← Deuteronomy (23/34) → |
1. | ಬೀಜದಲ್ಲಿ ಗಾಯವುಳ್ಳವನೂ ರಹಸ್ಯಾಂಗ ಕೊಯ್ಯಲ್ಪಟ್ಟವನೂ ಕರ್ತನ ಸಭೆಗೆ ಸೇರ ಬಾರದು. |
2. | ಜಾರಳ ಮಗನು ಕರ್ತನ ಸಭೆಗೆ ಸೇರ ಬಾರದು; ಅವನ ಹತ್ತನೇ ತಲಾಂತರದವರೆಗೂ ಕರ್ತನ ಸಭೆಗೆ ಸೇರಬಾರದು. |
3. | ಅಮ್ಮೋನ್ಯನು ಇಲ್ಲವೆ ಮೋವಾಬ್ಯನು ಕರ್ತನ ಸಭೆಗೆ ಸೇರಬಾರದು. ಹತ್ತನೇ ತಲಾಂತರವಾದರೂ ಅವರು ಎಂದಿಗೂ ಕರ್ತನ ಸಭೆಯಲ್ಲಿ ಸೇರಬಾರದು. |
4. | ನೀವು ಐಗುಪ್ತವನ್ನು ಬಿಟ್ಟು ಬರುವಾಗ ಅವರು ನಿಮಗೆ ರೊಟ್ಟಿಯನ್ನೂ ನೀರನ್ನೂ ಕೊಡುವದಕ್ಕೆ ಎದು ರಾಗಿ ಬರಲಿಲ್ಲ; ನಿಮ್ಮನ್ನು ಶಪಿಸುವದಕ್ಕೆ ಮೆಸೊಪೊ ತಾಮ್ಯದಲ್ಲಿರುವ ಪೆತೋರಿನಿಂದ ಬೆಯೋರನ ಮಗ ನಾದ ಬಿಳಾಮನನ್ನು ಕೂಲಿ ಕೊಟ್ಟು ನಿಮಗೆ ವಿರೋಧ ವಾಗಿ ತರಿಸಿದರು. |
5. | ಆದರೆ ನಿನ್ನ ದೇವರಾದ ಕರ್ತನು ಬಿಳಾಮನನ್ನು ಕೇಳಲೊಲ್ಲದೆ ಇದ್ದನು; ನಿನ್ನ ದೇವರಾದ ಕರ್ತನು ಆ ಶಾಪವನ್ನು ನಿನಗೆ ಆಶೀರ್ವಾದಕ್ಕೆ ತಿರುಗಿ ಸಿದನು; ಯಾಕಂದರೆ ನಿನ್ನ ದೇವರಾದ ಕರ್ತನು ನಿನ್ನನ್ನು ಪ್ರೀತಿಮಾಡಿದನು. |
6. | ನೀನು ಇರುವ ವರೆಗೆ ಎಂದಿಗೂ ಅವರ ಸಮಾಧಾನವನ್ನೂ ಅವರ ಮೇಲನ್ನೂ ಹುಡುಕ ಬಾರದು. |
7. | ಎದೋಮ್ಯನನ್ನು ಅಸಹ್ಯಿಸಬೇಡ; ಅವನು ನಿನ್ನ ಸಹೋದರನು; ಐಗುಪ್ತ್ಯನನ್ನು ಅಸಹ್ಯಿಸಬೇಡ; ಅವನ ದೇಶದಲ್ಲಿ ನೀನು ಪರವಾಸಿಯಾಗಿದ್ದಿ. |
8. | ಅವರಿಗೆ ಹುಟ್ಟುವ ಮಕ್ಕಳು ಮೂರನೇ ತಲಾಂತರದಲ್ಲಿ ಕರ್ತನ ಸಭೆಯಲ್ಲಿ ಸೇರಬಹುದು. |
9. | ನೀನು ನಿನ್ನ ಶತ್ರುಗಳಿಗೆ ವಿರೋಧವಾಗಿ ಸೈನ್ಯ ದೊಡನೆ ಹೊರಟರೆ ದುಷ್ಟ ಕಾರ್ಯಗಳಿಗೆಲ್ಲಾ ದೂರ ವಾಗಿರುವಂತೆ ನಿನ್ನನ್ನು ಕಾಪಾಡಿಕೋ. |
