← Daniel (5/12) → |
1. | ಅರಸನಾದ ಬೆಲ್ಯಚ್ಚರನು ತನ್ನ ಪ್ರಭುಗಳಲ್ಲಿ ಸಾವಿರ ಮಂದಿಗೆ ದೊಡ್ಡ ಔತಣವನ್ನು ಮಾಡಿಸಿ, ಆ ಸಾವಿರ ಮಂದಿಯ ಮುಂದೆ ಅವನು ದ್ರಾಕ್ಷಾರಸವನ್ನು ಕುಡಿದನು. |
2. | ಆ ದ್ರಾಕ್ಷಾರಸವನ್ನು ರುಚಿಸುತ್ತಿರುವಾಗ ಬೆಲ್ಯಚ್ಚರನು ತನ್ನ ತಂದೆಯಾದ ನೆಬೂಕದ್ನೆಚ್ಚರನು ಯೆರೂಸಲೇಮಿನ ದೇವಾಲಯ ದೊಳಗಿಂದ ತಂದ ಬೆಳ್ಳಿಬಂಗಾರಗಳ ಪಾತ್ರೆಗಳಲ್ಲಿ ಅರಸನೂ ಅವನ ಪ್ರಭುಗಳೂ ಅವನ ಪತ್ನಿ ಮತ್ತು ಉಪಪತ್ನಿಯರು ಅವುಗಳಲ್ಲಿ ಕುಡಿಯುವ ಹಾಗೆ ತರಲು ಆಜ್ಞಾಪಿಸಿದನು. |
3. | ಆಗ ಅವರು ಯೆರೂಸಲೇಮಿನ ದೇವಾಲಯದೊಳಗಿಂದ ತೆಗೆದ ಬಂಗಾರದ ಪಾತ್ರೆ ಗಳನ್ನು ತಂದರು. ಅರಸನೂ ಅವನ ಪ್ರಭುಗಳೂ ಪತ್ನಿ ಮತ್ತು ಉಪಪತ್ನಿಯರೂ ಅವುಗಳಲ್ಲಿ ಕುಡಿದರು. |
4. | ಅವರು ದ್ರಾಕ್ಷಾರಸವನ್ನು ಕುಡಿದು ಬಂಗಾರ, ಬೆಳ್ಳಿ, ಕಂಚು, ಕಬ್ಬಿಣ, ಮರ ಮತ್ತು ಕಲ್ಲಿನ ದೇವರುಗಳನ್ನು ಹೊಗಳತೊಡಗಿದರು. |
5. | ಅದೇ ಸಮಯದಲ್ಲಿ ಒಬ್ಬ ಮನುಷ್ಯನ ಹಸ್ತವು ಬಂದು ದೀಪಸ್ತಂಭಕ್ಕೆ ಎದುರಾಗಿ ಅರಮನೆಯ ಗೋಡೆಯ ಮೇಲೆ ಸುಣ್ಣದಲ್ಲಿ ಬರೆದವು; ಅರಸನು ಆ ಬರೆಯುವ ಕೈಭಾಗವನ್ನು ನೋಡಿದನು. |
6. | ಆಗ ಅರಸನ ಮುಖವು ಕಳೆಗುಂದಿತು, ಅವನ ಆಲೋಚನೆಗಳು ಅವನನ್ನು ಕಳವಳಪಡಿಸಿದವು. ಅವನ ನಡುವಿನ ಕೀಲುಗಳು ಸಡಿಲವಾದವು. ಅವನ ಮೊಣಕಾಲುಗಳು ಒಂದಕ್ಕೊಂದು ಬಡಿದುಕೊಂಡವು. |
