← 2Samuel (2/24) → |
1. | ಇದಾದ ಮೇಲೆ ದಾವೀದನು ಕರ್ತನನ್ನು -- ಯೆಹೂದದ ಪಟ್ಟಣಗಳಲ್ಲಿ ಯಾವದಕ್ಕಾದರೂ ಹೋಗಲೋ ಎಂದು ಕೇಳಿದನು. ಕರ್ತನು ಅವನಿಗೆ--ಹೋಗು ಅಂದನು. ದಾವೀ ದನು--ನಾನು ಎಲ್ಲಿಗೆ ಹೋಗಲಿ ಎಂದು ಕೇಳಿದಕ್ಕೆ ಆತನು -- ಹೆಬ್ರೋನಿಗೆ ಅಂದನು. |
2. | ಹಾಗೆಯೇ ದಾವೀದನೂ ಅವನ ಇಬ್ಬರು ಹೆಂಡತಿಯರಾದ ಇಜ್ರೇಲಿಯವಳಾಗಿರುವ ಅಹಿನೋವಮಳೂ ಕರ್ಮೆ ಲ್ಯನನಾದ ನಾಬಾಲನ ಹೆಂಡತಿಯಾಗಿದ್ದ ಅಬೀ ಗೈಲಳೂ ಅಲ್ಲಿಗೆ ಹೋದರು. |
3. | ಇದಲ್ಲದೆ ತನ್ನ ಸಂಗಡ ಇದ್ದ ಜನರನ್ನೂ ಅವರವರ ಮನೆಯವರನ್ನೂ ಕರಕೊಂಡು ಹೋದನು; ಅವರು ಹೆಬ್ರೋನಿನ ಪಟ್ಟಣ ಗಳಲ್ಲಿ ವಾಸವಾಗಿದ್ದರು. |
4. | ಆಗ ಯೆಹೂದ ಜನರು ಬಂದು ಅಲ್ಲಿ ದಾವೀದನನ್ನು ಯೆಹೂದನ ಮನೆಯವರ ಮೇಲೆ ಅರಸನನ್ನಾಗಿ ಅಭಿಷೇಕಿಸಿದರು. |
5. | ಯಾಬೇಷ್‌ಗಿಲ್ಯಾದಿನವರು ಸೌಲನನ್ನು ಹೂಣಿಟ್ಟ ರೆಂದು ದಾವೀದನಿಗೆ ತಿಳಿಸಿದಾಗ ಅವನು ದೂತರನ್ನು ಕಳುಹಿಸಿ--ನೀವು ನಿಮ್ಮ ಯಜಮಾನನಾದ ಸೌಲನಿಗೆ ಈ ದಯೆಯನ್ನು ತೋರಿಸಿ ಅವನನ್ನು ಹೂಣಿಟ್ಟ ಕಾರಣ ಕರ್ತನಿಂದ ನಿಮಗೆ ಆಶೀರ್ವಾದವಾಗಲಿ. |
6. | ಈಗ ಕರ್ತನು ನಿಮಗೆ ದಯೆಯನ್ನೂ ಸತ್ಯವನ್ನೂ ತೋರಿಸಲಿ. ನೀವು ಈ ಕಾರ್ಯವನ್ನು ಮಾಡಿದ್ದರಿಂದ ನಾನು ನಿಮಗೆ ಪ್ರತ್ಯುಪಕಾರ ಮಾಡುವೆನು. |
7. | ನೀವು ಪರಾ ಕ್ರಮಶಾಲಿಗಳಾಗಿದ್ದು ನಿಮ್ಮ ಕೈಗಳು ಬಲವಾಗಿರಲಿ; ನಿಮ್ಮ ಯಜಮಾನನಾದ ಸೌಲನು ಸತ್ತುಹೋದನು; ಯೆಹೂದನ ಮನೆಯವರು ನನ್ನನ್ನು ತಮ್ಮ ಮೇಲೆ ಅರಸನನ್ನಾಗಿ ಅಭಿಷೇಕಮಾಡಿದರು ಅಂದನು. |
8. | ಆದರೆ ಸೌಲನ ಸೈನ್ಯಾಧಿಪತಿಯಾದ ನೇರನ ಮಗ ನಾಗಿರುವ ಅಬ್ನೇರನು ಸೌಲನ ಮಗನಾದ ಈಷ್ಬೋ ಶೆತನನ್ನು ಮಹನಯಿಮಿಗೆ ಕರಕೊಂಡು ಹೋಗಿ |
