← Ezekiel (12/48) → |
1. | ಕರ್ತನ ವಾಕ್ಯವು ಮತ್ತೆ ಬಂದು ನನಗೆ ಹೇಳಿದ್ದೇನಂದರೆ-- |
2. | ಮನುಷ್ಯಪುತ್ರನೇ, ನೀನು ತಿರುಗಿ ಬೀಳುವ ಮನೆತನದವರ ಮಧ್ಯದಲ್ಲಿ ವಾಸಿಸುತ್ತಿರುವಿ, ಅವರಿಗೆ ನೋಡುವದಕ್ಕೆ ಕಣ್ಣು ಗಳುಂಟು ನೋಡುವದಿಲ್ಲ, ಕೇಳುವದಕ್ಕೆ ಕಿವಿಗಳುಂಟು ಕೇಳುವದಿಲ್ಲ; ಅವರು ತಿರುಗಿ ಬೀಳುವ ಮನೆತನ ದವರು. |
3. | ಮನುಷ್ಯ ಪುತ್ರನೇ, ನೀನು ತೆಗೆದುಹಾಕು ವದಕ್ಕೆ ಸಾಮಾನುಗಳನ್ನು ಸಿದ್ಧಮಾಡಿ ಹಗಲಿನಲ್ಲಿ ಅವರ ದೃಷ್ಟಿಯಿಂದ ತೊಲಗಿ ಹೋಗು; ಹೌದು, ಅವರ ಕಣ್ಣುಗಳ ಮುಂದೆಯೇ ನಿನ್ನ ಸ್ಥಳವನ್ನು ಬಿಟ್ಟು ಬೇರೊಂದು ಸ್ಥಳಕ್ಕೆ ಹೋಗು; ಅವರು ತಿರುಗಿ ಬೀಳುವ ಮನೆತನದವರಾದಾಗ್ಯೂ ಒಂದು ವೇಳೆ ಮನಸ್ಸು ಮಾಡಿಯಾರು. |
4. | ನಿನ್ನ ಸಾಮಾಗ್ರಿಗಳನ್ನು ತೆಗೆದುಹಾಕು ವದಕ್ಕಾಗುವಂತ ಸಾಮಾಗ್ರಿಗಳನ್ನು ಹಗಲಿನಲ್ಲಿ ಅವರ ಕಣ್ಣುಗಳ ಮುಂದೆ ಹೊರಗೆ ತರಬೇಕು; ಸಂಜೆಯಲ್ಲಿ ಸೆರೆಗೆ ಹೋಗುವವರ ಹಾಗೆ ನೀನು ಅವರ ಕಣ್ಣುಗಳ ಮುಂದೆಹೋಗಬೇಕು. |
5. | ಅವರ ಕಣ್ಣುಗಳ ಮುಂದೆಯೇ ನೀನು ಗೋಡೆಯನ್ನು ಕೊರೆದು ಅಲ್ಲಿಂದ ಹೊತ್ತು ಕೊಂಡು ಹೊರಗೆ ಹೊರಟುಹೋಗು. |
6. | ಅವರ ಕಣ್ಣು ಗಳ ಮುಂದೆ ಸಾಮಾಗ್ರಿಯನ್ನು ಹೆಗಲಿನ ಮೇಲೆ ಹೊತ್ತುಕೊಂಡು ನಸುಬೆಳಕಿನಲ್ಲಿ ಹೋಗಬೇಕು; ನೆಲ ವನ್ನು ನೋಡದ ಹಾಗೆ ನಿನ್ನ ಮುಖವನ್ನು ಮುಚ್ಚಿ ಕೊಳ್ಳಬೇಕು. ನಾನು ನಿನ್ನನ್ನು ಇಸ್ರಾಯೇಲಿನ ಮನೆತನ ದಲ್ಲಿರುವವರಿಗೆ ಗುರುತನ್ನಾಗಿ ಇಟ್ಟಿದ್ದೇನೆ. |
