← Deuteronomy (28/34) → |
1. | ಇದಲ್ಲದೆ ನೀನು ನಿನ್ನ ದೇವರಾದ ಕರ್ತನ ಮಾತನ್ನು ಎಚ್ಚರಿಕೆಯಿಂದ ಕೇಳಿ ನಾನು ಈ ಹೊತ್ತು ನಿನಗೆ ಆಜ್ಞಾಪಿಸುವ ಆತನ ಎಲ್ಲಾ ಆಜ್ಞೆಗಳನ್ನು ಕಾಪಾಡಿ ಕೈಕೊಂಡರೆ ನಿನ್ನ ದೇವರಾದ ಕರ್ತನು ನಿನ್ನನ್ನು ಭೂಮಿಯ ಎಲ್ಲಾ ಜನಾಂಗಗಳಿಗಿಂತ ಉನ್ನತದಲ್ಲಿರಿಸುವನು. |
2. | ನೀನು ನಿನ್ನ ದೇವರಾದ ಕರ್ತನ ವಾಕ್ಯವನ್ನು ಕೇಳಿದರೆ ಈ ಎಲ್ಲಾ ಆಶೀರ್ವಾದಗಳು ನಿನ್ನ ಮೇಲೆ ಬಂದು ನಿನಗೆ ಪ್ರಾಪ್ತವಾಗುವವು. |
3. | ಪಟ್ಟಣದಲ್ಲಿ ನಿನಗೆ ಆಶೀರ್ವಾದ, ಹೊಲದಲ್ಲಿ ನಿನಗೆ ಆಶೀರ್ವಾದ, |
4. | ನಿನ್ನ ಗರ್ಭದ ಫಲಕ್ಕೂ ನಿನ್ನ ಭೂಮಿಯ ಫಲಕ್ಕೂ ಪಶುಗಳ ಫಲಕ್ಕೂ ಪಶುಗಳ ಹಿಂಡಿಗೂ ಕುರಿಗಳ ಮಂದೆಗಳಿಗೂ ಆಶೀರ್ವಾದ. |
5. | ನಿನ್ನ ಪುಟ್ಟಿಗೂ ಕಣಜಕ್ಕೂ ಆಶೀರ್ವಾದ. |
6. | ಬರುವಾಗ ನಿನಗೆ ಆಶೀರ್ವಾದ; ಹೊರಡುವಾಗ ನಿನಗೆ ಆಶೀರ್ವಾದ. |
7. | ನಿನಗೆ ವಿರೋಧವಾಗಿ ಏಳುವ ನಿನ್ನ ಶತ್ರುಗಳನ್ನು ಕರ್ತನು ನಿನ್ನ ಮುಂದೆ ಹೊಡೆದು ಬಿಡುವನು; ಅವರು ಒಂದೇ ಮಾರ್ಗದಲ್ಲಿ ನಿನಗೆ ವಿರೋಧವಾಗಿ ಹೊರಟು ಏಳು ಮಾರ್ಗಗಳಲ್ಲಿ ನಿನ್ನ ಮುಂದೆ ಓಡಿಹೋಗುವರು. |
8. | ನಿನ್ನ ಕಣಜಗಳಲ್ಲಿಯೂ ನೀನು ಕೈಹಾಕುವ ಎಲ್ಲಾದರಲ್ಲಿಯೂ ನಿನಗೆ ಆಶೀರ್ವಾದ ಬರುವ ಹಾಗೆ ಕರ್ತನು ಅಪ್ಪಣೆಕೊಡುವನು; ನಿನ್ನ ದೇವರಾದ ಕರ್ತನು ನಿನಗೆ ಕೊಡುವ ಭೂಮಿಯಲ್ಲಿ ಆಶೀರ್ವಾದ ಕೊಡುವನು. |
9. | ನೀನು ನಿನ್ನ ದೇವರಾದ ಕರ್ತನ ಆಜ್ಞೆಗಳನ್ನು ಕಾಪಾಡಿ ಆತನ ಮಾರ್ಗಗಳಲ್ಲಿ ನಡೆದರೆ ಕರ್ತನು ನಿನಗೆ ಪ್ರಮಾಣಮಾಡಿದ ಹಾಗೆ ನಿನ್ನನ್ನು ತನಗೆ ಪರಿಶುದ್ಧ ಜನವಾಗಿ ಸ್ಥಾಪಿಸುವನು. |
10. | ಆಗ ನೀನು ಕರ್ತನ ಹೆಸರಿನಿಂದ ಕರೆಯಲ್ಪಡುವದನ್ನು ಭೂಮಿಯ ಜನಗಳೆಲ್ಲಾ ನೋಡಿ ನಿನಗೆ ಭಯಪಡುವರು; |