9. | ಅಲ್ಲಿ ಅವನನ್ನು ಗಿಲ್ಯಾದ್ಯರ ಮೇಲೆಯೂ ಆಶೇರ್ಯರ ಮೇಲೆಯೂ ಇಜ್ರೇಲಿಯರ ಮೇಲೆಯೂ ಎಫ್ರಾ ಯಾಮ್ಯರ ಮೇಲೆಯೂ ಬೆನ್ಯಾವಿಾನ್ಯರ ಮೇಲೆಯೂ ಇಸ್ರಾಯೇಲ್ಯರೆಲ್ಲರ ಮೇಲೆಯೂ ಅರಸನನ್ನಾಗಿ ಮಾಡಿ ದನು. |
10. | ಸೌಲನ ಮಗನಾದ ಈಷ್ಬೋಶೆತನು ಇಸ್ರಾಯೇಲಿನ ಮೇಲೆ ಆಳುವದಕ್ಕೆ ಆರಂಭಿಸಿದಾಗ ನಾಲ್ವತ್ತು ವರುಷ ಪ್ರಾಯದವನಾಗಿದ್ದು ಎರಡು ವರುಷ ಆಳಿದನು. ಆದರೆ ಯೆಹೂದನ ಮನೆಯವರು ದಾವೀದನನ್ನು ಹಿಂಬಾಲಿಸಿದರು. |
11. | ದಾವೀದನು ಹೆಬ್ರೋನಿನಲ್ಲಿ ಯೆಹೂದನ ಮನೆಯವರ ಮೇಲೆ ಅರಸನಾಗಿದ್ದ ದಿವಸಗಳು ಏಳು ವರುಷ ಆರು ತಿಂಗಳು. |
12. | ನೇರನ ಮಗನಾಗಿರುವ ಅಬ್ನೇರನೂ ಸೌಲನ ಮಗನಾದ ಈಷ್ಬೋಶೆತನ ಸೇವಕರೂ ಮಹನಯಿಮಿ ನಿಂದ ಹೊರಟು ಗಿಬ್ಯೋನಿಗೆ ಬಂದರು. |
13. | ಹಾಗೆಯೇ ಚೆರೂಯಳ ಮಗನಾದ ಯೋವಾಬನೂ ದಾವೀದನ ಸೇವಕರೂ ಹೊರಟು ಗಿಬ್ಯೋನಿನ ಕೊಳದ ಬಳಿಯಲ್ಲಿ ಕೂಡಿಬಂದರು; ಅವರು ಕೊಳದ ಆಚೆಯಲ್ಲಿಯೂ ಇವರು ಕೊಳದ ಈಚೆಯಲ್ಲಿಯೂ ಕೂತುಕೊಂಡರು. |
14. | ಆಗ ಅಬ್ನೇರನು ಯೋವಾಬನಿಗೆ--ಯೌವನಸ್ಥರು ಎದ್ದು ನಮ್ಮ ಮುಂದೆ ಆಡಲಿ ಅಂದನು. ಅದಕ್ಕೆ ಯೋವಾಬನು--ಅವರು ಏಳಲಿ ಅಂದನು. |
15. | ಹಾಗೆ ಯೇ ಸೌಲನ ಮಗನಾದ ಈಷ್ಬೋಶೆತನ ಕಡೆಯವ ರಾದ ಬೆನ್ಯಾವಿಾನ್ಯರಲ್ಲಿ ಹನ್ನೆರಡು ಮಂದಿಯೂ ದಾವೀದನ ಸೇವಕರಲ್ಲಿ ಹನ್ನೆರಡು ಮಂದಿಯೂ ಎದ್ದು ಹೊರಟು ಒಬ್ಬರ ತಲೆಯನ್ನು ಒಬ್ಬರು ಹಿಡಿದು ಒಬ್ಬರ ಪಕ್ಕೆಯಲ್ಲಿ ಒಬ್ಬರು ಕತ್ತಿಯನ್ನು ತಿವಿದು ಎಲ್ಲರೂ ಸತ್ತುಹೋದರು. |
16. | ಆದದರಿಂದ ಗಿಬ್ಯೋನಿ ನಲ್ಲಿರುವ ಆ ಸ್ಥಳಕ್ಕೆ ಹೆಲ್ಕಚ್ಚೂರಿಮ್ ಎಂಬ ಹೆಸರಾ ಯಿತು. |
17. | ಇದಲ್ಲದೆ ಆ ದಿನದಲ್ಲಿ ಅಘೋರವಾದ ಯುದ್ಧವಾಯಿತು. ಅಬ್ನೇರನೂ ಇಸ್ರಾಯೇಲ್ ಜನ ರೂ ದಾವೀದನ ಸೇವಕರಿಂದ ಹೊಡೆಯಲ್ಪಟ್ಟರು. |