7. | ಆಗ ಅರಸನು ಗಟ್ಟಿಯಾಗಿ ಕಿರುಚಿ ಜ್ಯೋತಿಷ್ಯರನ್ನೂ ಕಸ್ದೀಯರನ್ನೂ ಶಕುನರನ್ನೂ ಕರೆಸಿ ಬಾಬೆಲಿನ ಜ್ಞಾನಿ ಗಳಿಗೆ ಹೇಳಿದ್ದೇನಂದರೆ--ಯಾವನೂ ಈ ಬರಹವನ್ನು ಓದಿ ಅದರ ಅರ್ಥವನ್ನು ನನಗೆ ತಿಳಿಸುವನೋ ಅವರಿಗೆ ಧೂಮ್ರವಸ್ತ್ರವನ್ನು ಹೊದಿಸಿ ಅವನ ಕೊರಳಿಗೆ ಚಿನ್ನದ ಹಾರವನ್ನು ಹಾಕಿ ರಾಜ್ಯದ ಮೂರನೆಯ ಅಧಿಕಾರಿ ಯಾಗಿ ಮಾಡುವೆನು ಅಂದನು. |
8. | ಆಗ ಅರಸನ ಎಲ್ಲಾ ಜ್ಞಾನಿಗಳು ಒಳಗೆ ಬಂದರು. ಆದರೆ ಆ ಬರಹ ವನ್ನು ಓದಲೂ ಅದರ ಅರ್ಥವನ್ನು ಅರಸನಿಗೆ ತಿಳಿ ಸಲೂ ಅವರಿಗೆ ಆಗದೆಹೋಯಿತು. |
9. | ಆಗ ಅರಸ ನಾದ ಬೇಲ್ಯಚ್ಚರನು ಬಹಳವಾಗಿ ಕಳವಳಪಟ್ಟನು, ಅವನ ಮುಖವು ಕಳೆಗುಂದಿತು. ಅವನ ಪ್ರಭುಗಳು ವಿಸ್ಮಯಗೊಂಡರು. |
10. | ಆಗ ಅರಸನ ಮತ್ತು ಅವನ ಪ್ರಭುಗಳ ಮಾತುಗಳಿಗಾಗಿ ರಾಣಿಯು ಔತಣದ ಮನೆಗೆ ಬಂದು ಮಾತನಾಡಿ ಹೇಳಿದ್ದೇನಂದರೆ--ಓ ಅರಸನೇ, ನಿರಂತರವಾಗಿ ಬಾಳು. ನಿನ್ನ ಆಲೋ ಚನೆಗಳು ನಿನ್ನನ್ನು ಕಳವಳಪಡಿಸದಿರಲಿ; ನಿನ್ನ ಮುಖವು ಕಳೆಗುಂದದಿರಲಿ; |
11. | ನಿನ್ನ ರಾಜ್ಯದಲ್ಲಿ ಪರಿಶುದ್ಧ ದೇವರುಗಳ ಆತ್ಮವುಳ್ಳ ಒಬ್ಬ ಮನುಷ್ಯನಿದ್ದಾನೆ; ದೇವ ರುಗಳ ಜ್ಞಾನಕ್ಕೆ ಸಮಾನವಾದ ಜ್ಞಾನವೂ ವಿವೇಕವೂ ಬುದ್ಧಿಯೂ ಪ್ರಕಾಶವೂ ನಿನ್ನ ತಂದೆಯ ಕಾಲದಲ್ಲಿ ಅವನೊಳಗೆ ಕಂಡುಬಂದವು. ನಿನ್ನ ತಂದೆಯಾದ ನೆಬೂಕದ್ನೆಚ್ಚರ ಅರಸನು ಅವನನ್ನು ಮಂತ್ರಗಾರರಿಗೂ ಜ್ಯೋತಿಷ್ಯರಿಗೂ ಕಸ್ದೀಯರಿಗೂ ಶಕುನಗಾರರಿಗೂ ಅಧಿಕಾರಿಯನ್ನಾಗಿ ನೇಮಿಸಿದನು. |