11. | ಇದಲ್ಲದೆ ನಿನಗೆ ಕೊಡುತ್ತೇನೆಂದು ನಿನ್ನ ಪಿತೃಗಳಿಗೆ ಆಣೆ ಇಟ್ಟ ಕರ್ತನು ಭೂಮಿಯಮೇಲೆ ನಿನ್ನನ್ನು ಸರಕುಗಳಲ್ಲಿಯೂ ಗರ್ಭದ ಫಲದಲ್ಲಿಯೂ ಪಶುಗಳ ಫಲದಲ್ಲಿಯೂ ಭೂಮಿಯ ಫಲದಲ್ಲಿಯೂ ಸಮೃದ್ಧಿ ಹೊಂದುವಂತೆ ಮಾಡುವನು. |
12. | ಕರ್ತನು ಆಕಾಶ ವೆಂಬ ತನ್ನ ಒಳ್ಳೆ ಉಗ್ರಾಣವನ್ನು ನಿನಗೆ ತೆರೆದು ನಿನ್ನ ಭೂಮಿಗೆ ತಕ್ಕ ಕಾಲದಲ್ಲಿ ಮಳೆಯನ್ನು ಕೊಟ್ಟು ನಿನ್ನ ಕೈಕೆಲಸವನ್ನೆಲ್ಲಾ ಆಶೀರ್ವದಿಸುವನು; ನೀನು ಸಾಲ ತಕ್ಕೊಳ್ಳದೆ ಬಹಳ ಜನಾಂಗಗಳಿಗೆ ಸಾಲ ಕೊಡುವಿ. |
13. | ನಾನು ಈಹೊತ್ತು ನಿನಗೆ ಆಜ್ಞಾಪಿಸುವ ನಿನ್ನ ದೇವರಾದ ಕರ್ತನ ಆಜ್ಞೆಗಳನ್ನು ನೀನು ಕೇಳಿ ಕಾಪಾಡಿ ಕೈಕೊಂಡರೆ ಕರ್ತನು ನಿನ್ನನ್ನು ಬಾಲವನ್ನಲ್ಲ, ತಲೆಯಾಗಿ ಮಾಡುವನು; ನೀನು ಕೆಳಗಲ್ಲ, ಮೇಲೆಯೇ ಇರುವಿ. |
14. | ಹೀಗಿರುವದರಿಂದ ಬೇರೆ ದೇವರುಗಳನ್ನು ಹಿಂಬಾ ಲಿಸಿ ಸೇವಿಸದಂತೆ ನಾನು ಈಹೊತ್ತು ನಿನಗೆ ಆಜ್ಞಾಪಿ ಸುವ ಮಾತುಗಳನ್ನೆಲ್ಲಾ ಬಿಟ್ಟು ಎಡಕ್ಕಾದರೂ ಬಲ ಕ್ಕಾದರೂ ತೊಲಗಬಾರದು. |
15. | ಆದರೆ ನೀನು ನಿನ್ನ ದೇವರಾದ ಕರ್ತನ ಮಾತನ್ನು ಕೇಳದೆ ನಾನು ಈ ಹೊತ್ತು ನಿನಗೆ ಆಜ್ಞಾಪಿಸುವ ಆತನ ಎಲ್ಲಾ ಆಜ್ಞೆಗಳನ್ನು ಕಾಪಾಡಿ ಕೈಕೊಳ್ಳದೆ ಹೋದರೆ ಈ ಎಲ್ಲಾ ಶಾಪಗಳು ನಿನ್ನ ಮೇಲೆ ಬಂದು ನಿನಗೆ ಪ್ರಾಪ್ತವಾಗುವವು. |
16. | ಪಟ್ಟಣದಲ್ಲಿ ನಿನಗೆ ಶಾಪ; ಹೊಲದಲ್ಲಿ ನಿನಗೆ ಶಾಪ; |
17. | ನಿನ್ನ ಪುಟ್ಟಿಗೂ ಕಣಜಕ್ಕೂ ಶಾಪ. |
18. | ನಿನ್ನ ಗರ್ಭದ ಫಲಕ್ಕೂ ನಿನ್ನ ಭೂಮಿಯ ಫಲಕ್ಕೂ ಪಶುಗಳ ಹಿಂಡಿಗೂ ಕುರಿಗಳ ಮಂದೆಗಳಿಗೂ ಶಾಪ. |
19. | ಬರು ವಾಗ ನಿನಗೆ ಶಾಪ; ಹೊರಡುವಾಗ ನಿನಗೆ ಶಾಪ. |
20. | ನೀನು ನನ್ನನ್ನು ಬಿಟ್ಟು ನಿನ್ನ ದುಷ್ಕ್ರಿಯೆಗಳ ಕೆಟ್ಟತ ನದ ನಿಮಿತ್ತ ನೀನು ನಾಶವಾಗುವ ವರೆಗೂ ಶೀಘ್ರ ವಾಗಿ ಕೆಟ್ಟುಹೋಗುವ ವರೆಗೂ ನೀನು ಮಾಡುವ ಎಲ್ಲಾ ಕೈಕೆಲಸದಲ್ಲಿ ಶಾಪವನ್ನೂ ಗಾಬರಿಯನ್ನೂ ಗದರಿಕೆಯನ್ನೂ ಕರ್ತನು ನಿನ್ನ ಮೇಲೆ ಕಳುಹಿಸುವನು. |
