← Ezekiel (16/48) → |
1. | ಕರ್ತನ ವಾಕ್ಯವು ನನ್ನ ಕಡೆಗೆ ಬಂದು ಹೇಳಿದ್ದೇನಂದರೆ-- |
2. | ಮನುಷ್ಯಪುತ್ರನೇ, ಯೆರೂಸಲೇಮಿಗೆ ಅದರ ಅಸಹ್ಯವಾದವುಗಳನ್ನು ತಿಳಿದುಕೊಳ್ಳುವ ಹಾಗೆ ಮಾಡು. |
3. | ದೇವರಾದ ಕರ್ತನು ಯೆರೂಸಲೇಮಿನವರಿಗೆ ಹೀಗೆ ಹೇಳುತ್ತಾನೆ--ನಿನ್ನ ಹುಟ್ಟುವಿಕೆಯೂ ನಿನ್ನ ಹುಟ್ಟಿದ ಸ್ಥಳವೂ ಕಾನಾನ್ ದೇಶದಿಂದಾದದ್ದೇ; ನಿನ್ನ ತಂದೆ ಅಮೋರಿಯನು, ನಿನ್ನ ತಾಯಿ ಹಿತ್ತಿಯಳು |
4. | ನಿನ್ನ ಜನನವನ್ನು ಕುರಿತು ನೀನು ಹುಟ್ಟಿದ ದಿನದಲ್ಲಿ ನಿನ್ನ ಹೊಕ್ಕಳು ಕತ್ತರಿಸ ಲ್ಪಡಲಿಲ್ಲ; ಶುದ್ಧವಾಗುವ ಹಾಗೆ ನೀರಿನಿಂದ ತೊಳೆ ಯಲ್ಪಡಲಿಲ್ಲ, ನಿನಗೆ ಉಪ್ಪು ಹಾಕಲಿಲ್ಲ, ನಿನ್ನನ್ನು ಬಟ್ಟೆಯಿಂದ ಸುತ್ತಲಿಲ್ಲ. |
5. | ನಿನ್ನನ್ನು ಕರುಣಿಸಿ ಕಟಾಕ್ಷಿಸಿ ಯಾರೂ ನಿನಗೆ ಇಂಥ ಒಂದು ಸಹಾಯವನ್ನು ಮಾಡ ಲಿಲ್ಲ, ಆದರೆ ನೀನು ಹುಟ್ಟಿದ ದಿನದಲ್ಲಿ ಅಸಹ್ಯಪಟ್ಟು ನಿನ್ನನ್ನು ಹೊಲದಲ್ಲಿ ಬಿಸಾಡಿದರು. |
6. | ನಾನು ನಿನ್ನ ಬಳಿಯಲ್ಲಿ ಹಾದು ಹೋಗುವಾಗ ನೀನು ನಿನ್ನ ಸ್ವಂತ ರಕ್ತದಲ್ಲಿ ಬಿದ್ದು ಹೊರಳಾಡುತ್ತಿದ್ದ ನಿನ್ನನ್ನು ನಾನು ನಿನ್ನ ರಕ್ತದಲ್ಲಿ ನೋಡಿದಾಗ ಬದುಕು ಎಂದೆನು; ಹೌದು, ನೀನು ನಿನ್ನ ರಕ್ತದಲ್ಲಿ ಬಿದ್ದಿರುವಾಗ ನಾನು ಬದುಕು ಅಂದೆನು. |
7. | ಭೂಮಿಯಲ್ಲಿಯ ಮೊಳಿಕೆಯೋ ಎಂಬಂತೆ ನಾನು ನಿನ್ನನ್ನು ಬೆಳೆಸಲು (ಹೆಚ್ಚಿಸಲು) ನೀನು ಬಲಿತು ಪ್ರಾಯವು ತುಂಬಿ ಅತಿ ಸೌಂದರ್ಯವಂತೆಯಾದೆ; ನಿನ್ನ ಸ್ತನಗಳು ರೂಪಗೊಂಡವು; ನಿನ್ನ ಕೂದಲು ಬೆಳೆಯಿತು; ಆದರೆ ಮೊದಲು ನೀನು ಬರೀ ಬೆತ್ತಲೆ ಯಾಗಿದ್ದೆ. |
8. | ಈಗ ನಾನು ನಿನ್ನ ಬಳಿ ಹಾದು ಹೋಗು ವಾಗ ನಿನ್ನನ್ನು ನೋಡಲು ಇಗೋ, ನಿನ್ನ ಕಾಲವು ಪ್ರೇಮಿಸುವ ಕಾಲವಾಗಿತ್ತು; ಆಗ ನಾನು ನನ್ನ ಸೆರಗನ್ನು ನಿನ್ನ ಮೇಲೆ ಹೊದಿಸಿ, ನಿನ್ನ ಬೆತ್ತಲೆಯನ್ನು ಮುಚ್ಚಿದೆನು. ಹೌದು, ನಾನು ನಿನಗೆ ಆಣೆಯಿಟ್ಟು ಒಡಂಬಡಿಕೆ ಮಾಡಿಕೊಂಡದ್ದರಿಂದ ನೀನು ನನ್ನವಳಾದೆ ಎಂದು ದೇವರಾದ ಕರ್ತನು ಹೇಳುತ್ತಾನೆ. |
