← Daniel (11/12) → |
1. | ನಾನು ಸಹ ಮೇದ್ಯನಾದ ದಾರ್ಯಾವೆಷನ ಮೊದಲನೆಯ ವರುಷದಲ್ಲಿ ಅವ ನನ್ನು ಸ್ಥಿರಪಡಿಸುವದಕ್ಕೂ ಬಲಪಡಿಸುವದಕ್ಕೂ ನಿಂತಿ ದ್ದೇನೆ. |
2. | ನಾನು ಈಗ ನಿನಗೆ ಸತ್ಯವನ್ನು ತಿಳಿಸುತ್ತೇನೆ; ಇಗೋ, ಪಾರಸಿಯರಲ್ಲಿ ಇನ್ನು ಮೂರು ಅರಸರು ನಿಲ್ಲುವರು; ನಾಲ್ಕನೆಯವನು ಅವರೆಲ್ಲರಿಗಿಂತಲೂ ಬಹಳ ಐಶ್ವರ್ಯವಂತನಾಗಿರುವನು; ಅವನು ತನ್ನ ಐಶ್ವರ್ಯದಿಂದಾಗುವ ಸಾಮರ್ಥ್ಯದಿಂದ ಗ್ರೀಕ್ ರಾಜ್ಯಕ್ಕೆ ವಿರೋಧವಾಗಿ ಎಲ್ಲರನ್ನೂ ಹುರಿದುಂಬಿಸು ವನು. |
3. | ಆಗ, ಬಲವುಳ್ಳ ಒಬ್ಬ ಅರಸನು ಎದ್ದು ಮಹಾಅಧಿಕಾರದಿಂದ ಆಳಿ ತನ್ನ ಚಿತ್ತದ ಪ್ರಕಾರ ಮಾಡುವನು. |
4. | ಅವನು ತಲೆ ಎತ್ತಿದ ಮೇಲೆ ಅವನ ರಾಜ್ಯವು ಮುರಿಯಲ್ಪಟ್ಟು ಆಕಾಶದ ನಾಲ್ಕು ದಿಕ್ಕುಗಳ ಕಡೆಗೆ ವಿಭಾಗಿಸಲ್ಪಡುವದು; ಅವನ ಸಂತತಿಗಾಗಿ ಅಲ್ಲ, ಅಥವಾ ಅವನು ಆಳಿದ ಅಧಿಕಾರದ ಹಾಗಲ್ಲ ಅವನ ರಾಜ್ಯವು ಕೀಳಲ್ಪಟ್ಟು ಅವರಿಗಲ್ಲ, ಮತ್ತೊಬ್ಬರಿಗೆ ಹಂಚಲ್ಪಡುವದು. |
5. | ದಕ್ಷಿಣದ ಅರಸನು ಬಲಿಷ್ಠನಾಗಿ ರುವನು. ಆದರೆ ಅವನ ಪ್ರಧಾನರಲ್ಲಿ ಒಬ್ಬನು ಇವನಿ ಗಿಂತ ಬಲಿಷ್ಠನಾಗಿದ್ದು ಅವನ ಆಳ್ವಿಕೆಯು ಮಹಾ ಆಳ್ವಿಕೆಯಾಗುವದು. |
6. | ವರುಷಗಳ ಅಂತ್ಯದಲ್ಲಿ ಅವರು ಒಬ್ಬರಿಗೊಬ್ಬರು ಒಂದಾಗುವರು; ಹೇಗಂದರೆ ದಕ್ಷಿಣದ ಅರಸನ ಮಗಳು ಉತ್ತರದ ಅರಸನ ಬಳಿಗೆ ಬಂದು ಒಪ್ಪಂದ ಮಾಡಿಕೊಳ್ಳುವಳು; ಆದರೆ ಅವಳು ಭುಜ ಬಲವನ್ನು ಉಳಿಸಿಕೊಳ್ಳುವದಿಲ್ಲ; ಅವನೂ ಅವನ ತೋಳುಗಳೂ ನಿಲ್ಲುವದಿಲ್ಲ; ಅವಳೂ ಅವಳನ್ನು ಕರೆ ತಂದವರೂ ಅವಳನ್ನು ಪಡೆದವನೂ ಆ ಕಾಲದಲ್ಲಿ ಅವಳನ್ನು ಬಲಪಡಿಸಿದವನೂ ಉಳಿಯುವದಿಲ್ಲ. |
