← Ezra (10/10) |
1. | ಎಜ್ರನು ಪ್ರಾರ್ಥಿಸಿ ಅರಿಕೆಮಾಡಿ ಅಳುತ್ತಾ ದೇವರ ಆಲಯದ ಮುಂದೆ ಬಿದ್ದಿರಲು ಇಸ್ರಾಯೇಲ್ಯರಲ್ಲಿ ಸ್ತ್ರೀಯರೂ ಪುರುಷರೂ ಮಕ್ಕಳೂ ಮಹಾ ದೊಡ್ಡ ಕೂಟವಾಗಿ ಅವನ ಬಳಿಯಲ್ಲಿ ಕೂಡಿಕೊಂಡರು. ಜನರು ಬಹಳವಾಗಿ ಅತ್ತರು. |
2. | ಆಗ ಎಲಾಮನ ಕುಮಾರರಲ್ಲಿ ಒಬ್ಬನಾದ ಯೆಹೀಯೇಲನ ಮಗನಾದ ಶೆಕೆನ್ಯನು ಎಜ್ರನಿಗೆ ಪ್ರತ್ತ್ಯುತ್ತರವಾಗಿ--ನಾವು ದೇಶದ ಜನಗಳಲ್ಲಿ ಅನ್ಯ ಸ್ತ್ರೀಯರನ್ನು ತೆಗೆದು ಕೊಂಡದ್ದರಿಂದ ನಮ್ಮ ದೇವರಿಗೆ ವಿರೋಧವಾಗಿ ಅಕೃತ್ಯಮಾಡಿದ್ದೇವೆ. ಆದಾಗ್ಯೂ ಈಗ ಈ ಕಾರ್ಯವನ್ನು ಕುರಿತು ಇಸ್ರಾಯೇಲ್ಯರಲ್ಲಿ ನಿರೀಕ್ಷೆ ಉಂಟು. |
3. | ಆದ ಕಾರಣ ನನ್ನ ಒಡೆಯನ ಯೋಚನೆಯ ಪ್ರಕಾರವಾ ಗಿಯೂ ನಮ್ಮ ದೇವರ ಆಜ್ಞೆಗೆ ನಡುಗುವವರ ಯೋಚ ನೆಯ ಪ್ರಕಾರವಾಗಿಯೂ ಆ ಸಮಸ್ತ ಸ್ತ್ರೀಯರನ್ನೂ ಅವರಿಂದ ಹುಟ್ಟಿದವರನ್ನೂ ಹೊರಡಿಸಿ ಬಿಡಲು ನಮ್ಮ ದೇವರ ಸಂಗಡ ಒಡಂಬಡಿಕೆ ಮಾಡೋಣ; ಇದು ನ್ಯಾಯಪ್ರಮಾಣದ ಪ್ರಕಾರ ಮಾಡಲ್ಪಡಲಿ. |
4. | ನೀನು ಏಳು; ಯಾಕಂದರೆ ಈ ಕಾರ್ಯ ನಿನಗೆ ಸಂಬಂಧಿಸಿದೆ. ನಾವು ನಿನ್ನ ಸಂಗಡ ಇರುವೆವು; ಧೈರ್ಯದಿಂದಿರು, ಅದನ್ನು ಮಾಡು ಅಂದರು. |
5. | ಆಗ ಎಜ್ರನು ಎದ್ದು, ಪ್ರಧಾನಯಾಜಕರೂ ಲೇವಿಯರೂ ಸಮಸ್ತ ಇಸ್ರಾ ಯೇಲ್ಯರೂ ಈ ಮಾತಿನ ಪ್ರಕಾರವಾಗಿ ಮಾಡಲು ಅವರು ಆಣೆ ಇಡುವ ಹಾಗೆ ಮಾಡಿದನು. ಅವರು ಆಣೆ ಇಟ್ಟರು. |
