← Deuteronomy (14/34) → |
1. | ನೀವು ನಿಮ್ಮ ದೇವರಾದ ಕರ್ತನ ಮಕ್ಕಳೇ. ನೀವು ಸತ್ತವರಿಗೋಸ್ಕರ ಗಾಯಮಾಡಿ ಕೊಳ್ಳಬೇಡಿರಿ. ನಿಮ್ಮ ಕಣ್ಣುಗಳ ನಡುವೆ ಬೋಳಿಸಿ ಕೊಳ್ಳಬೇಡಿರಿ. |
2. | ನೀನು ನಿನ್ನ ದೇವರಾದ ಕರ್ತನಿಗೆ ಪರಿಶುದ್ಧ ಜನವೇ. ನಿನ್ನನ್ನು ಕರ್ತನು ತನಗೆ ಅಸಮಾನ್ಯಜನವಾಗುವ ಹಾಗೆ ಭೂಮಿಯ ಮೇಲಿರುವ ಎಲ್ಲಾ ಜನಗಳೊಳಗಿಂದ ನಿನ್ನನ್ನು ಆದುಕೊಂಡಿದ್ದಾನೆ. |
3. | ಅಸಹ್ಯವಾದ ಯಾವದನ್ನಾದರೂ ತಿನ್ನಬಾರದು. ನೀವು ತಿನ್ನತಕ್ಕ ಪ್ರಾಣಿಗಳು ಇವೇ: |
4. | ಎತ್ತು, ಕುರಿ, ಮೇಕೆ, |
5. | ದುಪ್ಪಿ, ಜಿಂಕೆ, ಸಾರಂಗ, ಕಾಡುಮೇಕೆ, ಚಿಗರಿ, ಕಡವೆ ಕೊಂಡಗುರಿ. |
6. | ಮೃಗಜಾತಿಯಲ್ಲಿ ಗೊರ ಸೆಯು ಭೇದಿಸಿರುವ ಆ ಭೇದವನ್ನು ಎರಡು ಗೊರಸೆ ಗಳಾಗಿ ವಿಭಾಗಿಸಿದ್ದು ಮೆಲುಕು ಹಾಕುವಂಥ ಮೃಗಗಳ ನ್ನೆಲ್ಲಾ ನೀವು ತಿನ್ನಬಹುದು. |
7. | ಆದರೆ ಮೆಲುಕು ಹಾಕಿ ಉಗುರುಳ್ಳ ಗೊರಸೆಯನ್ನು ಭೇದಿಸಿಕೊಂಡಿರುವವು ಗಳಲ್ಲಿ ಇವುಗಳನ್ನು ನೀವು ತಿನ್ನಬಾರದು; ಯಾವ ವೆಂದರೆ: ಒಂಟೆ, ಮೊಲ, ಕುಣಿಮೊಲ. ಯಾಕಂದರೆ ಅವು ಮೆಲುಕು ಹಾಕಿದರೂ ಗೊರಸೆಯನ್ನು ಭೇದಿಸು ವದಿಲ್ಲ; ಅವು ನಿಮಗೆ ಅಶುದ್ಧವಾಗಿವೆ. |
8. | ಹಂದಿಯನ್ನು ತಿನ್ನಬಾರದು. ಅದು ಗೊರಸೆ ಭೇದಿಸಿದರೂ ಮೆಲುಕು ಹಾಕುವದಿಲ್ಲ; ಅದು ನಿಮಗೆ ಅಶುದ್ಧವೇ. ಅವುಗಳ ಮಾಂಸವನ್ನು ತಿನ್ನಬಾರದು. ಅವುಗಳ ಹೆಣವನ್ನು ಮುಟ್ಟಬಾರದು. |
9. | ನೀರಿನಲ್ಲಿರುವ ಎಲ್ಲವುಗಳಲ್ಲಿ ನೀವು ಇವುಗಳನ್ನು ತಿನ್ನಬಹುದು: ರೆಕ್ಕೆಗಳೂ ಪೊರೆಗಳೂ ಉಳ್ಳವುಗ ಳನ್ನೆಲ್ಲಾ ತಿನ್ನಬಹುದು. |
10. | ಆದರೆ ರೆಕ್ಕೆಗಳೂ ಪೊರೆ ಗಳೂ ಇಲ್ಲದವುಗಳನ್ನೆಲ್ಲಾ ತಿನ್ನಬಾರದು; ಅವು ನಿಮಗೆ ಅಶುದ್ಧವಾಗಿವೆ. |
