Acts (1/28) → |
1. | ಓ ಥೆಯೊಫಿಲನೇ, ಯೇಸು ತಾನು ಆರಿಸಿಕೊಂಡ ಅಪೊಸ್ತಲರಿಗೆ ಪವಿತ್ರಾತ್ಮನ ಮುಖಾಂತರ ಆಜ್ಞೆಗಳನ್ನು ಕೊಟ್ಟ ತರುವಾಯ |
2. | ಆತನು ಮೇಲಕ್ಕೆ ಎತ್ತಲ್ಪಟ್ಟ ದಿವಸದ ವರೆಗೆ ತಾನು ಮಾಡುವದಕ್ಕೂ ಬೋಧಿಸುವದಕ್ಕೂ ಪ್ರಾರಂಭಿಸಿದ್ದೆಲ್ಲವನ್ನು ನಾನು ನನ್ನ ಮೊದಲನೆಯ ಪುಸ್ತಕದಲ್ಲಿ ಬರೆದೆನು. |
3. | ಆತನು ಶ್ರಮೆಯನ್ನನುಭವಿಸಿದ ಮೇಲೆ ದೃಢವಾದ ಅನೇಕ ಪ್ರಮಾಣಗಳಿಂದ ತಾನು ಜೀವಂತನಾಗಿ ದ್ದನೆಂದು ಅಪೊಸ್ತಲರಿಗೆ ತನ್ನನ್ನು ತೋರಿಸಿಕೊಂಡು ನಾಲ್ವತ್ತು ದಿವಸಗಳ ತನಕ ಅವರಿಗೆ ಕಾಣಿಸಿಕೊಳ್ಳುತ್ತಾ ದೇವರ ರಾಜ್ಯಕ್ಕೆ ಸಂಬಂಧಪಟ್ಟ ವಿಷಯಗಳನ್ನು ಮಾತನಾಡುತ್ತಿದ್ದನು. |
4. | ಆತನು ಅವರೊಂದಿಗೆ ಕೂಡಿಕೊಂಡಿದ್ದಾಗ--ನೀವು ಯೆರೂಸಲೇಮಿನಿಂದ ಹೊರಟುಹೋಗದೆ ನನ್ನಿಂದ ಕೇಳಿದ ತಂದೆಯ ವಾಗ್ದಾನಕೋಸ್ಕರ ಕಾಯ ಬೇಕೆಂದು ಅವರಿಗೆ ಅಪ್ಪಣೆಕೊಟ್ಟನು. |
5. | ಯಾಕಂದರೆ ಯೋಹಾನನು ನಿಜವಾಗಿಯೂ ನೀರಿನಿಂದ ಬಾಪ್ತಿಸ್ಮ ಮಾಡಿಸಿದನು; ಆದರೆ ನೀವು ಇನ್ನು ಸ್ವಲ್ಪ ದಿವಸ ಗಳಲ್ಲಿಯೇ ಪವಿತ್ರಾತ್ಮನಿಂದ ಬಾಪ್ತಿಸ್ಮ ಹೊಂದುವಿರಿ ಎಂದು ಹೇಳಿದನು. |
6. | ಅವರು ಕೂಡಿಬಂದಾಗ ಆತ ನಿಗೆ--ಕರ್ತನೇ, ಈ ಸಮಯದಲ್ಲಿಯೇ ನೀನು ಇಸ್ರಾ ಯೇಲ್ಯರಿಗೆ ರಾಜ್ಯವನ್ನು ಪುನಃ ಸ್ಥಾಪಿಸುವಿಯೋ ಎಂದು ಕೇಳಿದರು. |
7. | ಆತನು ಅವರಿಗೆ--ತಂದೆಯು ತನ್ನ ಸ್ವಂತ ಅಧಿಕಾರದಲ್ಲಿ ಇಟ್ಟುಕೊಂಡಿರುವ ಸಮಯ ಗಳನ್ನೂ ಕಾಲಗಳನ್ನೂ ತಿಳಿದುಕೊಳ್ಳುವದು ನಿಮಗೆ ಸಂಬಂಧಪಟ್ಟದ್ದಲ್ಲ. |
8. | ಆದರೆ ಪವಿತ್ರಾತ್ಮನು ನಿಮ್ಮ ಮೇಲೆ ಬಂದಾಗ ನೀವು ಬಲವನ್ನು ಹೊಂದುವಿರಿ; ಯೆರೂಸಲೇಮಿನಲ್ಲಿಯೂ ಎಲ್ಲಾ ಯೂದಾಯದ ಲ್ಲಿಯೂ ಸಮಾರ್ಯದಲ್ಲಿಯೂ ಭೂಮಿಯ ಕಟ್ಟ ಕಡೆಯವರೆಗೂ ನೀವು ನನಗೆ ಸಾಕ್ಷಿಗಳಾಗಿರುವಿರಿ ಎಂದು ಹೇಳಿದನು. |