6. | ಎಜ್ರನು ದೇವರ ಆಲಯದ ಮುಂದಿ ನಿಂದ ಎದ್ದು ಎಲ್ಯಾಷೀಬಿನ ಮಗನಾದ ಯೆಹೋಹಾ ನಾನನ ಕೊಠಡಿಯಲ್ಲಿ ಪ್ರವೇಶಿಸಿ ಅಲ್ಲಿಗೆ ಬಂದಾಗ ರೊಟ್ಟಿಯನ್ನು ತಿನ್ನದೆ ನೀರನ್ನು ಕುಡಿಯದೆ ಇದ್ದನು; ಯಾಕಂದರೆ ಸೆರೆಯಾಗಿ ಒಯ್ಯಲ್ಪಟ್ಟವರ ಅಕೃತ್ಯಕ್ಕೋಸ್ಕರ ದುಃಖಿಸಿದನು. |
7. | ಆಗ ಸೆರೆಯ ಮಕ್ಕಳೆಲ್ಲರೂ ಯೆರೂಸಲೇಮಿಗೆ ಕೂಡಿ ಬರಬೇಕೆಂದು ಯೆಹೂದ ಮತ್ತು ಯೆರೂಸ ಲೇಮಿನಲ್ಲಿ ಎಲ್ಲೆಲ್ಲಿಯೂ ಪ್ರಕಟಿಸಿದರು. |
8. | ಇದಲ್ಲದೆ ಯಾವನಾದರೂ ಪ್ರಧಾನರ, ಹಿರಿಯರ ಯೋಚನೆಯ ಪ್ರಕಾರ ಮೂರು ದಿವಸದಲ್ಲಿ ಬಾರದೆ ಇದ್ದರೆ ಅವನ ಆಸ್ತಿಯಲ್ಲಾ ದಂಡವಾಗಿ ತಕ್ಕೊಳ್ಳಲ್ಪಡುವದೆಂದೂ ಅವನು ಸೆರೆಯಾಗಿ ಒಯ್ಯಲ್ಪಟ್ಟವರ ಕೂಟದಿಂದ ಹೊರಗೆ ಹಾಕಲ್ಪಡುವನೆಂದೂ ಸಾರಿದರು. |
9. | ಆಗ ಯೆಹೂದ ಮತ್ತು ಬೆನ್ಯಾವಿಾನಿನ ಮನುಷ್ಯರೆಲ್ಲರೂ ಮೂರು ದಿವಸಗಳೊಳಗೆ ಯೆರೂಸಲೇಮಿನಲ್ಲಿ ಕೂಡಿ ದರು. ಅದು ಒಂಭತ್ತನೇ ತಿಂಗಳ ಇಪ್ಪತ್ತನೇ ದಿವಸ ವಾಗಿತ್ತು. ಜನರೆಲ್ಲರು ದೇವರ ಆಲಯದ ಬೀದಿಯಲ್ಲಿ ಆ ಕಾರ್ಯಕ್ಕೊಸ್ಕರವೂ ಮಳೆಗೋಸ್ಕರವೂ ನಡುಗಿ ಕೂತುಕೊಂಡಿದ್ದರು. |
10. | ಆಗ ಯಾಜಕನಾದ ಎಜ್ರನು ಎದ್ದು ಅವರಿಗೆ--ನೀವು ಇಸ್ರಾಯೇಲ್ಯರ ಅಪರಾಧ ವನ್ನು ಅಧಿಕವಾಗಿ ಮಾಡಲು ಅನ್ಯಸ್ತ್ರೀಯರನು್ನು ಮದುವೆಮಾಡಿಕೊಂಡದ್ದರಿಂದ ಅಕೃತ್ಯ ಮಾಡಿದಿರಿ. |
11. | ಆದದರಿಂದ ನೀವು ನಿಮ್ಮ ಪಿತೃಗಳ ದೇವರಾಗಿರುವ ಕರ್ತನ ಮುಂದೆ ಅರಿಕೆಮಾಡಿ, ಆತನ ಚಿತ್ತದ ಪ್ರಕಾರ ಮಾಡಿ, ಈ ದೇಶದ ಜನರಿಂದಲೂ ಅನ್ಯಸ್ತ್ರೀಯ ರಿಂದಲೂ ನಿಮ್ಮನ್ನು ಪ್ರತ್ಯೇಕಿಸಿಕೊಳ್ಳಿರಿ ಅಂದನು. |
