← Exodus (23/40) → |
1. | ನೀನು ಸುಳ್ಳು ಸುದ್ಧಿಯನ್ನು ಹಬ್ಬಿಸ ಬಾರದು. ಅನ್ಯಾಯದ ಸಾಕ್ಷಿಯಾಗಿರು ವದಕ್ಕೆ ದುಷ್ಟನೊಂದಿಗೆ ಸೇರಬೇಡ. |
2. | ಕೆಟ್ಟದ್ದನ್ನು ಮಾಡು ವಂತೆ ಬಹುಮಂದಿಯನ್ನು ಹಿಂಬಾಲಿಸಬೇಡ; ಇಲ್ಲವೆ ಬಹುಮಂದಿಯೊಂದಿಗೆ ನ್ಯಾಯಕ್ಕೆ ಪ್ರತಿಕೂಲವಾಗಿ ವ್ಯಾಜ್ಯದಲ್ಲಿ ಉತ್ತರಕೊಡಬೇಡ. |
3. | ಬಡವನಿಗೆ ವ್ಯಾಜ್ಯ ದಲ್ಲಿ ಮುಖದಾಕ್ಷಿಣ್ಯ ಮಾಡಬೇಡ. |
4. | ನಿನ್ನ ವೈರಿಯ ಎತ್ತಾಗಲಿ ಕತ್ತೆಯಾಗಲಿ ತಪ್ಪಿಸಿಕೊಂಡು ಹೋಗುವಾಗ ಅದು ನಿನಗೆ ಸಿಕ್ಕಿದರೆ ನೀನು ಅದನ್ನು ಖಂಡಿತವಾಗಿ ತಿರಿಗಿ ಅವನಿಗೆ ತಂದುಕೊಡಬೇಕು. |
5. | ನಿನ್ನನ್ನು ಹಗೆ ಮಾಡುವವನ ಕತ್ತೆ ಹೊರೆಯ ಕೆಳಗೆ ಬಿದ್ದಿರುವದನ್ನು ನೀನು ಕಂಡಾಗ ಅವನಿಗೆ ಸಹಾಯ ಮಾಡಲು ಮನಸ್ಸಿಲ್ಲದಿದ್ದರೂ ನೀನು ಖಂಡಿತವಾಗಿ ಅವನಿಗೆ ಸಹಾಯಮಾಡಬೇಕು. |
6. | ಬಡವನ ವ್ಯಾಜ್ಯದಲ್ಲಿ ನ್ಯಾಯವನ್ನು ಬಿಟ್ಟು ತೀರ್ಪು ಕೊಡಬೇಡ. |
7. | ಸುಳ್ಳಿನ ವಿಷಯಗಳಿಂದ ನೀನು ದೂರ ವಿರು; ನಿರಪರಾಧಿಯನ್ನೂ ನೀತಿವಂತನನ್ನೂ ಕೊಲ್ಲ ಬೇಡ, ಯಾಕಂದರೆ ನಾನು ದುಷ್ಟನನ್ನು ನೀತಿವಂತ ನೆಂದು ನಿರ್ಣಯಿಸುವದಿಲ್ಲ. |
8. | ಲಂಚವನ್ನು ತೆಗೆದು ಕೊಳ್ಳಬೇಡ; ಅದು ಜ್ಞಾನಿಗಳನ್ನು ಕುರುಡರನ್ನಾಗಿ ಮಾಡಿ ನೀತಿವಂತರ ಮಾತುಗಳನ್ನು ವಕ್ರಪಡಿಸುತ್ತದೆ. |
9. | ಪರದೇಶಸ್ಥನನ್ನು ಉಪದ್ರವ ಪಡಿಸಬೇಡ; ಪರ ದೇಶಸ್ಥನ ಹೃದಯವನ್ನು ನೀವು ತಿಳಿದಿರುವಿರಿ. ನೀವೂ ಐಗುಪ್ತದೇಶದಲ್ಲಿ ಪರದೇಶಿಗಳಾಗಿದ್ದೀರಷ್ಟೆ. |
10. | ಆರು ವರುಷ ನಿನ್ನ ಭೂಮಿಗೆ ಬೀಜಹಾಕಿ ಅದರ ಬೆಳೆಯನ್ನು ಕೂಡಿಸಬೇಕು. |