9. | ಇವುಗಳನ್ನು ಹೇಳಿದ ಮೇಲೆ ಅವರು ನೋಡುತ್ತಿರುವಾಗ ಆತನು ಮೇಲಕ್ಕೆ ಎತ್ತಲ್ಪಟ್ಟನು; ಮೋಡವು ಅವರ ದೃಷ್ಟಿಗೆ ಮರೆಮಾಡಿ ಆತನನ್ನು ಸ್ವೀಕರಿಸಿತು. |
10. | ಆತನು ಮೇಲಕ್ಕೆ ಹೋಗು ತ್ತಿರಲು ಅವರು ಆಕಾಶದ ಕಡೆಗೆ ದೃಷ್ಟಿಸಿ ನೋಡುತ್ತಿರು ವಾಗ ಇಗೋ, ಬಿಳೀವಸ್ತ್ರಧಾರಿಗಳಾದ ಇಬ್ಬರು ಪುರುಷರು ಅವರ ಬಳಿಯಲ್ಲಿ ನಿಂತುಕೊಂಡರು. |
11. | ಅವರು--ಗಲಿಲಾಯದವರೇ, ನೀವು ಯಾಕೆ ಆಕಾಶದ ಕಡೆಗೆ ದೃಷ್ಟಿಸುತ್ತಾ ನಿಂತಿದ್ದೀರಿ? ನಿಮ್ಮಿಂದ ಪರಲೋಕಕ್ಕೆ ಎತ್ತಲ್ಪಟ್ಟ ಈ ಯೇಸುವು ಯಾವ ರೀತಿಯಿಂದ ಪರಲೋಕದೊಳಗೆ ಹೋಗಿರುವದನ್ನು ನೀವು ಕಂಡಿರೋ ಅದೇ ರೀತಿಯಲ್ಲಿ ಬರುವನು ಎಂದು ಹೇಳಿದರು. |
12. | ತರುವಾಯ ಅವರು ಯೆರೂಸಲೇಮಿ ನಿಂದ ಸಬ್ಬತ್ ದಿನದ ಪ್ರಯಾಣದಷ್ಟು ದೂರವಿದ್ದ ಎಣ್ಣೇಮರಗಳ ತೋಪು ಎಂದು ಕರೆಯಲ್ಪಟ್ಟ ಗುಡ್ಡ ದಿಂದ ಯೆರೂಸಲೇಮಿಗೆ ಹಿಂದಿರುಗಿದರು. |
13. | ಪೇತ್ರ, ಯಾಕೋಬ, ಯೋಹಾನ, ಅಂದ್ರೆಯ, ಫಿಲಿಪ್ಪ, ತೋಮ, ಬಾರ್ತೊಲೊಮಾಯ, ಮತ್ತಾಯ, ಅಲ್ಫಾ ಯನ ಮಗನಾದ ಯಾಕೋಬ, ಜೆಲೋತನೆಂಬ ಸೀಮೋನ ಮತ್ತು ಯಾಕೋಬನ ಸಹೋದರನಾದ ಯೂದಾ ಇವರು (ಪಟ್ಟಣದ) ಒಳಕ್ಕೆ ಬಂದು ತಾವು ಇರುತ್ತಿದ್ದ ಮೇಲಂತಸ್ತಿನ ಕೊಠಡಿಯೊಳಕ್ಕೆ ಹೋದರು. |
14. | ಇವರೆಲ್ಲರೂ ಏಕಮನಸ್ಸಿನಿಂದ ಪ್ರಾರ್ಥನೆ ವಿಜ್ಞಾ ಪನೆಗಳಲ್ಲಿ ನಿರತರಾಗಿದ್ದರು. ಅವರೊಂದಿಗೆ ಸ್ತ್ರೀಯರೂ ಯೇಸುವಿನ ತಾಯಿಯಾದ ಮರಿಯಳೂ ಆತನ ಸಹೋದರರೂ ಇದ್ದರು. |
15. | ಆ ದಿವಸಗಳಲ್ಲಿ (ನೂರಿಪ್ಪತ್ತು ಮಂದಿ ಸೇರಿ ಬಂದಿರಲಾಗಿ) ಪೇತ್ರನು ಶಿಷ್ಯರ ಮಧ್ಯದಲ್ಲಿ ನಿಂತು ಕೊಂಡು ಹೇಳಿದ್ದೇನಂದರೆ-- |
16. | ಜನರೇ, ಸಹೋದ ರರೇ, ಯೇಸುವನ್ನು ಹಿಡಿದವರಿಗೆ ದಾರಿ ತೋರಿಸಿದ ಯೂದನ ವಿಷಯವಾಗಿ ಮೊದಲು ದಾವೀದನ ಬಾಯಿಂದ ಪವಿತ್ರಾತ್ಮನು ಹೇಳಿದ್ದ ಬರಹವು ನೆರ ವೇರುವದು ಅವಶ್ಯವಾಗಿತ್ತು. |
17. | ಅವನು ನಮ್ಮೊಂದಿಗೆ ಎಣಿಸಲ್ಪಟ್ಟು ಈ ಸೇವೆಯಲ್ಲಿ ಪಾಲು ಹೊಂದಿದ ವನಾಗಿದ್ದನು. |
