← Acts (5/28) → |
1. | ಆದರೆ ಅನನೀಯನೆಂಬ ಒಬ್ಬ ಮನುಷ್ಯನು ತನ್ನ ಹೆಂಡತಿಯಾದ ಸಪ್ಫೈರಳೊಂದಿಗೆ ತನ್ನ ಒಂದು ಆಸ್ತಿಯನ್ನು ಮಾರಿ |
2. | ಅದರ ಕ್ರಯದಲ್ಲಿ ಒಂದು ಭಾಗವನ್ನು ತೆಗೆದಿಟ್ಟು ಇನ್ನೊಂದು ಭಾಗವನ್ನು ತಂದು ಅಪೊಸ್ತಲರ ಪಾದಗಳ ಬಳಿಯಲ್ಲಿ ಇಟ್ಟನು; ಇದು ಅವನ ಹೆಂಡತಿಗೂ ತಿಳಿದಿತ್ತು. |
3. | ಆಗ ಪೇತ್ರನು--ಅನನೀಯನೇ, ಪವಿತ್ರಾತ್ಮನಿಗೆ ಸುಳ್ಳು ಹೇಳಿ ಹೊಲದ ಕ್ರಯದಲ್ಲಿ ಒಂದು ಭಾಗವನ್ನು ತೆಗೆದಿಡುವಂತೆ ಸೈತಾನನು ನಿನ್ನ ಹೃದಯವನ್ನು ತುಂಬಿ ಕೊಂಡದ್ದು ಯಾಕೆ? |
4. | ಆ ಆಸ್ತಿಯು ಇದ್ದಾಗ ಅದು ನಿನ್ನ ಸ್ವಂತದ್ದಾಗಿತ್ತಲ್ಲವೇ? ಅದನ್ನು ಮಾರಿದ ಮೇಲೆಯೂ ನಿನ್ನ ಅಧೀನದಲ್ಲಿಯೇ ಇತ್ತಲ್ಲವೇ? ನಿನ್ನ ಹೃದಯದಲ್ಲಿ ಅದನ್ನು ಯಾಕೆ ಯೋಚಿಸಿದ್ದೀ? ನೀನು ಮನುಷ್ಯರಿಗಲ್ಲ, ದೇವರಿಗೇ ಸುಳ್ಳಾಡಿದ್ದೀ ಅಂದನು. |
5. | ಅನನೀಯನು ಈ ಮಾತುಗಳನ್ನು ಕೇಳಿ ಕೆಳಗೆ ಬಿದ್ದು ಪ್ರಾಣಬಿಟ್ಟನು; ಇವುಗಳನ್ನು ಕೇಳಿದವರೆಲ್ಲರಿಗೂ ಮಹಾಭಯ ಉಂಟಾ ಯಿತು. |
6. | ಆಗ ಯೌವನಸ್ಥರು ಎದ್ದು ಅವನನ್ನು ಸುತ್ತಿ ಹೊತ್ತುಕೊಂಡು ಹೋಗಿ ಹೂಣಿಟ್ಟರು. |
7. | ಸುಮಾರು ಮೂರು ತಾಸುಗಳಾದ ಮೇಲೆ ಅವನ ಹೆಂಡತಿಯು ನಡೆದ ಸಂಗತಿಯನ್ನು ತಿಳಿಯದೆ ಒಳಗೆ ಬಂದಳು. |
8. | ಆಗ ಪೇತ್ರನು ಆಕೆಗೆ--ನೀವು ಆ ಹೊಲವನ್ನು ಇಷ್ಟೇ ಹಣಕ್ಕೆ ಮಾರಿದಿರೋ? ನನಗೆ ಹೇಳು ಎಂದು ಕೇಳಿದನು. ಅದಕ್ಕೆ ಆಕೆಯು--ಹೌದು, ಅಷ್ಟಕ್ಕೇ ಅಂದಳು. |
9. | ಆಗ ಪೇತ್ರನು ಆಕೆಗೆ--ಕರ್ತನ ಆತ್ಮನನ್ನು ಶೋಧಿಸುವದಕ್ಕಾಗಿ ನೀವು ಹೇಗೆ ಒಟ್ಟಾಗಿ ಸಮ್ಮತಿಸಿ ದ್ದೀರಿ? ಇಗೋ, ನಿನ್ನ ಗಂಡನನ್ನು ಹೂಣಿಟ್ಟವರ ಪಾದಗಳು ಬಾಗಿಲಲ್ಲಿ ಇವೆ, ಅವರು ನಿನ್ನನ್ನೂ ಹೊತ್ತು ಕೊಂಡು ಹೋಗುವರು ಅಂದನು. |
