← Ezekiel (30/48) → |
1. | ಕರ್ತನ ವಾಕ್ಯವು ಮತ್ತೆ ನನಗೆ ಬಂದು ಹೇಳಿದ್ದೇನಂದರೆ |
2. | ಮನುಷ್ಯಪುತ್ರನೇ, ಪ್ರವಾದಿಸು ಮತ್ತು ಹೇಳು--ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಅಯ್ಯೋ! ದಿನವೇ ಎಂದು ಅರಚಿಕೊಳ್ಳಿರಿ. |
3. | ಆ ದಿನವು ಸವಿಾಪವಾಯಿತು, ಕರ್ತನ ದಿನವು, ಆ ಕಾರ್ಮುಗಿಲಿನ ದಿನವು ಸವಿಾಪ ವಾಯಿತು; ಅದೇ ಅನ್ಯಜನಾಂಗಗಳ ಕಾಲವಾಗಿ ರುವದು. |
4. | ಕತ್ತಿಯು ಐಗುಪ್ತದ ಮೇಲೆ ಬರುವದು, ಅಲ್ಲಿನ ಪ್ರಜೆಗಳು ಹತರಾಗಲು ಐಥಿಯೋಪ್ಯ ದಲ್ಲಿಯೂ ಸಂಕಟವಾಗುವದು; ಐಗುಪ್ತದ ಜನಸಮೂ ಹವು ಒಯ್ಯಲ್ಪಡುವದು ಅದರ ಅಸ್ತಿವಾರವು ಮುರಿದು ಹಾಳಾಗುವದು. |
5. | ಐಥಿಯೋಪ್ಯ, ಲಿಬಿಯ ಮತ್ತು ಲಿಡಿಯ ಎಲ್ಲಾ ಮಿಶ್ರಜನರೂ ಕೂಬ್ಯರೂ ಮಿತ್ರರಾಜ್ಯ ದವರೂ ಅವರ ಸಂಗಡ ಕತ್ತಿಯಿಂದ ಹತರಾಗುವರು. |
6. | ಕರ್ತನು ಹೀಗೆ ಹೇಳುತ್ತಾನೆ--ಐಗುಪ್ತಕ್ಕೆ ಆಧಾರ ವಾದವರು ಬೀಳುವರು. ಅದರ ಶಕ್ತಿಯ ಮದವು ಇಳಿದು ಹೋಗುವದು. ಅಲ್ಲಿನ ಜನರು ಮಿಗ್ದೋಲಿ ನಿಂದ ಸೆವೇನೆಯ ಗೋಪುರ ಮೊದಲುಗೊಂಡು ಅವರಲ್ಲಿ ಕತ್ತಿಯಿಂದ ಹತರಾಗುವರು ಎಂದು ದೇವ ರಾದ ಕರ್ತನು ಹೇಳುತ್ತಾನೆ. |
7. | ಆಗ ಅವರು ಹಾಳಾಗಿರುವ ದೇಶಗಳೊಳಗೆ ಹಾಳಾಗುವರು. ಅದರ ಪಟ್ಟಣ ಗಳು ಹಾಳಾದ ಪಟ್ಟಗಳ ಮಧ್ಯದಲ್ಲಿ ಇರುವವು. |
8. | ನಾನು ಐಗುಪ್ತದಲ್ಲಿ ಬೆಂಕಿಯಿಟ್ಟಾಗ ಅದಕ್ಕೆ ಸಹಾಯ ಮಾಡುವವರೆಲ್ಲರೂ ನಾಶವಾದ ಮೇಲೆ ಅವರಿಗೆ ನಾನೇ ಕರ್ತನೆಂದು ತಿಳಿಯುವದು. |
9. | ಆ ದಿನದಲ್ಲಿ ದೂತರು ನನ್ನ ಸನ್ನಿಧಾನದಿಂದ ಹೊರಟು ಹಡಗುಗಳಲ್ಲಿ ಪ್ರಯಾಣ ಮಾಡಿ ನಿಶ್ಚಿಂತರಾದ ಐಥಿಯೋಪ್ಯರನ್ನು ಹೆದರಿಸುವರು; ಐಗುಪ್ತದ ದಿನದಲ್ಲಿ ಆದಹಾಗೆ ಅವರ ಮೇಲೆ ದೊಡ್ಡಬಾಧೆ ಉಂಟಾಗುವದು; ಇಗೋ, ಅದು ಬಂತು. |
10. | ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನಾನು ಐಗುಪ್ತದ ಜನಸಮೂಹವನ್ನು ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಕೈಯಿಂದ ಕೊನೆಗಾಣಿಸುವೆನು. |
11. | ಆ ದೇಶವನ್ನು ನಾಶಪಡಿಸುವದಕ್ಕೆ ಅವನನ್ನು ಅತಿಭಯಂಕರ ಜನಾಂಗದವರಾದ ಅವನೊಡನೆ ಬರ ಮಾಡುವೆನು. ಅವರು ಐಗುಪ್ತಕ್ಕೆ ವಿರೋಧವಾಗಿ ಕತ್ತಿ ಹಿರಿದು ದೇಶವನ್ನು ಹತವಾದವುಗಳಿಂದ ತುಂಬಿ ಸುವರು. |
12. | ಇದಲ್ಲದೆ ನಾನು ನದಿಗಳನ್ನು ಒಣಗಿಸಿ ದೇಶವನ್ನು ದುಷ್ಟರ ಕೈಗೆ ಮಾರಿಬಿಡುವೆನು; ದೇಶವನ್ನು ಅದರ ಪರಿಪೂರ್ಣತೆಯನ್ನೂ ಅವರ ಅನ್ಯರ ಕೈಯಿಂದ ಹಾಳುಮಾಡುವೆನು. ಕರ್ತನಾದ ನಾನೇ ಇದನ್ನು ಮಾತನಾಡಿದ್ದೇನೆ. |
13. | ದೇವರಾದ ಕರ್ತನು ಹೀಗೆ ಹೇಳುತ್ತಾನೆ. ನಾನು ವಿಗ್ರಹಗಳನ್ನು ಹಾಳು ಮಾಡಿ ಬೊಂಬೆಗಳನ್ನು ನೋಫಿನಲ್ಲಿ ತೀರಿಸಿಬಿಡುವೆನು; ಐಗುಪ್ತದೇಶದ ಪ್ರಭುವು ಇನ್ನು ಇರುವದಿಲ್ಲ, ನಾನು ಐಗುಪ್ತ ದೇಶದಲ್ಲಿ ಭಯವನ್ನು ಉಂಟುಮಾಡುತ್ತೇನೆ. |
14. | ನಾನು ಪತ್ರೋಸನ್ನು ಹಾಳು ಮಾಡುವೆನು; ಚೋವನಿನಲ್ಲಿ ಬೆಂಕಿಯಿಡುವೆನು, ನೋಪುರದಲ್ಲಿ ನ್ಯಾಯಗಳನ್ನು ತೀರಿಸುವೆನು. |
15. | ಐಗುಪ್ತಕ್ಕೆ ರಕ್ಷಣೆಯ ಕೋಟೆಯಾದ ಸೀನಿನ ಮೇಲೆ ನನ್ನ ರೋಷಾಗ್ನಿಯನ್ನು ಸುರಿಸಿ ನೋಪುರದ ಜನಸಮೂಹಗಳನ್ನೆಲ್ಲಾ ಕತ್ತರಿಸಿ ಬಿಡು ವೆನು. |
16. | ನಾನು ಐಗುಪ್ತಕ್ಕೆ ಕಿಚ್ಚನ್ನು ಹೆಚ್ಚಿಸಲು ಸೀನ್ ಪ್ರಾಣಸಂಕಟಪಡುವದು, ನೋಪುರವು ಭಾಗಭಾಗ ವಾಗಿ ಸೀಳಲ್ಪಡುವದು, ನೋಫಿನ ಮೇಲೆ ಪ್ರತಿ ದಿನವೂ ಇಕ್ಕಟ್ಟು ಇರುವದು. |
17. | ಆವೇನಿನ ಮತ್ತು ಪೀಬೆಸೆತಿನ ಯೌವನಸ್ಥರು ಕತ್ತಿಯಿಂದ ಸಾಯುವರು; ಈ ಪಟ್ಟಣಗಳು ಸೆರೆಯಾಗಿ ಹೋಗುವವು, |
18. | ತಹಪನೇಸಿನಲ್ಲಿಯೂ ನಾನು ಐಗುಪ್ತದ ನೊಗ ಗಳನ್ನು ಮುರಿಯುವಾಗ ಹಗಲು ಕತ್ತಲಾಗುವದು. ಅದರ ಶಕ್ತಿಯ ಮದವು ಅಡಗಿ ಹೋಗುವದು, ಅದನ್ನು ಮೇಘವು ಮುಚ್ಚುವದು. ಅದರ ಕುಮಾರಿ ಯರು ಸೆರೆಗೆ ಹೋಗುವರು. |
