← Ezekiel (22/48) → |
1. | ಇದಲ್ಲದೆ ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ-- |
2. | ಈಗ ಮನುಷ್ಯ ಪುತ್ರನೇ, ನೀನು ನ್ಯಾಯತೀರಿಸುವೆಯಾ? ರಕ್ತಾಪರಾಧ ವುಳ್ಳ ಪಟ್ಟಣಕ್ಕೆ ನ್ಯಾಯತೀರಿಸುವೆಯಾ ಹೌದು ಅದರ ಅಸಹ್ಯವಾದವುಗಳನ್ನೆಲ್ಲಾ ಅದಕ್ಕೆ ತಿಳಿಸುವಿ. |
3. | ನೀನು ಹೇಳಬೇಕಾದದ್ದೇನಂದರೆ, ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಪಟ್ಟಣವು ಅದರ ಮಧ್ಯದಲ್ಲಿ ಅದರ ಕಾಲ ಬರುವ ಹಾಗೆ ರಕ್ತವನ್ನು ಚೆಲ್ಲುತ್ತದೆ. ತನ್ನನ್ನು ಅಶುದ್ಧ ಮಾಡುವ ಹಾಗೆ ತನ್ನಲ್ಲಿ ವಿಗ್ರಹಗಳನ್ನು ಮಾಡಿಕೊಂಡಿದೆ. |
4. | ನೀನು ಚೆಲ್ಲಿದ ನಿನ್ನ ರಕ್ತದಿಂದ ನಿನಗೆ ಅಪರಾಧ ಬಂದಿತು; ನೀನು ಮಾಡಿದ ನಿನ್ನ ವಿಗ್ರಹಗಳಿಂದ ನೀನು ಅಶುದ್ಧವಾದೆ; ನಿನ್ನ ದಿನಗಳನ್ನು ಸವಿಾಪಿಸಿರುವೆ; ನಿನ್ನ ವರುಷಗಳನ್ನು ಮುಟ್ಟಿರುವೆ. ಆದದರಿಂದ ನಿನ್ನನ್ನು ಅನ್ಯಜನಾಂಗಗಳಿಗೆ ನಾಚಿಕೆ ಯಾಗಿಯೂ ಎಲ್ಲಾ ದೇಶಗಳಿಗೆ ನಿಂದೆಯಾಗಿಯೂ ಮಾಡಿದ್ದೇನೆ. |
5. | ಅಶುದ್ಧ ಹೆಸರುಳ್ಳವಳೇ, ಬಹಳ ತೊಂದರೆಗೊಳಗಾದವಳೇ, ನಿನಗೆ ಹತ್ತಿರದವರೂ ದೂರದವರೂ ನಿಂದಿಸುವರು. |
6. | ಇಗೋ ಇಸ್ರಾ ಯೇಲಿನ ಪ್ರಭುಗಳಲ್ಲಿ ಪ್ರತಿಯೊಬ್ಬನು ತನ್ನ ತನ್ನ ಶಕ್ತ್ಯಾನುಸಾರವಾಗಿ ರಕ್ತವನ್ನು ನಿನ್ನ ಮೇಲೆ ಚೆಲ್ಲುತ್ತಲೇ ಇದ್ದಾನೆ. |
7. | ನಿನ್ನಲ್ಲಿ ತಂದೆಯನ್ನೂ ತಾಯಿಯನ್ನೂ ಅಲಕ್ಷ್ಯ ಮಾಡಿದ್ದಾರೆ; ನಿನ್ನಲ್ಲಿ ಅಪರಿಚಿತರಿಗೆ ಬಲಾತ್ಕಾರ ಮಾಡಿದ್ದಾರೆ; ನಿನ್ನಲ್ಲಿ ದಿಕ್ಕಿಲ್ಲದವನನ್ನೂ ವಿಧವೆಯನ್ನೂ ಪೀಡಿಸಿದ್ದಾರೆ. |
8. | ನೀನು ನನ್ನ ಪರಿಶುದ್ಧ ಸಂಗತಿಗಳನು ತಿರಸ್ಕರಿಸಿ ನನ್ನ ಸಬ್ಬತ್ತುಗಳನ್ನು ಅಪವಿತ್ರಪಡಿಸಿದ್ದೀ. |