10. | ಕೂಡಲೆ ಆಕೆಯು ಅವನ ಪಾದಗಳ ಮುಂದೆ ಬಿದ್ದು ಪ್ರಾಣ ಬಿಟ್ಟಳು. ಆಗ ಆ ಯೌವನಸ್ಥರು ಒಳಗೆ ಬಂದು ಆಕೆಯು ಸತ್ತಿದ್ದನ್ನು ಕಂಡು ಹೊತ್ತುಕೊಂಡು ಹೋಗಿ ಆಕೆಯ ಗಂಡನ ಪಕ್ಕದಲ್ಲಿ ಹೂಣಿಟ್ಟರು. |
11. | ಸರ್ವ ಸಭೆಗೂ ಇವುಗಳನ್ನು ಕೇಳಿದವರೆಲ್ಲರಿಗೂ ಮಹಾಭಯ ಉಂಟಾಯಿತು. |
12. | ಅಪೊಸ್ತಲರ ಕೈಗಳಿಂದ ಅನೇಕ ಸೂಚಕ ಕಾರ್ಯಗಳೂ ಅದ್ಭುತಕಾರ್ಯಗಳೂ ಜನರ ಮಧ್ಯ ದಲ್ಲಿ ನಡೆದವು. (ಅವರೆಲ್ಲರೂ ಸೊಲೊಮೋನನ ದ್ವಾರಾಂಗಳದಲ್ಲಿ ಒಮ್ಮನಸ್ಸಿನಿಂದ ಇದ್ದರು.) |
13. | ಮಿಕ್ಕಾದ ವರಲ್ಲಿ ಒಬ್ಬರಿಗೂ ಅವರ ಜೊತೆ ಸೇರುವದಕ್ಕೆ ಧೈರ್ಯ ವಿರಲಿಲ್ಲ; ಆದರೂ ಜನರು ಅವರನ್ನು ಹೊಗಳುತ್ತಿದ್ದರು. |
14. | ವಿಶ್ವಾಸಿಗಳಾದ ಬಹಳ ಸ್ತ್ರೀ ಪುರುಷರ ಸಮೂಹದ ವರು ಕರ್ತನಲ್ಲಿ ಸೇರಿಕೊಂಡರು. |
15. | ಹೀಗಿರುವದರಿಂದ ಪೇತ್ರನು ಹಾದು ಹೋಗುವಾಗ ಅವನ ನೆರಳಾದರೂ ಅವರಲ್ಲಿ ಕೆಲವರ ಮೇಲೆ ಬೀಳುವಂತೆ ಜನರು ರೋಗಿಗಳನ್ನು ಹಾಸಿಗೆಗಳ ಮೇಲೆಯೂ ದೋಲಿಗಳ ಮೇಲೆಯೂ ಇಟ್ಟು ಬೀದಿಗಳಿಗೆ ತೆಗೆದುಕೊಂಡು ಬಂದರು. |
16. | ಜನಸಮೂಹವು ಸುತ್ತಮುತ್ತಲಿನ ಪಟ್ಟಣ ಗಳಿಂದ ರೋಗಿಗಳನ್ನೂ ಅಶುದ್ಧಾತ್ಮಗಳಿಂದ ಪೀಡಿಸಲ್ಪಟ್ಟ ವರನ್ನೂ ತೆಗೆದುಕೊಂಡು ಯೆರೂಸಲೇಮಿಗೆ ಬಂದರು ಮತ್ತು ಅವರಲ್ಲಿ ಪ್ರತಿಯೊಬ್ಬನೂ ಗುಣಹೊಂದಿದನು. |
17. | ಆಗ ಮಹಾಯಾಜಕನೂ ಅವನೊಂದಿಗೆ ಇದ್ದ ವರೂ (ಇವರು ಸದ್ದುಕಾಯರ ಪಂಗಡಕ್ಕೆ ಸೇರಿದವರು) ಕೋಪದಿಂದ ತುಂಬಿದವರಾಗಿ ಎದ್ದು |
18. | ಅಪೊಸ್ತಲ ರನ್ನು ಹಿಡಿದು ಅವರನ್ನು ಸಾಮಾನ್ಯ ಸೆರೆಯಲ್ಲಿಟ್ಟರು. |
