← Ezra (4/10) → |
1. | ಸೆರೆಯ ಮಕ್ಕಳು ಇಸ್ರಾಯೇಲ್ ದೇವರಾಗಿರುವ ಕರ್ತನಿಗೆ ಆಲಯವನ್ನು ಕಟ್ಟು ತ್ತಾರೆಂದು ಯೆಹೂದದ ಬೆನ್ಯಾವಿಾನನ ಶತ್ರುಗಳು ಕೇಳಿದಾಗ |
2. | ಅವರು ಜೆರುಬ್ಬಾಬೆಲಿನ ಬಳಿಗೂ ಪಿತೃಗಳ ಮುಖ್ಯಸ್ಥರ ಬಳಿಗೂ ಬಂದು ಅವರಿಗೆ--ನಾವು ನಿಮ್ಮ ಕೂಡ ಕಟ್ಟುತ್ತೇವೆ; ನಾವು ನಿಮ್ಮ ಹಾಗೆ ನಿಮ್ಮ ದೇವ ರನ್ನು ಹುಡುಕುತ್ತೇವೆ; ತಮ್ಮನ್ನು ಇಲ್ಲಿಗೆ ಬರಮಾಡಿದ ಅಶ್ಶೂರಿನ ಅರಸನಾದ ಎಸರ್ಹದೋನನ ದಿವಸಗಳು ಮೊದಲುಗೊಂಡು ಆತನಿಗೆ ನಾವೂ ಬಲಿಯನ್ನು ಅರ್ಪಿಸುತ್ತಾ ಇದ್ದೇವೆ ಅಂದರು. |
3. | ಆದರೆ ಜೆರುಬ್ಬಾ ಬೆಲನೂ ಯೇಷೂವನೂ ಮಿಕ್ಕಾದ ಇಸ್ರಾಯೇಲಿನ ಪಿತೃಗಳಲ್ಲಿ ಮುಖ್ಯಸ್ಥರೂ ಅವರಿಗೆ--ನಮ್ಮ ದೇವರಿಗೆ ಆಲಯವನ್ನು ಕಟ್ಟುವದಕ್ಕೆ ನಮಗೂ ನಿಮಗೂ ಏನು? ಪಾರಸಿಯರ ಅರಸನಾದ ಕೋರೆಷನೆಂಬ ಅರಸನು ನಮಗೆ ಆಜ್ಞಾಪಿಸಿದ ಹಾಗೆ ನಾವು ಇಸ್ರಾ ಯೇಲ್ ದೇವರಾಗಿರುವ ಕರ್ತನಿಗೆ ಅದನ್ನು ಕಟ್ಟು ವೆವು ಅಂದರು. |
4. | ಆದದರಿಂದ ಆ ದೇಶದ ಜನರು ಯೆಹೂದ ಜನರ ಕೈಗಳನ್ನು ಬಲಹೀನ ಮಾಡಿ ಕಟ್ಟು ವದರಲ್ಲಿ ಅವರನ್ನು ಕಳವಳಪಡಿಸಿದರು. |
5. | ಪಾರಸಿ ಯರ ಅರಸನಾದ ಕೋರೆಷನ ದಿನಗಳಲ್ಲೆಲ್ಲಾ ಪಾರ ಸಿಯರ ಅರಸನಾದ ದಾರ್ಯಾವೆಷನ ಆಳ್ವಿಕೆಯ ಪರ್ಯಂತರ ಅವರ ಯೋಚನೆಯನ್ನು ವ್ಯರ್ಥಮಾಡು ವದಕ್ಕೆ ಅವರಿಗೆ ವಿರೋಧವಾಗಿ ಯೋಚನಾಕರ್ತರನ್ನು ಕೂಲಿಗೆ ಇಟ್ಟು ಕೊಂಡರು. |