7. | ಆದರೆ ಅವಳ ಬೇರುಗಳ ಚಿಗುರಿನಿಂದ ಒಬ್ಬನು ಎದ್ದು ಆ ಸ್ಥಾನದಲ್ಲಿ ನಿಂತು ಸೈನ್ಯದೊಂದಿಗೆ ಬಂದು ಉತ್ತರದ ಅರಸನ ಕೋಟೆಯೊಳಗೆ ನುಗ್ಗಿ ಅವರನ್ನು ವಿರೋಧಿಸಿ ಪ್ರಬಲವಾಗುವನು. |
8. | ಅವರ ದೇವರು ಗಳನ್ನೂ ಅವರ ಪ್ರಧಾನರನ್ನೂ ಬೆಳ್ಳಿಬಂಗಾರಗಳ ಪಾತ್ರೆಗಳನ್ನೂ ಸೂರೆಮಾಡಿ ಐಗುಪ್ತದೇಶಕ್ಕೆ ಬಂದು ಉತ್ತರದ ಅರಸನಿಗಿಂತ ಹೆಚ್ಚು ವರುಷಗಳು ಆಳುವನು. |
9. | ಹೀಗೆ ದಕ್ಷಿಣದ ಅರಸನು ಅವನ ರಾಜ್ಯಕ್ಕೆ ಬಂದು ಮತ್ತೆ ಸ್ವಂತ ದೇಶಕ್ಕೆ ಹಿಂತಿರುಗಿ ಹೋಗುವನು. |
10. | ಆಮೇಲೆ ಅವನ ಮಕ್ಕಳು ಸನ್ನದ್ಧರಾಗಿ ದೊಡ್ಡ ಸೈನ್ಯಗಳ ಸಮೂಹವನ್ನು ಕೂಡಿಸುವರು; ಅವರಲ್ಲಿ ಒಬ್ಬನು ನಿಶ್ಚಯವಾಗಿ ಬಂದು ಅದರಲ್ಲಿ ಪ್ರಳಯದಂತೆ ಹಾದುಹೋಗುವನು. ಅವನು ಮತ್ತೆ ಸನ್ನದ್ಧನಾಗಿ ಕೋಟೆಯನ್ನು ಮುತ್ತುವನು. |
11. | ಆಗ ದಕ್ಷಿಣದ ಅರಸನು ಕೋಪಿಸಿಕೊಂಡು ಹೊರಟು ಅವನ ಸಂಗಡ ಅಂದರೆ ಉತ್ತರದ ಅರಸನ ಸಂಗಡ ಯುದ್ಧಮಾಡುವನು; ಅವನು ಮಹಾ ಸೈನ್ಯವನ್ನು ನಿಲ್ಲಿಸುವನು; ಆದರೆ ಆ ಮಹಾ ಸಮೂಹವು ಇವನ ಕೈಗೆ ಕೊಡಲ್ಪಡುವದು. |
12. | ಆ ಸಮೂಹವನ್ನು ಅವನು ತೆಗೆದು ಹಾಕಿದ ಮೇಲೆ ಅವನ ಹೃದಯವು ಹೆಚ್ಚಳಪಡುವದು; ಹೌದು, ಸಹಸ್ರಾರು ಸೈನಿಕರನ್ನು ಬೀಳಿಸಿದ್ದರೂ ಪ್ರಬಲವಾಗ ಲಾರನು. |
13. | ಉತ್ತರದ ಅರಸನು ಮತ್ತೆ ತಿರುಗಿಕೊಂಡು ಮೊದಲನೇ ಸಾರಿಗಿಂತಲೂ ದೊಡ್ಡ ಸಮೂಹವನ್ನು ನಿಲ್ಲಿಸಿ ಕೆಲವು ವರುಷಗಳಾದ ಮೇಲೆ ದೊಡ್ಡ ಸೈನ್ಯದ ಸಂಗಡವೂ ಬಹಳ ಸಂಪತ್ತಿನ ಸಂಗಡವೂ ನಿಶ್ಚಯವಾಗಿ ಬರುವನು. |