9. | ಆಮೇಲೆ ನಿನ್ನನ್ನು ನೀರಿನಿಂದ ತೊಳೆದೆನು; ಹೌದು, ನಿನ್ನ ರಕ್ತವನ್ನು ಶುದ್ಧವಾಗಿ ನಿನ್ನಿಂದ ತೊಳೆದೆನು; ನಿನಗೆ ಎಣ್ಣೆಯಿಂದ ಅಭಿಷೇಕ ಮಾಡಿದೆನು. |
10. | ಇದಲ್ಲದೆ ನಾನು ಕಸೂ ತಿಯ ಬಟ್ಟೆಯನ್ನು ನಿನಗೆ ತೊಡಿಸಿ, ಕಡಲ ಪ್ರಾಣಿಯ ಜೋಡುಗಳನ್ನು ಕೊಟ್ಟೆನು, ನಯವಾದ ನಾರುಮಡಿ ಯನ್ನು ನಿನಗೆ ಉಡಿಸಿದೆನು, ರೇಷ್ಮೆಯ ಹೊದಿಕೆಯನ್ನು ನಿನಗೆ ಹೊದಿಸಿದೆನು. |
11. | ನಾನು ಆಭರಣಗಳಿಂದಲೂ ನಿನ್ನನ್ನು ಅಲಂಕರಿಸಿದೆನು; ನಾನು ನಿನ್ನ ಕೈಗಳಿಗೆ ಕಡಗ ಗಳನ್ನು, ನಿನ್ನ ಕೊರಳಿಗೆ ಸರವನ್ನು ಹಾಕಿದೆನು. |
12. | ನಿನ್ನ ಹಣೆಯ ಮೇಲೆ ರತ್ನಾಭರಣವನ್ನೂ ನಿನ್ನ ಕಿವಿಗಳಲ್ಲಿ ವಾಲೆಗಳನ್ನೂ ನಿನ್ನ ತಲೆಯ ಮೇಲೆ ಶೃಂಗಾರ ಕಿರೀಟವನ್ನೂ ಇಟ್ಟೆನು. |
13. | ನಿನ್ನ ಒಡವೆಗಳು ಬೆಳ್ಳಿ ಬಂಗಾರಗಳು, ನಿನ್ನ ಉಡುಪು ನಯವಾದ ನಾರುಮಡಿ, ರೇಷ್ಮೆಯ ಹೊದಿಕೆ, ಕಸೂತಿಯ ಬಟ್ಟೆ; ನಯವಾದ ಹಿಟ್ಟನ್ನೂ ಜೇನನ್ನೂ ಎಣ್ಣೆಯನ್ನೂ ತಿನ್ನುತ್ತಿದ್ದೆ, ನಿನ್ನ ಲಾವಣ್ಯವು ಅತಿ ಮನೋಹರವಾಗಿ ವೃದ್ಧಿಗೊಂಡು ನೀನು ರಾಣಿಯಾದೆ. |
14. | ಇದಲ್ಲದೆ, ನಿನ್ನ ಸೌಂದ ರ್ಯದಿಂದ ನಿನ್ನ ಕೀರ್ತಿಯು ಅನ್ಯಜನಾಂಗಗಳಲ್ಲಿ ಹಬ್ಬಿತು; ಯಾಕಂದರೆ ನಾನು ನಿನ್ನ ಮೇಲೆ ಇಟ್ಟ ಸಂಪೂರ್ಣ ವೈಭವದಿಂದಲೇ ಎಂದು ದೇವರಾದ ಕರ್ತನು ಹೇಳುತ್ತಾನೆ. |
15. | ಆದರೆ ನೀನು ನಿನ್ನ ಸೌಂದರ್ಯದಲ್ಲಿ ಭರವಸ ವಿಟ್ಟು ನಿನ್ನ ಕೀರ್ತಿಯ ನಿಮಿತ್ತವಾಗಿ ಸೂಳೆತನ ಮಾಡಿದೆ; ಹಾದುಹೋಗುವ ಪ್ರತಿಯೊಬ್ಬನ ಸಂಗಡ ಮಿತಿವಿಾರಿ ಹಾದರತನ ಮಾಡಿದೆ; ಒಬ್ಬೊಬ್ಬನಿಗೂ ಒಳಗಾದೆ. |
16. | ನಿನ್ನ ವಸ್ತ್ರಗಳನ್ನು ತೆಗೆದುಕೊಂಡು ಚಿತ್ರ ವಿಚಿತ್ರ ಮಾಡಿ ಅಲಂಕರಿಸಿಕೊಂಡು ಪೂಜಾಸ್ಥಳದಲ್ಲಿ ವ್ಯಭಿಚಾರ ಮಾಡಿದೆ, ಇದು ನಡೆಯತಕ್ಕದ್ದಲ್ಲ ಮತ್ತು ನಡೆಯಬಾರದಂಥ ಕೆಲಸವಾಗಿದೆ. |