9. | ನಿನ್ನಲ್ಲಿ ರಕ್ತಚೆಲ್ಲುವ ಹಾಗೆ ಚಾಡಿ ಹೇಳುವ ಜನ ಇದ್ದಾರೆ; ಬೆಟ್ಟಗಳ ಮೇಲೆ ತಿನ್ನುವವರಿದ್ದಾರೆ; ದುರಾ ಚಾರಿಗಳು ನಿನ್ನ ಮಧ್ಯದಲ್ಲಿದ್ದಾರೆ. |
10. | ನಿನ್ನಲ್ಲಿ ತಂದೆಯ ಬೆತ್ತಲೆತನವನ್ನು ಹೊರಗೆಡವಿದ್ದಾರೆ; ನಿನ್ನಲ್ಲಿ ಮುಟ್ಟಾಗಿ ಪ್ರತ್ಯೇಕವಾಗಿರುವವರನ್ನು ಕೂಡಿದ್ದಾರೆ; |
11. | ಒಬ್ಬನು ತನ್ನ ನೆರೆಯವನ ಹೆಂಡತಿಯ ಸಂಗಡ ದುರಾಚಾರವನ್ನು ಮಾಡಿದ್ದಾನೆ; ಮತ್ತೊಬ್ಬನು ಅಕೃತ್ಯದಿಂದ ಸೊಸೆಯನ್ನು ಕೆಡಿಸಿದ್ದಾನೆ; ಇನ್ನೊಬ್ಬನು ತನ್ನ ತಂದೆಯ ಮಗಳಾದ ತನ್ನ ಸಹೋದರಿಯನ್ನೇ ಭಂಗಪಡಿಸಿದ್ದಾನೆ. |
12. | ನಿನ್ನಲ್ಲಿ ರಕ್ತ ಚೆಲ್ಲುವ ಹಾಗೆ ಲಂಚತಿಂದಿದ್ದಾರೆ; ಬಡ್ಡಿಯನ್ನೂ ಲಾಭವನ್ನೂ ತೆಗೆದುಕೊಂಡಿದ್ದಾರೆ; ಬಲಾತ್ಕಾರದಿಂದ ನಿನ್ನ ನೆರೆಯವರಲ್ಲಿ ದುರ್ಲಾಭಮಾಡಿಕೊಂಡಿದ್ದಾರೆ; ನನ್ನನ್ನು ಮರೆತುಬಿಟ್ಟಿ ದ್ದಾರೆಂದು ದೇವರಾದ ಕರ್ತನು ಹೇಳುತ್ತಾನೆ. |
13. | ಆದದರಿಂದ ಇಗೋ, ನೀನು ಮಾಡಿದ ಈ ದುರ್ಲಾಭದಿಂದಲೂ ನಿನ್ನಲ್ಲಿರುವ ನಿನ್ನ ರಕ್ತಾಪ ರಾಧದಿಂದಲೂ ನಾನು ನನ್ನ ಕೈ ಬಡಿದುಕೊಂಡಿದ್ದೇನೆ. |
14. | ನಾನು ನಿನ್ನೊಳಗೆ ಕೆಲಸ ನಡೆಸುವ ದಿವಸಗಳಲ್ಲಿ ನಿನ್ನ ಹೃದಯವು ನಿಲ್ಲುವದೋ? ನಿನ್ನ ಕೈಗಳು ಬಲವಾಗಿರುವವೋ? ಕರ್ತನಾದ ನಾನೇ ಹೇಳಿದ್ದೇನೆ, ನಾನೇ ಅದನ್ನು ಮಾಡುತ್ತೇನೆ. |
15. | ನಿನ್ನನ್ನು ಅನ್ಯ ಜನಾಂಗಗಳಲ್ಲಿ ಚದರಿಸಿ, ದೇಶಗಳಲ್ಲಿ ಹರಡಿಸುವೆನು; ನಿನ್ನ ಅಶುದ್ಧತ್ವವನ್ನು ನಿನ್ನಿಂದ ತೆಗೆದು ನಾಶಮಾಡುವೆನು. |
16. | ಆಗ ನೀನು ಅನ್ಯಜನಾಂಗಗಳ ಮುಂದೆ ನೀನು ನಿನ್ನ ಬಾಧ್ಯತೆಯನ್ನು ತಕ್ಕೊಳ್ಳುವಿ; ನಾನೇ ಕರ್ತನೆಂದು ನೀನು ತಿಳಿದುಕೊಳ್ಳುವಿ. |
17. | ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇ ನಂದರೆ -- |
18. | ಮನುಷ್ಯಪುತ್ರನೇ, ಇಸ್ರಾಯೇಲಿನ ಮನೆತನದವರು ನನಗೆ (ಮಂಡೂರ) ಕಿಟ್ಟದ ಹಾಗಾದರು ಅವರೆಲ್ಲರೂ ಬಲೆಯ ಮಧ್ಯದಲ್ಲಿರುವ ಹಿತ್ತಾಳೆ, ತವರ, ಕಬ್ಬಿಣದ, ಹಾಗೆ ಇದ್ದಾರೆ. ಸೀಸದ ಮತ್ತು ಬೆಳ್ಳಿಯ ಕಿಟ್ಟಗಳ ಹಾಗೆಯೂ ಇದ್ದಾರೆ. |
19. | ಆದದರಿಂದ ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ನೀವೆಲ್ಲರೂ ಕಿಟ್ಟವಾಗಿರುವದರಿಂದ ಇಗೋ, ನಾನು ನಿಮ್ಮನ್ನು ಯೆರೂಸಲೇಮಿನ ಮಧ್ಯಕ್ಕೆ ಕೂಡಿಸುತ್ತೇನೆ. |
20. | ಅವರು ಬೆಳ್ಳಿ, ಹಿತ್ತಾಳೆ, ಕಬ್ಬಿಣ, ಸೀಸ ಮತ್ತು ತಗಡುಗಳನ್ನು ಹೇಗೆ ಒಲೆಯೊಳಗೆ ಕೂಡಿಸಿ ಅದಕ್ಕೆ ಬೆಂಕಿಯನ್ನೂದಿ ಕರಗಿಸುವರೋ ಹಾಗೆಯೇ ನಾನು ನಿಮ್ಮನ್ನು ನನ್ನ ಕೋಪದಲ್ಲಿಯೂ ನನ್ನ ರೋಷದಲ್ಲಿಯೂ ಕರಗಿಸಿಬಿಡುವೆನು. |
21. | ಹೌದು, ನನ್ನ ರೋಷದ ಬೆಂಕಿಯಿಂದ ನಾನು ನಿಮ್ಮ ಮೇಲೆ ಊದುವೆನು. ನೀವು ಅದರೊಳಗೆ ಕರಗಿ ಹೋಗುವಿರಿ. |
22. | ಬೆಳ್ಳಿಯು ಕುಲುಮೆಯಲ್ಲಿ ಕರಗುವ ಹಾಗೆ ನೀವು ನನ್ನ ರೋಷಾಗ್ನಿಯಲ್ಲಿ ಕರಗು ವಿರಿ; ನಿನ್ನ ಮೇಲೆ ರೋಷಾಗ್ನಿಯನ್ನು ಸುರಿಸಿದಾತನು ಕರ್ತನಾದ ನಾನೇ ಎಂದು ನಿಮಗೆ ತಿಳಿಯುತ್ತದೆ. |
23. | ಇದಲ್ಲದೆ ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ -- |
24. | ಮನುಷ್ಯಪುತ್ರನೇ, ಅದಕ್ಕೆ ಹೀಗೆ ಹೇಳು ಅಶುದ್ಧರಾಗದಂಥ ರೌದ್ರದ ದಿವಸ ಗಳಲ್ಲಿ ಮಳೆ ಸುರಿಯುವಂತಹ ದೇಶವು ನೀನೇ, |
25. | ಕೊಳ್ಳೆಯನ್ನು ಸುಲಿದುಕೊಳ್ಳುವ ಘರ್ಜಿಸುವ ಸಿಂಹದ ಹಾಗೆ ಅದರ ಮಧ್ಯದಲ್ಲಿ ಪ್ರವಾದಿಗಳ ಒಳಸಂಚು ಉಂಟು; ಪ್ರಾಣಗಳನ್ನು ತಿಂದುಬಿಟ್ಟಿದ್ದಾರೆ. ಸಂಪತ್ತನ್ನೂ ಅಮೂಲ್ಯವಾದ ವಸ್ತುವನ್ನೂ ದೋಚಿ ಕೊಂಡಿದ್ದಾರೆ, ಅವರು ಅದರ ಮಧ್ಯದಲ್ಲಿ ಬಹಳ ಜನರನ್ನು ವಿಧವೆಯರನ್ನಾಗಿ ಮಾಡಿದ್ದಾರೆ. |