6. | ಆದರೆ ಅಹಷ್ವೇರೋಷನು ಆಳುವಾಗ ಅವನ ಆಳ್ವಿಕೆಯ ಪ್ರಾರಂಭದಲ್ಲಿ ಅವರು ಯೆಹೂದ ಮತ್ತು ಯೆರೂಸಲೇಮಿನ ನಿವಾಸಿಗಳಿಗೆ ವಿರೋಧವಾಗಿ ದೂರು ಕಾಗದ ಬರೆದರು. |
7. | ಆದರೆ ಅರ್ತಷಸ್ತನ ದಿವಸಗಳಲ್ಲಿ ಬಿಷ್ಲಾಮನೂ ಮಿತ್ರದಾತನೂ ಟಾಬೆಯೇಲನೂ ಮಿಕ್ಕಾದ ಅವರ ಜತೆಗಾರರೂ ಪಾರಸಿಯರ ಅರಸನಾದ ಆರ್ತಷಸ್ತನಿಗೆ ಒಂದು ಪತ್ರ ಬರೆದರು. ಬರೆದ ಆ ಪತ್ರವು ಅರಾಮ್ಯರ ಭಾಷೆಯಲ್ಲಿ ಟೀಕಿಸಲ್ಪಟ್ಟು, ಅರಾಮ್ಯರ ಅಕ್ಷರದಲ್ಲಿ ಬರೆಯಲ್ಪಟ್ಟಿತ್ತು. |
8. | ಮುಖ್ಯಾಧಿಕಾರಿಯಾದ ರೆಹೂಮನೂ ಶಾಸ್ತ್ರಿ ಯಾದ ಶಿಂಷೈಯೂ ಯೆರೂಸಲೇಮಿಗೆ ವಿರೋಧವಾಗಿ ಅರಸನಾದ ಆರ್ತಷಸ್ತನಿಗೆ-- |
9. | ಮುಖ್ಯಾಧಿಕಾರಿಯಾದ ರೆಹೂಮನೂ ಶಾಸ್ತ್ರಿಯಾದ ಶಿಂಷೈಯೂ ಮಿಕ್ಕಾದ ಅವರ ಜೊತೆಗಾರರೂ ದಿನಾಯರೂ ಅಪರ್ಸತ್ಕಾ ಯರೂ ಟರ್ಪಲಾಯರೂ ಅಪಾರ್ಸಾಯರೂ ಯೆರ ಕ್ಯರೂ ಬಾಬೆಲಿನವರೂ ಶೂಷನ್ಯರೂ ದೆಹಾಯರೂ ಏಲಾಮ್ಯರೂ ಮಹಾಘನವುಳ್ಳ ಆಸೆನಪ್ಪರನು ಬರ ಮಾಡಿ |
10. | ಸಮಾರ್ಯದ ಪಟ್ಟಣಗಳಲ್ಲಿ ಇರಿಸಿದ ಮಿಕ್ಕಾದ ಜನಗಳೂ ನದಿಯ ಈಚೆಯಲ್ಲಿರುವ ಇತರ ಜನಗಳೂ-- |
11. | ಅವರು ಅರಸನಿಗೆ ಕಳುಹಿಸಿದ ಪತ್ರದ ಪ್ರತಿಯು--ಅರ್ತಷಸ್ತರಾಜರಿಗೆ, ಖಾವಂದರ ಸೇವಕ ರಾದ ಹೊಳೆಯ ಈಚೆಯವರು. |
12. | ನಿಮ್ಮಿಂದ ನಮ್ಮ ಬಳಿಗೆ ಬಂದ ಯೆಹೂದ್ಯರು ಯೆರೂಸಲೇಮಿಗೆ ಬಂದು ತಿರಿಗಿ ಬಿದ್ದ ಆ ಕೆಟ್ಟ ಪಟ್ಟಣವನ್ನು ಕಟ್ಟಿಸುತ್ತಾರೆ. ಅವರು ಅದರ ಗೋಡೆಗಳನ್ನು ಎಬ್ಬಿಸಿ ಅಸ್ತಿವಾರಗಳನ್ನು ಹೊಂದಿಸಿದ್ದಾರೆಂದು ಅರಸನಿಗೆ ತಿಳಿದಿರಲಿ. |
