← Ezekiel (19/48) → |
1. | ಇದಲ್ಲದೆ ನೀನು ಇಸ್ರಾಯೇಲಿನ ಪ್ರಧಾನ ವಿಷಯವಾಗಿ ಈ ಪ್ರಲಾಪ ವನ್ನೆತ್ತಿ |
2. | ಹೀಗೆ ಹೇಳು--ನಿನ್ನ ತಾಯಿ ಏನು? ಒಂದು ಸಿಂಹಿಣಿಯೇ, ಆಕೆ ಸಿಂಹಗಳ ಜೊತೆ ಮಲಗಿ ಪ್ರಾಯದ ಸಿಂಹಗಳ ಮಧ್ಯದಲ್ಲಿ ತನ್ನ ಮರಿಗಳನ್ನು ಸಾಕಿದಳು. |
3. | ತನ್ನ ಮರಿಗಳಲ್ಲಿ ಒಂದನ್ನು ಬೆಳೆಸಿದಳು; ಇದು ಪ್ರಾಯದ ಸಿಂಹವಾಯಿತು, ಇದು ಕೊಳ್ಳೆ ಹೊಡೆಯು ವದನ್ನು ಕಲಿತು ಮನುಷ್ಯರನ್ನು ನುಂಗಿಬಿಟ್ಟಿತು. |
4. | ಜನಾಂಗಗಳವರು ಅದರ ಸುದ್ದಿಯನ್ನು ಕೇಳಿದರು; ಅವರ ಹಳ್ಳದಲ್ಲಿ ಇದನ್ನು ಹಿಡಿದುಕೊಂಡರು, ಸಂಕೋ ಲೆಗಳಿಂದ ಬಂಧಿಸಿ ಐಗುಪ್ತದೇಶಕ್ಕೆ ತೆಗೆದುಕೊಂಡು ಹೋದರು. |
5. | ಆಗ ಅವಳು ಅದನ್ನು ನೋಡಿ ತನ್ನ ನಿರೀಕ್ಷೆ ಕೆಟ್ಟುಹೋಯಿತೆಂದು ಕಾದು ತನ್ನ ಮರಿಗಳಲ್ಲಿ ಮತ್ತೊಂದನ್ನು ತೆಗೆದುಕೊಂಡು ಅದನ್ನು ಪ್ರಾಯದ ಸಿಂಹವಾಗಿ ಮಾಡಿದಳು. |
6. | ಅದು ಸಿಂಹಗಳ ಮಧ್ಯೆ ತಿರುಗಾಡಿ ಪ್ರಾಯದ ಸಿಂಹವಾಗಿ ಕೊಳ್ಳೆ ಹೊಡೆ ಯುವದನ್ನು ಕಲಿತು ಮನುಷ್ಯರನ್ನು ನುಂಗಿಬಿಟ್ಟಿತು. |
7. | ಅವರ ಅರಮನೆಗಳನ್ನು ಹಾಳು ಮಾಡಿತು; ಅವರ ನಗರಗಳನ್ನೂ ನಾಶಮಾಡಿತು. ಅದರ ಗರ್ಜನೆಯ ಶಬ್ದದಿಂದಾಗಿ ದೇಶವೂ ಅದರ ಪರಿಪೂರ್ಣತೆಯೂ ಬೀಡಾಗಿದ್ದನ್ನು ಅದು ತಿಳಿದುಕೊಂಡಿತು. |
8. | ಆಗ ಜನಾಂಗಗಳು ಸುತ್ತಲಿನ ಪ್ರಾಂತ್ಯಗಳೊಳಗಿಂದ ಕೂಡಿ ಬಂದು ಅದಕ್ಕೆ ವಿರೋಧವಾಗಿ ನಿಂತು ಅದರ ಮೇಲೆ ಬಲೆಯನ್ನೊಡ್ಡಿದರು. ಆಗ ಅದು ಅವರ ಹಳ್ಳದಲ್ಲಿ ಸಿಕ್ಕಿ ಬಿದ್ದಿತು. |