14. | ಅದೇ ಕಾಲದಲ್ಲಿ ದಕ್ಷಿಣದ ಅರಸನಿಗೆ ವಿರೋಧವಾಗಿ ಅನೇಕರು ಎದುರು ನಿಲ್ಲುವರು; ಅಲ್ಲದೆ ನಿನ್ನ ಜನರಲ್ಲಿ ದರೋಡೆಕೋರರು ಆ ದರ್ಶನವನ್ನು ಸ್ಥಾಪಿಸಬೇಕೆಂದು ತಮ್ಮನ್ನು ತಾವು ಹೆಚ್ಚಿಸಿಕೊಳ್ಳುವರು; ಆದರೆ ಅವರು ಬಿದ್ದು ಹೋಗುವರು. |
15. | ಆದರೆ ಉತ್ತರದ ಅರಸನು ಬಂದು ಮುತ್ತಿಗೆ ಹಾಕಿ ದಿಬ್ಬವನ್ನು ಕೆಡವಿ ಕೋಟೆಯುಳ್ಳ ಪಟ್ಟಣಗಳನ್ನು ವಶಪಡಿಸಿಕೊಳ್ಳು ವನು; ದಕ್ಷಿಣದ ಭುಜಬಲವಾದರೂ ಅವನು ಆದು ಕೊಂಡ ಜನರಾದರೂ ನಿಲ್ಲುವದಕ್ಕೆ ಬಲವಿರುವದಿಲ್ಲ. |
16. | ಆದರೆ ಅವನಿಗೆ ಎದುರಾಗಿ ಬರುವವನು ತನ್ನ ಇಷ್ಟದ ಪ್ರಕಾರ ಮಾಡುವನು; ಯಾರೂ ಅವನ ಮುಂದೆ ನಿಲ್ಲಲಾರರು; ಅವನು ರಮ್ಯವಾದ ದೇಶದಲ್ಲಿ ನಿಲ್ಲುವನು. ಅದು ಅವನ ಕೈಯಿಂದ ನಾಶವಾಗುವದು. |
17. | ಅವನು ತನ್ನ ರಾಜ್ಯದ ಸಮಸ್ತ ಬಲ ಸಮೇತನಾಗಿ ಹೊರಟು ಅವನನ್ನು ಎದುರುಗೊಳ್ಳುವನು. ಪ್ರಮಾಣಿ ಕರು ಅವನೊಂದಿಗಿರುವರು; ಹೀಗೆ ಅವನು ಮಾಡು ವನು. ಮತ್ತು ಹೆಣ್ಣು ಮಗಳನ್ನು ಕೆಡಿಸುವದಕ್ಕೆ ಅವನಿಗೆ ಕೊಡುವನು. ಆದರೆ ಅವಳು ಅವನ ಕಡೆಗೆ ನಿಲ್ಲುವ ದಿಲ್ಲ, ಅವನಿಗಾಗಿ ಇರುವದಿಲ್ಲ. |
18. | ಇದಾದ ಮೇಲೆ ಅವನು ತನ್ನ ಮುಖವನ್ನು ದ್ವೀಪಗಳ ಕಡೆಗೆ ತಿರುಗಿಸಿ ಆನೇಕರನ್ನು ವಶಪಡಿಸಿಕೊಳ್ಳುವನು; ಆದರೆ ಒಬ್ಬ ಅಧಿಪತಿಯು ತನಗಾಗಿ ಅವನ ನಿಂದೆಯನ್ನು ಅಡಗಿಸಿ ಬಿಡುವನು; ಆ ನಿಂದೆಯನ್ನು ತನ್ನ ಮೇಲೆ ಹಾಕಿಕೊಳ್ಳದೆ ಅವನ ಮೇಲೆ ತಿರುಗಿಸಿಬಿಡುವನು. |
19. | ಆಗ ಅವನು ತನ್ನ ಸ್ವದೇಶದ ಕೋಟೆಗೆ ಮುಖವನ್ನು ತಿರುಗಿಸುವನು; ಆದರೆ ಅವನು ಎಡವಿಬಿದ್ದು ಕಾಣದೆ ಹೋಗುವನು. |