18. | ಚೆರೂಯಳ ಮೂವರು ಮಕ್ಕಳಾದ ಯೋವಾ ಬನೂ ಅಬಿಷೈಯೂ ಅಸಾಹೇಲನೂ ಅಲ್ಲಿ ಇದ್ದರು. ಅಸಾಹೇಲನು ಅಡವಿಯ ಜಿಂಕೆಯ ಹಾಗೆ ಪಾದ ತ್ವರಿತನಾಗಿದ್ದನು. |
19. | ಅಸಾಹೇಲನು ಅಬ್ನೇರನನ್ನು ಹಿಂದಟ್ಟಿ ಅಬ್ನೇರನನ್ನು ಹಿಂದಟ್ಟುವದರಲ್ಲಿ ಬಲಗಡೆ ಗಾದರೂ ಎಡಗಡೆಗಾದರೂ ತಿರುಗದೆ ಇದ್ದನು. |
20. | ಆದದರಿಂದ ಅಬ್ನೇರನು ಹಿಂದಕ್ಕೆ ತಿರುಗಿ ನೋಡಿನೀನು ಅಸಾಹೇಲನಲ್ಲವೇ ಅಂದನು. |
21. | ಅದಕ್ಕವನುನಾನೇ ಅಂದನು. ಆಗ ಅಬ್ನೇರನು ಅವನಿಗೆ--ನೀನು ಬಲಗಡೆಗಾದರೂ ಎಡಗಡೆಗಾದರೂ ತಿರುಗಿ ಯೌವ ನಸ್ಥರಲ್ಲಿ ಒಬ್ಬನನ್ನು ಹಿಡಿದು ಅವನ ಆಯುಧಗಳನ್ನು ತಕ್ಕೋ ಅಂದನು. ಆದರೆ ಅಸಾಹೇಲನು ಅವನ ಹಿಂದಿನಿಂದ ತಿರುಗಲೊಲ್ಲದೆ ಇದ್ದನು. |
22. | ಅಬ್ನೇರನು ಅಸಾಹೇಲನಿಗೆ--ನೀನು ನನ್ನನ್ನು ಹಿಂಬಾಲಿಸುವದನ್ನು ಬಿಟ್ಟು ತಿರುಗಿ ಹೋಗು; ನಾನು ನಿನ್ನನ್ನು ನೆಲಕ್ಕೆ ಹೊಡೆದು ಬಿಡುವದು ಯಾಕೆ? ನಾನು ನಿನ್ನ ಸಹೋ ದರನಾದ ಯೋವಾಬನಿಗೆ ಮುಖತೋರಿಸುವದು ಹೇಗೆ ಅಂದನು. |
23. | ಆದರೆ ಅವನು ಹೋಗುವದಕ್ಕೆ ಒಪ್ಪದೆಹೋದದರಿಂದ ಅಬ್ನೇರನು ತನ್ನ ಬರ್ಜಿಯ ಹಿಂಭಾಗದ ಮೊನೆಯಿಂದ ಅವನ ಪಕ್ಕೆಯ ಐದನೇ ಎಲುಬಿನ ಕೆಳಗೆ ಹಾಯುವಂತೆ ತಿವಿದನು; ಅದು ಅವನ ಹಿಂದಿನಿಂದ ಹೊರಗೆ ಬಂತು. ಅವನು ಅಲ್ಲಿ ಬಿದ್ದು ಅದೇ ಸ್ಥಳದಲ್ಲಿ ಸತ್ತನು. ಆಗ ಏನಾಯಿಯತಂದರೆ ಅಸಾಹೇಲನು ಬಿದ್ದು ಸತ್ತ ಸ್ಥಳಕ್ಕೆ ಬಂದವರೆಲ್ಲರು ಅಲ್ಲಿಯೇ ಸುಮ್ಮನೆ ನಿಂತರು. |
24. | ಆದರೆ ಯೋವಾ ಬನೂ ಅಬಿಷೈಯೂ ಅಬ್ನೇರನನ್ನು ಹಿಂದಟ್ಟಿ ಸೂರ್ಯಅಸ್ತಮಿಸುವ ವರೆಗೆ ಗಿಬ್ಯೋನಿನ ಅರಣ್ಯ ಮಾರ್ಗದ ಅಂಚಾದ ಗೀಯಕ್ಕೆ ಎದುರಾಗಿರುವ ಅಮ್ಮಾ ಎಂಬ ಗುಡ್ಡದ ಮಟ್ಟಿಗೂ ಬಂದರು. |