11. | ಏಳನೆಯ ವರುಷದಲ್ಲಿ ಅದಕ್ಕೆ ವಿಶ್ರಾಂತಿಯನ್ನು ಕೊಟ್ಟು ಅದನ್ನು ಬೀಳು ಬಿಡಬೇಕು. ಆಗ ನಿನ್ನ ಜನರಲ್ಲಿರುವ ಬಡವರು ಅದರಲ್ಲಿ ಬೆಳೆದದ್ದನ್ನು ತಿನ್ನಲಿ; ಅವರು ಬಿಟ್ಟದ್ದನ್ನು ಹೊಲದ ಪಶುಗಳು ತಿನ್ನಲಿ. ಹೀಗೆ ನಿನ್ನ ದ್ರಾಕ್ಷೇ ತೋಟದಲ್ಲಿಯೂ ಎಣ್ಣೇಮರಗಳ ತೋಪಿನಲ್ಲಿಯೂ ಮಾಡಬೇಕು. |
12. | ಆರು ದಿವಸ ನೀನು ನಿನ್ನ ಕೆಲಸಗಳನ್ನು ಮಾಡ ಬೇಕು; ಏಳನೆಯ ದಿನದಲ್ಲಿ ನೀನು ನಿನ್ನ ಎತ್ತು ಕತ್ತೆಗಳು ವಿಶ್ರಮಿಸಿಕೊಳ್ಳಬೇಕು. ಇದಲ್ಲದೆ ನಿನ್ನ ದಾಸಿಯ ಮಗನು ಪರದೇಶಸ್ಥನು ದಣಿವಾರಿಸಿಕೊಳ್ಳಲಿ. |
13. | ನಾನು ನಿಮಗೆ ಹೇಳಿದ್ದನ್ನೆಲ್ಲಾ ಕೈಕೊಳ್ಳಬೇಕು; ಬೇರೆ ದೇವರುಗಳ ಹೆಸರನ್ನು ಎತ್ತಬೇಡ, ಇಲ್ಲವೆ ನಿನ್ನ ಬಾಯಿಂದ ಅದು ಹೊರಡಬಾರದು. |
14. | ವರುಷಕ್ಕೆ ಮೂರು ಸಾರಿ ನನಗೆ ಹಬ್ಬ ಮಾಡ ಬೇಕು. |
15. | ಹುಳಿಯಿಲ್ಲದ ರೊಟ್ಟಿಗಳ ಹಬ್ಬವನ್ನು ಆಚರಿಸಬೇಕು; (ಅಬೀಬ್ ತಿಂಗಳಿನ ನೇಮಕವಾದ ಸಮಯದಲ್ಲಿ ಏಳು ದಿನಗಳ ವರೆಗೆ ನಾನು ನಿನಗೆ ಆಜ್ಞಾಪಿಸಿದ ಪ್ರಕಾರ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಯಾಕಂದರೆ ನೀನು ಆ ತಿಂಗಳಲ್ಲೇ ಐಗುಪ್ತ ದಿಂದ ಹೊರಗೆ ಬಂದಿದ್ದಿ. ಒಬ್ಬರೂ ಬರೀಗೈಯಿಂದ ನನ್ನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳಬಾರದು.) |
16. | ನಿನ್ನ ಹೊಲದಲ್ಲಿ ಬಿತ್ತಿದ ಬೆಳೆಯ ಪ್ರಥಮ ಫಲಗಳ ಸುಗ್ಗಿ ಹಬ್ಬವನ್ನೂ ನಿನ್ನ ಬೆಳೆಯನ್ನು ಹೊಲದಿಂದ ಕೂಡಿಸಿದ ಮೇಲೆ ವರುಷದ ಅಂತ್ಯದಲ್ಲಿ ಕೂಡಿಸುವ ಹಬ್ಬವನ್ನೂ ಆಚರಿಸಬೇಕು. |
17. | ವರುಷಕ್ಕೆ ಮೂರು ಸಾರಿ ನಿಮ್ಮ ಲ್ಲಿರುವ ಎಲ್ಲಾ ಪುರುಷರು ದೇವರಾದ ಕರ್ತನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳಬೇಕು. |