17. | ಇದಲ್ಲದೆ ನಾನು ನಿನಗೆ ಬೆಳ್ಳಿ ಬಂಗಾರದಿಂದ ಮಾಡಿಸಿಕೊಟ್ಟಿದ್ದ ನಿನ್ನ ಅಂದವಾದ ಆಭರಣಗಳನ್ನು ತೆಗೆದು ಅವುಗಳಿಂದ ಪುರುಷ ರೂಪಗಳನ್ನು ಮಾಡಿಕೊಂಡು ಅದರ ಸಂಗಡ ವ್ಯಭಿಚಾರ ಮಾಡಿದಿ. |
18. | ನಿನ್ನ ಕಸೂತಿಯ ಬಟ್ಟೆಗಳನ್ನು ತೆಗೆದು ಅವರಿಗೆ ಹೊದಿಸಿ ನನ್ನ ಎಣ್ಣೆಯನ್ನೂ ಧೂಪ ವನ್ನೂ ಅವರ ಮುಂದೆ ಇಟ್ಟೆ. |
19. | ನಾನು ನಿನಗೆ ನನ್ನ ಆಹಾರವನ್ನೂ ನಿನಗೆ ನಯವಾದ ಹಿಟ್ಟನ್ನೂ ಎಣ್ಣೆ ಮತ್ತು ಜೇನುಗಳನ್ನೂ ಸುವಾಸನೆಗಾಗಿ ಕೊಟ್ಟೆ. ಆದರೆ ನೀನು ಅವುಗಳನ್ನು ಅವರ ಮುಂದೆ ಇಟ್ಟೆ ಎಂದು ದೇವರಾದ ಕರ್ತನು ಹೇಳುತ್ತಾನೆ. |
20. | ಇದಾದ ಮೇಲೆ ನನಗೆ ಹುಟ್ಟಿದ್ದ ನನ್ನ ಕುಮಾರರನ್ನೂ ಕುಮಾರ್ತೆ ಯರನ್ನೂ ಅವರ ಆಹಾರಕ್ಕಾಗಿ ಅರ್ಪಿಸಿದಿ. ಈ ನಿನ್ನ ವ್ಯಭಿಚಾರ ಸಾಮಾನ್ಯವಾದದ್ದಲ್ಲ, |
21. | ನೀನು ನನ್ನ ಮಕ್ಕಳನ್ನು ಕೊಂದು ಅವರಿಗೆ ಬೆಂಕಿಯನ್ನು ದಾಟುವ ಹಾಗೆ ಒಪ್ಪಿಸಿದಿಯಲ್ಲಾ; |
22. | ನಿನ್ನ ಎಲ್ಲಾ ಅಸಹ್ಯಗಳ ಲ್ಲಿಯೂ ನಿನ್ನ ವ್ಯಭಿಚಾರಗಳಲ್ಲಿಯೂ ನಿನ್ನ ಎಳೆಯ ಪ್ರಾಯದ ದಿವಸಗಳನ್ನು ನೀನು ಬರೀ ಬೆತ್ತಲೆಯಾಗಿ ನಿನ್ನ ರಕ್ತದಲ್ಲಿ ಹೊರಳಾಡುತ್ತಿದ್ದದ್ದನ್ನು ನೀನು ಜ್ಞಾಪಕ ಮಾಡಲಿಲ್ಲ. |
23. | ಇದಲ್ಲದೆ ಈ ನಿನ್ನ ಎಲ್ಲಾ ಕೆಟ್ಟತನಗಳ ತರುವಾಯ ಆಗಿದ್ದೇನಂದರೆ (ಅಯ್ಯೋ! ಅಯ್ಯೋ ಎಂದು ನಿನಗೆ ದೇವರಾದ ಕರ್ತನು ಹೇಳುತ್ತಾನೆ;) |
24. | ನೀನು ಪ್ರತಿಯೊಂದು ಬೀದಿಯಲ್ಲಿಯೂ ಉನ್ನತ ಸ್ಥಳಗಳನ್ನು ಕಟ್ಟಿ ನಿನಗೆ ಉತ್ತಮವಾದ ಸ್ಥಳಗ ಳನ್ನು ಮಾಡಿಕೊಂಡಿರುವಿ. |
25. | ಪ್ರತಿಯೊಂದು ಕಡೆ ಮೂಲೆ ಮೂಲೆಗೂ ಉನ್ನತ ಸ್ಥಳವನ್ನು ಕಟ್ಟಿ ನಿನ್ನ ಸೌಂದರ್ಯವನ್ನು ದುರುಪಯೋಗಪಡಿಸಿಕೊಂಡು ಹಾದು ಹೋಗುವ ಪ್ರತಿಯೊಬ್ಬರಿಗೂ ನಿನ್ನ ಕಾಲು ಗಳನ್ನು ಅಗಲಿಸಿದಿ; ನಿನ್ನ ವ್ಯಭಿಚಾರವನ್ನು ವೃದ್ಧಿಸಿದಿ. |