11. | ಶುದ್ಧವಾದ ಎಲ್ಲಾ ಪಕ್ಷಿಗಳನ್ನು ತಿನ್ನಬಹುದು. |
12. | ಪಕ್ಷಿ ಜಾತಿಯಲ್ಲಿ ನೀವು ತಿನ್ನಬಾರದವುಗಳು ಯಾವ ವೆಂದರೆ: ಗರುಡ, ಬೆಟ್ಟದಹದ್ದು, ಕ್ರೌಂಚ, ಗಿಡಗ, ಹಕ್ಕಿಸಾಲೆ, |
13. | ಗಿಡಗವೂ ಬೈರಿಯೂ ಜಾತ್ಯಾನುಸಾರ ವಾದ ರಣಹದ್ದು |
14. | ಜಾತ್ಯಾನುಸಾರವಾದ ಸಕಲ ಕಾಗೆಯೂ |
15. | ಉಷ್ಟ್ರಪಕ್ಷಿಯೂ ಗೂಬೆಯೂ ಕಡಲ್ಕಾ ಗೆಯೂ ಜಾತ್ಯಾನುಸಾರವಾದ ಡೇಗೆಯೂ |
16. | ಚಿಕ್ಕ ಗೂಬೆಯೂ ದೊಡ್ಡಗೂಬೆಯೂ ಕೊಕ್ಕರೆಯೂ |
17. | ನೀರು ಕೋಳಿಯೂ ಹೆಣಹದ್ದೂ ಬೆಳ್ವಕ್ಕಿಯೂ |
18. | ನೀರು ಕೊಕ್ಕರೆಯೂ ಜಾತ್ಯಾನುಸಾರವಾದ ಬಕವೂ ಬುಡ್ಡಗೋಳಿಯೂ ರಾತ್ರಿಗೀಜಕವೂ. |
19. | ಇದಲ್ಲದೆ ಹಾರುವ ಎಲ್ಲಾ ಹುಳಗಳು ನಿಮಗೆ ಅಶುದ್ಧವೇ, ಅವುಗಳನ್ನು ತಿನ್ನಬಾರದು. |
20. | ಶುದ್ಧವಾದ ಎಲ್ಲಾ ಪಕ್ಷಿಗಳನ್ನು ತಿನ್ನಬಹುದು. |
21. | ತಾನೇ ಸತ್ತ ಯಾವದನ್ನಾದರೂ ತಿನ್ನಬಾರದು, ನಿಮ್ಮ ಬಾಗಲುಗಳಲ್ಲಿರುವ ಅನ್ಯನಿಗೆ ಅವನು ತಿನ್ನುವ ಹಾಗೆ ಕೊಡಬೇಕು; ಇಲ್ಲವೆ ಪರದೇಶದವನಿಗೆ ಮಾರಬಹುದು. ಯಾಕಂದರೆ ನೀನು ನಿನ್ನ ದೇವರಾದ ಕರ್ತ ನಿಗೆ ಪರಿಶುದ್ಧ ಜನವೇ. ಮೇಕೆಯ ಮರಿಯನ್ನು ತಾಯಿಯ ಹಾಲಿನಲ್ಲಿ ಕುದಿಸಬಾರದು. |
22. | ನೀನು ಬಿತ್ತುವದರಿಂದ ಹೊಲದಲ್ಲಿ ವರುಷ ವರುಷಕ್ಕೆ ಬರುವ ಹುಟ್ಟುವಳಿಯಿಂದ ದಶಮಾಂಶವನ್ನು ತಪ್ಪದೆ ಕೊಡಬೇಕು. |
23. | ನೀನು ನಿನ್ನ ದೇವರಾದ ಕರ್ತ ನಿಗೆ ಎಂದೆಂದಿಗೂ ಭಯಪಡುವದನ್ನು ಕಲಿಯುವ ಹಾಗೆ ನಿನ್ನ ಧಾನ್ಯ ದ್ರಾಕ್ಷರಸ ಎಣ್ಣೆಗಳ ದಶಮಾಂಶ ವನ್ನೂ ನಿನ್ನ ಪಶು ಕುರಿಗಳಲ್ಲಿ ಚೊಚ್ಚಲುಗಳನ್ನೂ ನಿನ್ನ ದೇವರಾದ ಕರ್ತನ ಮುಂದೆ ಆತನು ತನ್ನ ಹೆಸರನ್ನು ಇರಿಸುವದಕ್ಕೆ ಆದುಕೊಂಡ ಸ್ಥಳದಲ್ಲಿ ತಿನ್ನಬೇಕು. |
