಿರಿ; ದೇಶವು ನಿಮ್ಮ ಮುಂದೆ ಇದೆ. ನೀವು ವಾಸಿಸಿ ಅದರಲ್ಲಿ ವ್ಯಾಪಾರಮಾಡಿ ಅದರಿಂದ ಆಸ್ತಿಯನ್ನು ಮಾಡಿಕೊಳ್ಳಿರಿ ಅಂದನು. |
11. | ಶೆಕೆಮನು ಆಕೆಯ ತಂದೆಗೂ ಸಹೋದರರಿಗೂ ಹೇಳಿದ್ದೇನಂದರೆ--ನಿಮ್ಮ ದೃಷ್ಟಿಯಲ್ಲಿ ನನಗೆ ಕೃಪೆ ದೊರಕಲಿ; ನೀವು ನನಗೆ ಹೇಳಿದ್ದನ್ನು ನಾನು ನಿಮಗೆ ಕೊಡುವೆನು. |
12. | ತೆರವನ್ನೂ ಕಾಣಿಕೆಯನ್ನೂ ಯಥೇಚ್ಛವಾಗಿ ನನ್ನನ್ನು ಕೇಳಿರಿ. ನೀವು ಹೇಳುವ ಪ್ರಕಾರ ಕೊಡುವೆನು. ಆದರೆ ಆ ಹುಡುಗಿಯನ್ನು ನನಗೆ ಹೆಂಡತಿಯಾಗಿ ಕೊಡಿರಿ ಅಂದನು. |
13. | ಆಗ ಯಾಕೋಬನ ಮಕ್ಕಳು ಶೆಕೆಮನಿಗೂ ಅವನ ತಂದೆಯಾದ ಹಮೋರನಿಗೂ ವಂಚನೆಯ ಉತ್ತರವನ್ನು ಕೊಟ್ಟರು. ಅವನು ತಮ್ಮ ತಂಗಿಯಾದ ದೀನಳನ್ನು ಅಶುದ್ಧಮಾಡಿದ್ದನು. |
14. | ಯಾಕೋಬನ ಮಕ್ಕಳು ಅವರಿಗೆ--ನಾವು ಈ ಕಾರ್ಯವನ್ನು ಮಾಡಲಾರೆವು, ಸುನ್ನತಿಯಿಲ್ಲದ ಮನುಷ್ಯನಿಗೆ ನಮ್ಮ ತಂಗಿಯನ್ನು ಕೊಡಲಾರೆವು, ಅದು ನಮಗೆ ಅವಮಾನ. |
15. | ಆದರೆ ನೀವು ನಮ್ಮ ಹಾಗಿದ್ದು ನಿಮ್ಮಲ್ಲಿರುವ ಗಂಡಸರೆಲ್ಲಾ ಸುನ್ನತಿಮಾಡಿಸಿಕೊಂಡರೆ ಮಾತ್ರ ನಾವು ಒಪ್ಪುವೆವು. |
16. | ನಮ್ಮ ಕುಮಾರ್ತೆಯರನ್ನು ನಿಮಗೆ ಕೊಟ್ಟು ನಿಮ್ಮ ಕುಮಾರ್ತೆಯರನ್ನು ತಕ್ಕೊಳ್ಳುವೆವು. ಇದಲ್ಲದೆ ನಾವು ನಿಮ್ಮಲ್ಲಿ ವಾಸಮಾಡಿ ಒಂದೇ ಜನಾಂಗವಾಗುವೆವು; |
17. | ಆದರೆ ನೀವು ನಮ್ಮ ಮಾತನ್ನು ಕೇಳಿ ಸುನ್ನತಿಮಾಡಿಸಿಕೊಳ್ಳದೆ ಹೋದರೆ ನಮ್ಮ ಮಗಳನ್ನು ನಾವು ತೆಗೆದುಕೊಂಡು ಹೋಗಿ ಬಿಡುತ್ತೇವೆ ಎಂದು ಹೇಳಿದರು. |