18. | ಈ ಮನುಷ್ಯನು ತನ್ನ ದ್ರೋಹದ ಫಲದಿಂದ ಹೊಲವನ್ನು ಕೊಂಡುಕೊಂಡನು; ತಲೆ ಕೆಳಗಾಗಿ ಬಿದ್ದು ಅವನ ಹೊಟ್ಟೆ ಒಡೆದು ಕರುಳು ಗಳೆಲ್ಲಾ ಹೊರಬಿದ್ದವು. |
19. | ಇದು ಯೆರೂಸಲೇಮ್ ನಿವಾಸಿಗಳೆಲ್ಲರಿಗೆ ತಿಳಿದು ಬಂದದ್ದರಿಂದ ಅವರ ಭಾಷೆಯಲ್ಲಿ ಆ ಹೊಲವು--ಅಕೆಲ್ದಮಾ ಎಂದು ಕರೆಯಲ್ಪ ಟ್ಟಿದೆ, ಅಂದರೆ ರಕ್ತದ ಹೊಲ ಎಂಬದು. |
20. | ಯಾಕಂ ದರೆ--ಅವನ ನಿವಾಸವು ಹಾಳುಬೀಳಲಿ; ಯಾವ ಮನುಷ್ಯನೂ ಅಲ್ಲಿ ವಾಸಮಾಡದಿರಲಿ; ಇನ್ನು ಅವನ ಅಧ್ಯಕ್ಷತೆಯನ್ನು ಬೇರೊಬ್ಬನು ತೆಗೆದುಕೊಳ್ಳಲಿ ಎಂದು ಕೀರ್ತನೆಗಳ ಪುಸ್ತಕದಲ್ಲಿ ಬರೆಯಲ್ಪಟ್ಟಿದೆ. |
21. | ಆದಕಾರಣ ಕರ್ತನಾದ ಯೇಸು ನಮ್ಮಲ್ಲಿ ಬರುತ್ತಾ ಹೋಗುತ್ತಾ ಇದ್ದ ಕಾಲದಲ್ಲೆಲ್ಲಾ ನಮ್ಮ ಸಂಗಡ ಇದ್ದ ಈ ಮನುಷ್ಯರಲ್ಲಿ |
22. | ಯೋಹಾನನ ಬಾಪ್ತಿಸ್ಮ ಮೊದಲು ಗೊಂಡು ಆತನು ನಮ್ಮಿಂದ ಎತ್ತಲ್ಪಟ್ಟ ದಿನದವರೆಗೆ ನಮ್ಮೊಂದಿಗೆ ಒಬ್ಬನನ್ನು ಆತನ ಪುನರುತ್ಥಾನದ ವಿಷಯವಾಗಿ ಸಾಕ್ಷಿಯಾಗಿರುವಂತೆ ನೇಮಿಸತಕ್ಕದ್ದು. |
23. | ಆಗ ಯೂಸ್ತನೆನಿಸಿಕೊಳ್ಳುವ ಬಾರ್ನಬನೆಂಬ ಯೋಸೇಫ ಮತ್ತು ಮತ್ತೀಯ ಎಂಬ ಇಬ್ಬರನ್ನು ಅವರು ನೇಮಕ ಮಾಡಿದರು. |
24. | ಅವರು ಪ್ರಾರ್ಥನೆ ಮಾಡುತ್ತಾ--ಎಲ್ಲರ ಹೃದಯಗಳನ್ನು ಬಲ್ಲವನಾದ ಕರ್ತನೇ, |
25. | ಯೂದನು ತನ್ನ ಸ್ವಸ್ಥಳಕ್ಕೆ ಹೋಗುವ ದಕ್ಕಾಗಿ ಅಪರಾಧದ ನಿಮಿತ್ತ ಈ ಸೇವೆಯಿಂದಲೂ ಅಪೊಸ್ತಲತನದಿಂದಲೂ ಬಿದ್ದು ಹೋದನು. ಈಗ ಈ ಸೇವೆಯಲ್ಲಿಯೂ ಅಪೊಸ್ತಲತನದಿಂದಲೂ ಒಬ್ಬನು ಪಾಲುಹೊಂದುವಂತೆ ಈ ಇಬ್ಬರಲ್ಲಿ ಯಾರನ್ನು ನೀನು ಆರಿಸಿಕೊಳ್ಳುತ್ತೀಯೋ ತೋರಿಸು ಎಂದು ಹೇಳಿದರು. |
26. | ತರುವಾಯ ಅವರು ತಮ್ಮ ಚೀಟುಗಳನ್ನು ಹಾಕಿದಾಗ ಚೀಟು ಮತ್ತೀಯನಿಗೆ ಬಂದದ್ದರಿಂದ ಅವನು ಹನ್ನೊಂದು ಮಂದಿ ಅಪೊಸ್ತಲರೊಂದಿಗೆ ಎಣಿಸ ಲ್ಪಟ್ಟನು. |
Acts (1/28) → |