20. | ಆಗ ಅವನಿಗೆ ಬದಲಾಗಿ ರಮ್ಯವಾದ ರಾಜ್ಯದಲ್ಲಿ ಗುತ್ತಿಗೆಯನ್ನು ಹೆಚ್ಚಿಸುವನು, ತನ್ನ ಸ್ಥಾನದಲ್ಲಿ ನಿಲ್ಲು ವನು ಮತ್ತು ಅವನು ಕೆಲವು ದಿನಗಳೊಳಗೆ ನಾಶ ವಾಗುವನು; ಆದರೆ ಕೋಪದ ಪೆಟ್ಟಿನಿಂದಲ್ಲ, ಯುದ್ಧ ದಿಂದಲೂ ಅಲ್ಲ. |
21. | ಅವನ ಸ್ಥಾನದಲ್ಲಿ ಒಬ್ಬ ನೀಚನು ನಿಲ್ಲುವನು; ಅವನಿಗೆ ರಾಜ್ಯದ ಮರ್ಯಾದೆಯನ್ನು ಕೊಡುವದಿಲ್ಲ, ಆದರೆ ಅವನು ಸಮಾಧಾನವಾಗಿ ನಯನುಡಿಗಳಿಂದ ರಾಜ್ಯವನ್ನು ಪಡಕೊಳ್ಳುವನು. |
22. | ಪ್ರವಾಹದಂತಿರುವ ಆ ವ್ಯೂಹಗಳೂ ಒಡಂಬಡಿಕೆಯ ಪ್ರಧಾನನೂ ಅವನ ರಭಸಕ್ಕೆ ಸಿಕ್ಕಿ ಒಡೆದುಕೊಂಡು ಹೋಗಿ ಮುರಿದು ಹೋಗುವರು. |
23. | ಅವನ ಸಂಗಡ ಸಮಾಧಾನ ಮಾಡಿ ಕೊಂಡ ಮೇಲೆ ಕಪಟವಾಗಿ ನಡೆಯುವನು. ಕೊಂಚ ಜನರ ಸಹಾಯದಿಂದ ಏಳಿಗೆಯಾಗಿ ಬಲಗೊಳ್ಳುವನು. |
24. | ನೆಮ್ಮದಿಯಿಂದ ಸಂಸ್ಥಾನದ ಫಲವತ್ತಾದ ಪ್ರದೇಶ ಗಳಲ್ಲಿ ನುಗ್ಗಿ ತಂದೆ ತಾತಂದಿರು ಮಾಡದ ಕಾರ್ಯ ಗಳನ್ನು ಮಾಡುವನು; ಸೂರೆ, ಸುಲಿಗೆ, ಕೊಳ್ಳೆಹೊಡೆ ದವುಗಳನ್ನು ಅವರಲ್ಲಿ ಚೆಲ್ಲಿಬಿಡುವನು. ಹೌದು, ಕೋಟೆಗಳನ್ನು ಹಿಡಿಯುವ ಕುತಂತ್ರಗಳನ್ನು ಕ್ಲುಪ್ತ ಕಾಲದ ತನಕ ಕಲ್ಪಿಸುತ್ತಿರುವನು. |
25. | ಅವನು ದಕ್ಷಿಣದ ಅರಸನಿಗೆ ವಿರೋಧವಾಗಿ ತನ್ನ ಶಕ್ತಿಯಿಂದಲೂ ಧೈರ್ಯದಿಂದಲೂ ದೊಡ್ಡ ಸೈನ್ಯದ ಸಂಗಡ ದಂಡೆತ್ತಿ ಬರುವನು; ದಕ್ಷಿಣದ ಅರಸನೂ ಅಧಿಕ ಬಲವುಳ್ಳ ದೊಡ್ಡ ಸೈನ್ಯದ ಸಂಗಡ ಯುದ್ಧಕ್ಕೆ ಸನ್ನದ್ಧನಾಗುವನು. ಆದರೆ ನಿಲ್ಲಲಾರದೆ ಹೋಗುವನು. ಯಾಕಂದರೆ ಅವನಿಗೆ ವಿರೋಧವಾಗಿ ಕುಯುಕ್ತಿಗಳನ್ನು ಕಲ್ಪಿಸುವರು. |