19. | ಆದರೆ ರಾತ್ರಿಯಲ್ಲಿ ಕರ್ತನ ದೂತನು ಸೆರೆ ಮನೆಯ ಬಾಗಿಲುಗಳನ್ನು ತೆರೆದು ಅವರನ್ನು ಹೊರಕ್ಕೆ ತಂದು-- |
20. | ನೀವು ಹೋಗಿ ದೇವಾಲಯದಲ್ಲಿ ನಿಂತು ಕೊಂಡು ಈ ಜೀವ ವಾಕ್ಯಗಳನ್ನೆಲ್ಲಾ ಜನರಿಗೆ ತಿಳಿಸಿರಿ ಎಂದು ಹೇಳಿದನು. |
21. | ಅವರು ಅದನ್ನು ಕೇಳಿದವರಾಗಿ ಬೆಳಗಿನ ಜಾವದಲ್ಲಿಯೇ ದೇವಾಲಯದೊಳಕ್ಕೆ ಪ್ರವೇಶಿಸಿ ಬೋಧಿಸಿದರು. ಇತ್ತ ಮಹಾಯಾಜಕನೂ ಅವನ ಕೂಡ ಇದ್ದವರೂ ಬಂದು ಆಲೋಚನಾ ಸಭೆಯನ್ನೂ ಇಸ್ರಾಯೇಲ್ ಮಕ್ಕಳ ಶಾಸನ ಸಭೆಯನ್ನೂ ಕೂಡಿಸಿ ಅಪೊಸ್ತಲರನ್ನು ಕರತರುವದಕ್ಕಾಗಿ ಸೆರೆ ಮನೆಗೆ ಕಳುಹಿಸಿದರು |
22. | ಆದರೆ ಅಧಿಕಾರಿಗಳು ಬಂದು ಅವರನ್ನು ಸೆರೆಯಲ್ಲಿ ಕಾಣದೆ ಹಿಂತಿರುಗಿ ಹೋಗಿ-- |
23. | ನಿಜವಾಗಿಯೂ ಸೆರೆಮನೆಯು ಎಲ್ಲಾ ಭದ್ರತೆಯಿಂದ ಮುಚ್ಚಲ್ಪಟ್ಟದ್ದನ್ನೂ ಕಾವಲುಗಾರರು ಬಾಗಲುಗಳಲ್ಲಿ ನಿಂತಿರುವದನ್ನೂ ನಾವು ಕಂಡೆವು; ಆದರೆ ಅದನ್ನು ತೆರೆದಾಗ ನಾವು ಯಾರನ್ನೂ ಒಳಗೆ ಕಾಣಲಿಲ್ಲ ಎಂದು ಹೇಳಿದರು. |
24. | ಆಗ ಮಹಾಯಾಜಕನೂ ದೇವಾಲಯದ ಅಧಿಪತಿಯೂ ಪ್ರಧಾನಯಾಜಕರೂ ಇವುಗಳನ್ನು ಕೇಳಿ ಇದರಿಂದ ಏನು ಪರಿಣಾಮವಾದೀತು ಎಂದು ಅವರ ವಿಷಯದಲ್ಲಿ ಸಂದೇಹಪಟ್ಟರು. |
25. | ಆಗ ಒಬ್ಬನು ಬಂದು ಅವರಿಗೆ--ಇಗೋ, ನೀವು ಸೆರೆಯ ಲ್ಲಿಟ್ಟಿದ್ದ ಮನುಷ್ಯರು ದೇವಾಲಯದಲ್ಲಿ ನಿಂತುಕೊಂಡು ಜನರಿಗೆ ಬೋಧಿಸುತ್ತಿದ್ದಾರೆ ಎಂದು ಹೇಳಿ ದನು. |
26. | ಆಗ ಅಧಿಪತಿಯು ಅಧಿಕಾರಿಗಳೊಂದಿಗೆ ಹೋಗಿ ಬಲಾತ್ಕಾರವೇನೂ ಮಾಡದೆ ಅವರನ್ನು ಕರತಂದನು; ಯಾಕಂದರೆ ಜನರು ತಮಗೆ ಕಲ್ಲೆಸೆದಾರು ಎಂದು ಅವರು ಭಯಪಟ್ಟಿದ್ದರು. |
