← Deuteronomy (20/34) → |
1. | ನೀನು ನಿನ್ನ ಶತ್ರುಗಳಿಗೆ ವಿರೋಧವಾಗಿ ಯುದ್ಧಕ್ಕೆ ಹೊರಟು ಕುದುರೆಗಳನ್ನೂ ರಥ ಗಳನ್ನೂ ನಿನಗಿಂತ ಹೆಚ್ಚಾದ ಜನರನ್ನೂ ನೋಡಿದರೆ ಅವರಿಗೆ ಭಯಪಡಬೇಡ; ಐಗುಪ್ತದೇಶದೊಳಗಿಂದ ನಿನ್ನನ್ನು ಹೊರಗೆ ಬರಮಾಡಿದ ನಿನ್ನ ದೇವರಾದ ಕರ್ತನು ನಿನ್ನ ಸಂಗಡ ಇದ್ದಾನೆ. |
2. | ನೀವು ಯುದ್ಧಕ್ಕೆ ಸವಿಾಪ ಬಂದಾಗ ಯಾಜಕನು ಹತ್ತಿರ ಬಂದು ಜನರ ಸಂಗಡ ಮಾತನಾಡಿ ಅವ ರಿಗೆ-- |
3. | ಓ ಇಸ್ರಾಯೇಲೇ ಕೇಳು, ನೀವು ಈಹೊತ್ತು ನಿಮ್ಮ ಶತ್ರುಗಳಿಗೆ ವಿರೋಧವಾಗಿ ಯುದ್ಧಕ್ಕೆ ಸವಿಾಪ ಬಂದಿದ್ದೀರಿ; ನಿಮ್ಮ ಹೃದಯಗಳು ಬಳಲಬಾರದು; ನೀವು ಭಯಪಡಬೇಡಿರಿ, ನಡುಗಬೇಡಿರಿ, ಅವರಿಗೆ ಹೆದರಲೂಬೇಡಿರಿ ; |
4. | ಯಾಕಂದರೆ ನಿಮ್ಮ ಶತ್ರುಗಳ ವಿರೋಧವಾಗಿ ನಿಮಗೋಸ್ಕರ ಯುದ್ಧಮಾಡಿ ನಿಮ್ಮನ್ನು ರಕ್ಷಿಸುವದಕ್ಕೆ ನಿಮ್ಮ ದೇವರಾದ ಕರ್ತನೇ ನಿಮ್ಮ ಸಂಗಡ ಹೋಗುತ್ತಾನೆ ಎಂದು ಹೇಳಬೇಕು. |
5. | ಆಗ ಅಧಿಕಾರಿಗಳು ಜನಕ್ಕೆ--ಹೊಸ ಮನೆಯನ್ನು ಕಟ್ಟಿ ಗೃಹಪ್ರತಿಷ್ಠೆಮಾಡದ ಮನುಷ್ಯನು ಯುದ್ಧದಲ್ಲಿ ಸಾಯಲಾಗಿ ಮತ್ತೊಬ್ಬನು ಗೃಹಪ್ರತಿಷ್ಠೆಮಾಡದ ಹಾಗೆ ಅವನು ತಿರುಗಿಕೊಂಡು ತನ್ನ ಮನೆಗೆ ಹೋಗಲಿ. |
6. | ದ್ರಾಕ್ಷೇತೋಟವನ್ನು ನೆಟ್ಟು ಅದರ ಫಲ ವನ್ನು ತಿನ್ನದೆ ಇರುವ ಮನುಷ್ಯನು ಯುದ್ಧದಲ್ಲಿ ಸಾಯಲಾಗಿ ಮತ್ತೊಬ್ಬನು ಅದರ ಫಲ ತಿನ್ನದಹಾಗೆ ಅವನು ಸಹ ತಿರುಗಿಕೊಂಡು ತನ್ನ ಮನೆಗೆ ಹೋಗಲಿ. |
