← Exodus (18/40) → |
1. | ದೇವರು ಮೋಶೆಗೆ ಮಾಡಿದವುಗಳೆಲ್ಲವನ್ನೂ ಕರ್ತನು ಇಸ್ರಾಯೇಲ್ಯರನ್ನು ಐಗುಪ್ತದೊಳಗಿಂದ ಹೊರಗೆ ತಂದದ್ದನ್ನೂ ಮಿದ್ಯಾ ನಿನ ವೈದಿಕನೂ ಮೋಶೆಯ ಮಾವನೂ ಆಗಿದ್ದ ಇತ್ರೋವನು ಕೇಳಿ |
2. | ತನ್ನ ಬಳಿಗೆ ಕಳುಹಿಸಲ್ಪಟ್ಟಿದ್ದ ಮೋಶೆಯ ಹೆಂಡತಿ ಚಿಪ್ಪೋರಳನ್ನೂ ಆಕೆಯ ಇಬ್ಬರು ಕುಮಾರರನ್ನೂ ಕರೆದುಕೊಂಡು ಬಂದನು. |
3. | ಆ ಕುಮಾರರಲ್ಲಿ ಒಬ್ಬನಿಗೆ ಗೇರ್ಷೋಮ್ ಎಂದು ಹೆಸರಿತ್ತು; ಅವನು--ನಾನು ಪರದೇಶದಲ್ಲಿ ಅನ್ಯನಾಗಿ ದ್ದೆನು ಅಂದನು. |
4. | ಇನ್ನೊಬ್ಬನ ಹೆಸರು ಎಲೀಯೆಜರ್ ಎಂದಿತ್ತು; ಅವನು ನನ್ನ ತಂದೆಯ ದೇವರು ನನ್ನ ಸಹಾಯಕನಾಗಿದ್ದು ಫರೋಹನ ಕತ್ತಿಯಿಂದ ಬಿಡುಗಡೆ ಮಾಡಿದನು ಎಂದು ಹೇಳಿದನು. |
5. | ಮೋಶೆಯ ಮಾವ ನಾದ ಇತ್ರೋವನ ಸಂಗಡ ಮೋಶೆಯ ಕುಮಾರರೂ ಅವನ ಹೆಂಡತಿಯೂ ಮೋಶೆಯ ಬಳಿಗೆ ಅರಣ್ಯಕ್ಕೆ ಅವನು ತಂಗಿದ್ದ ಸ್ಥಳವಾದ ದೇವರ ಬೆಟ್ಟದ ಬಳಿ ಬಂದರು. |
6. | ಆಗ ಅವನು ಮೋಶೆಗೆ--ನಿನ್ನ ಮಾವ ನಾದ ಇತ್ರೋವನೆಂಬ ನಾನು ನಿನ್ನ ಹೆಂಡತಿಯನ್ನೂ ಅವಳ ಇಬ್ಬರು ಮಕ್ಕಳನ್ನೂ ಕರೆದುಕೊಂಡು ನಿನ್ನ ಬಳಿಗೆ ಬಂದಿದ್ದೇನೆಂದು ಹೇಳಿ ಕಳುಹಿಸಿದಾಗ |
7. | ಮೋಶೆಯು ತನ್ನ ಮಾವನನ್ನು ಎದುರುಗೊಂಡು ಅವನನ್ನು ವಂದಿಸಿ ಮುದ್ದಿಟ್ಟನು. ಅವರು ಪರಸ್ಪರ ಕ್ಷೇಮ ಸಮಾಚಾರವನ್ನು ಕೇಳಿಕೊಂಡು ಗುಡಾರಕ್ಕೆ ಬಂದರು. |
8. | ಇಸ್ರಾಯೇಲ್ಯರಿಗೋಸ್ಕರ ಕರ್ತನು ಫರೋಹ ನಿಗೂ ಐಗುಪ್ತ್ಯರಿಗೂ ಮಾಡಿದ್ದೆಲ್ಲವನ್ನೂ ಅವರಿಗೆ ಒದಗಿದ ಎಲ್ಲಾ ಸಂಕಟವನ್ನೂ ಕರ್ತನು ತಮ್ಮನ್ನು ಹೇಗೆ ತಪ್ಪಿಸಿದನೆಂಬದನ್ನೂ ಮೋಶೆಯು ತನ್ನ ಮಾವ ನಿಗೆ ತಿಳಿಯಪಡಿಸಿದನು. |
9. | ಇದಲ್ಲದೆ ಕರ್ತನು ಇಸ್ರಾ ಯೇಲ್ಯರಿಗೆ ಮಾಡಿದ ಎಲ್ಲಾ ಉಪಕಾರಕ್ಕಾಗಿಯೂ ಆತನು ಅವರನ್ನು ಐಗುಪ್ತ್ಯರ ಕೈಗಳಿಂದ ತಪ್ಪಿಸಿದ್ದ ಕ್ಕಾಗಿಯೂ ಇತ್ರೋವನು ಸಂತೋಷಪಟ್ಟನು. |