27. | ಅವರು ಅಪೊಸ್ತಲ ರನ್ನು ಕರತಂದು ಆಲೋಚನಾಸಭೆಯ ಎದುರಿನಲ್ಲಿ ನಿಲ್ಲಿಸಿದರು. ಆಗ ಮಹಾಯಾಜಕನು-- |
28. | ಈ ಹೆಸರಿ ನಲ್ಲಿ ಬೋಧಿಸ ಕೂಡದೆಂದು ನಾವು ನಿಮಗೆ ಖಂಡಿತವಾಗಿ ಅಪ್ಪಣೆ ಕೊಡಲಿಲ್ಲವೇ? ಆದರೂ ಇಗೋ, ನೀವು ಯೆರೂಸಲೇಮನ್ನು ನಿಮ್ಮ ಬೋಧನೆ ಯಿಂದ ತುಂಬಿಸಿ ಈ ಮನುಷ್ಯನ ರಕ್ತವನ್ನು ನಮ್ಮ ಮೇಲೆ ತರುವದಕ್ಕೆ ಉದ್ದೇಶವುಳ್ಳವರಾಗಿದ್ದೀರಲ್ಲಾ ಎಂದು ಅವರನ್ನು ಕೇಳಿದನು. |
29. | ಆಗ ಪೇತ್ರನೂ ಉಳಿದ ಅಪೊಸ್ತಲರೂ ಪ್ರತ್ಯುತ್ತರವಾಗಿ--ನಾವು ಮನುಷ್ಯರಿಗಿಂತ ದೇವರಿಗೆ ವಿಧೇಯರಾಗತಕ್ಕದ್ದು. |
30. | ನೀವು ಮರಕ್ಕೆ ತೂಗುಹಾಕಿ ಕೊಂದ ಯೇಸುವನ್ನು ನಮ್ಮ ಪಿತೃಗಳ ದೇವರು ಎಬ್ಬಿಸಿದನು. |
31. | ಇಸ್ರಾಯೇಲ್ಯ ರಲ್ಲಿ ಮಾನಸಾಂತರ ಉಂಟುಮಾಡಿ ಪಾಪಗಳ ಪರಿಹಾರವನ್ನು ಕೊಡುವ ಹಾಗೆ ಆತನು ಪ್ರಭುವೂ ರಕ್ಷಕನೂ ಆಗಿರುವಂತೆ ದೇವರು ತನ್ನ ಬಲಗೈಯಿಂದ ಆತನನ್ನು ಉನ್ನತಕ್ಕೆ ಏರಿಸಿದ್ದಾನೆ. |
32. | ದೇವರು ತನಗೆ ವಿಧೇಯರಾಗುವವರಿಗೆ ದಯಪಾಲಿಸಿದ ಪವಿತ್ರಾ ತ್ಮನೂ ನಾವೂ ಇವುಗಳಿಗೆ ಆತನ ಸಾಕ್ಷಿಗಳಾಗಿದ್ದೇವೆ ಎಂದು ಹೇಳಿದರು. |
33. | ಅದನ್ನು ಅವರು ಕೇಳಿ ಹೃದಯದಲ್ಲಿ ತಿವಿಯ ಲ್ಪಟ್ಟವರಾಗಿ ಅವರನ್ನು ಕೊಲ್ಲಬೇಕೆಂದು ಆಲೋಚಿಸಿ ಕೊಂಡರು. |
34. | ಆಗ ನ್ಯಾಯಪ್ರಮಾಣದಲ್ಲಿ ಪಂಡಿತ ನಾಗಿದ್ದು ಎಲ್ಲಾ ಜನರಲ್ಲಿ ಮಾನ ಹೊಂದಿದ ಗಮಲಿ ಯೇಲನೆಂಬ ಒಬ್ಬ ಫರಿಸಾಯನು ಆಲೋಚನಾ ಸಭೆಯಲ್ಲಿ ನಿಂತುಕೊಂಡು ಸ್ವಲ್ಪ ಹೊತ್ತು ಅಪೊಸ್ತಲರನ್ನು ಹೊರಗೆ ಕಳುಹಿಸಬೇಕೆಂದು ಅಪ್ಪಣೆ ಕೊಟ್ಟು ಅವ ರಿಗೆ-- |
35. | ಇಸ್ರಾಯೇಲ್ ಜನರೇ, ಈ ಮನುಷ್ಯರಿಗೆ ನೀವು ಏನು ಮಾಡಬೇಕೆಂದಿದ್ದೀರೋ ಅದರ ವಿಷಯ ವಾಗಿ ಎಚ್ಚರಿಕೆಯುಳ್ಳವರಾಗಿರ್ರಿ. |
