← Ecclesiastes (7/12) → |
1. | ಅಮೂಲ್ಯವಾದ ತೈಲಕ್ಕಿಂತ ಒಳ್ಳೆಯ ಹೆಸರು ಉತ್ತಮ; ಒಬ್ಬನ ಜನ್ಮದಿನಕ್ಕಿಂತ ಮರಣದ ದಿನವೇ ಮೇಲು. |
2. | ಔತಣದ ಮನೆಗೆ ಹೋಗುವದಕ್ಕಿಂತ ಗೋಳಾಟದ ಮನೆಗೆ ಹೋಗು ವದು ಲೇಸು; ಎಲ್ಲಾ ಮನುಷ್ಯರ ಅಂತ್ಯವು ಇದಾಗಿದೆ; ಇದರಿಂದ ಜೀವಿತನು ಅದನ್ನು ತಮ್ಮ ಹೃದಯದಲ್ಲಿ ಇಟ್ಟು ಸ್ಮರಿಸಿಕೊಳ್ಳುವನು. |
3. | ನಗೆಗಿಂತ ದುಃಖವು ವಾಸಿ; ಹೃದಯದ ದುಃಖದ ಭಾವನೆಯಿಂದ ಹೃದಯವು ಗುಣವಾಗುತ್ತದೆ. |
4. | ಗೋಳಾಟದ ಮನೆಯಲ್ಲಿ ಜ್ಞಾನಿಯ ಹೃದಯವು ಇರುವದು; ಮೂಢರ ಹೃದಯವು ಉಲ್ಲಾ ಸದ ಮನೆಯಲ್ಲಿರುವದು. |
5. | ಮೂಢರ ಹಾಡನ್ನು ಒಬ್ಬ ಮನುಷ್ಯನು ಕೇಳುವದಕ್ಕಿಂತ ಜ್ಞಾನಿಗಳ ಗದರಿಕೆಯನ್ನು ಕೇಳುವದು ಲೇಸು. |
6. | ಗಡಿಗೆಯ ಕೆಳಗೆ ಮುಳ್ಳುಗಳ ಚಟಚಟನೆಯ ಶಬ್ದ ಹೇಗೋ ಮೂಢನ ನಗುವು ಹಾಗೆಯೇ ಇರುವದು; ಇದೂ ಕೂಡ ವ್ಯರ್ಥವೇ. |
7. | ಖಂಡಿತವಾಗಿಯೂ ಬಲಾತ್ಕಾರವು ಜ್ಞಾನಿಯನ್ನು ಹುಚ್ಚನನ್ನಾಗಿ ಮಾಡುತ್ತದೆ; ಲಂಚವು ಹೃದಯವನ್ನು ನಾಶಮಾಡುತ್ತದೆ. |
8. | ಒಂದು ಸಂಗತಿಯ ಪ್ರಾರಂಭ ಕ್ಕಿಂತ ಅದರ ಅಂತ್ಯವೇ ಲೇಸು; ಆತ್ಮದಲ್ಲಿ ಗರ್ವಿಷ್ಠ ನಿಗಿಂತ ತಾಳ್ಮೆಯುಳ್ಳವನೇ ಉತ್ತಮ. |
9. | ಕೋಪಿಸಿಕೊಳ್ಳು ವದಕ್ಕೆ ನಿನ್ನ ಮನಸ್ಸಿನಲ್ಲಿ ಆತುರಪಡದಿರು; ಕೋಪವು ಮೂಢರ ಎದೆಯಲ್ಲಿ ನೆಲೆಗೊಳ್ಳುತ್ತದೆ. |
10. | ಹಿಂದಿನ ದಿವಸಗಳು ಈ ದಿವಸಗಳಿಗಿಂತ ಮೇಲಾ ಗಿರುವದಕ್ಕಾಗಿ ಕಾರಣವೇನು ಎಂದು ನೀನು ಹೇಳ ಬೇಡ. ಈ ವಿಷಯದಲ್ಲಿ ನೀನು ಜ್ಞಾನದಿಂದ ವಿಚಾರಿ ಸುವದಿಲ್ಲ. |
11. | ಜ್ಞಾನವು ಬಾಧ್ಯತೆಯ ಹಾಗೆ ಒಳ್ಳೇದು. ಸೂರ್ಯನನ್ನು ನೋಡುವವರಿಗೆ ಅದರಿಂದ ಲಾಭ ವಿದೆ. |