26. | ಅದರ ಯಾಜಕರು ನನ್ನ ವಿಧಿಗಳನ್ನು ಭಂಗಪಡಿಸಿದ್ದಾರೆ; ನನ್ನ ಪರಿಶುದ್ಧ ವಸ್ತುಗಳನ್ನು ಅಪವಿತ್ರಪಡಿಸಿದ್ದಾರೆ; ಪರಿಶುದ್ಧ ವಾದದ್ದಕ್ಕೂ ಅಪವಿತ್ರವಾದದ್ದಕ್ಕೂ ಭೇದವೆಣಿಸಲಿಲ್ಲ; ಶುದ್ಧಾಶುದ್ಧ ವಿವೇಚನೆಯನ್ನು ಬೋಧಿಸಲಿಲ್ಲ, ನನ್ನ ಸಬ್ಬತ್ತುಗಳಿಗೆ ತಮ್ಮ ಕಣ್ಣುಗಳನ್ನು ಮರೆಮಾಡಿದ್ದಾರೆ. ಆದದರಿಂದ ನಾನು ಅವರಲ್ಲಿ ಅಪವಿತ್ರನಾದೆನು. |
27. | ಅಲ್ಲಿನ ಪ್ರಧಾನರು ಸುಲಿಗೆಗಾಗಿ ರಕ್ತ ಸುರಿಸಿ ಪ್ರಾಣ ಗಳನ್ನು ನುಂಗುವ ಹಾಗೆ ಬೇಟೆಯ ತೋಳಗಳಂತಿ ದ್ದಾರೆ. |
28. | ಅವರ ಪ್ರವಾದಿಗಳು ಅವರಿಗೆ ಸುಣ್ಣ ಹಚ್ಚುತ್ತಾರೆ, ಮೋಸವನ್ನು ದರ್ಶಿಸಿ ಸುಳ್ಳು ಶಕುನ ಹೇಳುತ್ತಾರೆ; ಕರ್ತನು ಮಾತನಾಡದಿರುವದರಿಂದ ದೇವರಾದ ಕರ್ತನು ಹೀಗೆ ಹೇಳುತ್ತಾನೆಂದು ಹೇಳು ತ್ತಾರೆ. |
29. | ದೇಶದ ಜನರು ಬಲಾತ್ಕಾರ ಮಾಡಿದ್ದಾರೆ, ಕೊಳ್ಳೆಯನ್ನು ಹೊಡೆದಿದ್ದಾರೆ. ಬಡವನನ್ನೂ ದರಿದ್ರ ರನ್ನೂ ಪೀಡಿಸಿದ್ದಾರೆ; ಹೌದು, ಅವರು ನ್ಯಾಯವಿಲ್ಲದೆ ಒಬ್ಬ ಅಪರಿಚಿತನನ್ನು ಬಲಾತ್ಕಾರಪಡಿಸಿದ್ದಾರೆ. |
30. | ಬೇಲಿ ಕಟ್ಟುವ ಮನುಷ್ಯನನ್ನು ದೇಶಕ್ಕೋಸ್ಕರ ನಾನು ಅದನು ನಾಶಮಾಡದ ಹಾಗೆ ಪೌಳಿಯ ಒಡಕಿನಲ್ಲಿ ನಿಲ್ಲತಕ್ಕ ವನನ್ನು ಹುಡುಕಿದೆನು, ಆದರೆ ಸಿಕ್ಕಲಿಲ್ಲ. |
31. | ಆದದ ರಿಂದ ನನ್ನ ರೋಷವನ್ನು ಅವರ ಮೇಲೆ ಸುರಿಸಿದ್ದೇನೆ; ನನ್ನ ಸಿಟ್ಟಿನ ಬೆಂಕಿಯಿಂದ ಅವರನ್ನು ಸಂಹರಿಸಿದ್ದೇನೆ; ಅವರ ಮಾರ್ಗವನ್ನು ಅವರ ತಲೆಗಳ ಮೇಲೆ ಮುಯ್ಯಿ ತೀರಿಸಿದ್ದೇನೆಂದು ದೇವರಾದ ಕರ್ತನು ಹೇಳುತ್ತಾನೆ. |
← Ezekiel (22/48) → |