21. | ನೀನು ಸ್ವಾಧೀನಮಾಡಿಕೊಳ್ಳುವದಕ್ಕೆ ಹೋಗುವ ದೇಶದಲ್ಲಿಂದ ಹಾಳಾಗಿ ಹೋಗುವ ವರೆಗೆ ವ್ಯಾಧಿಯು ನಿನಗೆ ಅಂಟಿಕೊಳ್ಳುವಂತೆ ಕರ್ತನು ಮಾಡುವನು. |
22. | ಕ್ಷಯರೋಗದಿಂದಲೂ ಜ್ವರದಿಂದಲೂ ಉರಿಪಾತ ದಿಂದಲೂ ಮಹಾತಾಪದಿಂದಲೂ ಕತ್ತಿಯಿಂದಲೂ ಕಾಡಿಗೆಯಿಂದಲೂ ಬಾಣಂತಿ ರೋಗದಿಂದಲೂ ಕರ್ತನು ನಿನ್ನನ್ನು ಹೊಡೆಯುವನು; ನೀನು ನಾಶ ವಾಗುವ ಪರ್ಯಂತರ ಅವು ನಿನ್ನನ್ನು ಹಿಂದಟ್ಟುವವು. |
23. | ನಿನ್ನ ತಲೆಯ ಮೇಲಿರುವ ಆಕಾಶವು ತಾಮ್ರ ವಾಗಿಯೂ ನಿನ್ನ ಕೆಳಗಿರುವ ಭೂಮಿಯು ಕಬ್ಬಿಣ ವಾಗಿಯೂ ಇರುವವು. |
24. | ಕರ್ತನು ನಿನ್ನ ದೇಶದ ಮಳೆಯನ್ನು ಹುಡಿಯೂ ಧೂಳೂ ಆಗುವಂತೆ ಮಾಡು ವನು; ನೀನು ನಾಶವಾಗುವ ವರೆಗೆ ಅದು ಆಕಾಶದಿಂದ ನಿನ್ನ ಮೇಲೆ ಇಳಿದು ಬರುವದು. |
25. | ಕರ್ತನು ನಿನ್ನನ್ನು ನಿನ್ನ ಶತ್ರುಗಳ ಮುಂದೆ ಹೊಡೆದುಬಿಡುವನು; ನೀನು ಒಂದೇ ಮಾರ್ಗದಲ್ಲಿ ಅವರಿಗೆ ವಿರೋಧವಾಗಿ ಹೊರಟು ಏಳು ಮಾರ್ಗಗಳಲ್ಲಿ ಅವರ ಮುಂದೆ ಓಡಿಹೋಗಿ ಭೂಮಿಯ ಎಲ್ಲಾ ರಾಜ್ಯಗಳಿಗೆ ಚದರಿ ಹೋಗುವಿ. |
26. | ನಿಮ್ಮ ಹೆಣಗಳು ಆಕಾಶದ ಎಲ್ಲಾ ಪಕ್ಷಿಗಳಿಗೂ ಭೂಮಿಯ ಮೃಗಗಳಿಗೂ ಆಹಾರವಾಗು ವವು; ಯಾರೂ ಅವುಗಳನ್ನು ಬೆದರಿಸುವದಿಲ್ಲ. |
27. | ಕರ್ತನು ನಿನ್ನನ್ನು ಐಗುಪ್ತದ ಹುಣ್ಣುಗಳಿಂದಲೂ ಗಡ್ಡೆವ್ಯಾಧಿಯಿಂದಲೂ ಕಜ್ಜಿಯಿಂದಲೂ ಇಸಬಿನಿಂದ ಲೂ ನೀನು ವಾಸಿಯಾಗಕೂಡದ ಹಾಗೆ ಹೊಡೆ ಯುವನು. |
28. | ಕರ್ತನು ನಿನ್ನನ್ನು ಹುಚ್ಚುತನದಿಂದಲೂ ಕುರುಡುತನದಿಂದಲೂ ಹೃದಯದ ವಿಸ್ಮಯದಿಂದಲೂ ಹೊಡೆಯುವನು. |
29. | ಕುರುಡನು ಕತ್ತಲಲ್ಲಿ ತಡವರಿಸು ವಂತೆ ಮಧ್ಯಾಹ್ನದಲ್ಲಿ ತಡವರಿಸುತ್ತಾ ಇರುವಿ; ನಿನ್ನ ಮಾರ್ಗಗಳಲ್ಲಿ ಸಫಲವಾಗುವದಿಲ್ಲ; ನೀನು ಯಾವಾ ಗಲೂ ರಕ್ಷಿಸುವವನಿಲ್ಲದೆ ಬಲಾತ್ಕಾರವನ್ನೂ ಸುಲಿಗೆ ಯನ್ನೂ ಅನುಭವಿಸುವವನಾಗುವಿ. |