10. | ರಾತ್ರಿಯಲ್ಲಿ ಸಂಭವಿಸಿದ ಕಾರ್ಯದ ದೆಸೆಯಿಂದ ಶುದ್ಧವಲ್ಲದ ಮನುಷ್ಯನು ನಿಮ್ಮಲ್ಲಿದ್ದರೆ ಅವನು ಪಾಳೆಯದ ಹೊರಗೆ ಹೋಗಬೇಕು; ಪಾಳೆಯದ ಒಳಗೆ ಬರಬಾರದು. |
11. | ಸಂಜೆ ಆಗುತ್ತಿರುವಾಗ ಅವನು ನೀರಿನಲ್ಲಿ ತೊಳ ಕೊಳ್ಳಲಿ; ಸೂರ್ಯನು ಮುಣುಗಿದಾಗ ಪಾಳೆಯದ ಒಳಗೆ ತಿರಿಗಿ ಬರಲಿ. |
12. | ಇದಲ್ಲದೆ ನೀನು ಹೊರಗಡೆ ಹೋಗುವದಕ್ಕೆ ನಿನಗೆ ಪಾಳೆಯದ ಹೊರಗೆ ಸ್ಥಳವಿರಬೇಕು. |
13. | ನಿನ್ನ ಆಯುಧದೊಂದಿಗೆ ಮೊಳೆ ಇರಬೇಕು; ನೀನು ಹೊರಗೆ ಕೂತುಕೊಂಡಾಗ ಅದರಿಂದ ಅಗಿದು ನಿನ್ನಿಂದ ಹೊರಡು ವದನ್ನು ಮುಚ್ಚಬೇಕು. |
14. | ನಿನ್ನ ದೇವರಾದ ಕರ್ತನು ನಿನ್ನನ್ನು ರಕ್ಷಿಸುವದಕ್ಕೂ ನಿನ್ನ ಶತ್ರುಗಳನ್ನು ನಿನ್ನ ಮುಂದೆ ಒಪ್ಪಿಸಿಬಿಡುವದಕ್ಕೂ ಪಾಳೆಯದ ಮಧ್ಯದಲ್ಲಿ ಸಂಚಾರ ಮಾಡುತ್ತಾನೆ. ಆತನು ನಿನ್ನಲ್ಲಿ ಅಶುದ್ಧವಾದ ಕಾರ್ಯ ವನ್ನು ನೋಡಿ ನಿನ್ನನ್ನು ಬಿಟ್ಟು ತಿರುಗದ ಹಾಗೆ ನಿನ್ನ ಪಾಳೆಯವು ಪರಿಶುದ್ಧವಾಗಿರಬೇಕು. |
15. | ತನ್ನ ಯಜಮಾನನನ್ನು ಬಿಟ್ಟು ನಿನ್ನ ಬಳಿಗೆ ತಪ್ಪಿಸಿ ಕೊಂಡು ಬಂದ ದಾಸನನ್ನು ತನ್ನ ಯಜಮಾನನಿಗೆ ಒಪ್ಪಿಸಬಾರದು. |
16. | ಅವನು ನಿನ್ನ ಸಂಗಡ ನಿನ್ನ ಮಧ್ಯ ದಲ್ಲಿ ಅವನು ಆದುಕೊಂಡಲ್ಲಿ ನಿನ್ನ ಬಾಗಲುಗಳ ಒಂದರಲ್ಲಿ ಅವನಿಗೆ ಒಳ್ಳೇದೆಂದು ತೋಚಿದಲ್ಲಿ ವಾಸ ವಾಗಿರಬೇಕು; ಅವನನ್ನು ಉಪದ್ರಪಡಿಸಬಾರದು. |
17. | ಇಸ್ರಾಯೇಲಿನ ಕುಮಾರ್ತೆಯರಲ್ಲಿ ಸೂಳೆ ಇರ ಬಾರದು; ಇಸ್ರಾಯೇಲಿನ ಕುಮಾರರಲ್ಲಿ ಪುರುಷ ಸಂಗದವನು ಇರಬಾರದು. |