18. | ನನಗೆ ಸಮರ್ಪಿಸುವ ಯಜ್ಞದ ರಕ್ತವನ್ನು ಹುಳಿ ಇರುವ ರೊಟ್ಟಿಯ ಸಂಗಡ ಅರ್ಪಿಸಬಾರದು ಇಲ್ಲವೆ ನನಗೆ ಅರ್ಪಿಸಿದ ಯಜ್ಞದ ಕೊಬ್ಬು ಬೆಳಗಿನ ವರೆಗೆ ಇರಬಾರದು. |
19. | ನಿನ್ನ ಭೂಮಿಯ ಪ್ರಥಮ ಫಲಗಳಲ್ಲಿ ಮೊದಲ ನೆಯದನ್ನು ನಿನ್ನ ದೇವರಾದ ಕರ್ತನ ಆಲಯಕ್ಕೆ ತರ ಬೇಕು. ಮೇಕೆಯ ಮರಿಯನ್ನು ತಾಯಿಯ ಹಾಲಿನಲ್ಲಿ ಬೇಯಿಸಬಾರದು. |
20. | ಇಗೋ, ಮಾರ್ಗದಲ್ಲಿ ನಿಮ್ಮನ್ನು ಕಾಪಾಡುವದ ಕ್ಕೋಸ್ಕರವೂ ನಾನು ಸಿದ್ಧಮಾಡಿದ ಸ್ಥಳಕ್ಕೆ ನಿಮ್ಮನ್ನು ತರುವದಕ್ಕೋಸ್ಕರವೂ ಒಬ್ಬ ದೂತನನ್ನು ನಿಮ್ಮ ಮುಂದೆ ಕಳುಹಿಸುತ್ತೇನೆ. |
21. | ಆತನ ವಿಷಯದಲ್ಲಿ ಜಾಗ್ರತೆ ಯಾಗಿದ್ದು ಆತನ ಮಾತಿಗೆ ವಿಧೇಯನಾಗು. ಆತನಿಗೆ ಕೋಪವನ್ನೆಬ್ಬಿಸಬೇಡ; ನನ್ನ ಹೆಸರು ಆತನಲ್ಲಿ ಇರುವ ದರಿಂದ ಆತನು ನಿಮ್ಮ ದ್ರೋಹಗಳನ್ನು ಮನ್ನಿಸುವದಿಲ್ಲ. |
22. | ಆತನ ಮಾತಿಗೆ ನೀವು ನಿಜವಾಗಿಯೂ ವಿಧೇಯ ರಾಗಿ ಹೇಳಿದ್ದನ್ನೆಲ್ಲಾ ನೀವು ಮಾಡಿದರೆ ನಿಮ್ಮ ಶತ್ರುಗಳಿಗೆ ಶತ್ರುವಾಗಿಯೂ ನಿಮ್ಮ ವಿರೋಧಿಗಳಿಗೆ ವಿರೋಧಿ ಯಾಗಿಯೂ ನಾನು ಇರುವೆನು. |
23. | ನನ್ನ ದೂತನು ನಿಮ್ಮ ಮುಂದೆ ಹೋಗಿ ಅಮೋರಿಯರೂ ಹಿತ್ತಿಯರೂ ಪೆರಿಜೀಯರೂ ಕಾನಾನ್ಯರೂ ಹಿವ್ವಿಯರೂ ಯೆಬೂಸಿ ಯರೂ ಇರುವ ದೇಶಕ್ಕೆ ನಿಮ್ಮನ್ನು ಬರಮಾಡುವನು. ಅವರನ್ನು ನಾನು ನಿರ್ಮೂಲ ಮಾಡುವೆನು. |
24. | ಅವರ ದೇವರುಗಳಿಗೆ ನೀವು ಅಡ್ಡಬೀಳಲೂ ಬಾರದು, ಅವುಗಳನ್ನು ಸೇವಿಸಲೂಬಾರದು. ಇದಲ್ಲದೆ ನೀವು ಅವರ ಕೃತ್ಯಗಳ ಪ್ರಕಾರ ಮಾಡದೆ ಅವರನ್ನು ನಿರ್ಮೂಲ ಮಾಡಿಬಿಟ್ಟು ಅವರ ವಿಗ್ರಹಗಳನ್ನು ಪೂರ್ಣವಾಗಿ ಒಡೆದು ಹಾಕಬೇಕು. |