26. | ಇದಲ್ಲದೆ ಮಾಂಸದಲ್ಲಿ (ಶರೀರಭಾವದಲ್ಲಿ) ಮದಿ ಸಿದ ನಿನ್ನ ನೆರೆಯವರಾದ ಐಗುಪ್ತ್ಯರ ಸಂಗಡ ವ್ಯಭಿ ಚಾರ ಮಾಡಿದಿ; ಮತ್ತು ನನ್ನನ್ನು ರೇಗಿಸುವ ಹಾಗೆ ವ್ಯಭಿಚಾರವನ್ನು ಹೆಚ್ಚಿಸಿದಿ. |
27. | ಆದದರಿಂದ ಇಗೋ, ನಾನು ನನ್ನ ಕೈಯನ್ನು ನಿನ್ನ ಮೇಲೆ ಚಾಚಿ ನಿನ್ನ ಸಾಮಾನ್ಯವಾದ ಆಹಾರವನ್ನು ಕಡಿಮೆಮಾಡಿದೆ; ನಿನ್ನ ದುರ್ಮಾರ್ಗಕ್ಕೆ ನಾಚಿಕೆಪಟ್ಟು ನಿನ್ನ ಕೆಟ್ಟ ನಡತೆಗೆ ಅಸಹ್ಯಪಡುವವರಾದ ಫಿಲಿಷ್ಟಿಯರ ಕುಮಾರ್ತೆಯರ ಚಿತ್ತಕ್ಕೆ ನಿನ್ನನ್ನು ಒಪ್ಪಿಸಿಬಿಟ್ಟೆ. |
28. | ಇದಲ್ಲದೆ ಅಶ್ಶೂರ್ಯ ರೊಂದಿಗೂ ತೃಪ್ತಿಯಾಗಲಾರದಷ್ಟು ವ್ಯಭಿಚಾರಮಾಡಿ ದರೂ ನಿನಗೆ ತೃಪ್ತಿಯಾಗಲಿಲ್ಲ; ಹೌದು, ಅವರ ಸಂಗಡ ವ್ಯಭಿಚಾರ ಮಾಡಿದ್ದೀ; ಆದರೂ ತೃಪ್ತಿಯಾಗ ಲಿಲ್ಲ. |
29. | ಇದಲ್ಲದೆ ಈ ನಿನ್ನ ವ್ಯಭಿಚಾರವನ್ನು ಕಾನಾನ್ ದೇಶದಿಂದ ಕಸ್ದೀಯ ದೇಶದವರೆಗೂ ಹೆಚ್ಚು ಮಾಡಿದಿ. ಆದರೂ ನೀನು ಇದರಲ್ಲಿ ತೃಪ್ತಿ ಹೊಂದಲಿಲ್ಲ. |
30. | ನೀನು ಈ ಸಂಗತಿ ಗಳನ್ನೆಲ್ಲಾ ಸ್ವಯಿಚ್ಛೆಯಾಗಿ ನಡೆಸುವ ಜಾರಸ್ತ್ರೀಯ ಕೆಲಸವನ್ನೇ ಮಾಡಿದಿಯಲ್ಲಾ! ನಿನ್ನ ಹೃದಯವು ಎಷ್ಟೊಂದು ಬಲಹೀನವಾಗಿದೆ ಎಂದು ದೇವರಾದ ಕರ್ತನು ಹೇಳುತ್ತಾನೆ. |
31. | ಪ್ರತಿಯೊಂದು ಬೀದಿಯ ಕೊನೆಯಲ್ಲಿಯೂ ಗದ್ದುಗೆಯನ್ನು ಕಟ್ಟಿ ಪ್ರತಿಯೊಂದು ಹಾದಿಯಲ್ಲಿಯೂ ಉನ್ನತಸ್ಥಾನವನ್ನು ಮಾಡಿಕೊಂಡು ಕೂಲಿಯನ್ನು ಉದಾಸೀನ ಮಾಡುವ ವ್ಯಭಿಚಾರಿಣಿಯು ನೀನಲ್ಲ; |
32. | ಆದರೆ ಗಂಡನಿಗೆ ಬದ ಲಾಗಿ ಅನ್ಯರನ್ನು ಅಂಗೀಕರಿಸುವ ವ್ಯಭಿಚಾರಿ ಹೆಂಡತಿ ಯಾಗಿರುವಿ! |
33. | ಅವರು ವ್ಯಭಿಚಾರಿಗಳಿಗೆಲ್ಲ ಬಹು ಮಾನ ಕೊಡುತ್ತಾರೆ; ಆದರೆ ನೀನು ನಿನ್ನ ಪ್ರಿಯರಿಗೆಲ್ಲ ನಿನ್ನ ಬಹುಮಾನಗಳನ್ನು ಕೊಟ್ಟು ಅವರನ್ನು ಬಾಡಿಗೆಗೆ ಪಡೆದು ನಿನ್ನ ವ್ಯಭಿಚಾರಕ್ಕಾಗಿ ನಿನ್ನ ಬಳಿಗೆ ಬರುವ ಹಾಗೆ ಅವರಿಗೆ ಬಹುಮಾನ ಕೊಡುತ್ತೀ. |