26. | ಹೌದು, ಅವನ ರಾಜಭೋಜನದಲ್ಲಿ ಅರ್ಧಭಾಗ ವನ್ನು ತಿಂದವರೇ ಅವನನ್ನು ನಾಶಮಾಡುವರು; ಅವನ ಸೈನ್ಯವು ತುಂಬಿ ತುಳುಕುವದು ಮತ್ತು ಅನೇಕರು ಹತವಾಗುವರು. |
27. | ಈ ಇಬ್ಬರು ಅರಸರ ಹೃದಯ ಗಳನ್ನು ಕೇಡನ್ನು ಮಾಡುವಂತವುಗಳಾಗಿರುವವು; ಒಂದೇ ಮೇಜಿನಲ್ಲಿ ಕುಳಿತು ಸುಳ್ಳು ಹೇಳುವರು; ಆದರೆ ಅದು ಅನುಕೂಲವಾಗದು; ಅದು ಹೇಗಾದರೂ ನಿಯಮಿಸಲ್ಪಟ್ಟ ಕಾಲದಲ್ಲಿ ಅಂತ್ಯವಾಗುವದು. |
28. | ಆಗ ಅವನು ಮಹಾ ಐಶ್ವರ್ಯದೊಂದಿಗೆ ಸ್ವದೇಶಕ್ಕೆ ಹಿಂತಿರುಗವನು; ಅವನ ಹೃದಯವು ಪರಿಶುದ್ಧ ಒಡಂಬಡಿಕೆಗೆ ವಿರೋಧವಾಗಿರುವದು; ಅವನು ಹೀಗೆ ಕಾರ್ಯ ಸಾಧಿಸಿ ಸ್ವಂತ ದೇಶಕ್ಕೆ ಹಿಂತಿರುಗುವನು. |
29. | ನಿಯಮಿತ ಕಾಲದಲ್ಲಿಯೇ ಅವನು ಹಿಂತಿರುಗಿ ದಕ್ಷಿಣಕ್ಕೆ ಬರುವನು; ಆದರೆ ಮೊದಲು ಆದಂತೆ ಎರಡನೆಯ ಸಾರಿ ಆಗುವದಿಲ್ಲ. |
30. | ಕಿತ್ತೀಮಿನ ಹಡಗು ಗಳು ಅವನಿಗೆ ವಿರೋಧವಾಗಿ ಬರುವವು. ಆದದರಿಂದ ಅವನು ಎದೆಗುಂದಿ ಪರಿಶುದ್ಧ ಒಡಂಬಡಿಕೆಗೆ ವಿರೋಧ ವಾಗಿ ಅವನು ಕೋಪಿಸಿ ಹೀಗೆ ಮಾಡುವನು. ಹಿಂತಿರುಗಿ ಸೇರಿ ಪರಿಶುದ್ಧ ಒಡಂಬಡಿಕೆಯನ್ನು ತೊರೆದವನ ಸಂಗಡ ಜ್ಞಾನಿಯಾಗುವನು. |
31. | ಅವನು ಕೂಡಿಸುವ ಸೈನ್ಯವು ಆಶ್ರಯ ದುರ್ಗವಾದ ಪವಿತ್ರಾಲಯವನ್ನು ಹೊಲೆಗೆಡಿಸಿ, ನಿತ್ಯ ಯಜ್ಞವನ್ನು ನೀಗಿಸಿ, ಹಾಳು ಮಾಡುವ ಅಸಹ್ಯವಾದವುಗಳನ್ನು ಪ್ರತಿಷ್ಠಿಸುವದು. |
32. | ಒಡಂಬಡಿಕೆಗೆ ವಿರೋಧವಾಗಿ ಕೆಟ್ಟವರಾಗಿ ನಡೆ ಯುವವರನ್ನು ವ್ಯರ್ಥವಾದ ಮಾತುಗಳಿಂದ ಕೆಡಿ ಸುವನು; ಆದರೆ ತಮ್ಮ ದೇವರನ್ನು ಅರಿಯುವ ಜನರು ದೃಢಚಿತ್ತರಾಗಿ ಕೃತಾರ್ಥರಾಗುವರು. |