19. | ಹೀಗೆ ನಾನು ಐಗುಪ್ತ ದಲ್ಲಿ ನ್ಯಾಯಗಳನ್ನು ತೀರಿಸುವೆನು, ಆಗ ನಾನೇ ಕರ್ತನೆಂದು ಅವರಿಗೆ ತಿಳಿಯುವದು. |
20. | ಇದಲ್ಲದೆ ಹನ್ನೊಂದನೇ ವರುಷದಲ್ಲಿ ಮೊದಲ ನೆಯ ತಿಂಗಳಿನ, ಏಳನೆಯ ದಿನದಲ್ಲಿ ಏನಾಯಿತಂದರೆ, ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ -- |
21. | ಮನುಷ್ಯ ಪುತ್ರನೇ, ನಾನು ಐಗುಪ್ತದ ಅರಸ ನಾದ ಫರೋಹನ ತೋಳನ್ನು ಮುರಿದು ಹಾಕಿದ್ದೇನೆ; ಇಗೋ, ಅದು ಕಟ್ಟಲ್ಪಡುವ ಹಾಗೆ ವಾಸಿಯಾಗುವದೇ ಇಲ್ಲ, ಅದು ಕತ್ತಿಯನ್ನು ಹಿಡಿಯುವ ಹಾಗೆಯೇ ಅದಕ್ಕೆ ಬಲಬರುವ ಹಾಗೆ ಪಟ್ಟಿ ಬಿಗಿಸಲ್ಪಡುವದಿಲ್ಲ. |
22. | ಆದ ದರಿಂದ ದೇವರಾದ ಕರ್ತನು ಹೀಗೆ ಹೇಳುತ್ತಾನೆ --ಇಗೋ, ನಾನು ಐಗುಪ್ತದೇಶದ ಅರಸನಾದ ಫರೋಹನಿಗೆ ವಿರುದ್ಧವಾಗಿದ್ದೇನೆ. ಬಲವುಳ್ಳದ್ದೂ ಮುರಿದದ್ದೂ ಆಗಿರುವ ಅವನ ತೋಳುಗಳನ್ನು ಮುರಿ ಯುತ್ತೇನೆ; ಅವನ ಕೈಯಿಂದ ಕತ್ತಿಯನ್ನು ಬೀಳಿಸುತ್ತೇನೆ. |
23. | ಐಗುಪ್ತರನ್ನು ಜನಾಂಗಗಳಲ್ಲಿ ಚದರಿಸಿ ದೇಶಗಳ ಮೇಲೆ ಹರಡುವೆನು. |
24. | ಬಾಬೆಲಿನ ಅರಸನ ತೋಳು ಗಳನ್ನು ನಾನು ಬಲಪಡಿಸುವೆನು; ಅವನ ಕೈಯಲ್ಲಿ ನನ್ನ ಕತ್ತಿಯನ್ನಿಡುವೆನು; ಫರೋಹನ ತೋಳನ್ನು ಮುರಿಯುವೆನು, ಅವನು ಗಾಯದಿಂದ ಸಾಯುವ ಹಾಗೆ ಅವನ ಮುಂದೆ ನರಳಾಡುವನು. |
25. | ನಾನು ಬಾಬೆಲಿನ ಅರಸನ ತೋಳುಗಳಿಗೆ ಬಲ ಕೊಡುವೆನು, ಫರೋಹನ ತೋಳುಗಳು ಬಿದ್ದು ಹೋಗುವವು; ಯಾವಾಗ ನಾನು ನನ್ನ ಕತ್ತಿಯನ್ನು ಬಾಬೆಲಿನ ಅರಸನ ಕೈಗೆ ಕೊಡುವೆನೋ ಅದನ್ನು ಐಗುಪ್ತದೇಶದಿಂದ ಹೊರಗೆ ಚಾಚುವೆನೋ ಆಗ ನಾನೇ ಕರ್ತನೆಂದು ಅವರಿಗೆ ಗೊತ್ತಾಗುವದು. |
26. | ನಾನು ಐಗುಪ್ತರನ್ನು ಜನಾಂಗಗಳೊಳಗೆ ಚದರಿಸಿ ದೇಶಗಳಲ್ಲಿ ಹರಡಿಸು ತ್ತೇನೆ; ಆಗ ನಾನೇ ಕರ್ತನೆಂದು ಅವರಿಗೆ ತಿಳಿಯುವದು. |
← Ezekiel (30/48) → |