← Genesis (20/50) → |
1. | ಅಬ್ರಹಾಮನು ಅಲ್ಲಿಂದ ದಕ್ಷಿಣ ದೇಶದ ಕಾದೇಶಿಗೆ ಪ್ರಯಾಣಮಾಡಿ, ಶೂರಿಗೆ ಮಧ್ಯದಲ್ಲಿ ವಾಸಿಸಿ ಗೆರಾರಿನಲ್ಲಿ ಪ್ರವಾಸಿಯಾಗಿದ್ದನು. |
2. | ಅಬ್ರಹಾಮನು ತನ್ನ ಹೆಂಡತಿಯಾದ ಸಾರಳ ವಿಷಯವಾಗಿ--ಅವಳು ನನ್ನ ತಂಗಿ ಎಂದು ಹೇಳಿ ದನು. ಆದದರಿಂದ ಗೆರಾರಿನ ಅರಸನಾದ ಅಬೀಮೆಲೆ ಕನು ಸಾರಳನ್ನು ಕರೆಯಿಸಿ ತೆಗೆದುಕೊಂಡನು. |
3. | ಆಗ ದೇವರು ರಾತ್ರಿ ಕನಸಿನಲ್ಲಿ ಅಬೀಮೆಲೆಕನ ಬಳಿಗೆ ಬಂದು--ಇಗೋ, ನೀನು ತಕ್ಕೊಂಡ ಆ ಸ್ತ್ರೀಗೋಸ್ಕರ ನೀನು ಸತ್ತವನೇ; ಆಕೆಯು ಒಬ್ಬ ಮನುಷ್ಯನ ಹೆಂಡತಿ ಎಂದು ಅವನಿಗೆ ಹೇಳಿದನು. |
4. | ಆದರೆ ಅಬೀಮೆಲೆಕನು ಆಕೆಯ ಸವಿಾಪಕ್ಕೆ ಬಂದಿರಲಿಲ್ಲ. ಆದದರಿಂದ ಅವನು--ಕರ್ತನೇ, ನೀತಿಯುಳ್ಳ ಜನಾಂಗವನ್ನು ಸಹ ಕೊಲ್ಲುವಿಯೋ? |
5. | ಅವನು ನನಗೆ--ಅವಳು ನನ್ನ ತಂಗಿ ಎಂದು ಹೇಳಲಿಲ್ಲವೋ? ಈಕೆಯೂ--ಅವನು ನನ್ನ ಅಣ್ಣನು ಎಂದು ಹೇಳಿದ್ದಾಳೆ; ಆದದರಿಂದ ಯಥಾರ್ಥವಾದ ಹೃದಯದಿಂದಲೂ ನಿರಪರಾಧದ ಕೈಯಿಂದಲೂ ಇದನ್ನು ಮಾಡಿದ್ದೇನೆ ಅಂದನು. |
6. | ದೇವರು ಕನಸಿನಲ್ಲಿ ಅವನಿಗೆ--ಹೌದು, ನೀನು ಯಥಾರ್ಥವಾದ ಹೃದಯ ದಿಂದ ಇದನ್ನು ಮಾಡಿದ್ದೀ ಎಂದು ನನಗೂ ತಿಳಿದದೆ. ಆದದರಿಂದ ನೀನು ನನಗೆ ವಿರೋಧವಾಗಿ ಪಾಪಮಾಡದ ಹಾಗೆ ನಾನು ನಿನ್ನನ್ನು ತಡೆದು ಆಕೆಯನ್ನು ಮುಟ್ಟುವದಕ್ಕೆ ಬಿಡಲಿಲ್ಲ. |
7. | ಈಗ ಆ ಮನುಷ್ಯನ ಹೆಂಡತಿಯನ್ನು ನೀನು ಹಿಂದಕ್ಕೆ ಕಳುಹಿಸು; ಅವನು ಪ್ರವಾದಿಯಾಗಿದ್ದಾನೆ. ನೀನು ಬದುಕುವ ಹಾಗೆ ಅವನು ನಿನಗೋಸ್ಕರ ಪ್ರಾರ್ಥಿಸುವನು. ನೀನು ಆಕೆಯನ್ನು ಹಿಂದಕ್ಕೆ ಕಳುಹಿಸದಿದ್ದರೆ ನೀನೂ ನಿನ್ನವರೆಲ್ಲರೂ ಖಂಡಿತವಾಗಿ ಸಾಯುವಿರಿ ಎಂದು ತಿಳಿದುಕೋ ಅಂದನು. |
8. | ಅಬೀಮೆಲೆಕನು ಬೆಳಿಗ್ಗೆ ಎದ್ದು ತನ್ನ ಸೇವಕರೆಲ್ಲರನ್ನು ಕರೆದು ಇವುಗಳನ್ನೆಲ್ಲ ಅವರಿಗೆ ಹೇಳಿದನು; ಅದಕ್ಕೆ ಆ ಮನುಷ್ಯರು ಬಹಳವಾಗಿ ಹೆದರಿದರು. |