33. | ಜನರಲ್ಲಿ ಬುದ್ಧಿವಂತರಾದವರು ಅನೇಕರಿಗೆ ಬೋಧಿಸುವರು, ಆದಾಗ್ಯೂ ಕತ್ತಿಯಿಂದಲೂ ಬೆಂಕಿಯಿಂದಲೂ ಸೆರೆ ಯಿಂದಲೂ ಕೊಳ್ಳೆಯಿಂದಲೂ ಅನೇಕ ದಿನಗಳು ಸಿಕ್ಕಿಬೀಳುವರು. |
34. | ಅವರು ಬೀಳುವಾಗ ಅವರಿಗೆ ಸ್ವಲ್ಪ ಸಹಾಯ ದೊರೆಯುವದು; ಆದರೆ ಅನೇಕರು ವಂಚನೆಯ ನುಡಿಗಳಿಂದ ಅವರನ್ನು ಅಂಟಿಕೊಳ್ಳು ವರು. |
35. | ಇದಲ್ಲದೆ ಅಂತ್ಯಕಾಲದ ವರೆಗೆ ಅವರನ್ನು ಶೋಧಿಸುವದಕ್ಕೂ ಶುದ್ಧಮಾಡುವದಕ್ಕೂ ಶುಭ್ರ ಪಡಿಸುವದಕ್ಕೂ ವಿವೇಕಿಗಳಲ್ಲಿ ಕೆಲವರು ಬೀಳುವರು; ಇದು (ಅಂತ್ಯವು) ನಿಯಮಿತ ಕಾಲಕ್ಕೆ ಇರುವದು; |
36. | ಅರಸನು ತನ್ನ ಇಷ್ಟದ ಪ್ರಕಾರ ಮಾಡುವನು; ತನ್ನನ್ನು ತಾನೇ ಹೆಚ್ಚಿಸಿಕೊಂಡು ತನ್ನನ್ನು ಎಲ್ಲಾ ದೇವರುಗಳಿಗೂ ದೊಡ್ಡವನನ್ನಾಗಿ ಮಾಡಿ ಕೊಂಡು ದೇವರುಗಳ ದೇವರಿಗೆ ವಿರೋಧವಾಗಿ ಆಶ್ಚರ್ಯವಾದ ಸಂಗತಿಗಳನ್ನು ಮಾತನಾಡಿ ರೋಷವು ತೀರುವ ವರೆಗೂ ವೃದ್ಧಿಯಾಗಿರುವನು; ಯಾಕಂದರೆ ನಿಶ್ಚಯಿ ಸಲ್ಪಟ್ಟದ್ದು ಮಾಡಲ್ಪಡಲೇ ಬೇಕಾಗುವದು. |
37. | ಅವನು ತನ್ನ ಪಿತೃಗಳ ದೇವರನ್ನಾಗಲೀ ಸ್ತ್ರೀಯರ ಅಪೇಕ್ಷೆ ಯನ್ನಾಗಲೀ ಲಕ್ಷಿಸುವದಿಲ್ಲ, ಯಾವ ದೇವರನ್ನೂ ಲಕ್ಷಿಸುವದಿಲ್ಲ; ಅವನು ಎಲ್ಲವುಗಳಿಗಿಂತ ತನ್ನನ್ನು ತಾನೇ ಹೆಚ್ಚಿಸಿಕೊಂಡಿದ್ದಾನೆ. |
38. | ಆದರೆ ಅವನು ತನ್ನ ಸ್ಥಾನದಲ್ಲಿ ದೇವರ ಶಕ್ತಿಗಳನ್ನು ಮತ್ತು ತನ್ನ ಪಿತೃಗಳು ಅರಿಯದ ದೇವರುಗಳನ್ನು ಗೌರವಿಸುವನು; ಬಂಗಾರ ದಿಂದಲೂ ಬೆಳ್ಳಿಯಿಂದಲೂ ಅಮೂಲ್ಯ ಕಲ್ಲುಗಳಿಂ ದಲೂ ರಮ್ಯವಾದವುಗಳಿಂದಲೂ ಗೌರವಿಸುವನು. |