34. | ಹೀಗಿರುವ ದರಿಂದ ಹೆಂಗಸರಿಗೆ ವಿರೋಧವಾದದ್ದು ನಿನ್ನ ವ್ಯಭಿ ಚಾರದಲ್ಲಿ ನಿನಗಾಯಿತು; ವ್ಯಭಿಚಾರಮಾಡುವ ಹಾಗೆ ನಿನ್ನನ್ನು ಯಾರೂ ಹಿಂಬಾಲಿಸುವದಿಲ್ಲ; ನೀನು ಬಹು ಮಾನ ಕೊಡುತ್ತೀಯೇ ಹೊರತು ನಿನಗೆ ಯಾರೂ ಬಹುಮಾನ ಕೊಡುವದಿಲ್ಲ. ಆದದರಿಂದ ಇದು ವಿರೋಧವಾದದ್ದಾಗಿದೆ. |
35. | ಆದಕಾರಣ ಓ ವ್ಯಭಿಚಾರಿಣಿಯೇ, ನೀನು ಕರ್ತನ ವಾಕ್ಯವನ್ನು ಕೇಳು. |
36. | ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನಿನ್ನ ಅಸಹ್ಯವು ಸುರಿಯಲ್ಪಟ್ಟ ಕಾರಣ ದಿಂದಲೂ ನಿನ್ನ ಬೆತ್ತಲೆತನವು ಪ್ರಕಟವಾಗುವಂತೆ ನಿನ್ನ ಪ್ರಿಯರ ಸಂಗಡ ಮಾಡಿದ ವ್ಯಭಿಚಾರದಿಂದಲೂ ನಿನ್ನ ಎಲ್ಲಾ ಅಸಹ್ಯವಾದ ವಿಗ್ರಹಗಳಿಂದಲೂ ನೀನು ಅವರಿಗೆ ಕೊಟ್ಟ ನಿನ್ನ ಮಕ್ಕಳ ರಕ್ತದಿಂದಲೂ |
37. | ಇಗೋ, ನೀನು ಆನಂದ ಪಟ್ಟವರೊಂದಿಗೆ ಪ್ರೀತಿ ಮಾಡಿದವರೆ ಲ್ಲರನ್ನೂ ಹಗೆಮಾಡಿದವರೆಲ್ಲರನ್ನೂ ಸಹ ಕೂಡಿಸು ವೆನು; ನಾನು ಅವರನ್ನು ನಿನಗೆ ವಿರುದ್ಧವಾಗಿ ಸುತ್ತಲೂ ಕೂಡಿಸಿ ಅವರಿಗೆ ನಿನ್ನ ಬೆತ್ತಲೆಯನ್ನು ಪ್ರಕಟಪಡಿಸು ವೆನು. ಆಗ ಅವರು ನಿನ್ನ ಬೆತ್ತಲೆಯನ್ನು ನೋಡುವರು. |
38. | ದಾಂಪತ್ಯವನ್ನು ಮುರಿದು ರಕ್ತ ಸುರಿಸುವಂಥ ಹೆಂಗಸರಿಗೆ ವಿಧಿಸುವಂಥ ತಕ್ಕ ದಂಡನೆಗಳನ್ನು ನಿನಗೂ ವಿಧಿಸಿ, ಕೋಪೋದ್ರೇಕದಿಂದಲೂ ರೋಷಾವೇಶ ದಿಂದಲೂ ನಿನಗೆ ರಕ್ತವನ್ನು ಸುರಿಸುವೆನು. |
39. | ಇದಲ್ಲದೆ ನಿನ್ನನ್ನು ಅವರ ಕೈಗಳಲ್ಲಿ ಒಪ್ಪಿಸುವೆನು. ಅವರು ನಿನ್ನ ಎತ್ತರ ಸ್ಥಳಗಳನ್ನೆಲ್ಲಾ ಕೆಡವಿಹಾಕಿ ನಿನ್ನ ಉನ್ನತ ಸ್ಥಾನ ಗಳನ್ನು ಒಡೆದು ಬಿಡುವರು; ಅವರು ನಿನ್ನ ವಸ್ತ್ರಗಳನ್ನು ತೆಗೆದುಹಾಕಿ ನಿನ್ನ ಸೌಂದರ್ಯವುಳ್ಳ ಆಭರಣಗಳನ್ನು ಕಸಿದುಕೊಂಡು ನಿನ್ನನ್ನು ಬರೀ ಬೆತ್ತಲೆಯನ್ನಾಗಿ ಮಾಡಿ ಬಿಟ್ಟು ಹೋಗುವರು. |
40. | ಅವರು ನಿನಗೆ ವಿರುದ್ಧವಾಗಿ ಒಂದು ಕೂಟವನ್ನು ಕರಕೊಂಡು ಬಂದು ಕಲ್ಲುಗಳನ್ನು ನಿನ್ನ ಮೇಲೆ ಎಸೆದು, ತಮ್ಮ ಕತ್ತಿಗಳಿಂದ ನಿನ್ನನ್ನು ತಿವಿಯುವರು. |