9. | ಅಬೀಮೆಲೆಕನು ಅಬ್ರಹಾ ಮನನ್ನು ಕರೆದು ಅವನಿಗೆ--ನೀನು ನಮಗೆ ಮಾಡಿ ದ್ದೇನು? ನೀನು ನನ್ನ ಮೇಲೆಯೂ ನನ್ನ ರಾಜ್ಯದ ಮೇಲೆಯೂ ದೊಡ್ಡ ಪಾಪವನ್ನು ಬರಮಾಡುವಂತೆ ನಾನು ನಿನಗೆ ಏನು ಅಪರಾಧ ಮಾಡಿದ್ದೇನೆ? ನನಗೆ ನೀನು ಮಾಡಬಾರದ ಕಾರ್ಯಗಳನ್ನು ಮಾಡಿದ್ದೀ ಅಂದನು. |
10. | ಅಬೀಮೆಲೆಕನು ಅಬ್ರಹಾ ಮನಿಗೆ--ನೀನು ಇದನ್ನು ಮಾಡುವದಕ್ಕೆ ಏನು ನೋಡಿದೆ ಅಂದಾಗ |
11. | ಅಬ್ರಹಾಮನು--ಈ ಸ್ಥಳದಲ್ಲಿ ಖಂಡಿತವಾಗಿ ದೇವರ ಭಯವು ಇಲ್ಲವೆಂದೂ ನನ್ನ ಹೆಂಡತಿಗಾಗಿ ಅವರು ನನ್ನನ್ನು ಕೊಲ್ಲುವರೆಂದೂ ನಾನು ಅಂದುಕೊಂಡೆನು. |
12. | ಇದಲ್ಲದೆ ನಿಶ್ಚಯವಾಗಿ ಅವಳು ನನ್ನ ತಂಗಿ; ಆಕೆಯು ನನ್ನ ತಾಯಿಯ ಮಗಳಲ್ಲ, ನನ್ನ ತಂದೆಯ ಮಗಳೇ; ನನಗೆ ಹೆಂಡತಿಯಾದಳು. |
13. | ದೇವರು ನನ್ನ ತಂದೆಯ ಮನೆಯಿಂದ ನನ್ನನ್ನು ದೇಶಾಂತರಕ್ಕೆ ಹೋಗಲು ಕರೆದಾಗ ನಾನು ಅವಳಿಗೆ--ನೀನು ನನಗೆ ತೋರಿಸತಕ್ಕ ದಯವು ಯಾವದಂದರೆ, ನಾವು ಹೋಗುವ ಪ್ರತಿಯೊಂದು ಸ್ಥಳದಲ್ಲಿ ನನ್ನ ವಿಷಯವಾಗಿ-- ಇವನು ನನ್ನ ಅಣ್ಣನೆಂಬದಾಗಿ ಹೇಳೆಂದು ಅಂದೆನು. |
14. | ಆಗ ಅಬೀಮೆಲೆಕನು ಕುರಿಎತ್ತುಗಳನ್ನೂ ದಾಸ ದಾಸಿಯರನ್ನೂ ಅಬ್ರಹಾಮನಿಗೆ ಕೊಟ್ಟು ಅವನ ಹೆಂಡತಿಯಾದ ಸಾರಳನ್ನು ಅವನಿಗೆ ಒಪ್ಪಿಸಿದನು. |
15. | ಅಬೀಮೆಲೆಕನು--ಇಗೋ, ನನ್ನ ದೇಶವು ನಿನ್ನ ಮುಂದೆ ಇದೆ; ನಿನಗೆ ಇಷ್ಟವಾಗಿರುವ ಸ್ಥಳದಲ್ಲಿ ವಾಸಮಾಡು ಅಂದನು. |
16. | ಸಾರಳಿಗೆ--ಇಗೋ, ನಿನ್ನ ಅಣ್ಣನಿಗೆ ಸಾವಿರ ಬೆಳ್ಳಿಯ ಹಣ ಕೊಟ್ಟಿದ್ದೇನೆ; ನಿನ್ನ ಸಂಗಡ ಇರುವವರೆಲ್ಲರಿಗಾಗಿಯೂ ಉಳಿದವರೆ ಲ್ಲರಿಗಾಗಿಯೂ ಇವನು ನಿನಗೆ ಕಣ್ಣಿನ ಮುಸುಕಿನಂತೆ ಇರಲಿ ಅಂದನು. ಹೀಗೆ ಆಕೆಯು ಗದರಿಸಲ್ಪಟ್ಟಳು. |
17. | ಆಗ ಅಬ್ರಹಾಮನು ದೇವರಿಗೆ ಪ್ರಾರ್ಥನೆ ಮಾಡಿದ್ದರಿಂದ ದೇವರು ಅಬೀಮೆಲೆಕನನ್ನೂ ಅವನ ಹೆಂಡತಿಯನ್ನೂ ಅವನ ದಾಸಿಯರನ್ನೂ ವಾಸಿಮಾಡಿ ದನು; ಆದದರಿಂದ ಅವರಿಗೆ ಮಕ್ಕಳಾದರು. |
18. | ಕರ್ತನು ಅಬ್ರಹಾಮನ ಹೆಂಡತಿಯಾದ ಸಾರಳ ನಿಮಿತ್ತ ಅಬೀಮೆಲೆಕನ ಮನೆಯಲ್ಲಿದ್ದ ಸ್ತ್ರೀಯರೆಲ್ಲರೂ ಬಂಜೆಯರಾಗುವಂತೆ ಮಾಡಿದ್ದನು. |
← Genesis (20/50) → |