30. | ಹೆಂಡತಿಯನ್ನು ನಿಶ್ಚಯಿಸಿಕೊಂಡರೆ ಮತ್ತೊಬ್ಬನು ಅವಳನ್ನು ಮದುವೆ ಮಾಡಿಕೊಳ್ಳುವನು; ಮನೆಯನ್ನು ಕಟ್ಟಿದರೆ ಅದರಲ್ಲಿ ವಾಸಮಾಡುವದಿಲ್ಲ; ದ್ರಾಕ್ಷೇತೋಟವನ್ನು ನೆಟ್ಟರೆ ಅದರ ಫಲವನ್ನು ಕೂಡಿಸುವದಿಲ್ಲ. |
31. | ನಿನ್ನ ಎತ್ತು ನಿನ್ನ ಕಣ್ಣುಗಳ ಮುಂದೆ ಕೊಯ್ಯಲ್ಪಟ್ಟಾಗ ನೀನು ಅದರಲ್ಲಿ ತಿನ್ನುವದಿಲ್ಲ; ನಿನ್ನ ಕತ್ತೆ ನಿನ್ನ ಕಣ್ಣುಗಳ ಮುಂದೆ ಬಲಾತ್ಕಾರವಾಗಿ ಒಯ್ಯಲ್ಪಟ್ಟು ನಿನಗೆ ಮತ್ತೆ ಸಿಕ್ಕುವದಿಲ್ಲ; ನಿನ್ನ ಕುರಿಗಳು ನಿನ್ನ ಶತ್ರುವಿಗೆ ಕೊಡಲ್ಪಡುವವು; ಅವುಗಳನ್ನು ರಕ್ಷಿಸುವದಕ್ಕೆ ಯಾರೂ ಇರುವದಿಲ್ಲ. |
32. | ನಿನ್ನ ಕುಮಾರ ಕುಮಾರ್ತೆಯರು ಬೇರೆ ಜನಕ್ಕೆ ಕೊಡಲ್ಪಟ್ಟಿರಲಾಗಿ ನಿನ್ನ ಕಣ್ಣುಗಳು ಅದನ್ನು ನೋಡಿ ಅವರ ನಿಮಿತ್ತ ಕ್ಷೀಣಿಸುತ್ತಾ ಇರುವಾಗ ನಿನ್ನ ಕೈಯಲ್ಲಿ ಏನೂ ತ್ರಾಣವಿಲ್ಲದೆ ಇರುವದು. |
33. | ನಿನ್ನ ಭೂಮಿಯ ಫಲವನ್ನೂ ನಿನ್ನ ಎಲ್ಲಾ ಆದಾಯವನ್ನೂ ನೀನರಿಯದ ಜನವು ತಿಂದುಬಿಡುವದು; ನೀನು ಯಾವಾ ಗಲೂ ಬಲಾತ್ಕಾರವನ್ನೂ ಸಂಕಟವನ್ನೂ ಅನುಭವಿ ಸುವಿ. |
34. | ನಿನ್ನ ಕಣ್ಣುಗಳು ನೋಡುವ ನೋಟದಿಂದ ಹುಚ್ಚನಾಗುವಿ. |
35. | ಕರ್ತನು ನಿನ್ನನ್ನು ಮೊಣಕಾಲುಗಳಲ್ಲಿಯೂ ಕಾಲು ಗಳಲ್ಲಿಯೂ ವಾಸಿಮಾಡಕೂಡದ ಕೆಟ್ಟ ಉರಿ ಹುಣ್ಣಿ ನಿಂದ ಅಂಗಾಲು ಮೊದಲುಗೊಂಡು ನೆತ್ತಿಯ ವರೆಗೆ ಹೊಡೆಯುವನು. |
36. | ಕರ್ತನು ನಿನ್ನನ್ನೂ ನೀನು ನಿನ್ನ ಮೇಲೆ ಇರಿಸಿಕೊಳ್ಳುವ ಅರಸನನ್ನೂ ನೀನೂ ನಿನ್ನ ಪಿತೃಗಳೂ ಅರಿಯದ ಜನಾಂಗದ ಬಳಿಗೆ ಹೋಗ ಮಾಡುವನು; ಅಲ್ಲಿ ಮರವೂ ಕಲ್ಲೂ ಆಗಿರುವ ಬೇರೆ ದೇವರುಗಳನ್ನು ನೀನು ಸೇವಿಸುವಿ. |
37. | ಇದಲ್ಲದೆ ದೇವರು ನಿನ್ನನ್ನು ನಡಿಸುವ ಎಲ್ಲಾ ಜನಾಂಗಗಳಲ್ಲಿ ವಿಸ್ಮಯಕ್ಕೂ ಗಾದೆಗೂ ಹಾಸ್ಯಕ್ಕೂ ಗುರಿಯಾಗುವಿ. |