41. | ಅವರು ನಿನ್ನ ಮನೆಗಳನ್ನು ಸುಟ್ಟು ಬಹಳ ಸ್ತ್ರೀಯರ ಕಣ್ಣುಗಳ ಮುಂದೆ ನಿನಗೆ ನ್ಯಾಯ ತೀರಿಸುವರು; ನೀನು ವ್ಯಭಿಚಾರ ಮಾಡುವದನ್ನು ನಾನು ನಿಲ್ಲಿಸುವೆನು; ಆಗ ನೀನು ಕೂಲಿ ಸಹ ಕೊಡುವದನ್ನು ನಿಲ್ಲಿಸುವೆನು; |
42. | ಈ ರೀತಿ ನನ್ನ ಸಿಟ್ಟನ್ನು ನಿನ್ನಲ್ಲಿ ವಿಶ್ರಾಂತಿ ಪಡಿಸುತ್ತೇನೆ, ನನ್ನ ರೋಷವನ್ನು ನಿನ್ನ ಕಡೆಯಿಂದ ತೊಲಗಿಸುತ್ತೇನೆ; ಶಾಂತನಾಗಿ ನಿನ್ನ ಮೇಲೆ ಕೋಪ ಗೊಳ್ಳುವದಿಲ್ಲ. |
43. | ನೀನು ನಿನ್ನ ಯೌವನ ದಿವಸಗಳನ್ನು ಜ್ಞಾಪಕಮಾಡಿಕೊಳ್ಳದೆ ಈ ಸಂಗತಿಗಳಿಂದ ನೀನು ನನಗೆ ಬೇಸರಪಡಿಸಿದ್ದರಿಂದ ಇಗೋ, ನಾನು ಸಹ ನಿನ್ನ ದುರ್ಮಾರ್ಗದ ಫಲವನ್ನು ನಿನ್ನ ತಲೆಗೆ ಕಟ್ಟುವೆನು ಎಂದು ದೇವರಾದ ಕರ್ತನು ಹೇಳುತ್ತಾನೆ. ನಿನ್ನ ಎಲ್ಲಾ ಅಸಹ್ಯವಾದವುಗಳ ಮೇಲೆ ಈ ಅಪವಿತ್ರತೆಯನ್ನು ನೀನು ಮಾಡಬಾರದು. |
44. | ಇಗೋ, ಗಾದೆ ಹೇಳುವವರೆಲ್ಲರೂ--ತಾಯಿಯಂತೆ ಮಗಳು ಎಂಬ ಗಾದೆಯನ್ನು ನಿನಗೆ ವಿರುದ್ಧವಾಗಿ ಹೇಳುವರು. |
45. | ಗಂಡನಿಗೂ ಮಕ್ಕಳಿಗೂ ಬೇಸರ ಪಡುವವಳಾದ ನಿನ್ನ ತಾಯಿಗೆ ನೀನು ತಕ್ಕ ಮಗಳು; ಗಂಡನಿಗೂ ಮಕ್ಕಳಿಗೂ ಬೇಸರ ಪಡುವವರಾದ ನಿನ್ನ ಅಕ್ಕಂದಿರಿಗೆ ನೀನು ತಕ್ಕ ತಂಗಿ; ನಿನ್ನ ತಾಯಿ ಹಿತ್ತಿಯಳು, ನಿನ್ನ ತಂದೆ ಅಮೋರಿಯನು. |
46. | ನಿನ್ನ ಎಡಗಡೆಯಲ್ಲಿ ಕುಮಾರ್ತೆಯರೊಂದಿಗೆ ವಾಸಿಸುವ ಸಮಾರ್ಯವೇ ನಿನ್ನ ಅಕ್ಕ; ಬಲಗಡೆಯಲ್ಲಿ ಕುಮಾರ್ತೆಯರೊಂದಿಗೆ ವಾಸಿಸುವ ಸೊದೋಮ್ ನಿನ್ನ ತಂಗಿ. |
47. | ಆದರೂ ನೀನು ಅವರ ಮಾರ್ಗಗಳಲ್ಲಿ ನಡೆಯಲಿಲ್ಲ, ಅವರ ಅಸಹ್ಯಗಳ ಹಾಗೆ ಮಾಡಲಿಲ್ಲ, ಅವರ ದುರ್ನಡತೆಯು ಅತ್ಯಲ್ಪವೆಂದು ಸದಾ ಅವರಿಗಿಂತ ಬಹಳ ಕೆಟ್ಟವಳಾಗಿ ನಡೆದುಕೊಂಡೆ. |
48. | ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನನ್ನ ಜೀವದಾಣೆ, ನಿನ್ನ ತಂಗಿಯಾದ ಸೊದೋಮು, ತಾನಾದರೂ ತನ್ನ ಕುಮಾರ್ತೆಯ ರಾದರೂ ನೀನು ನಿನ್ನ ಕುಮಾರ್ತೆಯರು ಮಾಡಿದ ಹಾಗೆ ಮಾಡಲಿಲ್ಲ. |
49. | ಇಗೋ, ಸೊದೋಮ್ ಎಂಬ ನಿನ್ನ ತಂಗಿಯ ಅಕ್ರಮವನ್ನೂ ಗರ್ವವನ್ನೂ ನೋಡು; ರೊಟ್ಟಿಯ ತೃಪ್ತಿಯು ಅವಳಿಗೂ ಅವಳ ಕುಮಾರ್ತೆ ಯರಿಗೂ ನಿರ್ಭಯವಾದ ಸೌಖ್ಯವಾಗಿದೆ; ಆಕೆಯು ದೀನದರಿದ್ರರಿಗೆ ಬೆಂಬಲವಾಗಿರಲಿಲ್ಲ. |
50. | ಇದಲ್ಲದೆ ಅವರು ಅಹಂಕಾರಿಗಳಾಗಿದ್ದು ನನ್ನ ಮುಂದೆ ಅಸಹ್ಯ ವಾದವುಗಳನ್ನು ನಡಿಸಿದರು. ಆದದರಿಂದ ನಾನು ಅದನ್ನು ನೋಡಿ ಅವರನ್ನು ನಿರ್ಮೂಲ ಮಾಡಿದೆನು. |
51. | ಸಮಾರ್ಯವೆಂಬಾಕೆಯು ಸಹ ನೀನು ಮಾಡಿದ ಪಾಪಗಳಲ್ಲಿ ಅರ್ಧವನ್ನೂ ಮಾಡಲಿಲ್ಲ. ನೀನು ನಿನ್ನ ಅಕ್ಕತಂಗಿಯರಿಗಿಂತಲೂ ಅತ್ಯಧಿಕವಾದ ಅಸಹ್ಯವಾದ ಕಾರ್ಯಗಳನ್ನು ಮಾಡಿದಿ, ನೀನು ಮಾಡಿದ ಲೆಕ್ಕವಿಲ್ಲ ದಷ್ಟು ದುರಾಚಾರಗಳಿಂದ ಅವರನ್ನು ನೀತಿವಂತರೆಂದು ತೋರ್ಪಡಿಸಿದೆ. |
52. | ನಿನ್ನ ದೋಷಗಳೇ ನಿನ್ನ ಅಕ್ಕ ತಂಗಿಯರ ಪಕ್ಷವಾಗಿ ನಿಂತಿದ್ದರಿಂದ ನೀನು ನಾಚಿಕೆ ಪಡು; ನೀನು ಅವರಿಗಿಂತ ಅಸಹ್ಯವಾಗಿ ಮಾಡಿದ ನಿನ್ನ ಪಾಪಗಳಿಗೆ ತಕ್ಕ ನಿಂದೆಯನ್ನು ಹೊತ್ತುಕೋ; ಅವರು ನಿನಗಿಂತ ನೀತಿವಂತರು; ಹೌದು, ನೀನು ನಿನ್ನ ಸಹೋದರಿಗಳನ್ನು ನೀತಿವಂತರೆಂದು ತೋರ್ಪಡಿಸಿ ದ್ದರಿಂದ ನೀನೇ ನಾಚಿಕೆಪಟ್ಟು ನಿನ್ನ ನಿಂದೆಯನ್ನು ಹೊತ್ತುಕೋ. |
53. | ನಾನು ಅವರ ಸೆರೆಯನ್ನೂ ಕುಮಾರ್ತೆಯರ ಸಹಿತವಾದ ಸೊದೋಮಿನ ಸೆರೆಯನ್ನೂ ಕುಮಾರ್ತೆ ಯರ ಸಹಿತವಾದ ಸಮಾರ್ಯದ ಸೆರೆಯನ್ನೂ ತಪ್ಪಿಸುವಾಗ ಅವರೊಂದಿಗೆ ನಿನ್ನ ಸೆರೆಯವರ ಸೆರೆಯನ್ನು ತಪ್ಪಿಸುವೆನು. |
54. | ನೀನು ನಿನ್ನ ನಿಂದೆಯನ್ನು ಹೊತ್ತು ಕೊಂಡು ಅವರನ್ನು ಆದರಿಸುವಾಗ ನೀನು ಲಜ್ಜೆಪಡುವಿ, ನಾಚಿಕೆಗೊಳ್ಳುವಿ. |
55. | ಆ ಸಮಾರ್ಯ, ಸೊದೋಮ್ ಎಂಬ ನಿನ್ನ ಅಕ್ಕತಂಗಿಯರೂ ಕುಮಾರ್ತೆಯರೂ ತಮ್ಮ ಪೂರ್ವಸ್ಥಿತಿಗೆ ತಿರುಗುವರು. ನೀನೂ ಕುಮಾರ್ತೆ ಯರೂ ಪೂರ್ವಸ್ಥಿತಿಗೆ ತಿರುಗಿಕೊಳ್ಳುವಿರಿ. |