7. | ಹೆಂಡತಿ ಯನ್ನು ನಿಶ್ಚಯಿಸಿಕೊಂಡು ಆಕೆಯನ್ನು ಮದುವೆ ಮಾಡಿಕೊಳ್ಳದ ಮನುಷ್ಯನು ಹಿಂತಿರುಗಿ ಮನೆಗೆ ಹೋಗಲಿ ಯುದ್ಧದಲ್ಲಿ ಸಾಯಲಾಗಿ ಮತ್ತೊಬ್ಬನು ಅವಳನ್ನು ಸೇರಿಸಿಕೊಂಡಾನು ಎಂದು ಹೇಳಬೇಕು. |
8. | ಇದಲ್ಲದೆ ಅಧಿಕಾರಿಗಳು ಜನಕ್ಕೆ ಮತ್ತೆ--ಭಯಸ್ತನಾಗಿ ಬಳಲಿಹೋದ ಹೃದಯವುಳ್ಳ ಮನುಷ್ಯನು ಯಾವನು? ತನ್ನ ಹೃದಯದಂತೆ ತನ್ನ ಸಹೋದರರ ಹೃದಯವು ಬಳಲಿಹೋಗದ ಹಾಗೆ ಅವನು ತಿರುಗಿಕೊಂಡು ತನ್ನ ಮನೆಗೆ ಹೋಗಲಿ ಎಂದು ಹೇಳಬೇಕು. |
9. | ಅಧಿಕಾರಿ ಗಳು ಜನರ ಸಂಗಡ ಮಾತನಾಡಿ ಮುಗಿಸಿದಾಗ ಜನರ ಮುಂದೆ ನಡೆಯತಕ್ಕ ಸೈನ್ಯಾಧಿಪತಿಗಳನ್ನು ನೇಮಿಸಬೇಕು. |
10. | ನೀನು ಯುದ್ಧಮಾಡುವ ನಿಮಿತ್ತ ಒಂದು ಪಟ್ಟ ಣದ ಹತ್ತಿರ ಬಂದರೆ ಸಮಾಧಾನಕ್ಕಾಗಿ ಅದನ್ನು ಕರೆಯಬೇಕು. |
11. | ಆ ಪಟ್ಟಣವು ನಿನಗೆ ಸಮಾಧಾನದ ಉತ್ತರ ಕೊಟ್ಟು ಬಾಗಲನ್ನು ತೆರೆದರೆ ಅದರಲ್ಲಿರುವ ಜನರೆಲ್ಲರು ನಿನಗೆ ಕಪ್ಪಕೊಟ್ಟು ನಿನ್ನನ್ನು ಸೇವಿಸಬೇಕು. |
12. | ಅದು ನಿನ್ನ ಸಂಗಡ ಸಮಾಧಾನವಾಗಲೊಲ್ಲದೆ ನಿನ್ನ ಸಂಗಡ ಯುದ್ಧಮಾಡಿದರೆ ಅದಕ್ಕೆ ಮುತ್ತಿಗೆ ಹಾಕಬೇಕು. |
13. | ನಿನ್ನ ದೇವರಾದ ಕರ್ತನು ಅದನ್ನು ನಿನ್ನ ಕೈಗೆ ಕೊಟ್ಟರೆ ಅದರ ಗಂಡಸರೆಲ್ಲರನ್ನು ಕತ್ತಿಯಿಂದ ಹೊಡೆಯಬೇಕು. |
14. | ಆದರೆ ಹೆಂಗಸರನ್ನೂ ಚಿಕ್ಕವ ರನ್ನೂ ಪಶುಗಳನ್ನೂ ಪಟ್ಟಣದಲ್ಲಿರುವ ಎಲ್ಲವನ್ನೂ ಅದರ ಎಲ್ಲಾ ಕೊಳ್ಳೆಯನ್ನೂ ನಿನಗಾಗಿ ಸುಲುಕೊಳ್ಳ ಬೇಕು; ನಿನ್ನ ದೇವರಾದ ಕರ್ತನು ನಿನಗೆ ಕೊಡುವಂಥ ನಿನ್ನ ಶತ್ರುಗಳ ಕೊಳ್ಳೆಯನ್ನು ತಿಂದುಬಿಡಬೇಕು. |