38. | ಬಹಳ ಬೀಜವನ್ನು ಹೊಲಕ್ಕೆ ತಂದು ಸ್ವಲ್ಪ ಕೂಡಿಸುವಿ; ಯಾಕಂದರೆ ಮಿಡತೆ ಅದನ್ನು ತಿಂದು ಬಿಡುವದು. |
39. | ದ್ರಾಕ್ಷೇತೋಟಗಳನ್ನು ನೆಟ್ಟು ಕಾಪಾ ಡುವಿ; ಆದರೆ ದ್ರಾಕ್ಷಾರಸವನ್ನು ಕುಡಿಯುವದಿಲ್ಲ. ಹಣ್ಣು ಕೂಡಿಸುವದಿಲ್ಲ; ಯಾಕಂದರೆ ಹುಳ ಅದನ್ನು ತಿಂದುಬಿಡುವದು. |
40. | ಎಣ್ಣೇ ಮರಗಳು ನಿನ್ನ ಎಲ್ಲಾ ಮೇರೆಗಳಲ್ಲಿ ಇರುವವು. ಆದರೆ ನೀನು ಎಣ್ಣೆ ಹಚ್ಚಿಕೊಳ್ಳುವದಿಲ್ಲ; ಯಾಕಂದರೆ ನಿನ್ನ ಎಣ್ಣೇ ಫಲಗಳು ಉದುರುವವು. |
41. | ಕುಮಾರ ಕುಮಾರ್ತೆಯರನ್ನು ಪಡೆಯುವಿ; ಆದರೆ ಅವರ ಕೂಡ ಸಂತೋಷಿಸು ವದಿಲ್ಲ; ಯಾಕಂದರೆ ಅವರು ಸೆರೆಯಾಗಿ ಹೋಗು ವರು. |
42. | ನಿನ್ನ ಎಲ್ಲಾ ಮರಗಳನ್ನೂ ಹೊಲದ ಪೈರನ್ನೂ ಈ ಮಿಡತೆ ತಿಂದುಬಿಡುವದು. |
43. | ನಿನ್ನ ಮಧ್ಯದಲ್ಲಿರುವ ಪರವಾಸಿ ಮೇಲೆ ಮೇಲಕ್ಕೆ ನಿನ್ನ ಮೇಲೆ ಏರುವನು; ಆದರೆ ನೀನು ಕೆಳ ಕೆಳಗೆ ಇಳಿಯುವಿ. |
44. | ಅವನು ನಿನಗೆ ಸಾಲಕೊಡುವನು; ನೀನು ಅವನಿಗೆ ಸಾಲ ಕೊಡುವದಿಲ್ಲ. ಅವನು ತಲೆಯಾಗುವನು, ನೀನು ಬಾಲವಾಗುವಿ. |
45. | ಇದಲ್ಲದೆ ನೀನು ನಿನ್ನ ದೇವರಾದ ಕರ್ತನ ವಾಕ್ಯವನ್ನು ಕೇಳದೆ ಆತನ ಆಜ್ಞೆಗಳನ್ನೂ ಆತನು ನಿನಗೆ ಆಜ್ಞಾಪಿಸಿದ ನಿಯಮಗಳನ್ನೂ ಕೈಕೊಳ್ಳದೆ ಇದ್ದದರಿಂದ ಈ ಶಾಪಗಳೆಲ್ಲಾ ನಿನ್ನ ಮೇಲೆ ಬಂದು ನಿನ್ನನ್ನು ನಾಶಮಾಡುವ ವರೆಗೂ ನಿನ್ನನ್ನು ಹಿಂದಟ್ಟಿ ನಿನಗೆ ಪ್ರಾಪ್ತವಾಗುವವು. |
46. | ಅವು ನಿನ್ನ ಮೇಲೆಯೂ ನಿನ್ನ ಸಂತತಿಯ ಮೇಲೆಯೂ ನಿತ್ಯವಾಗಿ ಗುರುತೂ ಅದ್ಭುತವೂ ಆಗಿರುವವು. |
47. | ನೀನು ಎಲ್ಲವುಗಳ ಸಮೃದ್ಧಿಯಲ್ಲಿ ನಿನ್ನ ದೇವರಾದ ಕರ್ತನಿಗೆ ಸಂತೋಷದಿಂದಲೂ ಮನಸ್ಸಿನ ಸೌಖ್ಯ ದಿಂದಲೂ ಸೇವಿಸದೆ ಇದದ್ದರಿಂದ |