7. | ನಾನು ಆಜ್ಞೆಯನ್ನು ಹೊಂದಿದ ಪ್ರಕಾರ ಮಾಡಿದೆನು; ನನ್ನ ಸಾಮಗ್ರಿಗಳನ್ನು ಸೆರೆಯ ಸಾಮಗ್ರಿಗಳಂತೆ ಹಗಲಿ ನಲ್ಲಿಯೇ ಹೊರಗೆ ತಂದೆನು; ನಸುಬೆಳಕಿನಲ್ಲಿ ನನ್ನ ಕೈಯಿಂದಲೇ ಗೋಡೆಯನ್ನು ಕೊರೆದೆನು; ಅದನ್ನು ನಾನು ನಸುಬೆಳಕಿನಲ್ಲಿ ಹೊರಗೆ ತಂದು ಅವರ ಕಣ್ಣುಗಳ ಮುಂದೆ ಅದನ್ನು ಹೆಗಲ ಮೇಲೆ ಹೊತ್ತುಕೊಂಡು ಹೋದೆನು. |
8. | ಬೆಳಗಿನ ಜಾವದಲ್ಲಿ ಕರ್ತನ ವಾಕ್ಯವು ನನ್ನ ಕಡೆಗೆ ಬಂದು ಹೇಳಿದ್ದೇನಂದರೆ-- |
9. | ಮನುಷ್ಯ ಪುತ್ರನೇ, ಆ ಇಸ್ರಾಯೇಲಿನ ಮನೆತನದವರು ತಿರುಗಿ ಬೀಳುವ ಮನೆತನದವರಲ್ಲವೇ? ನೀನು ಏನು ಮಾಡುತ್ತೀ ಎಂದು ಹೇಳುತ್ತಾರಲ್ಲಾ. |
10. | ಅವರಿಗೆ ನೀನು ಹೀಗೆ ಹೇಳಬೇಕು ಎಂದು ದೇವರಾದ ಕರ್ತನು ಹೇಳುತ್ತಾನೆ--ಈ ಭಾರವು ಯೆರೂಸಲೇಮಿನಲ್ಲಿರುವ ಪ್ರಭುವನ್ನೂ ಅದರ ಮಧ್ಯದಲ್ಲಿರುವ ಸಮಸ್ತ ಇಸ್ರಾ ಯೇಲಿನ ಮನೆತನದವರನ್ನೂ ಕುರಿತದ್ದಾಗಿದೆ. |
11. | ಹೀಗೆ ಹೇಳು--ನಾನು ನಿಮಗೆ ಗುರುತಾಗಿದ್ದೇನೆ. ನಾನು ಮಾಡಿದ ಹಾಗೆ ಅವರಿಗೆ ಮಾಡಲ್ಪಡುವದು, ಅವರು ಸಾಗಿ ಸೆರೆಗೆ ಹೋಗುವರು. |
12. | ಅವರ ಮಧ್ಯದಲ್ಲಿರುವ ಪ್ರಭುವು ಹೆಗಲ ಮೇಲೆ ಹೊರೆಯನ್ನು ಹೊತ್ತು ಕೊಂಡು ಕತ್ತಲಲ್ಲಿ ಹೊರಟು ಹೋಗುವನು; ಅವರು ಗೋಡೆಯನ್ನು ಕೊರೆದು ಆ ಕಿಂಡಿಯ ಮೂಲಕ ತಮ್ಮ ಸಾಮಗ್ರಿಗಳನ್ನು ಹೊರಗೆ ಸಾಗಿಸುವರು. ಅವನು ತನ್ನ ಕಣ್ಣುಗಳಿಂದ ನೆಲವನ್ನು ನೋಡದ ಹಾಗೆ ಮುಖ ವನ್ನು ಮುಚ್ಚಿಕೊಳ್ಳುವನು. |
13. | ನನ್ನ ಬಲೆಯನ್ನು ಸಹ ನಾನು ಅವನ ಮೇಲೆ ಹರಡುವೆನು. ಅವನು ನನ್ನ ಉರ್ಲಿನಲ್ಲಿ ಸಿಕ್ಕಿಬೀಳುವನು. ನಾನು ಅವನನ್ನು ಕಸ್ದೀಯ ದೇಶದ ಬಾಬೆಲಿಗೆ ಒಯ್ಯುವೆನು. ಆದರೆ ಅವನು ಅದನ್ನು ನೋಡದೆ ಅಲ್ಲಿಯೇ ಸಾಯುವನು. |