25. | ನೀವು ನಿಮ್ಮ ದೇವರಾದ ಕರ್ತನಿಗೆ ಸೇವೆಮಾಡಬೇಕು. ಆಗ ಆತನು ನಿಮ್ಮ ರೊಟ್ಟಿಯನ್ನೂ ನೀರನ್ನೂ ಆಶೀರ್ವದಿಸುವನು, ನಾನು ವ್ಯಾಧಿಯನ್ನು ನಿಮ್ಮ ಮಧ್ಯದಿಂದ ತೊಲಗಿಸಿ ಬಿಡುವೆನು. |
26. | ಗರ್ಭಸ್ರಾವವಾಗಲಿ ಬಂಜೆತನವಾಗಲಿ ನಿಮ್ಮ ದೇಶದಲ್ಲಿ ಇರುವದಿಲ್ಲ; ನಿನ್ನ ದಿನಗಳ ಲೆಕ್ಕವನ್ನು ಪೂರ್ತಿಮಾಡುವೆನು. |
27. | ನನ್ನ ಭಯವನ್ನು ನಿಮ್ಮ ಮುಂದೆ ಕಳುಹಿಸಿ ನೀವು ಸೇರುವ ಜನರನ್ನೆಲ್ಲಾ ನಾಶಮಾಡುವೆನು ಮತ್ತು ನಿಮ್ಮನ್ನು ವಿರೋಧಿಸುವವರೆಲ್ಲಾ ನಿಮಗೆ ಬೆನ್ನು ತೋರಿ ಸುವಂತೆ ಮಾಡುವೆನು. |
28. | ಹಿವ್ವಿಯರೂ ಕಾನಾನ್ಯರೂ ಹಿತ್ತಿಯರೂ ನಿಮ್ಮ ಎದುರಿನಿಂದ ಓಡಿಹೋಗುವಂತೆ ಕಡಜದ ಹುಳಗಳನ್ನು ನಿಮ್ಮ ಮುಂದೆ ಕಳುಹಿಸುವೆನು. |
29. | ಭೂಮಿಯು ಬರಿದಾಗದಂತೆಯೂ ಅಡವಿಯ ಮೃಗ ಗಳು ನಿಮ್ಮ ವಿರೋಧವಾಗಿ ಹೆಚ್ಚಾಗದ ಹಾಗೆಯೂ ಅವುಗಳನ್ನು ಒಂದೇ ವರುಷದಲ್ಲಿ ನಿಮ್ಮ ಎದುರಿನಿಂದ ಓಡಿಸದೆ |
30. | ನೀವು ಅಭಿವೃದ್ಧಿಯಾಗಿ ದೇಶವನ್ನು ಸ್ವತಂತ್ರಿ ಸಿಕೊಳ್ಳುವ ವರೆಗೆ ಸ್ವಲ್ಪಸ್ವಲ್ಪವಾಗಿ ಹೊರಡಿಸುವೆನು. |
31. | ಕೆಂಪು ಸಮುದ್ರದಿಂದ ಫಿಲಿಷ್ಟಿಯರ ಸಮುದ್ರದ ವರೆಗೂ ಅರಣ್ಯದಿಂದ ನದಿಯ ವರೆಗೂ ನಿಮ್ಮ ಮೇರೆ ಗಳನ್ನು ನೇಮಿಸುವೆನು; ದೇಶದ ನಿವಾಸಿಗಳನ್ನು ನಿಮ್ಮ ಕೈಗಳಿಗೆ ಒಪ್ಪಿಸುವೆನು. ನೀವು ಅವರನ್ನು ನಿಮ್ಮ ಎದುರಿ ನಿಂದ ಓಡಿಸಿಬಿಡುವಿರಿ. |
32. | ಅವರ ಸಂಗಡಲೂ ಅವರ ದೇವರುಗಳ ಸಂಗಡಲೂ ಯಾವ ಒಡಂಬಡಿಕೆಯನ್ನೂ ಮಾಡಬಾರದು. |
33. | ನನಗೆ ವಿರೋಧವಾಗಿ ನೀವು ಪಾಪಮಾಡದಂತೆ ಅವರು ನಿಮ್ಮ ದೇಶದಲ್ಲಿ ವಾಸವಾ ಗಿರಬಾರದು. ನೀವು ಅವರ ದೇವರುಗಳನ್ನು ಸೇವಿಸಿದರೆ ಅದು ನಿಮಗೆ ಖಂಡಿತವಾಗಿ ಉರುಲಾಗಿರುವದು. |
← Exodus (23/40) → |