← Deuteronomy (25/34) → |
1. | ಜನರಲ್ಲಿ ಏನಾದರೂ ವಿರೋಧವಿದ್ದರೆ ಅವರು ನ್ಯಾಯತೀರ್ವಿಕೆ ಹೊಂದುವ ಹಾಗೆ ನ್ಯಾಯಾಧಿಪತಿಗಳ ಬಳಿಗೆ ನ್ಯಾಯಕ್ಕೆ ಬಂದರೆ ನೀತಿವಂತನನ್ನು ನೀತಿವಂತನೆಂದೂ ದುಷ್ಟನನ್ನು ಅಪರಾಧಿಯೆಂದೂ ನ್ಯಾಯತೀರಿಸಬೇಕು. |
2. | ಇದಲ್ಲದೆ ಆ ದುಷ್ಟನು ಹೊಡೆಯಲ್ಪಡಲು ಯೋಗ್ಯನಾದರೆ ನ್ಯಾಯಾಧಿಪತಿಯು ಅವನನ್ನು ನೆಲಕ್ಕೆ ಬೀಳಿಸಿ ಅವನ ದುಷ್ಟತ್ವದ ಪ್ರಕಾರ ಅವನಿಗೆ ಲೆಕ್ಕದಿಂದ ಹೊಡಿಸಬೇಕು. |
3. | ನಾಲ್ವತ್ತು ಏಟು ಅವನಿಗೆ ಹೊಡಿಸಬಹುದು, ಹೆಚ್ಚಲ್ಲ ಇದಕ್ಕಿಂತ ಹೆಚ್ಚು. ಅವನಿಗೆ ಬಹಳ ಏಟುಗಳನ್ನು ಹೊಡೆದರೆ ನಿನ್ನ ಸಹೋದರನು ನಿನ್ನ ಕಣ್ಣುಗಳಿಗೆ ನೀಚನೆಂದು ಕಾಣಿಸಾನು. |
4. | ಕಣತುಳಿಯುವಾಗ ಎತ್ತಿನ ಬಾಯಿ ಕಟ್ಟಬಾರದು. |
5. | ಸಹೋದರರು ಕೂಡಿ ವಾಸಮಾಡುವಾಗ ಅವರಲ್ಲಿ ಒಬ್ಬನು ಮಕ್ಕಳಿಲ್ಲದೆ ಸತ್ತರೆ ಆ ಸತ್ತವನ ಹೆಂಡತಿ ಮನೆ ಬಿಟ್ಟು ಅನ್ಯನ ಹೆಂಡತಿಯಾಗಬಾರದು; ಗಂಡನ ಸಹೋದರನು ಅವಳ ಬಳಿಗೆ ಬಂದು ಅವಳನ್ನು ಹೆಂಡತಿಯಾಗಿ ತಕ್ಕೊಂಡು ಗಂಡನ ಸಹೋದರನಿಗೆ ತಕ್ಕ ಹಾಗೆ ಅವಳಿಗೆ ನಡಿಸಬೇಕು. |
6. | ಆಗ ಅವಳು ಹೆರುವ ಚೊಚ್ಚಲ ಮಗನು ಸತ್ತವನಾದ ಅವನ ಸಹೋದರನ ಹೆಸರಿಗೆ ಇವನ ಹೆಸರು ಇಸ್ರಾಯೇಲಿನಲ್ಲಿಂದ ಅಳಿಸಲ್ಪಡದ ಹಾಗೆ ನಿಲ್ಲಬೇಕು. |
7. | ಆದರೆ ಆ ಮನುಷ್ಯನು ತನ್ನ ಅತ್ತಿಗೆಯನ್ನು ತಕ್ಕೊಳ್ಳಲು ಮನಸ್ಸಿಲ್ಲದಿದ್ದರೆ ಅತ್ತಿಗೆಯು ಬಾಗಲಿನ ಬಳಿಗೆ ಹಿರಿಯರ ಹತ್ತಿರ ಬಂದು--ನನ್ನ ಗಂಡನ ಸಹೋದರನು ತನ್ನ ಸಹೋದರನಿಗೆ ಇಸ್ರಾಯೇಲಿನಲ್ಲಿ ಹೆಸರನ್ನು ಎಬ್ಬಿಸಲು ಮನಸ್ಸಿಲ್ಲದೆ ನನಗೆ ಗಂಡನ ಸಹೋದರನಾಗಿ ತನ್ನ ಕರ್ತವ್ಯವನ್ನು ನಡಿಸಲು ಮನಸ್ಸಿಲ್ಲದೆ ಇದ್ದಾನೆ ಎಂದು ಹೇಳಬೇಕು. |
8. | ಆಗ ಪಟ್ಟಣದ ಹಿರಿಯರು ಅವನನ್ನು ಕರೆದು ಅವನ ಸಂಗಡ ಮಾತನಾಡಬೇಕು; ಅವನು--ಅವಳನ್ನು ತಕ್ಕೊಳ್ಳುವದಕ್ಕೆ ನನಗೆ ಮನಸ್ಸಿಲ್ಲ ವೆಂದು ಸಮರ್ಥಿಸಿದರೆ |