12. | ಬೆಲ್ಶೆಚ್ಚರನೆಂಬ ಹೆಸರನ್ನು ಅರಸನಿಂದ ಪಡೆದ ಆ ದಾನಿಯೇಲನಲ್ಲಿ ಕನಸುಗಳ ಅರ್ಥವನ್ನು ಹೇಳುವದಕ್ಕೂ ಕಠಿಣವಾದ ಸಂಗತಿಗಳನ್ನು ತಿಳಿಸುವದಕ್ಕೂ ಮರ್ಮಗಳನ್ನು ಬಿಚ್ಚುವ ದಕ್ಕೂ ಉತ್ತಮ ಆತ್ಮವೂ ಜ್ಞಾನವೂ ವಿವೇಕವೂ ಸಿಕ್ಕಿ ದವು ಅಂದಳು. ಈಗ ಆ ದಾನಿಯೇಲನನ್ನು ಕರೆಯಿ ಸಿದರೆ ಅವನು ಈ ಬರಹದ ಅರ್ಥವನ್ನು ವಿವರಿಸುವನು ಅಂದಳು. |
13. | ಆಗ ದಾನಿಯೇಲನು ಅರಸನ ಮುಂದೆ ತರಲ್ಪಟ್ಟನು. ಅರಸನು ದಾನಿಯೇಲನಿಗೆ--ಅರಸನಾದ ನನ್ನ ತಂದೆಯು ಯೆಹೂದದಿಂದ ತಂದ ಯೆಹೂದದ ಸೆರೆಯವರಲ್ಲಿ ಒಬ್ಬನಾದ ದಾನಿಯೇಲನು ನೀನೋ? |
14. | ನಿನ್ನಲ್ಲಿ ದೇವರುಗಳ ಆತ್ಮ ಉಂಟೆಂದೂ ಬೆಳಕೂ ಬುದ್ಧಿಯೂ ಉತ್ತಮ ಜ್ಞಾನವೂ ನಿನ್ನಲ್ಲಿ ಇವೆ ಎಂದೂ ನಿನ್ನ ವಿಷಯವಾಗಿ ಕೇಳಿದ್ದೇನೆ. |
15. | ಈಗ ಈ ಬರಹವನ್ನು ಓದುವದಕ್ಕೂ ಅದರ ಅಭಿಪ್ರಾಯವನ್ನು ನನಗೆ ತಿಳಿಸು ವದಕ್ಕೂ ಜ್ಯೋತಿಷ್ಯರಾದ ಜ್ಞಾನಿಗಳು ನನ್ನ ಮುಂದೆ ತರಲ್ಪಟ್ಟಿದ್ದಾರೆ, ಆದರೆ ಇದರ ಅರ್ಥವನ್ನು ಹೇಳಲಾರದೆ ಹೋದರು. |
16. | ನೀನು ಅರ್ಥಗಳನ್ನು ವಿವರಿಸುವದ ರಲ್ಲಿಯೂ ಮರ್ಮಗಳನ್ನು ಬಿಚ್ಚುವದರಲ್ಲಿಯೂ ಸಮರ್ಥನೆಂದು ನಾನು ನಿನ್ನ ವಿಷಯವಾಗಿ ಕೇಳಿದ್ದೇನೆ; ಹೀಗಾದರೆ ಆ ಬರಹವನ್ನು ಓದುವದಕ್ಕೂ ಅದರ ಅರ್ಥವನ್ನು ತಿಳಿಸುವದಕ್ಕೂ ನಿನ್ನಿಂದ ಆದರೆ ನೀನು ಧೂಮ್ರವಸ್ತ್ರ ಧರಿಸಲ್ಪಟ್ಟು ಕೊರಳಿಗೆ ಚಿನ್ನದ ಹಾರ ಹಾಕಿಸಿಕೊಂಡವನಾಗಿ ರಾಜ್ಯದ ಮೂರನೆಯ ಅಧಿಕಾರಿ ಯಾಗುವಿ ಎಂದು ಹೇಳಿದನು. |
17. | ಆಗ ದಾನಿಯೇಲನು ಅರಸನ ಮುಂದೆ--ನಿನ್ನ ದಾನಗಳು ನಿನಗಿರಲಿ, ನಿನ್ನ ಬಹುಮಾನಗಳನ್ನು ಮತ್ತೊಬ್ಬರಿಗೆ ಕೊಡು, ನಾನು ಬರಹವನ್ನು ಓದಿ ಅದರ ಅರ್ಥವನ್ನು ನಿನಗೆ ತಿಳಿಸು ವೆನು ಅಂದನು. |
