Daniel (1/12) → |
1. | ಯೆಹೂದದ ಅರಸನಾದ ಯೆಹೋಯಾ ಕೀಮನ ಆಳಿಕೆಯ ಮೂರನೆಯ ವರುಷ ದಲ್ಲಿ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಯೆರೂ ಸಲೇಮಿಗೆ ಬಂದು ಮುತ್ತಿಗೆ ಹಾಕಿದನು. |
2. | ಕರ್ತನು ಯೆಹೂದದ ಅರಸನಾದ ಯೆಹೋಯಾಕೀಮನನ್ನು, ದೇವಾಲಯದ ಕೆಲವು ಪಾತ್ರೆಗಳನ್ನು ಅವನಿಗೆ ಒಪ್ಪಿಸಿದನು. ಅವನು ಅವುಗಳನ್ನು ಶಿನಾರ್ ದೇಶಕ್ಕೂ ತನ್ನ ದೇವರ ಆಲಯಕ್ಕೂ ತಂದು ಪಾತ್ರೆಗಳನ್ನು ತನ್ನ ದೇವರ ಬೊಕ್ಕಸದ ಮನೆಯಲ್ಲಿ ಇರಿಸಿದನು. |
3. | ಅರಸನು ತನ್ನ ಕಂಚುಕಿಯರ ಯಜಮಾನನಾದ ಅಶ್ವೆವಜನ ಸಂಗಡ ಮಾತನಾಡಿ ಅವನು ಇಸ್ರಾಯೇಲಿನ ಮಕ್ಕಳೊಳಗೆ ಕೆಲವರನ್ನು ಅರಸನ ಸಂತಾನದೊಳ ಗಿಂದಲೂ ಮತ್ತು ಪ್ರಧಾನರಲ್ಲಿಯೂ |
4. | ಕಳಂಕ ಇಲ್ಲ ದವರಾಗಿಯೂ ಸುಂದರರಾಗಿಯೂ ಸಕಲ ಜ್ಞಾನದಲ್ಲಿ ಪ್ರವೀಣರಾಗಿಯೂ ತಿಳುವಳಿಕೆಯಲ್ಲಿ ನಿಪುಣರಾ ಗಿಯೂ ಮತ್ತು ವಿಜ್ಞಾನದಲ್ಲಿ ತಿಳುವಳಿಕೆಯುಳ್ಳವ ರಾಗಿಯೂ ಅರಸನ ಅರಮನೆಯಲ್ಲಿ ಸೇವೆಮಾಡಲು ಸಾಮರ್ಥ್ಯವುಳ್ಳವರಾಗಿಯೂ ಇರುವ ಯೌವನಸ್ಥರನ್ನು ತಂದು ಕಸ್ದೀಯರ ವಿದ್ಯೆಯನ್ನೂ ಭಾಷೆಯನ್ನೂ ಅವರಿಗೆ ಬೋಧಿಸಬೇಕೆಂದು ಆಜ್ಞಾಪಿಸಿದನು. |
5. | ಅರಸನು ರಾಜ ಭೋಜನದಲ್ಲಿಯೂ ತಾನು ಕುಡಿಯುವ ದ್ರಾಕ್ಷಾರಸ ದಲ್ಲಿಯೂ ಪ್ರತಿದಿನವೂ ಅವರಿಗೆ ಪಾಲನ್ನು ನೇಮಿ ಸಿದನು; ಹೀಗೆ ಅವರು ಮೂರು ವರುಷಗಳ ಕಾಲ ಪೋಷಿಸಲ್ಪಟ್ಟ ಮೇಲೆ ಅರಸನ ಮುಂದೆ ನಿಲ್ಲತಕ್ಕವರಾಗುವರು. |
6. | ಇವರಲ್ಲಿ ಯೆಹೂದನ ಮಕ್ಕಳೊಳಗಿಂದ ದಾನಿಯೇಲ, ಹನನ್ಯ, ವಿಾಶಾಯೇಲ, ಅಜರ್ಯ ಎಂಬವರಿದ್ದರು. |