18. | ಅವರ ಮಾತುಗಳು ಹಮೋರನಿಗೂ ಅವನ ಮಗನಾದ ಶೆಕೆಮನಿಗೂ ಮೆಚ್ಚಿಕೆಯಾದವುಗಳಾಗಿ ಕಂಡವು. |
19. | ಆ ಯೌವನಸ್ಥನು ಯಾಕೋಬನ ಮಗಳನ್ನು ಮೆಚ್ಚಿದ್ದರಿಂದ ಆ ಕಾರ್ಯವನ್ನು ಮಾಡು ವದಕ್ಕೆ ಹಿಂಜರಿಯಲಿಲ್ಲ. ಅವನು ತನ್ನ ತಂದೆಯ ಮನೆಯವರೆಲ್ಲರಿಗಿಂತ ಗೌರವವುಳ್ಳವನಾಗಿದ್ದನು. |
20. | ಆಗ ಹಮೋರನೂ ಅವನ ಮಗನಾದ ಶೆಕೆಮನೂ ತಮ್ಮ ಪಟ್ಟಣ ದ್ವಾರದ ಬಳಿಗೆ ಬಂದು ತಮ್ಮ ಪಟ್ಟಣದ ಜನರ ಸಂಗಡ ಮಾತನಾಡಿ ಅವರಿಗೆ-- |
21. | ಈ ಮನುಷ್ಯರು ನಮ್ಮ ಸಂಗಡ ಸಮಾಧಾನ ವಾಗಿದ್ದಾರೆ; ಆದದರಿಂದ ಅವರು ದೇಶದಲ್ಲಿ ವಾಸಮಾಡಿ ಅದರಲ್ಲಿ ವ್ಯಾಪಾರಮಾಡಲಿ. ಇಗೋ, ದೇಶವು ಅವರಿಗಾಗಿ ಸಾಕಷ್ಟು ವಿಸ್ತಾರವಾಗಿದೆ. ಅವರ ಕುಮಾರ್ತೆಯರನ್ನು ನಮಗೆ ಹೆಂಡತಿಯರನ್ನಾಗಿ ತಕ್ಕೊಳ್ಳೋಣ ನಮ್ಮ ಕುಮಾರ್ತೆಯರನ್ನು ಅವರಿಗೆ ಕೊಡೋಣ. |
22. | ಅವರು ಸುನ್ನತಿಮಾಡಿಸಿಕೊಂಡ ಪ್ರಕಾರ ನಮ್ಮಲ್ಲಿ ಗಂಡಸರೆಲ್ಲಾ ಸುನ್ನತಿಮಾಡಿಸಿ ಕೊಂಡರೆ ಮಾತ್ರ ಆ ಮನುಷ್ಯರು ನಮ್ಮ ಸಂಗಡ ವಾಸಮಾಡುವದಕ್ಕೂ ಒಂದೇ ಜನಾಂಗವಾಗುವದಕ್ಕೂ ಒಪ್ಪುವರು. |
23. | ಅವರ ಮಂದೆಗಳೂ ಸಂಪತ್ತೂ ದನಗಳೆಲ್ಲಾ ನಮ್ಮವುಗಳಲ್ಲವೋ? ಅವರಿಗೆ ನಾವು ಒಪ್ಪಿಕೊಂಡರೆ ಮಾತ್ರ ಅವರು ನಮ್ಮ ಸಂಗಡ ವಾಸಿಸುವರು ಅಂದರು. |
24. | ಆಗ ಪಟ್ಟಣದ ದ್ವಾರದಲ್ಲಿ ಹೋಗುವವರೆಲ್ಲಾ ಹಮೋರನೂ ಅವನ ಮಗನಾದ ಶೆಕೆಮನೂ ಹೇಳಿದ ಮಾತುಗಳನ್ನು ಕೇಳಿ ಅವನ ಪಟ್ಟಣ ದ್ವಾರದಲ್ಲಿ ಹೋಗುವ ಎಲ್ಲಾ ಗಂಡಸರು ಸುನ್ನತಿಮಾಡಿಸಿಕೊಂಡರು. |