14. | ಅವನ ಸುತ್ತಲೂ ಅವನಿಗೆ ಸಹಾಯ ಮಾಡುವವರೆಲ್ಲರನ್ನೂ ಅವನ ಎಲ್ಲಾ ಸೈನ್ಯಗಳನ್ನೂ ಎಲ್ಲಾ ದಿಕ್ಕುಗಳಿಗೆ ಚದರಿಸಿ ಅವರ ಹಿಂದೆ ಕತ್ತಿಯನ್ನು ಬೀಸುವೆನು. |
15. | ನಾನು ಅವರನ್ನು ಜನಾಂಗಗಳಲ್ಲಿ ಚದರಿಸಿ ದೇಶಗಳ ಮೇಲೆ ಚದರಿಸುವಾಗ ನಾನೇ ಕರ್ತನು ಎಂದು ಅವರು ತಿಳಿದುಕೊಳ್ಳುವರು. |
16. | ಆದರೆ ಅವರು ಎಲ್ಲಿ ಬರು ವರೋ ಆ ಅನ್ಯಜನಾಂಗಗಳೊಳಗೆ ತಮ್ಮ ಅಸಹ್ಯಗಳ ನ್ನೆಲ್ಲಾ ತಿಳಿಸುವ ಹಾಗೆ ಅವರಲ್ಲಿ ಕೆಲವರನ್ನು ಕತ್ತಿ ಯಿಂದಲೂ ಬರಗಾಲದಿಂದಲೂ ವ್ಯಾಧಿಯಿಂದಲೂ ಉಳಿಸುವೆನು. ಆಗ ನಾನೇ ಕರ್ತನು ಎಂದು ಅವರು ತಿಳಿದುಕೊಳ್ಳುವರು. |
17. | ಇದಲ್ಲದೆ ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ-- |
18. | ಮನುಷ್ಯಪುತ್ರನೇ, ನಿನ್ನ ರೊಟ್ಟಿ ಯನ್ನು ನಡುಕದಿಂದ ತಿನ್ನು ಮತ್ತು ನೀರನ್ನು ದಿಗಿಲಿ ನಿಂದಲೂ ಎಚ್ಚರಿಕೆಯಿಂದಲೂ ಕುಡಿ. |
19. | ನಿನ್ನ ದೇಶದ ಜನರಿಗೆ ಹೀಗೆ ಹೇಳು--ಯೆರೂಸಲೇಮಿನ ನಿವಾಸಿ ಗಳಿಗೆ ಮತ್ತು ಇಸ್ರಾಯೇಲ್ಯರ ದೇಶಕ್ಕೆ ದೇವರಾದ ಕರ್ತನು ಹೇಳಿದ್ದೇನಂದರೆ--ಅವರು ತಮ್ಮ ರೊಟ್ಟಿ ಯನ್ನು ಎಚ್ಚರಿಕೆಯಿಂದಲೇ ತಿನ್ನುವರು; ನೀರನ್ನು ವಿಸ್ಮಯ ದಿಂದಲೇ ಕುಡಿಯುವರು. ಯಾಕಂದರೆ ಅದರಲ್ಲಿ ವಾಸ ವಾಗಿರುವವರೆಲ್ಲರ ಬಲಾತ್ಕಾರದಿಂದ ಅವರ ದೇಶವು ಅವರ ಪರಿಪೂರ್ಣತೆಯನ್ನೆಲಾ ಬಿಟ್ಟು ಹಾಳಾಗು ವದು. |
20. | ನಿವಾಸಿಗಳುಳ್ಳ ಪಟ್ಟಣಗಳು ಹಾಳಾಗುವವು. ದೇಶವು ನಿರ್ಜನವಾಗುವದು; ಆಗ ನಾನೇ ಕರ್ತ ನೆಂದು ನೀವು ತಿಳಿಯುವಿರಿ. |
21. | ಕರ್ತನ ವಾಕ್ಯವು ನನ್ನ ಕಡೆಗೆ ಬಂದು ಹೇಳಿದ್ದೇ ನಂದರೆ-- |