7. | ಇವರಿಗೆ ಕಂಚುಕಿಯ ಯಜಮಾ ನನು ಹೆಸರುಗಳನ್ನಿಟ್ಟನು, ಹೇಗಂದರೆ ದಾನಿಯೇಲ ನನ್ನು ಬೇಲ್ತೆಶಚ್ಚರನೆಂದೂ ಹನನ್ಯನನ್ನು ಶದ್ರಕ್‌ನೆಂದೂ ವಿಾಶಾಯೇಲನನ್ನು ಮೇಶಕ್‌ನೆಂದೂ ಅಜರ್ಯನಿಗೆ ಅಬೆದ್ನೆಗೋ ಎಂದು ಕರೆದನು. |
8. | ಆದರೆ ದಾನಿಯೇಲನು ತಾನು ಅರಸನ ಭೋಜನದ ಪಾಲಿನಿಂದಲಾದರೂ ಅವನು ಕುಡಿಯುವ ದ್ರಾಕ್ಷಾರಸದಿಂದಾದರೂ ತನ್ನನ್ನು ಅಶುದ್ಧಪಡಿಸಿಕೊಳ್ಳುವದಿಲ್ಲವೆಂದು ತನ್ನ ಹೃದಯದಲ್ಲಿ ನಿಶ್ಚಯಿಸಿಕೊಂಡನು; ಆದುದರಿಂದ ತಾನು ಅಶುದ್ಧ ವಾಗದ ಹಾಗೆ ಕಂಚುಕಿಯರ ಯಜಮಾನನ್ನು ಬೇಡಿ ಕೊಂಡನು. |
9. | ಆಗ ದೇವರು ದಾನಿಯೇಲನನ್ನು ಕಂಚುಕಿಯರ ಯಜಮಾನನ ದಯೆಯಲ್ಲಿಯೂ ಕರುಣೆ ಯಲ್ಲಿಯೂ ಸೇರಿಸಿದನು. |
10. | ಕಂಚುಕಿಯ ಯಜಮಾ ನನು ಹೇಳಿದ್ದೇನಂದರೆ--ನಿಮ್ಮ ಅನ್ನಪಾನಾದಿಗಳನ್ನು ನೇಮಿಸಿದ ನನ್ನ ಒಡೆಯನಾದ ಅರಸನಿಗೆ ನಾನು ಭಯಪಡುತ್ತೇನೆ; ಅವನು ಯಾಕೆ ನಿಮ್ಮ ಮುಖಗಳನ್ನು ನಿಮ್ಮ ಸ್ಥಿತಿಯಲ್ಲಿಯೇ ಇರುವ ಯೌವನಸ್ಥರಿಗಿಂತ ಕಳೆಗುಂದಿದವುಗಳನ್ನಾಗಿ ನೋಡಬೇಕು? ಈ ಪ್ರಕಾರ ನೀವು ಅರಸನ ಹತ್ತಿರ ನನ್ನ ತಲೆಗೆ ಅಪಾಯವನ್ನು ಬರಮಾಡುತ್ತೀರಿ ಅಂದನು. |
11. | ಆ ಮೇಲೆ ಕಂಚುಕಿಯರ ಯಜಮಾನನು ದಾನಿಯೇಲ್, ಹನನ್ಯ, ವಿಾಶಾ ಯೇಲ, ಅಜರ್ಯ ಇವರನ್ನು ನೋಡಿಕೊಳ್ಳುವದಕ್ಕೆ ಇಟ್ಟಿದ್ದ ಮೇಲ್ಜಾರನಿಗೆ ದಾನಿಯೇಲನು ಹೇಳಿದ್ದೇ ನಂದರೆ-- |
12. | ನಿನ್ನ ಸೇವಕರನ್ನು ಹತ್ತು ದಿವಸಗಳ ವರೆಗೂ ಪರೀಕ್ಷಿಸಿ ನೋಡು, ಅವರು ನಮಗೆ ಆಹಾರಕ್ಕೆ ಕಾಯಿಪಲ್ಯಗಳನ್ನು ಕುಡಿಯುವದಕ್ಕೆ ನೀರನ್ನು ಕೊಡಲಿ. |
13. | ಆಗ ನಮ್ಮ ಮುಖಗಳು ಅರಸನ ಭೋಜನದ ಪಾಲನ್ನು ತಿನ್ನುವ ಯೌವನಸ್ಥರ ಮುಖಗಳು ನಿಮ್ಮ ಮುಂದೆ ಕಾಣಬರಲಿ; ನಿನಗೆ ಕಾಣುವ ಪ್ರಕಾರ ನಿನ್ನ ಸೇವಕರಿಗೆ ನೋಡುವ ಹಾಗೆ ಮಾಡು ಎಂದು ಬೇಡಿ ಕೊಂಡನು. |