12. | ಜ್ಞಾನವು ಆಶ್ರಯ, ಧನವು ಆಶ್ರಯ; ಆದರೆ ತಿಳುವಳಿಕೆಯ ಶ್ರೇಷ್ಠತೆ ಏನಂದರೆ, ಅದನ್ನು ಹೊಂದಿದವರಿಗೆ ಜ್ಞಾನವು ಜೀವವನ್ನು ಕೊಡುತ್ತದೆ. |
13. | ದೇವರ ಕಾರ್ಯವನ್ನು ಯೋಚಿಸು; ಆತನು ಡೊಂಕು ಮಾಡಿದ್ದನ್ನು ಯಾವನು ನೆಟ್ಟಗೆ ಮಾಡಲು ಶಕ್ತನು. |
14. | ಅಭಿವೃದ್ಧಿಯ ದಿನದಲ್ಲಿ ಸಂತೋಷವಾಗಿರು; ಆದರೆ ವಿಪತ್ಕಾಲದ ದಿವಸದಲ್ಲಿ ಯೋಚಿಸು; ತನ್ನ ಅಂತ್ಯ ಬಂದಾಗ ಮನುಷ್ಯನು ಯಾವದನ್ನು ನೋಡದಂತೆ ದೇವರು ಸಹ ಒಂದರ ಮೇಲೊಂದನ್ನು ಇಟ್ಟಿದ್ದಾನೆ. |
15. | ನನ್ನ ವ್ಯರ್ಥದ ದಿನಗಳಲ್ಲಿ ಎಲ್ಲಾ ವಿಷಯಗಳನ್ನು ನಾನು ನೋಡಿದ್ದೇನೆ; ನೀತಿವಂತನು ತನ್ನ ನೀತಿಯಲ್ಲಿ ನಾಶವಾಗುತ್ತಾನೆ. ದುಷ್ಟನು ತನ್ನ ದುಷ್ಟತನದಲ್ಲಿ ತನ್ನ ಜೀವಮಾನವನ್ನು ಹೆಚ್ಚಿಸಿಕೊಳ್ಳುತ್ತಾನೆ. |
16. | ನೀನು ಅತಿ ಯಾಗಿ ನೀತಿವಂತನಾಗಿರಬೇಡ; ಅಲ್ಲದೆ ಅತಿಯಾಗಿ ನಿನ್ನನ್ನು ಜ್ಞಾನಿಯನ್ನಾಗಿ ಮಾಡಿಕೊಳ್ಳಬೇಡ; ನಿನ್ನನ್ನು ನೀನೇ ಯಾಕೆ ನಾಶಪಡಿಸಿಕೊಳ್ಳುವಿ? |
17. | ನೀನು ಅತಿ ಯಾಗಿ ದುಷ್ಟನಾಗಿರಬೇಡ; ಇಲ್ಲವೆ ಮೂರ್ಖನಾಗಿರ ಬೇಡ; ನಿನ್ನ ಸಮಯಕ್ಕಿಂತ ಮೊದಲು ನೀನು ಯಾಕೆ ಸಾಯುವಿ? |
18. | ನೀನು ಇದನ್ನು ಹಿಡಿದುಕೊಳ್ಳುವದು ಒಳ್ಳೇದು. ಹೌದು, ಇದರಿಂದ ನಿನ್ನ ಕೈಯನ್ನು ಹಿಂತೆ ಗೆಯಬೇಡ; ದೇವರಿಗೆ ಭಯಪಡುವವನು ಅವೆಲ್ಲವು ಗಳಿಂದ ಹೊರಗೆ ಬರುವನು. |
19. | ಪಟ್ಟಣದಲ್ಲಿರುವ ಹತ್ತು ಮಂದಿ ಬಲಿಷ್ಠರಿಗಿಂತ ಜ್ಞಾನವು ಜ್ಞಾನಿಗಳನ್ನು ಬಲಪಡಿಸುತ್ತದೆ. |
20. | ಪಾಪ ಮಾಡದೆ ಒಳ್ಳೇದನ್ನೇ ನಡಿಸುವ ನೀತಿವಂತನು ಭೂಮಿಯ ಮೇಲೆ ಒಬ್ಬನೂ ಇಲ್ಲ. |