48. | ಹಸಿವೆಯಲ್ಲಿ, ದಾಹದಲ್ಲಿ, ಬೆತ್ತಲೆಯಲ್ಲಿ, ಎಲ್ಲವುಗಳ ಕೊರತೆಯಲ್ಲಿ ದೇವರು ನಿನ್ನ ಮೇಲೆ ಕಳುಹಿಸುವ ನಿನ್ನ ಶತ್ರುಗಳನ್ನು ಸೇವಿಸಬೇಕು; ಆತನು ನಿನ್ನನ್ನು ನಾಶಮಾಡುವ ವರೆಗೆ ಕಬ್ಬಿಣದ ನೊಗವನ್ನು ನಿನ್ನ ಕುತ್ತಿಗೆಯ ಮೇಲೆ ಹೊರಿ ಸುವನು. |
49. | ಕರ್ತನು ದೂರದಿಂದ ಅಂದರೆ ಭೂಮಿಯ ಅಂತ್ಯದಿಂದ ಹಾರುವ ಹದ್ದಿಗೆ ಸಮಾನವಾದ ಜನಾಂಗ ವನ್ನೂ ನಿನಗೆ ತಿಳಿಯದ ಭಾಷೆಯ ಜನಾಂಗವನ್ನೂ |
50. | ಮುದುಕರ ಮುಖದಾಕ್ಷಿಣ್ಯ ನೋಡದೆಯೂ ಚಿಕ್ಕವ ರಿಗೆ ದಯೆತೋರಿಸದೆ ಇರುವಂಥ ಕಠಿಣ ಮುಖವುಳ್ಳ ಜನಾಂಗವನ್ನೂ ನಿನ್ನ ಮೇಲೆ ಬರಮಾಡುವನು. |
51. | ಅದು ನಿನ್ನ ಪಶುಗಳ ಫಲವನ್ನೂ ನಿನ್ನ ಭೂಮಿಯ ಫಲವನ್ನೂ ನೀನು ನಾಶವಾಗುವ ವರೆಗೆ ತಿಂದು ಬಿಡುವದು; ಅದು ನಿನ್ನನ್ನು ಕೆಡಿಸುವ ವರೆಗೆ ಧಾನ್ಯ ದ್ರಾಕ್ಷಾರಸ ಎಣ್ಣೆಗಳನ್ನೂ ಪಶುಗಳ ಅಭಿವೃದ್ಧಿಯನ್ನೂ ಕುರಿಗಳ ಮಂದೆಗಳನ್ನೂ ನಿನಗೆ ಉಳಿಸದು. |
52. | ನಿನ್ನ ದೇಶದಲ್ಲೆಲ್ಲಾ ನೀನು ನಂಬಿಕೊಂಡಿರುವ ಉದ್ದವಾದ ಮತ್ತು ಭದ್ರವಾದ ನಿನ್ನ ಗೋಡೆಗಳೆಲ್ಲಾ ಬೀಳುವ ವರೆಗೆ ನಿನ್ನ ಎಲ್ಲಾ ಬಾಗಲುಗಳಲ್ಲಿ ನಿನಗೆ ಮುತ್ತಿಗೆ ಹಾಕುವದು; ನಿನ್ನ ದೇವರಾದ ಕರ್ತನು ನಿನಗೆ ಕೊಟ್ಟ ನಿನ್ನ ದೇಶದಲ್ಲೆಲ್ಲಾ ನಿನ್ನ ಎಲ್ಲಾ ಬಾಗಲುಗಳಲ್ಲಿ ನಿನಗೆ ಮುತ್ತಿಗೆಹಾಕುವನು. |
53. | ಆಗ ಮುತ್ತಿಗೆಯಲ್ಲಿಯೂ ನಿನ್ನ ಶತ್ರುಗಳು ನಿನಗೆ ಮಾಡುವ ಇಕ್ಕಟ್ಟಿನಲ್ಲಿಯೂ ನಿನ್ನ ಗರ್ಭದ ಫಲವನ್ನೂ ನಿನ್ನ ದೇವರಾದ ಕರ್ತನು ನಿನಗೆ ಕೊಟ್ಟ ಕುಮಾರ ಕುಮಾರ್ತೆಯರ ಮಾಂಸವನ್ನೂ ತಿನ್ನುವಿ. |
54. | ನಿನ್ನಲ್ಲಿ ಮೃದುವಾದವನೂ ಬಹಳ ಸೂಕ್ಷ್ಮ ಗುಣವುಳ್ಳವನೂ ಯಾವನೋ ಅವನ ಕಣ್ಣು ತನ್ನ ಸಹೋದರನ ಕಡೆಗೂ ತನ್ನ ಮಗ್ಗುಲಲ್ಲಿರುವ ತನ್ನ ಹೆಂಡತಿಯ ಕಡೆಗೂ ಅವನು ಉಳಿಸಿಕೊಳ್ಳುವ ಮಕ್ಕಳ ಕಡೆಗೂ ಕಠಿಣವಾಗುವದು. |