12. | ಆಗ ಸಭೆಯೆಲ್ಲಾ ಪ್ರತ್ಯುತ್ತರವಾಗಿ ದೊಡ್ಡ ಶಬ್ದ ದಿಂದ--ನೀನು ಹೇಳಿದ ಪ್ರಕಾರವೇ ನಾವು ಮಾಡ ಬೇಕು, |
13. | ಆದರೆ ಜನರು ಅನೇಕರು; ಇದು ಮಳೆಕಾಲ ವಾಗಿರುವದರಿಂದ ಹೊರಗೆ ಇರಲಾರೆವು; ಇದಲ್ಲದೆ ಇದು ಒಂದೆರಡು ದಿವಸದ ಕೆಲಸವಲ್ಲ. ಈ ಕಾರ್ಯ ದಲ್ಲಿ ದ್ರೋಹ ಮಾಡಿದ ನಾವು ಅನೇಕರಾಗಿದ್ದೇವೆ. |
14. | ಆದಕಾರಣ ದಯಮಾಡಿ--ಸಭೆಯಲ್ಲಾದರಲ್ಲಿ ನಮ್ಮ ಪ್ರಧಾನರು ನಿಲ್ಲಲಿ. ಮತ್ತು ಈ ಕಾರ್ಯದ ನಿಮಿತ್ತ ನಮ್ಮ ದೇವರ ಉರಿಯುವ ಕೋಪವು ನಮ್ಮನ್ನು ಬಿಟ್ಟುಹೋಗುವ ವರೆಗೆ, ನಮ್ಮ ಪಟ್ಟಣಗಳಲ್ಲಿ ಅನ್ಯ ಸ್ತ್ರೀಯರನ್ನು ತಕ್ಕೊಂಡವರು ನೇಮಿಸಿದ ಕಾಲದಲ್ಲಿ ಬಂದು ಅವರ ಸಂಗಡ ಪ್ರತಿ ಪಟ್ಟಣದ ಹಿರಿಯರೂ ಅದರ ನ್ಯಾಯಾಧಿಪತಿಗಳೂ ಇರಲಿ ಅಂದರು. |
15. | ಆದರೆ ಅಸಾಹೇಲನ ಮಗನಾದ ಯೋನಾತಾನನೂ ತಿಕ್ವನ ಮಗನಾದ ಯಹ್ಜೆಯನೂ ಇವರೇ ಇದಕ್ಕೆನೇಮಕವಾದರು. ಮೆಷುಲ್ಲಾಮನೂ ಲೇವಿಯನಾದ ಶಬ್ಬೆತೈಯನೂ ಅವರಿಗೆ ಸಹಾಯಕರಾಗಿದ್ದರು. |
16. | ಸೆರೆ ಇರುವಿಕೆಯ ಮಕ್ಕಳು ಇದೇ ಪ್ರಕಾರ ಮಾಡಿದರು; ಆದದರಿಂದ ಯಾಜಕನಾದ ಎಜ್ರನು ತಮ್ಮ ತಂದೆಗಳ ಮನೆಯ ಪ್ರಕಾರ ತಂದೆಗಳಲ್ಲಿ ಪ್ರಮುಖರಾದ ಕೆಲ ವರು ಹೆಸರು ಹೆಸರಾಗಿ ಪ್ರತ್ಯೇಕಿಸಲ್ಪಟ್ಟು, ಈ ಕಾರ್ಯವನ್ನು ಶೋಧಿಸಲು ಹತ್ತನೇ ತಿಂಗಳ ಮೊದ ಲನೇ ದಿವಸದಲ್ಲಿ ಕುಳಿತುಕೊಂಡರು. |
17. | ಅನ್ಯ ಸ್ತ್ರೀಯ ರನ್ನು ಹೊಂದಿದವರೆಲ್ಲರ ಕಾರ್ಯವನ್ನು ಮೊದಲನೇ ತಿಂಗಳ ಮೊದಲನೇ ದಿವಸದಲ್ಲಿ ಮುಗಿಸಿದರು. |