18. | ಓ ಅರಸನೇ, ಮಹೋನ್ನತನಾದ ದೇವರು ನಿನ್ನ ತಂದೆಯಾದ ನೆಬೂಕದ್ನೆಚ್ಚರನಿಗೆ ರಾಜ್ಯವನ್ನೂ ಮಹತ್ತನ್ನೂ ಕೀರ್ತಿಯನ್ನೂ ಘನ ವನ್ನೂ ಕೊಟ್ಟನು. |
19. | ಆತನು ಅವನಿಗೆ ಕೊಟ್ಟ ಮಹ ತ್ತಿನ ನಿಮಿತ್ತ ಸಕಲ ಪ್ರಜೆಗಳೂ ಜನಾಂಗಗಳೂ ಭಾಷೆಯವರೂ ಅವನ ಮುಂದೆ ಹೆದರಿ ನಡುಗಿ ದರು; ತನಗೆ ಬೇಕಾದವರನ್ನು ಬದುಕಿಸಿ ಬೇಡವಾದ ವರನ್ನು ಕೊಂದನು, ಇಷ್ಟವಿದ್ದವರನ್ನು ಎತ್ತಿ ಇಷ್ಟವಿಲ್ಲ ದವರನ್ನು ಬಿಟ್ಟನು. |
20. | ಆದರೆ ಯಾವಾಗ ಅವನ ಹೃದಯವು ಹೆಚ್ಚಿಸಲ್ಪಟ್ಟಿತೋ ಆಗ ಅವನ ಮನಸ್ಸು ಗರ್ವದಿಂದ ಕಠಿಣವಾಯಿತು. ಅವನು ತನ್ನ ರಾಜ್ಯದ ಸಿಂಹಾಸನದಿಂದ ಇಳಿಸಲ್ಪಟ್ಟನು. ಅವನ ಘನವನ್ನು ಅವನಿಂದ ತೆಗೆದುಹಾಕಿದರು; |
21. | ಅವನು ಮನುಷ್ಯರ ಮಕ್ಕಳೊಳಗಿಂದ ತೆಗೆಯಲ್ಪಟ್ಟನು; ಮಹೋನ್ನತನಾದ ದೇವರು ಮನುಷ್ಯರ ರಾಜ್ಯವನ್ನು ಆಳುತ್ತಾನೆಂದೂ ಅವನು ತಿಳಿಯುವ ತನಕ ಬೇಕಾದವರನ್ನು ಅದಕ್ಕೆ ನೇಮಿಸುತ್ತಾನೆಂದೂ ಅವನು ತಿಳಿಯುವಷ್ಟರಲ್ಲಿ ಅವನ ಹೃದಯವು ಮೃಗಗಳ ಹೃದಯದಂತಾಯಿತು, ಅವನ ನಿವಾಸವು ಕಾಡುಕತ್ತೆಗಳ ಸಂಗಡ ಇತ್ತು; ಅವನಿಗೆ ಎತ್ತುಗಳ ಹಾಗೆ ಹುಲ್ಲನ್ನು ಮೇಯಿಸಿದರು; ಅವನ ಶರೀರವು ಆಕಾಶದ ಮಂಜಿನಿಂದ ತೇವವಾಯಿತು. |
22. | ಅವನ ಮಗನಾದ ಓ ಬೇಲ್ಯಚ್ಚರನೇ--ನೀನು ಇದನ್ನೆಲ್ಲಾ ತಿಳಿದರೂ ನಿನ್ನ ಹೃದಯವನ್ನು ತಗ್ಗಿಸದೆ |