25. | ಆಗ ಅಬ್ನೇರನ ಹಿಂದೆ ಬೆನ್ಯಾವಿಾನನ ಮಕ್ಕಳು ಒಟ್ಟಾಗಿ ಬಂದು ಸೈನ್ಯವಾಗಿ ಕೂಡಿಕೊಂಡು ಒಂದು ಗುಡ್ಡದ ಶಿಖರದಲ್ಲಿ ನಿಂತಿದ್ದರು. |
26. | ಆಗ ಅಬ್ನೇರನು ಯೋವಾಬನಿಗೆ--ಕತ್ತಿಯು ಯಾವಾಗಲೂ ನುಂಗಿಬಿಡುವದೋ? ಅಂತ್ಯ ದಲ್ಲಿ ಅದು ಕಹಿಯಾಗಿರುವದೆಂದು ನಿನಗೆ ಗೊತ್ತಾಗು ವದಿಲ್ಲವೋ? ತಮ್ಮ ಸಹೋದರರನ್ನು ಹಿಂಬಾಲಿಸು ವದನ್ನು ಬಿಟ್ಟು ಹಿಂದಕ್ಕೆ ತಿರುಗುವ ಹಾಗೆ ಜನರಿಗೆ ಎಷ್ಟು ಕಾಲ ಹೇಳದೆ ಇರುವಿ ಎಂದು ಕೂಗಿ ಹೇಳಿದನು. |
27. | ಅದಕ್ಕೆ ಯೋವಾಬನು--ದೇವರ ಜೀವದಾಣೆ, ಉದಯದಲ್ಲಿ ನೀನು ಮಾತನಾಡದೆ ಹೋದರೆ ನಿಶ್ಚಯ ವಾಗಿ ಜನರಲ್ಲಿ ಪ್ರತಿ ಮನುಷ್ಯನು ತನ್ನ ಸಹೋ ದರನ ಹಿಂದಿನಿಂದ ತಿರುಗಿ ಹೋಗುತ್ತಿದ್ದನು ಅಂದನು. |
28. | ಹೀಗೆ ಯೋವಾಬನು ತುತೂರಿಯನ್ನು ಊದಿ ದನು. ಆಗ ಜನರೆಲ್ಲರೂ ನಿಂತರು. ಇಸ್ರಾಯೇಲನ್ನು ಹಿಂದಟ್ಟಲಿಲ್ಲ ಮತ್ತು ಯುದ್ಧಮಾಡಲಿಲ್ಲ. |
29. | ಅಬ್ನೇ ರನೂ ಅವನ ಜನರೂ ಆ ರಾತ್ರಿಯೆಲ್ಲಾ ಬೈಲಿನಲ್ಲಿ ನಡೆದು ಯೊರ್ದನನ್ನು ದಾಟಿ ಬಿಥ್ರೋನಿನಲ್ಲೆಲ್ಲಾ ಹಾದು ಮಹನಯಿಮಿಗೆ ಬಂದರು. |
30. | ಯೋವಾಬನು ಅಬ್ನೇರನ ಹಿಂದಿನಿಂದ ತಿರುಗಿ ಜನರೆಲ್ಲರನ್ನು ಕೂಡಿಸಿಕೊಂಡಾಗ ದಾವೀದನ ಸೇವಕ ರಲ್ಲಿ ಹತ್ತೊಂಭತ್ತು ಜನರೂ ಅಸಾಹೇಲನೂ ಕಡಿಮೆ ಯಾಗಿದ್ದರು. |
31. | ಆದರೆ ದಾವೀದನ ಸೇವಕರು ಬೆನ್ಯಾ ವಿಾನ್ಯರಲ್ಲಿಯೂ ಅಬ್ನೇರನ ಜನರಲ್ಲಿಯೂ ಮುನ್ನೂರ ಅರವತ್ತು ಜನರನ್ನು ಹೊಡೆದದ್ದರಿಂದ ಅವರು ಸತ್ತರು. |
32. | ಅವರು ಅಸಾಹೇಲನನ್ನು ಎತ್ತಿ ಕೊಂಡು ಬೇತ್ಲೆಹೇಮಿನಲ್ಲಿರುವ ಅವನ ತಂದೆಯ ಸಮಾಧಿಯಲ್ಲಿ ಹೂಣಿಟ್ಟರು. ಯೋವಾಬನೂ ಅವನ ಜನರೂ ರಾತ್ರಿಯೆಲ್ಲಾ ನಡೆದು ಉದಯವಾದಾಗ ಹೆಬ್ರೋನಿಗೆ ಬಂದರು. |
← 2Samuel (2/24) → |