18. | ಯಾಜಕರ ಕುಮಾರರಲ್ಲಿ ಅನ್ಯಸ್ತ್ರೀಯರನ್ನು ತಕ್ಕೊಂಡವರಾಗಿ ಕಾಣಿಸಲ್ಪಟ್ಟವರು ಯಾರಂದರೆ-- ಯೋಚಾದಾಕನ ಮಗನಾದ ಯೇಷೊವನ ಕುಮಾರ ರಲ್ಲಿಯೂ ಅವನ ಸಹೋದರರಲ್ಲಿಯೂ ಮಾಸೇ ಯ, ಎಲಿಯೇಜರ, ಯಾರೀಬ, ಗೆದಲ್ಯ. |
19. | ಇವರು ತಮ್ಮ ಸ್ತ್ರೀಯರನ್ನು ಹೊರಡಿಸಿ ಬಿಡುವೆವೆಂದು ತಮ್ಮ ಕೈಕೊಟ್ಟು ತಾವು ಅಪರಾಧಸ್ತರಾದದರಿಂದ ಅಪರಾಧ ಕಳೆಯುವದಕ್ಕೆ ಮಂದೆಯಿಂದ ತಂದ ಒಂದು ಟಗ ರನ್ನು ಅರ್ಪಿಸಿದರು. |
20. | ಇಮ್ಮೇರನ ಕುಮಾರರಲ್ಲಿ ಹನಾನೀ, |
21. | ಜೆಬದ್ಯ, ಹಾರೀಮನ ಕುಮಾರರಲ್ಲಿ ಮಾಸೇಯ, ಎಲೀಯ, ಶೆಮಾಯ, ಯೆಹೀಯೇಲ್, ಉಜ್ಜೀಯ. |
22. | ಪಷ್ಹೂರನ ಕುಮಾರರಲ್ಲಿ ಎಲ್ಯೋವೇನೈ, ಮಾಸೇಯ, ಇಷ್ಮಾ ಯೇಲ್, ನೆತನೇಲ್, ಯೋಜಾಬಾದ್, ಎಲ್ಲಾಸ. |
23. | ಲೇವಿಯರಲ್ಲಿ ಸಹ ಯೋಜಾಬಾದ್, ಶಿವ್ಮೆಾ, ಕೆಲೀಟನೆಂಬ ಕೇಲಾಯ, |
24. | ಪೆತಹ್ಯ, ಯೆಹೂದ, ಎಲೀಯೆಜೆರ್. ಹಾಡುಗಾರರಲ್ಲಿ ಸಹ ಎಲ್ಯಾಷೀಬ್; ದ್ವಾರಪಾಲಕರಲ್ಲಿ ಶಲ್ಲೂಮ್, ಟೆಲೆಮ್, ಊರೀ. |
25. | ಇಸ್ರಾಯೇಲ್ಯರ ಪರೋಷ್ ಕುಮಾರರಲ್ಲಿ ರಮ್ಯಾಹ, ಇಜ್ಜೀಯ, ಮಲ್ಕೀಯ, ಮಿಯ್ಯಾಮಿನ್, ಎಲ್ಲಾಜಾರ್, ಮಲ್ಕೀಯ, ಬೆನಾಯನು. |
26. | ಏಲಾಮನ ಕುಮಾರರಲ್ಲಿ ಮತ್ತನ್ಯ; ಜೆಕರ್ಯ, ಯೆಹೀಯೇಲ್, ಅಬ್ದೀ, ಯೆರೇಮೋತ್, ವಿಲೀಯ. |
27. | ಜತ್ತೂವಿನ ಕುಮಾರರಲ್ಲಿ ಎಲ್ಯೋವೇನ್ಯೆ, ಎಲ್ಯಾಷೀಬ್, ಮತ್ತನ್ಯ, ಯೆರೇಮೋತ್, ಜಾಬಾದ್, ಅಜೀಜಾ. |
