← Genesis (23/50) → |
1. | ಸಾರಳು ನೂರಿಪ್ಪತ್ತೇಳು ವರುಷದವಳಾ ಗಿದ್ದಳು; ಸಾರಳ ಜೀವನದ ವರುಷ ಗಳು ಇವೇ. |
2. | ಸಾರಳು ಕಾನಾನ್ ದೇಶದಲ್ಲಿರುವ ಹೆಬ್ರೋನ್ ಎಂಬ ಕಿರ್ಯತರ್ಬದಲ್ಲಿ ಸತ್ತಳು. ಅಬ್ರಹಾಮನು ಸಾರಳಿಗೋಸ್ಕರ ಗೋಳಾಡುವದಕ್ಕೂ ಅಳುವದಕ್ಕೂ ಬಂದನು. |
3. | ತರುವಾಯ ಅಬ್ರಹಾಮನು (ತನ್ನ ಹೆಂಡತಿಯ) ಶವದ ಬಳಿಯಿಂದ ಎದ್ದು ಹೇತನ ಮಕ್ಕಳ ಸಂಗಡ ಮಾತನಾಡಿದ್ದೇನಂದರೆ-- |
4. | ನಾನು ನಿಮ್ಮಲ್ಲಿ ಪರದೇಶಸ್ಥನೂ ಪರವಾಸಿಯೂ ಆಗಿದ್ದೇನೆ; ನನಗೆ ನಿಮ್ಮ ಬಳಿಯಲ್ಲಿ ಸಮಾಧಿಯ ಸ್ಥಳವನ್ನು ಕೊಡಿರಿ; ಆಗ ನನ್ನ ಹೆಂಡತಿಯ ಶವವನ್ನು ಕಣ್ಣೆದುರಿಗೆ ಇಡದೆ ಹೂಣಿಡುವೆನು ಅಂದನು. |
5. | ಹೇತನ ಮಕ್ಕಳು ಅಬ್ರಹಾಮನಿಗೆ ಉತ್ತರಕೊಟ್ಟು ಹೇಳಿದ್ದೇನಂದರೆ-- |
6. | ಒಡೆಯನೇ, ನಮ್ಮ ಮಾತನ್ನು ಕೇಳು; ನೀನು ನಮ್ಮ ಮಧ್ಯದಲ್ಲಿ ಮಹಾಪ್ರಭುವಾಗಿದ್ದೀ; ನಮ್ಮ ಸಮಾಧಿಗಳೊಳಗೆ ಉತ್ತಮವಾದದ್ದರಲ್ಲಿ ನಿನ್ನ ಹೆಂಡತಿಯ ಶವವನ್ನು ಹೂಣಿಡು. ನೀನು ನಿನ್ನ ಹೆಂಡತಿಯ ಶವವನ್ನು ಹೂಣಿಡದ ಹಾಗೆ ನಮ್ಮಲ್ಲಿ ಒಬ್ಬನಾದರೂ ತನ್ನ ಸಮಾಧಿಯನ್ನು ಕೊಡುವದಿಲ್ಲ ವೆಂದು ಹೇಳಲಾರನು. |
7. | ಆಗ ಅಬ್ರಹಾಮನು ಎದ್ದು ಹೇತನ ಮಕ್ಕಳಾದ ಆ ದೇಶದ ಜನರ ಮುಂದೆ ಬಾಗಿ |
8. | ಅವರ ಸಂಗಡ ಮಾತನಾಡಿದ್ದೇ ನಂದರೆ--ನಾನು ನನ್ನ ಹೆಂಡತಿಯ ಶವವನ್ನು ನನ್ನೆದುರಿನಿಂದ ಹೂಣಿಡುವದು ನಿಮ್ಮ ಮನಸ್ಸಿಗೆ ಸರಿಬಿದ್ದರೆ ನನ್ನ ಮಾತು ಕೇಳಿ ಚೋಹರನ ಮಗನಾದ ಎಫ್ರೋನನನ್ನು ನನಗಾಗಿ ಬೇಡಿಕೊಳ್ಳಿರಿ. |
9. | ಅವನು ತನ್ನ ಹೊಲದ ಅಂಚಿನಲ್ಲಿರುವ ಮಕ್ಪೇಲ ಗವಿಯನ್ನು ನನಗೆ ಕೊಡಲಿ; ಅವನು ಅದನ್ನು ತಕ್ಕ ಕ್ರಯಕ್ಕೆ ನಿಮ್ಮ ಎದುರಿನಲ್ಲಿ ನನಗೆ ಕೊಡಲಿ ಅಂದನು. |
10. | ಆಗ ಎಫ್ರೋನನು ಹೇತನ ಮಕ್ಕಳ ಮಧ್ಯದಲ್ಲಿ ವಾಸವಾಗಿದ್ದನು. ಹಿತ್ತೀಯನಾದ ಎಫ್ರೋನನು ಅಬ್ರಹಾಮನಿಗೆ ಪ್ರತ್ಯುತ್ತರವಾಗಿ ಅವನ ಪಟ್ಟಣದ ಹೆಬ್ಬಾಗಿಲಿನಲ್ಲಿ ಕೂಡಿಕೊಂಡು ಹೇತನ ಮಕ್ಕಳು ಕೇಳುವಂತೆ ಹೇಳಿದ್ದೇನಂದರೆ-- |