13. | ಈ ಪಟ್ಟಣವು ಕಟ್ಟಿಸಲ್ಪಟ್ಟು ಅದರ ಗೋಡೆಕಟ್ಟಿ ತೀರಿಸ ಲ್ಪಟ್ಟರೆ ಅವರು ಸುಂಕವನ್ನೂ ಕಪ್ಪವನ್ನೂ ತೆರಿಗೆಯನ್ನೂ ಕೊಡದೆ ಇರುವರು. ಆಗ ನೀನು ಅರಸು ಗಳಿಗೆ ಬರುವ ಹುಟ್ಟುವಳಿಗೆ ನಷ್ಟಮಾಡುವಿ ಎಂದು ಅರಸನಿಗೆ ತಿಳಿದಿರಲಿ. |
14. | ಆದರೆ ನಾವು ಅರಮನೆಯ ಉಪ್ಪನ್ನು ತಿಂದದ್ದರಿಂದ ಅರಸನ ಅವಮಾನವನ್ನು ನೋಡುವದು ನಮಗೆ ತಕ್ಕದ್ದಲ್ಲ; ಆದದರಿಂದ ನಾವು ಅರಸನ ಬಳಿಗೆ ಇದನ್ನು ಕಳುಹಿಸಿ ತಿಳಿಯಮಾಡಿ ದ್ದೇವೆ. |
15. | ನಿನ್ನ ತಂದೆಗಳ ವೃತಾಂತಗಳ ಪುಸ್ತಕದಲ್ಲಿ ವಿಚಾರಿಸಿದರೆ ಈ ಪಟ್ಟಣವು ತಿರಿಗಿ ಬೀಳುವುದೆಂದೂ ಅರಸುಗಳಿಗೂ ದೇಶಗಳಿಗೂ ನಷ್ಟಮಾಡುವಂಥ ದೆಂದೂ ಪೂರ್ವ ಕಾಲದಲ್ಲಿ ಅದರೊಳಗಿದ್ದವರು ತಿರಿಗಿ ಬಿದ್ದಿದ್ದಾರೆಂದೂ ಅದರ ನಿಮಿತ್ತ ಈ ಪಟ್ಟಣವು ನಾಶವಾಯಿತೆಂದೂ ನೀನು ವೃತಾಂತಗಳ ಪುಸ್ತಕದಲ್ಲಿ ಕಂಡು ತಿಳಿಯುವಿ. |
16. | ಈ ಪಟ್ಟಣವು ತಿರಿಗಿ ಕಟ್ಟಿಸಲ್ಪಟ್ಟು, ಅದರ ಗೋಡೆ ತೀರಿಸಲ್ಪಟ್ಟರೆ ನದಿಯ ಈಚೆಯಲ್ಲಿ ನಿನಗೆ ಭಾಗವಿರುವದಿಲ್ಲ ಎಂಬದಾಗಿ ನಾವು ಅರಸನಿಗೆ ತಿಳಿಯಮಾಡುತ್ತೇವೆ ಎಂದು ಬರೆದು ಕಳುಹಿಸಿದರು. |
17. | ಆಗ ಅರಸನು ಮುಖ್ಯಾಧಿಕಾರಿಯಾದ ರೆಹೂಮ ನಿಗೂ ಶಾಸ್ತ್ರಿಯಾದ ಶಿಂಷೈಗೂ ಸಮಾರ್ಯದಲ್ಲಿರುವ ಮಿಕ್ಕಾದ ಅವರ ಜೊತೆಗಾರರಿಗೂ ನದಿಯ ಆಚೆಯ ಲ್ಲಿರುವ ಉಳಿದವರಿಗೂ--ನಿಮಗೆ ಸಮಾಧಾನವು. |