36. | ಇದಕ್ಕಿಂತ ಮುಂಚೆ ಥೈದನು ಎದ್ದು ತಾನೊಬ್ಬ ಗಣ್ಯವ್ಯಕ್ತಿ ಎಂದು ತನ್ನ ವಿಷಯವಾಗಿ ತಾನೇ ಕೊಚ್ಚಿಕೊಂಡಾಗ ಸುಮಾರು ನಾನೂರು ಜನರು ಅವನೊಂದಿಗೆ ಸೇರಿಕೊಂಡರು; ಅವನು ಕೊಲ್ಲಲ್ಪಟ್ಟದ್ದರಿಂದ ಅವನಿಗೆ ವಿಧೇಯರಾಗಿ ದ್ದವರೆಲ್ಲರೂ ಚದರಿಹೋಗಿ ಇಲ್ಲವಾದರು. |
37. | ಈ ಮನುಷ್ಯನ ತರುವಾಯ ಖಾನೇಷುಮಾರಿಯ ದಿನ ಗಳಲ್ಲಿ ಗಲಿಲಾಯದ ಯೂದನು ಎದ್ದು ತನ್ನನ್ನು ಹಿಂಬಾಲಿಸುವಂತೆ ಅನೇಕ ಜನರನ್ನು ಸೆಳೆದನು. ಆದರೆ ಅವನು ಸಹ ನಾಶವಾದನು. ಅವನಿಗೆ ವಿಧೇಯರಾದ ವರೆಲ್ಲರೂ ಚದರಿಹೋದರು ಎಂದು ಹೇಳಿದನು. |
38. | ಈಗ ನಾನು ನಿಮಗೆ ಹೇಳುವದೇನಂದರೆ--ಈ ಮನುಷ್ಯರ ಗೊಡವೆಗೆ ಹೋಗಬೇಡಿರಿ, ಅವರನ್ನು ಬಿಡಿರಿ; ಈ ಯೋಚನೆಯು ಅಥವಾ ಈ ಕಾರ್ಯವು ಮನುಷ್ಯರಿಂದಾಗಿದ್ದರೆ ಅದು ನಿಷ್ಫಲವಾಗುವದು. |
39. | ಅದು ದೇವರಿಂದಾಗಿದ್ದರೆ ನೀವು ಅದನ್ನು ಗೆಲ್ಲಲಾರಿರಿ; ಒಂದು ವೇಳೆ ನೀವು ದೇವರಿಗೆ ವಿರುದ್ಧ ವಾಗಿ ಹೋರಾಡುವವರಾಗಿ ಕಾಣಿಸಿಕೊಂಡೀರಿ ಎಂದು ಹೇಳಿದನು. |
40. | ಇದಕ್ಕೆ ಅವರು ಅವನೊಂದಿಗೆ ಒಪ್ಪಿಕೊಂಡು ಅಪೊಸ್ತಲರನ್ನು ಕರೆಯಿಸಿ ಅವರನ್ನು ಹೊಡೆದು ಯೇಸುವಿನ ಹೆಸರಿನಲ್ಲಿ ಮಾತನಾಡಬಾರದೆಂದು ಅಪ್ಪಣೆ ಕೊಟ್ಟು ಬಿಟ್ಟುಬಿಟ್ಟರು. |
41. | ಆತನ ಹೆಸರಿಗಾಗಿ ಅವಮಾನಪಡುವದಕ್ಕೆ ತಾವು ಯೋಗ್ಯರೆಂದು ಎಣಿಸ ಲ್ಪಟ್ಟದ್ದಕ್ಕಾಗಿ ಅವರು ಸಂತೋಷಿಸುತ್ತಾ ಆಲೋಚನಾ ಸಭೆಯಿಂದ ಹೊರಟುಹೋದರು. |
42. | ಪ್ರತಿದಿನ ದೇವಾಲಯದಲ್ಲಿಯೂ ಪ್ರತಿಯೊಂದು ಮನೆಯ ಲ್ಲಿಯೂ ಯೇಸು ಕ್ರಿಸ್ತನ ವಿಷಯವಾಗಿ ಎಡೆಬಿಡದೆ ಬೋಧಿಸುತ್ತಾ ಸಾರುತ್ತಾ ಇದ್ದರು. |
← Acts (5/28) → |