21. | ನಿನ್ನ ಸೇವಕನು ನಿನ್ನನ್ನು ಶಪಿಸುವದನ್ನು ನೀನು ಕೇಳದಂತೆ ಆಡಿದ ಎಲ್ಲಾ ಮಾತುಗಳನ್ನು ನೀನು ಸಹ ಲಕ್ಷಿಸಬೇಡ; |
22. | ಅದೇ ಪ್ರಕಾರ ನೀನು ನೀನಾಗಿಯೇ ಅನೇಕಸಲ ಇತರರನ್ನು ಶಪಿಸಿದ್ದು ನಿನ್ನ ಹೃದಯಕ್ಕೆ ತಿಳಿದದೆ; |
23. | ಇದೆಲ್ಲವನ್ನು ನಾನು ಜ್ಞಾನದಿಂದ ಪರೀಕ್ಷಿಸಿದ್ದೇನೆ; ಆಗ--ನಾನು ಜ್ಞಾನಿಯಾಗಿರುವೆನು ಎಂದು ಅಂದು ಕೊಂಡೆನು; ಅದು ನನ್ನಿಂದ ದೂರವಾಯಿತು. |
24. | ದೂರ ದಲ್ಲಿರುವದನ್ನೂ ಅಗಾಧದಲ್ಲಿರುವದನ್ನೂ ಯಾವನು ಕಂಡುಕೊಂಡಾನು? |
25. | ಜ್ಞಾನದ ಮೂಲತತ್ವಗಳನ್ನೂ ಮೂಢತನದ ಕೆಟ್ಟತನವನ್ನೂ ಅಂದರೆ ಮೂಢತನ ವನ್ನೂ ಹುಚ್ಚುತನವನ್ನೂ ತಿಳುಕೊಳ್ಳುವಂತೆ ಪರೀಕ್ಷಿಸು ವವನಾಗಿಯೂ ನಾನು ನನ್ನ ಹೃದಯವನ್ನು ಪ್ರಯೋ ಗಿಸಿದೆನು. |
26. | ತನ್ನ ಹೃದಯವು ಉರುಲುಗಳೂ ಬಲೆ ಗಳೂ ಅವಳ ಕೈಗಳ ಕಟ್ಟುಗಳೂ ಆಗಿರುವ ಸ್ತ್ರೀಯು ಮರಣಕ್ಕಿಂತಲೂ ಕಠೋರವಾಗಿದ್ದಾಳೆಂದು ನಾನು ಕಂಡಿದ್ದೇನೆ. ದೇವರನ್ನು ಮೆಚ್ಚಿಸಿದವನು ಅವಳಿಂದ ತಪ್ಪಿಸಿಕೊಳ್ಳುವನು; ಪಾಪಿಯು ಅವಳಿಂದ ಹಿಡಿಯಲ್ಪ ಡುವನು. |
27. | ಇಗೋ, ಲೆಕ್ಕವನ್ನು ಕಂಡುಹಿಡಿಯಲು ಒಂದೊಂದನ್ನಾಗಿ ಎಣಿಸಿ ನಾನು ಇದನ್ನು ಕಂಡುಕೊಂಡೆ ನೆಂದು ಪ್ರಸಂಗಿ ಹೇಳುತ್ತಾನೆ: |
28. | ಅದನ್ನು ಇನ್ನೂ ನನ್ನ ಪ್ರಾಣವು ಹುಡುಕುತ್ತದೆ; ನನಗೆ ಸಿಕ್ಕಲಿಲ್ಲ; ಸಾವಿರದಲ್ಲಿ ಒಬ್ಬ ಪುರುಷನನ್ನು ನಾನು ಕಂಡುಕೊಂಡಿ ದ್ದೇನೆ; ಅವರೆಲ್ಲರಲ್ಲಿ ನಾನು ಒಬ್ಬ ಹೆಂಗಸನ್ನು ಕಂಡು ಕೊಳ್ಳಲಿಲ್ಲ. |
29. | ಇಗೋ, ದೇವರು ಮನುಷ್ಯನನ್ನು ಸತ್ಯವಂತನನ್ನಾಗಿ ಮಾಡಿದನು. ಇದನ್ನು ಮಾತ್ರ ನಾನು ಕಂಡುಕೊಂಡಿದ್ದೇನೆ, ಅವರಾದರೋ ಅನೇಕ ಕಲ್ಪನೆ ಗಳನ್ನು ಹುಡುಕಿದ್ದಾರೆ. |
← Ecclesiastes (7/12) → |