← Galatians (2/6) → |
1. | ಹದಿನಾಲ್ಕು ವರುಷಗಳಾದ ಮೇಲೆ ನಾನು ತೀತನನ್ನು ಕರೆದುಕೊಂಡು ಬಾರ್ನಬನ ಜೊತೆಯಲ್ಲಿ ತಿರಿಗಿ ಯೆರೂಸಲೇಮಿಗೆ ಹೋದೆನು. |
2. | ಪ್ರಕಟನೆಗನುಸಾರವಾಗಿ ಅಲ್ಲಿಗೆ ಹೋಗಿ ಅನ್ಯಜನ ರಲ್ಲಿ ನಾನು ಸಾರುವ ಸುವಾರ್ತೆಯನ್ನು ಅಲ್ಲಿದ್ದವರಿಗೆ ತಿಳಿಸಿದೆನು; ಆದರೆ ನಾನು ಪಡುತ್ತಿರುವ ಪ್ರಯಾಸ ವಾಗಲಿ ಪಟ್ಟ ಪ್ರಯಾಸವಾಗಲಿ ನಿಷ್ಫಲವಾಗಬಾರ ದೆಂದು ಮಾನಿಷ್ಠರಿಗೆ ಏಕಾಂತದಲ್ಲಿ ತಿಳಿಸಿದೆನು. |
3. | ನನ್ನ ಜೊತೆಯಲ್ಲಿದ್ದ ತೀತನು ಗ್ರೀಕನಾಗಿದ್ದರೂ ಅವನಿಗೆ ಸುನ್ನತಿಯಾಗಬೇಕೆಂದು ಯಾರೂ ಬಲಾತ್ಕಾರ ಮಾಡ ಲಿಲ್ಲ. |
4. | ಕಳ್ಳತನದಿಂದ ಸೇರಿಕೊಂಡ ಸುಳ್ಳು ಸಹೋ ದರರು ನಮ್ಮನ್ನು ದಾಸತ್ವದೊಳಗೆ ಸಿಕ್ಕಿಸಬೇಕೆಂದು ಕ್ರಿಸ್ತ ಯೇಸುವಿನಲ್ಲಿ ನಮಗೆ ದೊರಕಿರುವ ಸ್ವಾತಂತ್ರ್ಯ ವನ್ನು ಗೂಢವಾಗಿ ವಿಚಾರಿಸುವದಕ್ಕೆ ಮರಸಿಕೊಂಡು ಬಂದವರು. |
5. | ಸುವಾರ್ತೆಯ ಸತ್ಯಾರ್ಥವು ನಿಮ್ಮಲ್ಲಿ ಸ್ಥಿರವಾಗಿರಬೇಕೆಂದು ನಾವು ಅವರಿಗೆ ವಶವಾಗುವದಕ್ಕೆ ಒಂದು ಗಳಿಗೆಯಾದರೂ ಸಮ್ಮತಿಪಡಲಿಲ್ಲ. |
6. | ಆದರೆ ಮಾನಿಷ್ಠರೆನಿಸಿಕೊಂಡವರಿಂದ ನನಗೇನೂ ದೊರೆಯ ಲಿಲ್ಲ; (ಅವರು ಎಂಥವ ರಾಗಿದ್ದರೂ ನನಗೆ ಲಕ್ಷ್ಯವಿಲ್ಲ; ದೇವರು ಪಕ್ಷಪಾತಿಯಲ್ಲ). ಯಾಕಂದರೆ ಮಾನಿಷ್ಠರೆನಿಸಿ ಕೊಂಡವರು ನನಗೆ ಹೆಚ್ಚೇನೂ ಕೂಡಿಸಲಿಲ್ಲ. |
7. | ಅದಕ್ಕೆ ಬದಲಾಗಿ ಸುನ್ನತಿಯವರ ಸುವಾರ್ತೆಯು ಪೇತ್ರನಿಗೆ ಹೇಗೋ ಹಾಗೆಯೇ ಸುನ್ನತಿಯಿಲ್ಲದವರ ಸುವಾ ರ್ತೆಯು ನನಗೆ ಒಪ್ಪಿಸಲ್ಪಟ್ಟಿತು. |