10. | ಇತ್ರೋವನು--ಐಗುಪ್ತ್ಯರ ಕೈಗೂ ಫರೋಹನ ಕೈಗೂ ಐಗುಪ್ತ್ಯರ ಅಧಿಕಾರದೊಳಗಿಂದಲೂ ಜನರನ್ನು ತಪ್ಪಿಸಿದ ಕರ್ತನಿಗೆ ಸ್ತೋತ್ರವಾಗಲಿ. |
11. | ಎಲ್ಲಾ ದೇವರು ಗಳಿಗಿಂತ ಕರ್ತನೇ ದೊಡ್ಡವನೆಂದು ಈಗ ನಾನು ತಿಳಿದುಕೊಂಡಿದ್ದೇನೆ. ಐಗುಪ್ತ್ಯರು ಗರ್ವಪಟ್ಟಿದ್ದರಿಂದ ಆತನು ಅವರನ್ನು ತಗ್ಗಿಸಿದನು ಅಂದನು. |
12. | ಮೋಶೆಯ ಮಾವನಾದ ಇತ್ರೋವನು ದಹನಬಲಿಯನ್ನೂ ಯಜ್ಞ ಗಳನ್ನೂ ತೆಗೆದುಕೊಂಡು ದೇವರಿಗೆ ಅರ್ಪಿಸಿದನು. ಆಗ ಆರೋನನೂ ಇಸ್ರಾಯೇಲಿನ ಹಿರಿಯರೆಲ್ಲರೂ ದೇವರ ಸನ್ನಿಧಿಯಲ್ಲಿ ಮೋಶೆಯ ಮಾವನ ಸಂಗಡ ಭೋಜನ ಮಾಡುವದಕ್ಕಾಗಿ ಬಂದರು. |
13. | ಮರುದಿನದಲ್ಲಿ ಮೋಶೆಯು ಜನರಿಗೆ ನ್ಯಾಯತೀರಿಸುವದಕ್ಕೆ ಕೂತುಕೊಂಡಾಗ ಜನರು ಬೆಳಗಿನಿಂದ ಸಾಯಂಕಾಲದ ವರೆಗೆ ಮೋಶೆಯ ಬಳಿಯಲ್ಲಿ ನಿಂತಿ ದ್ದರು. |
14. | ಮೋಶೆಯು ಜನರಿಗೆ ಮಾಡುವದನ್ನೆಲ್ಲಾ ಮೋಶೆಯ ಮಾವನು ನೋಡಿ ಮೋಶೆಗೆ--ಇದೇನು ಜನರಿಗೆ ನೀನು ಮಾಡುವದು? ಯಾಕೆ ನೀನೊಬ್ಬನೇ ಕೂತಿರಲಾಗಿ ಜನರು ಬೆಳಗಿನಿಂದ ಸಾಯಂಕಾಲದ ವರೆಗೆ ನಿನ್ನ ಬಳಿಯಲ್ಲಿ ನಿಂತಿದ್ದಾರೆ ಅಂದನು. |
15. | ಅದಕ್ಕೆ ಮೋಶೆಯು ತನ್ನ ಮಾವನಿಗೆ--ದೇವರ ವಿಷಯದಲ್ಲಿ ಕೇಳುವದಕ್ಕಾಗಿ ಜನರು ನನ್ನ ಬಳಿಗೆ ಬರುತ್ತಾರೆ. |
16. | ಅವರಿಗೆ ವ್ಯಾಜ್ಯವಿದ್ದರೆ ನನ್ನ ಬಳಿಗೆ ಬರುತ್ತಾರೆ. ನಾನು ಒಬ್ಬರ ಸಂಗಡ ಇನ್ನೊಬ್ಬರಿಗಿರುವ ವ್ಯಾಜ್ಯವನ್ನು ತೀರಿಸುತ್ತೇನೆ. ದೇವರ ನಿಯಮಗಳನ್ನೂ ಆತನ ನ್ಯಾಯ ಪ್ರಮಾಣಗಳನ್ನೂ ಅವರಿಗೆ ತಿಳಿಯಪಡಿಸುತ್ತೇನೆ ಅಂದನು. |
17. | ಮೋಶೆಯ ಮಾವನು ಅವನಿಗೆ--ನೀನು ಮಾಡುವ ಈ ಕಾರ್ಯವು ಸರಿಯಲ್ಲ; |
18. | ನೀನೂ ನಿನ್ನ ಸಂಗಡ ಇರುವ ಜನರೂ ಖಂಡಿತ ಬಳಲುವಿರಿ, ಯಾಕಂದರೆ ಇದು ನಿನಗೆ ಬಹು ಭಾರ; ನೀನು ಸ್ವತಃ ಇದನ್ನು ಮಾಡಲಾರಿ. |