56. | ನಿನ್ನ ಸಹೋದರಿಯಾದ ಸೊದೋಮ್ ನಿನ್ನ ಗರ್ವದ ದಿವಸಗಳಲ್ಲಿ ನಿನ್ನ ಬಾಯಿಂದ ಉಚ್ಚರಿಸಲ್ಪಡಲಿ. |
57. | ಅರಾಮಿನ ಕುಮಾರ್ತೆಯರಿಂದಲೂ ಮತ್ತು ಅದರ ಸುತ್ತಲಿರುವಂತೆ ಎಲ್ಲವುಗಳಿಂದಲೂ, ನಿನ್ನನ್ನು ಉದಾ ಸೀನ ಮಾಡಿದಂತ ಎಲ್ಲಾ ಫಿಲಿಷ್ಟಿಯರ ಕುಮಾರ್ತೆಯ ರಿಂದಲೂ ನಿನಗೆ ನಿಂದೆಯು ಬಂದ ಕಾಲದ ಹಾಗೆ ನಿನ್ನ ಕೆಟ್ಟತನವು ಪ್ರಕಟವಾಗುವದಕ್ಕೆ ಪೂರ್ವದಲ್ಲಿಯೇ |
58. | ನೀನು ನಿನ್ನ ದುಷ್ಕರ್ಮಗಳನ್ನೂ ಅಸಹ್ಯಗಳನ್ನೂ ಹೊತ್ತುಕೊಂಡಿರುವಿ ಎಂದು ಕರ್ತನು ಹೇಳುತ್ತಾನೆ. |
59. | ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನೀನು ಮಾಡಿದ್ದಕ್ಕೆ ತಕ್ಕ ಹಾಗೆ ನಾನು ನಿನಗೆ ಮಾಡುತ್ತೇನೆ; ನೀನು ಒಡಂಬಡಿಕೆಯನ್ನು ವಿಾರಿ ನನ್ನ ಆಣೆಯನ್ನು ತಿರಸ್ಕರಿಸಿರುವಿ. |
60. | ಆದಾಗ್ಯೂ ನಿನ್ನ ಯೌವನದ ದಿನಗಳಲ್ಲಿ ನಾನು ನಿನ್ನ ಸಂಗಡ ಮಾಡಿದ ನನ್ನ ಒಡಂಬಡಿಕೆಯನ್ನು ಜ್ಞಾಪಕ ಮಾಡಿಕೊಂಡು ನಿನಗಾಗಿ ನಿತ್ಯವಾದ ಒಡಂಬಡಿಕೆ ಯೊಂದನ್ನು ಸ್ಥಾಪಿಸುವೆನು. |
61. | ಆಗ ನೀನು ನಿನ್ನ ಮಾರ್ಗಗಳನ್ನು ಜ್ಞಾಪಕಮಾಡಿಕೊಂಡು ನಿನ್ನ ಸಹೋ ದರಿಗಳಾದ ನಿನ್ನ ಅಕ್ಕತಂಗಿಯರನ್ನು ಸೇರುವಾಗ ನಾಚಿಕೆಪಡುವಿ. ಅವರನ್ನು ನಿನ್ನ ಕುಮಾರ್ತೆಗಳಂತೆ ಕೊಡುವೆನು. ಆದರೆ ಇದು ನಿನ್ನ ಒಡಂಬಡಿಕೆ ಯಿಂದಲ್ಲ. |
62. | ನಾನು ಈ ಒಡಂಬಡಿಕೆಯನ್ನು ನಿಮ್ಮೊಂದಿಗೆ ಸ್ಥಾಪಿಸುವೆನು; ಆದದರಿಂದ ನಾನೇ ಕರ್ತ ನೆಂದು ನಿಮಗೆ ಗೊತ್ತಾಗುವದು. |
63. | ನಾನು ನಿನ್ನ ದುಷ್ಕೃತ್ಯಗಳನ್ನೆಲ್ಲಾ ಕ್ಷಮಿಸಿಬಿಟ್ಟ ಮೇಲೆ ನೀನು ಅವು ಗಳನ್ನು ಜ್ಞಾಪಕಕ್ಕೆ ತಂದುಕೊಂಡು ನಿನ್ನ ಅವಮಾನದ ನಿಮಿತ್ತ ಇನ್ನು ನೀನು ಬಾಯಿ ತೆರೆಯಲೇಬಾರದೆಂದು ನಿನ್ನ ದೇವರಾದ ಕರ್ತನು ಹೇಳುತ್ತಾನೆ. |
← Ezekiel (16/48) → |