18. | ಸೂಳೆಯ ಕೂಲಿಯನ್ನು ಇಲ್ಲವೆ ನಾಯಿಯ ಕ್ರಯವನ್ನು ಯಾವದೊಂದು ಪ್ರಮಾಣವಾಗಿ ನಿನ್ನ ದೇವರಾದ ಕರ್ತನ ಮನೆಗೆ ತರಬಾರದು. ಅವೆರಡು ನಿನ್ನ ದೇವರಾದ ಕರ್ತನಿಗೆ ಅಸಹ್ಯ. |
19. | ನಿನ್ನ ಸಹೋದರನಿಗೆ ಹಣವನ್ನಾಗಲಿ, ಊಟವ ನ್ನಾಗಲಿ, ಬಡ್ಡಿಗೆ ಕೊಡುವ ಯಾವದನ್ನಾಗಲಿ ಬಡ್ಡಿಗೆ ಕೊಡಬಾರದು. |
20. | ಪರನಿಗೆ ಬಡ್ಡಿಗೋಸ್ಕರ ಕೊಡ ಬಹುದು; ಆದರೆ ನಿನ್ನ ಸಹೋದರನಿಗೆ ನೀನು ಸ್ವಾಧೀನ ಮಾಡಿಕೊಳ್ಳಲು ಹೋಗುವ ದೇಶದಲ್ಲಿ ನಿನ್ನ ದೇವರಾದ ಕರ್ತನು ನಿನ್ನನ್ನು ನಿನ್ನ ಎಲ್ಲಾ ಕೈ ಕೆಲಸದಲ್ಲಿ ಆಶೀರ್ವ ದಿಸುವ ಹಾಗೆ ಬಡ್ಡಿಗೆ ಕೊಡಬಾರದು. |
21. | ನೀನು ನಿನ್ನ ದೇವರಾದ ಕರ್ತನಿಗೆ ಪ್ರಮಾಣ ಮಾಡಿದ ಮೇಲೆ ಅದನ್ನು ಸಲ್ಲಿಸುವದಕ್ಕೆ ತಡಮಾಡ ಬೇಡ; ನಿನ್ನ ದೇವರಾದ ಕರ್ತನು ಅದನ್ನು ನಿಶ್ಚಯ ವಾಗಿಯೂ ನಿನ್ನ ಬಳಿಯಲ್ಲಿ ವಿಚಾರಿಸುವನು; ಅದು ನಿನ್ನಲ್ಲಿ ಪಾಪವಾಗಿರುವದು. |
22. | ಆದರೆ ನೀನು ಪ್ರಮಾಣ ಮಾಡಿರದಿದ್ದರೆ ನಿನ್ನ ಮೇಲೆ ಪಾಪವಿರು ವದಿಲ್ಲ. |
23. | ನಿನ್ನ ತುಟಿಗಳಿಂದ ಹೊರಟದ್ದನ್ನು ಕಾಪಾಡಿ ನೀನು ಉಚಿತವಾಗಿ ನಿನ್ನ ದೇವರಾದ ಕರ್ತನಿಗೆ ಪ್ರಮಾಣಮಾಡಿದಂತೆ ನಿನ್ನ ಬಾಯಿಂದ ಪ್ರಮಾಣ ಮಾಡಬೇಕು. |
24. | ನಿನ್ನ ನೆರೆಯವನ ದ್ರಾಕ್ಷೇತೋಟಕ್ಕೆ ಬಂದರೆ ನಿನಗೆ ಮನಸ್ಸು ಬಂದ ಹಾಗೆ ತೃಪ್ತಿಯಾಗುವ ವರೆಗೆ ಹಣ್ಣುಗಳನ್ನು ತಿನ್ನಬಹುದು; |
25. | ಆದರೆ ನಿನ್ನ ಚೀಲದಲ್ಲಿ ಹಾಕಬಾರದು. ನಿನ್ನ ನೆರೆಯವನ ಪೈರಿಗೆ ಬಂದರೆಕೈಯಿಂದ ತೆನೆಗಳನ್ನು ಕೀಳಬಹುದು. ಆದರೆ ನಿನ್ನ ನೆರೆಯವನ ಪೈರಿನಲ್ಲಿ ಕುಡುಗೋಲಾಡಿಸಬೇಡ. |
← Deuteronomy (23/34) → |