19. | ಆದದರಿಂದ ಈಗ ನನ್ನ ಮಾತನ್ನು ಕೇಳು, ನಿನಗೆ ಆಲೋಚನೆ ಹೇಳುತ್ತೇನೆ; ದೇವರು ನಿನ್ನ ಸಂಗಡ ಇರಲಿ; ನೀನು ಜನರಿಗಾಗಿ ದೇವರ ಪಕ್ಷದಲ್ಲಿದ್ದು ಅವರ ವ್ಯಾಜ್ಯಗಳನ್ನು ಆತನ ಮುಂದೆ ತರಬೇಕು. |
20. | ನೇಮಕಗಳನ್ನೂ ನ್ಯಾಯ ಪ್ರಮಾಣಗಳನ್ನೂ ಅವರಿಗೆ ಕಲಿಸಿ, ಅವರು ಹೋಗ ತಕ್ಕ ಮಾರ್ಗವನ್ನೂ ಅವರು ಮಾಡತಕ್ಕ ಕೆಲಸವನ್ನೂ ಅವರಿಗೆ ತೋರಿಸಬೇಕು. |
21. | ಇದಲ್ಲದೆ ನೀನು ಸಮಸ್ತ ಜನರೊಳಗೆ ಸಮರ್ಥರು ಅಂದರೆ ದೇವರಿಗೆ ಭಯ ಪಡುವವರೂ ಸತ್ಯವಂತರೂ ದುರಾಶೆಯನ್ನು ಹಗೆ ಮಾಡುವವರೂ ಆಗಿರುವ ಇಂಥವರನ್ನು ಸಾವಿರ ಜನರ ಮೇಲೆಯೂ ನೂರು ಜನರ ಮೇಲೆಯೂ ಐವತ್ತು ಜನರ ಮೇಲೆಯೂ ಹತ್ತು ಜನರ ಮೇಲೆಯೂ ಅಧಿಕಾರಿಗಳನ್ನಾಗಿ ನೇಮಿಸಬೇಕು. |
22. | ಇವರು ಎಲ್ಲಾ ಕಾಲಗಳಲ್ಲಿ ಜನರಿಗೆ ನ್ಯಾಯತೀರಿಸಿ ದೊಡ್ಡ ವ್ಯಾಜ್ಯ ಗಳನ್ನೆಲ್ಲಾ ನಿನ್ನ ಮುಂದೆ ತಂದು ಸಣ್ಣಸಣ್ಣ ವ್ಯಾಜ್ಯಗಳನ್ನು ತಾವೇ ತೀರಿಸಬೇಕು. ಹೀಗೆ ನಿನಗೆ ಸುಲಭವಾಗು ವದು. ಅವರು ನಿನ್ನ ಸಂಗಡ ಭಾರವನ್ನು ಹೊರುವರು. |
23. | ಈ ಕಾರ್ಯವನ್ನು ಮಾಡುವದಕ್ಕೆ ದೇವರು ನಿನಗೆ ಅಪ್ಪಣೆಕೊಟ್ಟರೆ ನೀನು ಇದನ್ನು ನಿರ್ವಹಿಸಲು ಶಕ್ತ ನಾಗುವಿ. ಈ ಜನರೆಲ್ಲರೂ ತಮ್ಮ ತಮ್ಮ ಸ್ಥಳಗಳಿಗೆ ಸಮಾಧಾನದಿಂದ ಹೋಗುವರು ಅಂದನು. |
24. | ಮೋಶೆಯು ತನ್ನ ಮಾವನ ಮಾತನ್ನು ಕೇಳಿ ಅವನು ಹೇಳಿದ್ದನ್ನೆಲ್ಲಾ ಮಾಡಿದನು. |
25. | ಮೋಶೆಯು ಇಸ್ರಾಯೇಲ್ಯರಲ್ಲಿ ಸಮರ್ಥರನ್ನು ಆರಿಸಿಕೊಂಡು ಜನರ ಮೇಲೆ ಮುಖ್ಯಸ್ಥರನ್ನಾಗಿ ಮಾಡಿ ಸಾವಿರ ಜನರ ಮೇಲೆಯೂ ನೂರು ಜನರ ಮೇಲೆಯೂ ಐವತ್ತು ಜನರ ಮೇಲೆಯೂ ಹತ್ತು ಜನರ ಮೇಲೆಯೂ ಅಧಿಕಾರಿಗಳನ್ನಾಗಿ ನೇಮಿಸಿದನು. |
26. | ಇವರು ಎಲ್ಲಾ ಕಾಲಗಳಲ್ಲಿ ಜನರಿಗೆ ನ್ಯಾಯತೀರಿಸಿ ಕಠಿಣ ವ್ಯಾಜ್ಯ ಗಳನ್ನು ಮೋಶೆಯ ಬಳಿಗೆ ತಂದು ಸಣ್ಣ ವ್ಯಾಜ್ಯಗಳನ್ನು ತಾವೇ ತೀರಿಸಿದರು. |
27. | ತರುವಾಯ ಮೋಶೆಯು ತನ್ನ ಮಾವನನ್ನು ಕಳುಹಿಸಲು ಅವನು ಸ್ವದೇಶಕ್ಕೆ ಹೋದನು. |
← Exodus (18/40) → |