55. | ಮುತ್ತಿಗೆಯಲ್ಲಿಯೂ ನಿನ್ನ ಶತ್ರುಗಳು ನಿನ್ನ ಎಲ್ಲಾ ಬಾಗಲುಗಳಲ್ಲಿ ನಿನಗೆ ಮಾಡುವ ಇಕ್ಕಟ್ಟಿನಲ್ಲಿಯೂ ತನಗೆ ಸಾಕಾಗುವದಿಲ್ಲ ಅಂದುಕೊಂಡು ಅವನು ತಿನ್ನುವ ತನ್ನ ಮಕ್ಕಳ ಮಾಂಸದಲ್ಲಿ ಅವರೊಳಗೆ ಒಬ್ಬನಿಗಾದರೂ ಏನೂ ಕೊಡುವದಿಲ್ಲ. |
56. | ನಿನ್ನಲ್ಲಿ ಮೃದುವಾದವಳೂ ಬಹಳ ಸೂಕ್ಷ್ಮಗುಣವುಳ್ಳವಳೂ ಯಾವಳೋ ಮೃದುತನ ದಿಂದಲೂ ಸೂಕ್ಷ್ಮಗುಣದಿಂದಲೂ ನೆಲಕ್ಕೆ ಅಂಗಾಲನ್ನು ನಿಲ್ಲಿಸಲಾರದವಳು ಯಾವಳೋ ಅವಳು ತನ್ನ ಮಗ್ಗುಲ ಲ್ಲಿರುವ ಗಂಡನ ಕಡೆಗೂ ತನ್ನ ಮಗನ, ಮಗಳ ಕಡೆಗೂ |
57. | ತನ್ನ ಕಾಲುಗಳ ನಡುವೆಯಿಂದ ಬರುವ ಶಿಶುವಿನ ಕಡೆಗೂ ತಾನು ಹೆತ್ತಮಕ್ಕಳ ಕಡೆಗೂ ಕಠಿಣ ಕಣ್ಣುಳ್ಳವಳಾಗಿರುವಳು; ಯಾಕಂದರೆ ಎಲ್ಲಾದರ ಕೊರತೆಯಲ್ಲಿಯೂ ಮುತ್ತಿಗೆಯಲ್ಲಿಯೂ ನಿನ್ನ ಶತ್ರು ನಿನಗೆ ನಿನ್ನ ಬಾಗಲುಗಳಲ್ಲಿ ಮಾಡುವ ಇಕ್ಕಟ್ಟಿನಲ್ಲಿಯೂ ಅವರನ್ನು ಗುಪ್ತವಾಗಿ ತಿಂದು ಬಿಡುವಳು. |
58. | ನಿನ್ನ ದೇವರಾದ ಕರ್ತನೆಂಬ ಈ ಘನವುಳ್ಳ ಭಯಂಕರವಾದ ಹೆಸರಿಗೆ ಭಯಪಡಬೇಕೆಂದು ಈ ಪುಸ್ತಕದಲ್ಲಿ ಬರೆದಿರುವ ಈ ನ್ಯಾಯಪ್ರಮಾಣದ ಮಾತುಗಳನ್ನು ಕಾಪಾಡದೆ, ಕೈಕೊಳ್ಳದೆ ಹೋದರೆ |
59. | ಕರ್ತನು ನಿನ್ನ ಬಾಧೆಗಳನ್ನೂ ನಿನ್ನ ಸಂತತಿಯ ಬಾಧೆಗಳನ್ನೂ ಆಶ್ಚರ್ಯವಾಗ ಮಾಡುವನು; ಅವು ದೊಡ್ಡದಾದ ಮತ್ತು ಸ್ಥಿರವಾದ ಬಾಧೆಗಳೂ ಘೋರ ವಾದ ಮತ್ತು ಸ್ಥಿರವಾದ ರೋಗಗಳೂ ಆಗುವವು. |
60. | ಇದಲ್ಲದೆ ನೀನು ಹೆದರಿಕೊಂಡ ಐಗುಪ್ತದ ರೋಗ ಗಳನ್ನೆಲ್ಲಾ ಆತನು ತಿರಿಗಿ ನಿನ್ನ ಮೇಲೆ ಬರಮಾಡು ವನು; ಅವು ನಿನ್ನನ್ನು ಅಂಟಿಕೊಳ್ಳುವವು. |
61. | ನೀನು ಪೂರ್ಣವಾಗಿ ನಾಶವಾಗುವ ವರೆಗೆ ಈ ನ್ಯಾಯ ಪ್ರಮಾಣದ ಪುಸ್ತಕದಲ್ಲಿ ಬರೆಯದ ರೋಗಗಳನ್ನೂ ಬೇನೆಗಳನ್ನೂ ಕರ್ತನು ನಿನ್ನ ಮೇಲೆ ತರುವನು. |
62. | ಆಗ ನೀನು ನಿನ್ನ ದೇವರಾದ ಕರ್ತನ ಮಾತನ್ನು ಕೇಳದೆ ಇರುವದರಿಂದ ನೀವು ಅಸಂಖ್ಯವಾದ ಆಕಾಶದ ನಕ್ಷತ್ರಗಳ ಹಾಗಿದ್ದದ್ದಕ್ಕೆ ಬದಲಾಗಿ ಸ್ವಲ್ಪ ಮಂದಿಯಾಗಿ ಉಳಿಯುವಿರಿ. |