23. | ಪರಲೋಕದ ಕರ್ತನಿಗೆ ವಿರೋಧವಾಗಿ ನಿನ್ನನ್ನು ಹೆಚ್ಚಿಸಿಕೊಂಡಿರುವಿ; ಆತನ ಆಲಯದ ಪಾತ್ರೆಗಳನ್ನು ನಿನ್ನ ಸನ್ನಿಧಿಗೆ ತಂದರು, ಆಗ ನೀನು, ನಿನ್ನ ಪ್ರಭುಗಳು ಮತ್ತು ಪತ್ನಿ ಉಪಪತ್ನಿಯರ ಸಂಗಡ ಅವುಗಳಲ್ಲಿ ದ್ರಾಕ್ಷಾರಸವನ್ನು ಕುಡಿದು ಬುದ್ಧಿ ಕಣ್ಣು ಕಿವಿಗಳಿಲ್ಲದ ಬೆಳ್ಳಿ ಬಂಗಾರ ಕಂಚು ಕಬ್ಬಿಣ ಮರ ಕಲ್ಲುಗಳ ದೇವರುಗಳನ್ನು ಸ್ತುತಿಸಿದಿ; ಆದರೆ ನಿನ್ನ ಪ್ರಾಣವು ಯಾರ ಕೈಯಲ್ಲಿದೆಯೋ ನಿನ್ನ ಸ್ಥಿತಿಗಳು ಯಾರ ಅಧೀನದಲ್ಲಿವೆಯೋ ಆ ದೇವರನ್ನು ಘನಪಡಿಸಲೇ ಇಲ್ಲ. |
24. | ಅದಕ್ಕಾಗಿಯೇ ಆತನಿಂದ ಕಳುಹಿಸಲ್ಪಟ್ಟ ಕೈಯ ಭಾಗವು ಬಂದು ಆ ಬರಹವನ್ನು ಬರೆಯಿತು. |
25. | ಆ ಬರಹವು ಏನಂದರೆ ಮೆನೇ ಮೆನೇ ತೇಕಲ್ ಉಫ ರ್ಸಿನ್, |
26. | ಇದರ ಅರ್ಥವು ಹೀಗಿದೆ--ಮೆನೇ ಅಂದರೆ ದೇವರು ನಿನ್ನ ಆಳ್ವಿಕೆಯ ಕಾಲವನ್ನು ಲೆಕ್ಕಿಸಿ ಕೊನೆ ಗಾಣಿಸಿದ್ದಾನೆ; |
27. | ತೇಕೆಲ್ ಅಂದರೆ ನೀನು ತಕ್ಕಡಿಯಲ್ಲಿ ತೂಗಲ್ಪಟ್ಟು ಕಡಿಮೆಯಾಗಿ ಕಂಡುಬಂದಿರುವಿ. |
28. | ಪೆರೇಸ್ ಅಂದರೆ ನಿನ್ನ ರಾಜ್ಯವು ವಿಭಿನ್ನವಾಗಿ ಮೇದ್ಯಯರಿಗೂ ಪಾರಸೀಯರಿಗೂ ಕೊಡಲ್ಪಟ್ಟಿದೆ ಎಂಬದಾಗಿ ಅರಿಕೆಮಾಡಿದನು. |
29. | ಆಗ ಬೇಲ್ಯಚ್ಚರನು ಆಜ್ಞಾಪಿಸಲು ದಾನಿಯೇಲನಿಗೆ ಧೂಮ್ರ ವಸ್ತ್ರವನ್ನು ಹೊದಿಸಿ, ಅವನ ಕೊರಳಿಗೆ ಹಾರವನ್ನು ಹಾಕಿ, ಇವನು ರಾಜ್ಯದ ಮೂವರು ಅಧಿಕಾರಿಗಳಲ್ಲಿ ಒಬ್ಬನೆಂದು ಸಾರಿ ದನು. |
30. | ಅದೇ ರಾತ್ರಿಯಲ್ಲಿ ಕಸ್ದೀಯರ ಅರಸನಾದ ಬೇಲ್ಯಚ್ಚರನು ಕೊಲ್ಲಲ್ಪಟ್ಟನು. |
31. | ಮೇದ್ಯಯನಾದ ದಾರ್ಯಾವೆಷನು ಅರವತ್ತೆರಡು ವರುಷದವನಾಗಿ ರಾಜ್ಯವನ್ನು ವಶಪಡಿಸಿಕೊಂಡನು. |
← Daniel (5/12) → |