14. | ಹಾಗೆಯೇ ಅವನು ಈ ಕಾರ್ಯದ ವಿಷಯವಾಗಿ ಒಪ್ಪಿ ಹತ್ತು ದಿವಸಗಳ ವರೆಗೂ ಅವರನ್ನು ಪರೀಕ್ಷಿಸಿದನು. |
15. | ಹತ್ತು ದಿವಸಗಳ ಕೊನೆಯ ವರೆಗೂ ಅರಸನ ಭೋಜನದ ಪಾಲನ್ನು ತಿನ್ನುವ ಯೌವನಸ್ಥರೆ ಲ್ಲರಿಗಿಂತ ಇವರ ಮುಖಗಳು ನೋಡುವದಕ್ಕೆ ಸುಂದರ ವಾಗಿಯೂ ಶರೀರದಲ್ಲಿ ಪುಷ್ಟರಾಗಿಯೂ ಕಾಣಿಸಿದವು. |
16. | ಮೇಲ್ವಿಚಾರಕನು ಅವರ ಭೋಜನದ ಪಾಲನ್ನು ಅವರು ಕುಡಿಯುವಂತ ದ್ರಾಕ್ಷಾರಸವನ್ನು ತೆಗೆದುಹಾಕಿ ಅವರಿಗೆ ಸಸ್ಯಾಹಾರವನ್ನು ಕೊಟ್ಟನು. |
17. | ಈ ನಾಲ್ಕು ಯೌವನಸ್ಥರ ವಿಷಯವು: ದೇವರು ಅವರಿಗೆ ಎಲ್ಲಾ ವಿದ್ಯೆಯಲ್ಲಿಯೂ ಜ್ಞಾನದಲ್ಲಿಯೂ ತಿಳುವಳಿಕೆಯನ್ನೂ ವಿವೇಕವನ್ನೂ ಕೊಟ್ಟನು; ದಾನಿಯೇಲನು ಸಕಲ ದರ್ಶನಗಳಲ್ಲಿಯೂ ಕನಸುಗಳಲ್ಲಿಯೂ ತಿಳುವಳಿಕೆ ಯುಳ್ಳವನಾಗಿದ್ದನು. |
18. | ಆಗ ಅರಸನು ಅವರನ್ನು ತರಬೇಕೆಂದು ಹೇಳಿದ್ದರಿಂದ ನೇಮಿಸಿದ ದಿವಸಗಳ ಕೊನೆಯಲ್ಲಿ ಕಂಚುಕಿಯರ ಯಜಮಾನನು ಅವರನ್ನು ನೆಬೂಕದ್ನೆಚ್ಚರನ ಮುಂದೆ ತಂದನು. |
19. | ಅರಸನು ಅವರ ಸಂಗಡ ಮಾತನಾಡಿದನು; ಅವರೆಲ್ಲರಲ್ಲಿ ದಾನಿ ಯೇಲ, ಹನನ್ಯ, ವಿಾಶಾಯೇಲ ಮತ್ತು ಅಜರ್ಯ ಇವರ ಹಾಗೆ ಒಬ್ಬನೂ ಸಿಗಲಿಲ್ಲ. ಆದದರಿಂದಲೇ ಇವರು ಅರಸನ ಸನ್ನಿಧಾನದಲ್ಲಿ ನಿಂತರು. |
20. | ಅರಸನು ಅವರ ಹತ್ತಿರ ವಿಚಾರಿಸಿದ ಸಮಸ್ತ ಜ್ಞಾನ ವಿವೇಕಗಳ ವಿಷಯದಲ್ಲಿ ತನ್ನ ರಾಜ್ಯದಲ್ಲಿರುವ ಎಲ್ಲಾ ಮಂತ್ರಗಾರ ರಿಗಿಂತಲೂ ಜೋತಿಷ್ಯರಿಗಿಂತಲೂ ಇವರೇ ಹತ್ತರಷ್ಟು ಉತ್ತಮರೆಂದು ಕಂಡರು. |
21. | ದಾನಿಯೇಲನು ರಾಜ ನಾದ ಕೋರೆಷನ ಆಳಿಕೆಯ ಮೊದಲನೆಯ ವರುಷದ ತನಕ ಸನ್ನಿಧಿಸೇವಕನಾಗಿಯೇ ಇದ್ದನು. |
Daniel (1/12) → |