63. | ಆಗುವದೇನಂದರೆ, ಕರ್ತನು ಹೇಗೆ ನಿಮಗೆ ಒಳ್ಳೇದನ್ನು ಮಾಡುವದಕ್ಕೂ ನಿಮ್ಮನ್ನು ಹೆಚ್ಚಿಸು ವದಕ್ಕೂ ನಿಮಗೋಸ್ಕರ ಸಂತೋಷಿಸಿದನೋ ಹಾಗೆ ಕರ್ತನು ನಿಮ್ಮನ್ನು ಕೆಡಿಸುವದಕ್ಕೂ ನಿಮ್ಮನ್ನು ನಾಶ ಮಾಡುವದಕ್ಕೂ ನಿಮಗೆ ವಿರೋಧವಾಗಿ ಸಂತೋಷಿ ಸುವನು; ನೀವು ಸ್ವಾಧೀನಮಾಡಿಕೊಳ್ಳುವದಕ್ಕೆ ಹೋಗುವ ದೇಶದಿಂದ ನೀನು ಕೀಳಲ್ಪಡುವಿ. |
64. | ಇದ ಲ್ಲದೆ ಕರ್ತನು ನಿನ್ನನ್ನು ಭೂಮಿಯ ಈ ಮೇರೆಯಿಂದ ಆ ಮೇರೆಯ ವರೆಗೂ ಎಲ್ಲಾ ಜನಗಳಲ್ಲಿ ಚದರಿಸು ವನು; ಅಲ್ಲಿ ನೀನೂ ನಿನ್ನ ಪಿತೃಗಳೂ ತಿಳಿಯದಂಥ ಮರವೂ ಕಲ್ಲೂ ಆಗಿರುವಂಥ ಬೇರೆ ದೇವರುಗಳನ್ನು ಸೇವಿಸುವಿ. |
65. | ಈ ಜನಾಂಗಗಳಲ್ಲಿ ನಿನಗೆ ನೆಮ್ಮದಿ ಇರುವದಿಲ್ಲ; ನಿನ್ನ ಅಂಗಾಲಿಗೆ ವಿಶ್ರಾಂತಿ ಆಗುವದಿಲ್ಲ; ಅಲ್ಲಿ ಕರ್ತನು ನಿನಗೆ ನಡುಗುವ ಹೃದಯವನ್ನೂ ಕ್ಷೀಣಿಸುವ ಕಣ್ಣುಗಳನ್ನೂ ಕುಗ್ಗಿದ ಮನಸ್ಸನ್ನೂ ಕೊಡು ವನು. |
66. | ನಿನ್ನ ಜೀವವು ನಿನ್ನ ಮುಂದೆ ತೂಗಾಡುವದು. ರಾತ್ರಿ ಹಗಲು ನಿನ್ನ ಜೀವನಕ್ಕೆ ನಿಶ್ಚಯವಿಲ್ಲದೆ ಹೆದರುವಿ. |
67. | ನಿನ್ನ ಹೃದಯದಲ್ಲಿ ಆಗುವ ಹೆದರಿಕೆಯ ನಿಮಿತ್ತವೂ ನಿನ್ನ ಕಣ್ಣುಗಳು ನೋಡುವ ನೋಟದ ನಿಮಿತ್ತವೂ ಮುಂಜಾನೆಯಲ್ಲಿ--ಅಯ್ಯೋ, ಸಂಜೆ ಆಗ ಬೇಕು ಅನ್ನುವಿ. ಸಂಜೆಯಲ್ಲಿ--ಅಯ್ಯೋ, ಮುಂಜಾನೆ ಆಗಬೇಕು ಅನ್ನುವಿ. |
68. | ಇದಲ್ಲದೆ ಕರ್ತನು--ನೀನು ಇನ್ನು ಮೇಲೆ ನೋಡುವದಿಲ್ಲವೆಂದು ನಾನು ಹೇಳಿದ ಮಾರ್ಗದಿಂದ ಹಡಗುಗಳಲ್ಲಿ ನಿನ್ನನ್ನು ಐಗುಪ್ತ್ಯಕ್ಕೆ ತಿರಿಗಿ ಬರಮಾಡುವೆನು; ಅಲ್ಲಿ ದಾಸ ರಾಗಿಯೂ ದಾಸಿಗಳಾಗಿಯೂ ನಿಮ್ಮ ಶತ್ರುಗಳಿಗೆ ಮಾರಲ್ಪಡುವಿರಿ. ಆದರೆ ಕೊಂಡುಕೊಳ್ಳುವವ ನೊಬ್ಬನೂ ಇರುವದಿಲ್ಲ. |
← Deuteronomy (28/34) → |