25. | ಮೂರನೆಯ ದಿನದಲ್ಲಿ ಅವರಿಗೆ ನೋವು ಉಂಟಾದಾಗ ಯಾಕೋಬನ ಮಕ್ಕಳಲ್ಲಿ ಇಬ್ಬರು ಅಂದರೆ ದೀನಳ ಸಹೋದರರಾದ ಸಿಮೆಯೋನನೂ ಲೇವಿಯೂ ತಮ್ಮ ತಮ್ಮ ಕತ್ತಿಗಳನ್ನು ತಕ್ಕೊಂಡು ಧೈರ್ಯವಾಗಿ ಪಟ್ಟಣಕ್ಕೆ ಬಂದು ಗಂಡಸರನ್ನೆಲ್ಲಾ ಕೊಂದುಹಾಕಿದರು. |
26. | ಹಮೋರನನ್ನೂ ಅವನ ಮಗ ನಾದ ಶೆಕೆಮನನ್ನೂ ಕತ್ತಿಯಿಂದ ಕೊಂದುಹಾಕಿ ದೀನಳನ್ನು ಶೆಕೆಮನ ಮನೆಯಿಂದ ತಕ್ಕೊಂಡು ಹೊರಗೆ ಹೋದರು. |
27. | ತಮ್ಮ ಸಹೋದರಿಯನ್ನು ಅಶುದ್ಧ ಮಾಡಿದ್ದರಿಂದ ಯಾಕೋಬನ ಮಕ್ಕಳು ಕೊಂದವರ ಬಳಿಗೆ ಬಂದು ಕೊಳ್ಳೆಹೊಡೆದರು. |
28. | ಅವರ ಕುರಿ, ದನ, ಕತ್ತೆಗಳನ್ನು ಪಟ್ಟಣದಲ್ಲಿಯೂ ಹೊಲದಲ್ಲಿಯೂ ಇದ್ದವುಗಳೆಲ್ಲವನ್ನು ತಕ್ಕೊಂಡರು. |
29. | ಅವರ ಎಲ್ಲಾ ಆಸ್ತಿಯನ್ನೂ ಅವರ ಎಲ್ಲಾ ಚಿಕ್ಕಮಕ್ಕಳನ್ನೂ ಅವರ ಹೆಂಡತಿಯರನ್ನೂ ಸೆರೆಹಿಡಿದು ಮನೆಯಲ್ಲಿದದ್ದೆ ಲ್ಲವನ್ನೂ ಅವರು ಕೊಳ್ಳೆಹೊಡೆದರು. |
30. | ಆಗ ಯಾಕೋಬನು ಸಿಮೆಯೋನನಿಗೂ ಲೇವಿಗೂ ಹೇಳಿದ್ದೇನಂದರೆ--ನೀವು ನನ್ನನ್ನು ದೇಶದ ನಿವಾಸಿಗಳಾದ ಕಾನಾನ್ಯರಿಗೂ ಪೆರಿಜೀಯರಿಗೂ ದುರ್ವಾಸನೆಯಾಗುವಂತೆ ಮಾಡಿ ನನ್ನನ್ನು ಕಳವಳಪಡಿ ಸಿದಿರಿ; ನಾನು ಸ್ವಲ್ಪ ಮಂದಿಯುಳ್ಳವನು, ಹೀಗಿರುವಲ್ಲಿ ಅವರು ನನಗೆ ವಿರೋಧವಾಗಿ ಕೂಡಿಕೊಂಡು ನನ್ನನ್ನು ಕೊಲ್ಲುವರು. ಆಗ ನಾನೂ ನನ್ನ ಮನೆಯವರೂ ನಾಶವಾಗುವೆವು ಅಂದನು. |
31. | ಆದರೆ ಅವರುನಮ್ಮ ತಂಗಿಯೊಂದಿಗೆ ಸೂಳೆಯಂತೆ ವರ್ತಿಸಬಹುದೋ ಅಂದರು. |
← Genesis (34/50) → |