28. | ಬೇಬೈನ ಕುಮಾರರಲ್ಲಿ ಯೊಹೋಹಾ ನಾನ್, ಹನನ್ಯ, ಜಬ್ಬೈ, ಅತ್ಲೈ. |
29. | ಬಾನೀಯ ಕುಮಾರರಲ್ಲಿ ಮೆಷುಲ್ಲಾಮ್, ಮಲ್ಲೂಕ್, ಅದಾಯ, ಯಾಷೂಬ್, ಶೆಯಾಲ್, ರಾಮೋತ್. |
30. | ಪಹತ್ ಮೋವಾಬ್ ಕುಮಾರರಲ್ಲಿ ಅದ್ನ, ಕೆಲಾಲ್, ಬೆನಾಯ, ಮಾಸೇಯ, ಮತ್ತನ್ಯ, ಬೆಚಲೇಲ್, ಬಿನ್ನೂಯ್, ಮನಸ್ಸೆ. |
31. | ಹಾರೀಮನ ಕುಮಾರರಲ್ಲಿ ಎಲೀಯೆಜೆರ್, ಇಷ್ಷೀಯ, ಮಲ್ಕೀಯ, ಶೆಮಾಯ, ಸಿಮೆಯೋನ್, |
32. | ಬೆನ್ಯಾವಿಾನ್, ಮಲ್ಲೂಕ್, ಶೆಮರ್ಯ. |
33. | ಹಾಷೂ ಮನ ಕುಮಾರರಲ್ಲಿ ಮತ್ತೆನೈ, ಮತ್ತತ್ತ, ಜಾಬಾದ್, ಎಲೀಫೆಲೆಟ್, ಯೆರೇಮೈ, ಮನಸ್ಸೆ, ಶಿವ್ಮೆಾ. |
34. | ಬಾನೀಯ ಕುಮಾರರಲ್ಲಿ ಮಾದೈ, ಅಮ್ರಾಮ್, ಊವೇಲ್, |
35. | ಬೆನಾಯ, ಬೇದೆಯ, ಕೆಲೂಹು, |
36. | ವನ್ಯಾಹ, ಮೆರೇಮೋತ, ಎಲ್ಯಾಷೀಬ್ |
37. | ಮತ್ತನ್ಯ, ಮತ್ತೆನೈ, ಶಿವ್ಮೆಾ, ಯಾಸೈ, |
38. | ಬಾನೀ, ಬಿನ್ನೂಯ್, |
39. | ಶೆಲೆಮ್ಯ, ನಾತಾನ್, ಅದಾಯ, |
40. | ಮಕ್ನದೆಬೈ, ತಾಷೈ, ಶಾರೈ, |
41. | ಅಜರೇಲ್, ಶೆಲೆಮ್ಯ, ಶೆಮರ್ಯ, |
42. | ಶಲ್ಲೂಮ್, ಅಮರ್ಯ, ಯೋಸೇಫ್, |
43. | ನೆಬೋನ ಕುಮಾರರಲ್ಲಿ ಯೆಗೀಯೇಲ್, ಮತ್ತಿತ್ಯ, ಜಾಬಾದ್, ಜೆಬೀನ, ಯದ್ದೈ, ಯೋವೇಲ್, ಬೆನಾಯ. |
44. | ಇವರೆಲ್ಲರೂ ಅನ್ಯಸ್ತ್ರೀಯರನ್ನು ತಕ್ಕೊಂಡ ವರಾಗಿದ್ದರು; ಇವರಲ್ಲಿ ಕೆಲವರು ತಮಗೆ ಮಕ್ಕಳನ್ನು ಹೆತ್ತ ಸ್ತ್ರೀಯರನ್ನು ತಕ್ಕೊಂಡವರಾಗಿದ್ದರು. |
← Ezra (10/10) |