8. | ಸುನ್ನತಿಯಾದವರಿಗೆ ಪೇತ್ರನ ಅಪೊಸ್ತಲತನವು ಪರಿಣಾಮವನ್ನುಂಟು ಮಾಡುವ ಹಾಗೆ ಮಾಡಿದಾತನೇ ಅನ್ಯ ಜನರಿಗೆ ನನ್ನ ಅಪೊಸ್ತಲತನವು ಶಕ್ತಿಯುಳ್ಳದ್ದಾಗಿರುವಂತೆ ಮಾಡಿ ದ್ದನ್ನು ಅವರು ಕಂಡರು. |
9. | ಸ್ತಂಭಗಳೆಂದು ಕಾಣಿಸಿ ಕೊಂಡಿರುವ ಯಾಕೋಬ ಕೇಫ ಯೋಹಾನರು ನನಗೆ ದಯಪಾಲಿಸಿರುವ ಕೃಪೆಯನ್ನು ತಿಳಿದುಕೊಂಡು ಅನ್ಯೋ ನ್ಯತೆಯನ್ನು ತೋರಿಸುವದಕ್ಕಾಗಿ ನನಗೂ ಬಾರ್ನಬ ನಿಗೂ ಬಲಗೈಕೊಟ್ಟು --ತಾವು ಸುನ್ನತಿಯವರ ಬಳಿಗೂ ನಾವು ಅನ್ಯಜನರ ಬಳಿಗೂ ಹೋಗುವದಕ್ಕೆ ಹೇಳಿ ದರು. |
10. | ಆದರೆ ನಾವು ಬಡವರನ್ನು ಜ್ಞಾಪಕ ಮಾಡಿ ಕೊಳ್ಳಬೇಕೆಂಬ ಒಂದೇ ವಿಷಯವನ್ನು ಅವರು ಬೇಡಿ ಕೊಂಡರು; ಇದನ್ನು ಮಾಡುವದರಲ್ಲಿ ನಾನೂ ಆಸಕ್ತನಾಗಿದ್ದೆನು. |
11. | ಪೇತ್ರನು ಅಂತಿಯೋಕ್ಯಕ್ಕೆ ಬಂದಾಗ ಅವನು ದೋಷಿಯಾಗಿ ಕಾಣಿಸಿಕೊಂಡದ್ದರಿಂದ ನಾನು ಅವ ನನ್ನು ಮುಖಾಮುಖಿಯಾಗಿ ಎದುರಿಸಿದೆನು. |
12. | ಪೇತ್ರನು ಅಂತಿಯೋಕ್ಯಕ್ಕೆ ಬಂದಾಗ ಅವನು ದೋಷಿಯಾಗಿ ಕಾಣಿಸಿಕೊಂಡದ್ದರಿಂದ ನಾನು ಅವ ನನ್ನು ಮುಖಾಮುಖಿಯಾಗಿ ಎದುರಿಸಿದೆನು. |
13. | ಇದಲ್ಲದೆ ಮಿಕ್ಕಾದ ಯೆಹೂದ್ಯರೂ ಅವನೊಂದಿಗೆ ಸೇರಿ ಹಾಗೆಯೇ ಕಪಟಮಾಡಿದರು; ಹೀಗೆ ಬಾರ್ನಬನೂ ಅವರ ಕಪಟದ ಸೆಳವಿಗೆ ಬಿದ್ದನು. |
14. | ಅವರು ಸುವಾರ್ತೆಯ ಸತ್ಯಾರ್ಥದ ಪ್ರಕಾರ ನೆಟ್ಟಗೆ ನಡೆಯಲಿಲ್ಲವೆಂದು ನಾನು ಕಂಡಾಗ ಎಲ್ಲರ ಮುಂದೆ ಪೇತ್ರನಿಗೆ ಹೇಳಿದ್ದೇನಂದರೆ--ನೀನು ಯೆಹೂದ್ಯ ನಾಗಿದ್ದು ಯೆಹೂದ್ಯರಂತೆ ನಡೆಯದೆ ಅನ್ಯಜನರಂತೆ ನಡೆದ ಮೇಲೆ ಅನ್ಯಜನರಿಗೆ--ನೀವು ಯೆಹೂದ್ಯರಂತೆ ನಡಕೊಳ್ಳಬೇಕೆಂದು ನೀನು ಬಲಾತ್ಕಾರ |