9. | ಅದಕ್ಕೆ ಸಂಕೋಲೆಗಳನ್ನು ತೊಡಿಸಿ, ಕಾವಲಿರಿಸಿ, ಬಾಬೆಲಿನ ಅರಸನ ಬಳಿಗೆ ತೆಗೆದುಕೊಂಡು ಹೋದರು. ಅದರ ಶಬ್ದವು ಇನ್ನು ಮೇಲೆ ಇಸ್ರಾ ಯೇಲಿನ ಪರ್ವತಗಳ ಮೇಲೆ ಕೇಳಲ್ಪಡದ ಹಾಗೆ ಅದನ್ನು ದುರ್ಗದಲ್ಲಿರಿಸಿದರು. |
10. | ನಿನ್ನ ತಾಯಿ ನಿನ್ನ ರಕ್ತದಲ್ಲಿ ನೀರಿನ ಬಳಿ ನೆಟ್ಟ ದ್ರಾಕ್ಷೆಯ ಗಿಡದ ಹಾಗೆ ಇದ್ದಾಳೆ; ಅದು ನೀರಾವರಿ ಯಿಂದಲೂ ಫಲವುಳ್ಳದ್ದಾಗಿಯೂ ತುಂಬಾ ಕೊಂಬೆ ಗಳುಳ್ಳದ್ದಾಗಿಯೂ ಇದೆ. |
11. | ಆಳುವವರ ರಾಜದಂಡ ಗಳಿಗೆ ತಕ್ಕ ಬಲವುಳ್ಳ ಬಳ್ಳಿಗಳು ಅದರಲ್ಲಿವೆ; ಅದರ ಉದ್ದವು ಎಲ್ಲಾ ರೆಂಬೆಗಳಿಗಿಂತ ಹೆಚ್ಚಾಗಿವೆ; ಹಾಗೆಯೇ ಅದು ತನ್ನ ಎತ್ತರಕ್ಕೆ ಬಹು ಕೊಂಬೆಗಳ ಮಧ್ಯದಲ್ಲಿ ಉದ್ದವಾಗಿ ಕಾಣಬರುತ್ತಿದೆ. |
12. | ಆದರೆ ಅದು ರೋಷ ದಲ್ಲಿ ಕೀಳಲ್ಪಟ್ಟು ನೆಲಕ್ಕೆ ಹಾಕಲ್ಪಟ್ಟಿತು; ಮೂಡಣ ಗಾಳಿಯು ಅದರ ಫಲವನ್ನು ಒಣಗಿಸಿತು; ಬಲವಾದ ಬಳ್ಳಿಗಳು ಮುರಿಯಲ್ಪಟ್ಟು ಒಣಗಿ ಹೋದವು; ಬೆಂಕಿಯು ಅವುಗಳನ್ನು ಸುಟ್ಟುಹಾಕಿತು. |
13. | ಈಗ ಅದು ಅರಣ್ಯದಲ್ಲಿ ಒಣಗಿ ನೀರಿಲ್ಲದಂಥ ಪ್ರದೇಶದಲ್ಲಿ ನೆಡಲ್ಪಟ್ಟಿದೆ. |
14. | ಅದರ ಕೊಂಬೆಗಳ ಬಳ್ಳಿಗಳೊಳಗಿಂದ ಬೆಂಕಿಯು ಹೊರಟು ಅದರಲ್ಲಿ ಫಲವನ್ನು ತಿಂದು ಬಿಟ್ಟಿದೆ; ಅದರಲ್ಲಿ ಆಳುವದಕ್ಕೆ ರಾಜದಂಡಕ್ಕಾಗಿ ತಕ್ಕದಾದ ಬಲವುಳ್ಳ ಬಳ್ಳಿಯು ಈಗ ಇಲ್ಲ; ಇದು ಪ್ರಲಾಪವಾಗಿದೆ; ಪ್ರಲಾಪಕ್ಕಾಗಿಯೇ ಇದೆ. |
← Ezekiel (19/48) → |