18. | ಇಂಥ ಸಮಯದಲ್ಲಿ ನೀವು ನನಗೆ ಕಳುಹಿಸಿದ ಪತ್ರವು ನನ್ನ ಮುಂದೆ ವಿವರವಾಗಿ ಓದಲ್ಪಟ್ಟಿತು. |
19. | ಆಗ ನಾನು ಆಜ್ಞಾಪಿಸಿದ್ದರಿಂದ ಶೋಧಿಸಿ ನೋಡು ವಾಗ ಆ ಪಟ್ಟಣವು ಪೂರ್ವ ಕಾಲದಿಂದ ಅರಸುಗಳಿಗೆ ವಿರೋಧವಾಗಿ ತಿರುಗಿ ಬಿದ್ದಿತ್ತು; ಅದರಲ್ಲಿ ಕಲಹವೂ ದುರಾಲೋಚನೆಯೂ ಮಾಡಲ್ಪಟ್ಟಿತು; |
20. | ನದಿಯ ಆಚೆಯಲ್ಲಿರುವ ಎಲ್ಲಾ ಸ್ಥಳಗಳ ಮೇಲೆ ಆಳುತ್ತಾ ಇದ್ದ ಯೆರೂಸಲೇಮಿನ ಪರಾಕ್ರಮಶಾಲಿಗಳಾದ ಅರಸು ಗಳು ಇದ್ದರು; ಸುಂಕವೂ ಕಪ್ಪವೂ ತೆರಿಗೆಯೂ ಅವ ರಿಗೆ ಕೊಡಲ್ಪಟ್ಟವು ಎಂದು ಕಾಣಿಸಿತು. |
21. | ಆದಕಾರಣ ಮತ್ತೊಂದು ಆಜ್ಞೆಯು ನನ್ನಿಂದ ಕೊಡಲ್ಪಡುವ ಮಟ್ಟಿಗೂ ಆ ಪಟ್ಟಣವನ್ನು ಕಟ್ಟದ ಹಾಗೆ ಆ ಮನುಷ್ಯ ರನ್ನು ನಿಲ್ಲಿಸಬೇಕೆಂದು ಆಜ್ಞಾಪಿಸಿರಿ. |
22. | ನೀವು ಇದ ರಲ್ಲಿ ತಪ್ಪು ಮಾಡದ ಹಾಗೆ ಜಾಗ್ರತೆಯಾಗಿರ್ರಿ; ಅರಸು ಗಳಿಗೆ ಕೇಡೂ ನಷ್ಟವೂ ಸಂಭವಿಸುವದು ಯಾಕೆ ಎಂದು ಬರೆದನು. |
23. | ಅರಸನಾದ ಆರ್ತಷಸ್ತನ ಪತ್ರಿಕೆಯ ಪ್ರತಿಯು ರೆಹೂಮನಿಗೂ ಲೇಖಕನಾದ ಶಿಂಷೈಗೂ ಇವರ ಜೊತೆ ಗಾರನ ಮುಂದೆಯೂ ಓದಿದ ತರುವಾಯ ಅವರು ಯೆರೂಸಲೇಮಿನಲ್ಲಿ ಇರುವ ಯೆಹೂದ್ಯರ ಬಳಿಗೆ ತ್ವರೆಯಾಗಿ ಹೋಗಿ ಒತ್ತಾಯದಿಂದ ಮತ್ತು ಬಲದಿಂದ ಅವರನ್ನು ತಡೆದರು. |
24. | ಆಗ ಯೆರೂಸಲೇಮಿನಲ್ಲಿರುವ ದೇವರ ಆಲ ಯದ ಕೆಲಸವು ನಿಲ್ಲಿಸಲ್ಪಟ್ಟಿತು. ಪಾರಸಿಯರ ಅರಸ ನಾದ ದಾರ್ಯಾವೆಷನ ಆಳ್ವಿಕೆಯ ಎರಡನೇ ವರುಷದ ವರೆಗೆ ನಿಲ್ಲಿಸಲ್ಪಟ್ಟಿತು. |
← Ezra (4/10) → |