15. | ನಾವಂತೂ ಹುಟ್ಟುಯೆಹೂದ್ಯರು, ಅನ್ಯಜನ ರಂತೆ ಪಾಪಿಗಳಲ್ಲ. |
16. | ಆದರೆ ಯಾವನಾದರೂ ಯೇಸು ಕ್ರಿಸ್ತನ ಮೇಲಣ ನಂಬಿಕೆಯಿಂದಲೇ ಹೊರತು ನ್ಯಾಯ ಪ್ರಮಾಣದ ಕ್ರಿಯೆಗಳಿಂದ ನೀತಿವಂತನೆಂದು ನಿರ್ಣ ಯಿಸಲ್ಪಡುವದಿಲ್ಲವೆಂಬದು ನಮಗೆ ತಿಳಿದಿರುವದ ರಿಂದ ನಾವು ಸಹ ನ್ಯಾಯ ಪ್ರಮಾಣದ ಕ್ರಿಯೆ ಗಳಿಂದಲ್ಲ, ಆದರೆ ಕ್ರಿಸ್ತನ ಮೇಲಣ ನಂಬಿಕೆಯಿಂದಲೇ ನೀತಿವಂತರೆಂದು ನಿರ್ಣಯಿ |
17. | ಆದರೆ ನಾವು ಕ್ರಿಸ್ತನ ಮೂಲಕ ನೀತಿವಂತರೆಂಬ ನಿರ್ಣಯ ಹೊಂದು ವದಕ್ಕೆ ಪ್ರಯತ್ನಿಸುತ್ತಿರುವಾಗ ನಾವೂ ಪಾಪಿಗಳಾಗಿ ತೋರಿಬಂದರೆ ಕ್ರಿಸ್ತನು ಪಾಪಕ್ಕೆ ಸೇವಕನೆಂದು ಹೇಳ ಬೇಕೇನು? ಹಾಗೆ ಎಂದಿಗೂ ಹೇಳಬಾರದು. |
18. | ನಾನು ಕೆಡವಿದವುಗಳನ್ನು ತಿರಿಗಿ ಕಟ್ಟಿದರೆ ನನ್ನನ್ನು ನಾನೇ ಅಪರಾಧಿಯನ್ನಾಗಿ ಮಾಡಿಕೊಳ್ಳುತ್ತೇನಲ್ಲಾ. |
19. | ಯಾಕಂ ದರೆ ನಾನಂತೂ ದೇವರಿಗಾಗಿ ಜೀವಿಸುವದಕ್ಕೊಸ್ಕರ ನ್ಯಾಯಪ್ರಮಾಣದ ಮೂಲಕವಾಗಿ ನ್ಯಾಯಪ್ರಮಾ ಣದ ಪಾಲಿಗೆ ಸತ್ತೆನು. |
20. | ಕ್ರಿಸ್ತನೊಂದಿಗೆ ಶಿಲುಬೆಗೆ ಹಾಕಿಸಿಕೊಂಡವನಾಗಿದ್ದೇನೆ; ಆದಾಗ್ಯೂ ನಾನು ಜೀವಿ ಸುತ್ತೇನೆ; ಇನ್ನು ಜೀವಿಸುವವನು ನಾನಲ್ಲ, ಕ್ರಿಸ್ತನು ನನ್ನಲ್ಲಿ ಜೀವಿಸುತ್ತಾನೆ; ಈಗ ಶರೀರದಲ್ಲಿರುವ ನಾನು ಜೀವಿಸುವದು ದೇವಕುಮಾರನ ಮೇಲಣ ನಂಬಿಕೆ ಯಲ್ಲಿಯೇ, ಆತನು ನನ್ನನ್ನು ಪ್ರೀತಿಸಿ ನನಗೋಸ್ಕರ ತನ್ನನ್ನೇ |
21. | ನಾನು ದೇವರ ಕೃಪೆಯನ್ನು ನಿರರ್ಥಕ ಮಾಡುವದಿಲ್ಲ. ನ್ಯಾಯಪ್ರಮಾಣದಿಂದ ನೀತಿಯುಂಟಾಗುವದಾದರೆ ಕ್ರಿಸ್ತನು ಮರಣವನ್ನು ಹೊಂದಿದ್ದು ವ್ಯರ್ಥವಾಯಿತು. |
← Galatians (2/6) → |