39. | ಹೀಗೆ ಅನ್ಯದೇವರ ಸಹಾಯದಿಂದ ಬಲವಾದ ಕೋಟೆಗಳನ್ನು ಆಕ್ರಮಿಸುವನು. ಯಾರನ್ನು ಕಟಾಕ್ಷಿಸು ವನೋ ಅವರಿಗೆ ಘನತೆ ಹೆಚ್ಚುವದು. ಬಹುಜನರ ಮೇಲೆ ಆಳಿಕೆಯನ್ನು ಕೊಡುವನು; ದೇಶವನ್ನು ಲಾಭಕ್ಕೆ ಹಂಚುವನು. |
40. | ಅಂತ್ಯಕಾಲದಲ್ಲಿ ದಕ್ಷಿಣದ ಅರಸನು ಅವನ ಮೇಲೆ ಬೀಳುವನು; ಉತ್ತರದ ಅರಸನು ರಥಗಳೊಂ ದಿಗೂ ಸವಾರರೊಂದಿಗೂ ಅನೇಕ ಹಡಗುಗಳೊಂ ದಿಗೂ ಸುಳಿಗಾಳಿಯಂತೆ ಅವನಿಗೆ ವಿರೋಧವಾಗಿ ದೇಶಗಳನ್ನು ಪ್ರವೇಶಿಸಿ ಪ್ರಳಯದಂತೆ ಹಾದು ಹೋಗುವನು. |
41. | ಇದಲ್ಲದೆ ಅವನು ರಮ್ಯವಾದ ದೇಶದೊಳಕ್ಕೂ ನುಗ್ಗುವನು; ಅನೇಕ ದೇಶಗಳು ಕೆಡವಲ್ಪಡುವವು; ಆದರೆ ಎದೋಮು, ಮೋವಾಬು ಅಮ್ಮೋನನ ಮಕ್ಕಳಲ್ಲಿ ಮುಖ್ಯಸ್ಥರು ಆತನ ಕೈಯಿಂದ ತಪ್ಪಿಸಿಕೊಳ್ಳುವರು. |
42. | ಅವನು ದೇಶಗಳ ಮೇಲೂ ತನ್ನ ಕೈಯನ್ನು ಚಾಚುವನು; ಐಗುಪ್ತ ದೇಶವು ತಪ್ಪಿಸಿ ಕೊಳ್ಳದು. |
43. | ಬಂಗಾರ ಬೆಳ್ಳಿ ಬೊಕ್ಕಸಗಳ ಮೇಲೆಯೂ ಐಗುಪ್ತದ ಎಲ್ಲಾ ಅಮೂಲ್ಯವಸ್ತುಗಳ ಮೇಲೆಯೂ ಅವನಿಗೆ ಅಧಿಕಾರವಿರುವದು. ಲೂಬ್ಯರೂ ಐಥೋ ಪ್ಯರೂ ಅವನನ್ನು ಹಿಂಬಾಲಿಸುವರು. |
44. | ಮೂಡಣ ದಿಂದಲೂ ಉತ್ತರದಿಂದಲೂ ಬರುವ ಸುದ್ದಿಗಳು ಅವನನ್ನು ಹೆದರಿಸುವವು. ಆದದರಿಂದ ಅವನು ಮಹಾ ಉಗ್ರನಾಗಿ ಅನೇಕರನ್ನು ಸಂಹರಿಸುವದಕ್ಕೂ ನಿರ್ಮೂಲ ಮಾಡುವದಕ್ಕೂ ಹೊರಡುವನು. |
45. | ಅವನು ತನ್ನ ಅರಮನೆಯ ಗುಡಾರಗಳನ್ನು ಸಮು ದ್ರದ ನಡುವೆ ರಮ್ಯವಾದ ಪರಿಶುದ್ಧ ಪರ್ವತದಲ್ಲಿ ಹಾಕುವನು; ಆದರೂ ಅವನು ಕೊನೆಗಾಣುವನು. ಯಾರೂ ಅವನಿಗೆ ಸಹಾಯ ಮಾಡರು. |
← Daniel (11/12) → |