11. | ಒಡೆಯನೇ, ಹಾಗಲ್ಲ; ನನ್ನ ಮಾತನ್ನು ಕೇಳು; ಆ ಹೊಲವನ್ನು ಅದರಲ್ಲಿರುವ ಗವಿಯನ್ನೂ ನಿನಗೆ ಕೊಡುತ್ತೇನೆ; ಅದನ್ನು ನನ್ನ ಜನರ ಎದುರಿನಲ್ಲಿ ನಿನಗೆ ಕೊಡುತ್ತೇನೆ; ನಿನ್ನ ಹೆಂಡತಿಯ ಶವವನ್ನು ಹೂಣಿಡು ಅಂದನು. |
12. | ಆಗ ಅಬ್ರಹಾಮನು ಆ ದೇಶದ ಜನರ ಮುಂದೆ ಬಾಗಿ ಕೊಂಡನು. |
13. | ಅವನು ದೇಶದ ಜನರು ಕೇಳುವಂತೆ ಎಫ್ರೋನನಿಗೆ ಹೇಳಿದ್ದೇನಂದರೆ--ನೀನು ನನಗೆ ಕೊಡಬೇಕೆಂದಿದ್ದರೆ ನನ್ನ ಮಾತನ್ನು ಕೇಳು; ನಾನು ಹೊಲದ ಕ್ರಯವನ್ನು ಕೊಡುತ್ತೇನೆ; ಅದನ್ನು ನನ್ನಿಂದ ತಕ್ಕೋ, ಆಗ ನನ್ನ ಹೆಂಡತಿಯ ಶವವನ್ನು ಅಲ್ಲಿ ಹೂಣಿಡುವೆನು ಅಂದನು. |
14. | ಆಗ ಎಫ್ರೋನನು ಅಬ್ರಹಾಮನಿಗೆ ಪ್ರತ್ಯುತ್ತರವಾಗಿ ಹೇಳಿದ್ದೇನಂದರೆ-- |
15. | ಒಡೆಯನೇ, ನನ್ನ ಮಾತನ್ನು ಕೇಳು, ಆ ಭೂಮಿಯು ನಾನೂರು ಬೆಳ್ಳಿಯ ಶೆಕೆಲ್ ಬೆಲೆಯುಳ್ಳದ್ದು; ಅದು ನನಗೂ ನಿನಗೂ ಏನು? ನಿನ್ನ ಹೆಂಡತಿಯ ಶವವನ್ನು ಹೂಣಿಡು ಅಂದನು. |
16. | ಅಬ್ರಹಾಮನು ಎಫ್ರೋನನ ಮಾತನ್ನು ಕೇಳಿದನು. ಆದದರಿಂದ ಹೇತನ ಮಕ್ಕಳಿಗೆ ಕೇಳುವಂತೆ ಎಫ್ರೋನನು ಹೇಳಿದ ಬೆಲೆ ಅಂದರೆ ವರ್ತಕರಲ್ಲಿ ನಡಿಯುವ ನಾಲ್ಕುನೂರು ಶೆಕೆಲು (ಬೆಳ್ಳಿಯನ್ನು) ತೂಗಿ ಅವನಿಗೆ ಕೊಟ್ಟನು. |
17. | ಹೀಗೆ ಮಮ್ರೆಗೆ ಎದುರಾಗಿರುವ ಮಕ್ಪೇಲದಲ್ಲಿರುವ ಎಫ್ರೋ ನನ ಹೊಲವೂ ಆ ಹೊಲದಲ್ಲಿರುವ ಗವಿಯೂ ಆ ಹೊಲದ ಸುತ್ತಲೂ ಇರುವ ಎಲ್ಲಾ ಮರಗಳೂ |
18. | ಹೇತನ ಮಕ್ಕಳ ಮುಂದೆಯೂ ಅವನ ಪಟ್ಟಣದ ಹೆಬ್ಬಾಗಿಲಿನಲ್ಲಿ ಸೇರುವ ಎಲ್ಲರ ಮುಂದೆಯೂ ಅಬ್ರಹಾಮನ ಆಸ್ತಿಯೆಂದು ಸ್ಥಿರಮಾಡಲ್ಪಟ್ಟಿತು. |
19. | ಇದಾದ ಮೇಲೆ ಅಬ್ರಹಾಮನು ತನ್ನ ಹೆಂಡತಿ ಯಾದ ಸಾರಳನ್ನು ಕಾನಾನ್ ದೇಶದಲ್ಲಿ ಹೆಬ್ರೋನ್ ಎಂಬ ಮಮ್ರೆಗೆ ಎದುರಾಗಿರುವ ಮಕ್ಪೇಲದ ಹೊಲದ ಗವಿಯಲ್ಲಿ ಹೂಣಿಟ್ಟನು. |
20. | ಆ ಹೊಲವೂ ಅದರ ಲ್ಲಿರುವ ಗವಿಯೂ ಹೇತನ ಮಕ್ಕಳಿಂದ ಅಬ್ರಹಾಮನಿಗೆ ಸ್ವಂತ ಸಮಾಧಿಯ ಸ್ವಾಸ್ಥ್ಯವಾಗಿ ಸ್ಥಿರಮಾಡಲ್ಪಟ್ಟಿತು. |
← Genesis (23/50) → |