22. | ಮನುಷ್ಯಪುತ್ರನೇ, ದಿನಗಳು ಬಹಳವಾ ಗುತ್ತಿವೆ; ಪ್ರತಿ ದರ್ಶನವು ತಪ್ಪುತ್ತದೆ ಎಂದು ಇಸ್ರಾ ಯೇಲ್ ದೇಶದಲ್ಲಿ ಹೇಳಿಕೊಳ್ಳುವ ಆ ಗಾದೆ ಏನು? |
23. | ಆದದರಿಂದ ಅವರಿಗೆ ಹೀಗೆ ಹೇಳು ದೇವರಾದ ಕರ್ತನು ಹೇಳುವದೇನಂದರೆ--ನಾನು ಈ ಗಾದೆ ಯನ್ನು ನಿಲ್ಲಿಸುತ್ತೇನೆ, ಅದನ್ನು ಇನ್ನು ಮೇಲೆ ಇಸ್ರಾ ಯೇಲಿನಲ್ಲಿ ಗಾದೆಯಂತೆ ಉಪಯೋಗಿಸುವದಿಲ್ಲ; ದಿನಗಳು ಹತ್ತಿರವಾಗಿವೆ ಪ್ರತಿ ದರ್ಶನವು ಸವಿಾಪ ವಾಗಿದೆ ಎಂದು ಅವರಿಗೆ ಹೇಳು. |
24. | ಇಸ್ರಾಯೇಲಿನ ಮನೆತನದವರೊಳಗೆ ಇನ್ನು ಮೇಲೆ ಯಾವ ವ್ಯರ್ಥ ದರ್ಶನವೂ ಮೋಸದ ಶಕುನವೂ ಇರುವದಿಲ್ಲ. |
25. | ನಾನೇ ಕರ್ತನು, ನಾನೇ ಮಾತನಾಡುತ್ತೇನೆ. ನಾನು ಆಡುವ ಮಾತು ನೆರವೇರುವದು, ಅದು ಇನ್ನು ನಿಧಾನವಾಗುವದಿಲ್ಲ. ಓ ತಿರುಗಿ ಬೀಳುವ ಮನೆತನ ದವರೇ, ನಿಮ್ಮ ದಿವಸಗಳಲ್ಲಿ ನಾನು ನುಡಿದದ್ದನ್ನು ನಡಿಸುವೆನೆಂದು ದೇವರಾದ ಕರ್ತನು ಹೇಳುತ್ತಾನೆ. |
26. | ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ -- |
27. | ಮನುಷ್ಯಪುತ್ರನೇ, ಇಗೋ, ಇಸ್ರಾಯೇಲಿನ ಮನೆತನದವರು--ಇವನಿಗಾದ ದರ್ಶನವು ಬಹು ದೂರ ಕಾಲಕ್ಕೆ ಸಂಬಂಧಿಸಿದ್ದು, ದೂರ ಕಾಲವನ್ನು ಕುರಿತು ಪ್ರವಾದಿಸುತ್ತಾನೆಂದು ಹೇಳುತ್ತಾರೆ. |
28. | ಆದದರಿಂದ ಅವರು ಹೀಗೆ ಹೇಳುವರೆಂದು ದೇವರಾದ ಕರ್ತನು ಹೇಳುತ್ತಾನೆ; ನನ್ನ ಮಾತುಗಳಲ್ಲಿ ಒಂದಾದರೂ ಇನ್ನು ಮೇಲೆ ದೂರವಾಗುವದಿಲ್ಲ; ನಾನು ಆಡಿದ ಮಾತು ನಡಿಸಲ್ಪಡುವದೆಂದು ದೇವರಾದ ಕರ್ತನು ಹೇಳುತ್ತಾನೆ. |
← Ezekiel (12/48) → |