15. | ಹೀಗೆ ಇಲ್ಲಿರುವ ಈ ಜನಾಂಗಗಳ ಪಟ್ಟಣಗಳಲ್ಲದಂಥ, ನಿನಗೆ ದೂರವಾಗಿರುವಂಥ ಪಟ್ಟಣಗಳಿಗೆಲ್ಲಾ ಹಾಗೇ ಮಾಡ ಬೇಕು. |
16. | ನಿನ್ನ ದೇವರಾದ ಕರ್ತನು ನಿನಗೆ ಸ್ವಾಸ್ತ್ಯವಾಗಿ ಕೊಡುವ ಈ ಜನಗಳ ಪಟ್ಟಣಗಳಲ್ಲಿ ಮಾತ್ರ ಶ್ವಾಸ ವುಳ್ಳ ಯಾವದನ್ನಾದರೂ ಉಳಿಸಬಾರದು. |
17. | ಆದರೆ ಹಿತ್ತಿಯರನ್ನೂ ಅಮೋರಿಯರನ್ನೂ ಕಾನಾನ್ಯರನ್ನೂ ಪೆರಿ ಜ್ಜೀಯರನ್ನೂ ಹಿವ್ವಿಯರನ್ನೂ ಯೆಬೂಸಿಯರನ್ನೂ |
18. | ಅವರು ತಮ್ಮ ದೇವರುಗಳಿಗೆ ಮಾಡಿದ ಎಲ್ಲಾ ಅಸಹ್ಯಗಳನ್ನು ಮಾಡುವದಕ್ಕೆ ನಿಮಗೆ ಕಲಿಸದ ಹಾಗೆಯೂ ನೀವು ನಿಮ್ಮ ದೇವರಾದ ಕರ್ತನಿಗೆ ಪಾಪ ಮಾಡದ ಹಾಗೆಯೂ ನಿನ್ನ ದೇವರಾದ ಕರ್ತನು ನಿನಗೆ ಆಜ್ಞಾಪಿಸಿದ ಹಾಗೆ ನಿರ್ಮೂಲ ಮಾಡಬೇಕು. |
19. | ನೀನು ಒಂದು ಪಟ್ಟಣಕ್ಕೆ ವಿರೋಧವಾಗಿ ಯುದ್ಧ ಮಾಡಿ ಅದನ್ನು ಹಿಡಿಯುವಹಾಗೆ ಬಹಳದಿವಸ ಮುತ್ತಿಗೆ ಹಾಕಿದರೆ ಮರಗಳನ್ನು ಕೊಡಲಿತಾಗಿಸಿ ಕೆಡಿಸಬೇಡ. ಯಾಕಂದರೆ ಅವುಗಳ ಹಣ್ಣನ್ನು ನೀನು ತಿನ್ನಬಹುದು. ಅವುಗಳನ್ನು ಮುತ್ತಿಗೆಯಲ್ಲಿ ನಿನಗೆ ಸಹಾಯವಾಗುವದ ಕ್ಕೋಸ್ಕರ ಕಡಿದುಹಾಕಬಾರದು. ಹೊಲದ ಮರಗಳು ಮನುಷ್ಯರ ಜೀವಕ್ಕಾಗಿವೆ. |
20. | ಆಹಾರಕ್ಕಾಗದ ಮರ ಗಳೆಂದು ನಿನಗೆ ತಿಳಿದಿರುವ ಮರಗಳನ್ನು ಮಾತ್ರ ಕೆಡಿಸಿ ಕಡಿದುಹಾಕಿ ನಿನ್ನ ಸಂಗಡ ಯುದ್ಧಮಾಡುವ ಪಟ್ಟಣಕ್ಕೆ ವಿರೋಧವಾಗಿ ಅದು ಬೀಳುವ ತನಕ ಮುತ್ತಿಗೆ ಹಾಕಬಹುದು. |
← Deuteronomy (20/34) → |