9. | ಅವನ ಅತ್ತಿಗೆ ಹಿರಿಯರ ಮುಂದೆ ಅವನ ಬಳಿಗೆ ಬಂದು ಕೆರವನ್ನು ಅವನ ಪಾದದಿಂದ ಬಿಡಿಸಿ ಅವನ ಮುಖದಲ್ಲಿ ಉಗುಳಿ ಉತ್ತರ ಕೊಟ್ಟು--ತನ್ನ ಸಹೋದರನ ಮನೆಯನ್ನು ಕಟ್ಟದವನಿಗೆ ಹೀಗೆಯೇ ಮಾಡಬೇಕು. |
10. | ಆ ಮೇಲೆ ಅವನಿಗೆ ಇಸ್ರಾಯೇಲಿನಲ್ಲಿ ಕೆರಬಿಡಿಸಿಕೊಂಡವನ ಮನೆ ಎಂದು ಹೆಸರಾಗಬೇಕು ಎಂದು ಹೇಳಬೇಕು. |
11. | ಇಬ್ಬರು ಮನುಷ್ಯರು ಒಬ್ಬನ ಸಂಗಡ ಒಬ್ಬನು ಹೋರಾಡುವಾಗ ಒಬ್ಬನ ಹೆಂಡತಿ ತನ್ನ ಗಂಡನನ್ನು ಹೊಡೆಯುವವನ ಕೈಯಿಂದ ಬಿಡಿಸುವದಕ್ಕೆ ಸವಿಾಪ ಬಂದು ಕೈಚಾಚಿ ಅವನ ಮಾನಸ್ಥಾನವನ್ನು ಹಿಡಿದರೆ |
12. | ಅವಳ ಕೈಯನ್ನು ಕಡಿದುಹಾಕಬೇಕು; ನಿನ್ನ ಕಣ್ಣು ಕರುಣಿಸಬಾರದು. |
13. | ನಿನ್ನ ಚೀಲದಲ್ಲಿ ದೊಡ್ಡದು ಒಂದು, ಸಣ್ಣದು ಒಂದು ಹೀಗೆ ವಿವಿಧ ತೂಕಗಳು ನಿನಗಿರಬಾರದು. |
14. | ನಿನ್ನ ಮನೆಯಲ್ಲಿ ದೊಡ್ಡದು ಒಂದು, ಸಣ್ಣದು ಒಂದು ವಿವಿಧವಾದ ಅಳತೆಗಳು ನಿನಗಿರಬಾರದು. |
15. | ಪೂರ್ಣ ನ್ಯಾಯವಾದ ತೂಕ ನಿನಗಿರಬೇಕು; ಸಂಪೂರ್ಣ ನ್ಯಾಯವಾದ ಅಳತೆ ನಿನಗಿರಬೇಕು; ಆಗ ನಿನ್ನ ದೇವರಾದ ಕರ್ತನು ನಿನಗೆ ಕೊಡುವ ಭೂಮಿಯ ಮೇಲೆ ನಿನ್ನ ದಿನಗಳು ಹೆಚ್ಚಾಗುವವು. |
16. | ಅಂಥವು ಗಳನ್ನು ಮಾಡುವವರೆಲ್ಲರೂ ಅನ್ಯಾಯಮಾಡುವವ ರೆಲ್ಲರೂ ನಿನ್ನ ದೇವರಾದ ಕರ್ತನಿಗೆ ಅಸಹ್ಯ. |
17. | ನೀವು ಐಗುಪ್ತವನ್ನು ಬಿಟ್ಟು ಬರುವ ಮಾರ್ಗ ನದಲ್ಲಿ ಅಮಾಲೇಕ್ಯನು ನಿನಗೆ ಮಾಡಿದ್ದನ್ನು ಜ್ಞಾಪಕ ಮಾಡಿಕೊ. |
18. | ಅವನು ಮಾರ್ಗದಲ್ಲಿ ನಿನಗೆ ಎದುರು ಗೊಂಡು ದೇವರಿಗೆ ಭಯಪಡದೆ ನೀನು ಆಯಾಸವುಳ್ಳ ವನೂ ದಣಿದವನೂ ಆಗಿರುವ ಸಮಯದಲ್ಲಿ ನಿನ್ನ ಹಿಂದೆ ಬಿದ್ದ ಬಲಹೀನರೆಲ್ಲರನ್ನು ನಿನ್ನ ಹಿಂಭಾಗದಲ್ಲಿ ಸಂಹಾರಮಾಡಿದನು. |
19. | ಆದದರಿಂದ ನಿನ್ನ ದೇವರಾದ ಕರ್ತನು ನಿನಗೆ ವಶಮಾಡಿಕೊಳ್ಳುವದಕ್ಕೆ ಸ್ವಾಸ್ತ್ಯವಾಗಿ ಕೊಡುವ ದೇಶದಲ್ಲಿ ಸುತ್ತಲಾಗಿರುವ ಶತ್ರುಗಳಿಂದ ನಿನ್ನ ದೇವರಾದ ಕರ್ತನು ನಿನ್ನನ್ನು ಬಿಡಿಸಿ ವಿಶ್ರಾಂತಿ ಕೊಟ್ಟ ಮೇಲೆ ಆಮಾಲೇಕ್ಯನ ಜ್ಞಾಪಕವನ್ನು ಆಕಾಶದ ಕೆಳಗಿಂದ ಅಳಿಸಿಬಿಡಬೇಕು; ಇದನ್ನು ಮರೆಯಬಾರದು. |
← Deuteronomy (25/34) → |