24. | ನೀನು ಅವುಗಳನ್ನು ತೆಗೆದುಕೊಂಡು ಹೋಗದ ಹಾಗೆ ನಿನಗೆ ದಾರಿ ದೂರವಾದರೆ ಇಲ್ಲವೆ ನಿನ್ನ ದೇವರಾದ ಕರ್ತನು ತನ್ನ ಹೆಸರನ್ನು ಇರಿಸುವದಕ್ಕೆ ಆದುಕೊಂಡ ಸ್ಥಳವು ನಿನಗೆ ದೂರವಾದರೆ ನಿನ್ನ ದೇವರಾದ ಕರ್ತನು ನಿನ್ನನ್ನು ಆಶೀರ್ವದಿಸಿದ ಮೇಲೆ |
25. | ಅವುಗಳನ್ನು ಹಣಕ್ಕೆ ಮಾರಿಬಿಟ್ಟು ಆ ಹಣವನ್ನು ನಿನ್ನ ಕೈಯಲ್ಲಿ ಹಿಡುಕೊಂಡು ನಿನ್ನ ದೇವರಾದ ಕರ್ತನು ಆದುಕೊಳ್ಳುವ ಸ್ಥಳಕ್ಕೆ ಹೋಗಬೇಕು. |
26. | ಆಗ ಆ ಹಣವನ್ನು ನಿನಗೆ ಮನಸ್ಸು ಬಂದದ್ದಕ್ಕೆಲ್ಲಾ ಅಂದರೆ ಹಸು, ಕುರಿ, ದ್ರಾಕ್ಷಾರಸ, ಮಧ್ಯಪಾನಗಳಿ ಗೋಸ್ಕರವೂ ನಿನ್ನ ಪ್ರಾಣವು ಆಶಿಸುವ ಎಲ್ಲವುಗಳಿ ಗೋಸ್ಕರವೂ ವೆಚ್ಚಮಾಡಬೇಕು; ಆ ಮೇಲೆ ನೀನೂ ನಿನ್ನ ಮನೆಯವರೂ ಅಲ್ಲಿ ನಿನ್ನ ದೇವರಾದ ಕರ್ತನ ಮುಂದೆ ತಿಂದು ಸಂತೋಷಪಡಬೇಕು. |
27. | ನಿನ್ನ ಬಾಗಲುಗಳಲ್ಲಿರುವ ಲೇವಿಯನನ್ನು ಕೈಬಿಡಬಾರದು. ಯಾಕಂದರೆ ಅವನಿಗೆ ನಿನ್ನ ಸಂಗಡ ಪಾಲೂ ಸ್ವಾಸ್ತ್ಯವೂ ಇಲ್ಲ. |
28. | ಮೂರು ವರುಷಗಳ ಅಂತ್ಯದಲ್ಲಿ ಅಂದರೆ ಅದೇ ವರುಷದಲ್ಲಿ ನಿನಗೆ ಸಿಕ್ಕಿದ ಹುಟ್ಟುವಳಿಯ ದಶಮ ಭಾಗವನ್ನೆಲ್ಲಾ ಹೊರಗೆ ತಂದು ನಿನ್ನ ಬಾಗಲುಗಳಲ್ಲಿ ಇಟ್ಟುಬಿಡಬೇಕು. |
29. | ಆಗ (ನಿನ್ನ ಸಂಗಡ ಪಾಲನ್ನೂ ಸ್ವಾಸ್ತ್ಯವನ್ನೂ ಹೊಂದದ) ಲೇವಿಯನೂ ನಿನ್ನ ಬಾಗಲು ಗಳಲ್ಲಿರುವ ಅನ್ಯದೇಶದವನೂ ದಿಕ್ಕಿಲ್ಲದವನೂ ವಿಧ ವೆಯೂ ಬಂದು ನಿನ್ನ ದೇವರಾದ ಕರ್ತನು ನಿನ್ನನ್ನು ನೀನು ಮಾಡುವ ಎಲ್ಲಾ ಕೈಕೆಲಸದಲ್ಲಿ ಆಶೀರ್ವದಿಸುವ ಹಾಗೆ ತಿಂದು ತೃಪ್ತರಾಗಲಿ. |
← Deuteronomy (14/34) → |