← 2Samuel (15/24) → |
1. | ತರುವಾಯ ಅಬ್ಷಾಲೋಮನು ತನ ಗೋಸ್ಕರ ರಥಗಳನ್ನೂ ಕುದುರೆಗಳನ್ನೂ ತನ್ನ ಮುಂದೆ ಓಡುವದಕ್ಕೆ ಐವತ್ತು ಮಂದಿಯನ್ನೂ ಸಿದ್ಧಮಾಡಿಕೊಂಡನು. |
2. | ಇದಲ್ಲದೆ ಅಬ್ಷಾಲೋಮನು ಬೆಳಿಗ್ಗೆ ಎದ್ದು ಬಾಗಲ ಬಳಿಯಲ್ಲಿ ನಿಂತುಕೊಂಡು ವ್ಯಾಜ್ಯ ಉಂಟಾದವನು ಯಾವನಾದರೂ ನ್ಯಾಯ ಕ್ಕೋಸ್ಕರ ಅರಸನ ಬಳಿಗೆ ಬರುವವನಾಗಿದ್ದರೆ ಅವನನ್ನು ಕರೆದು--ನೀನು ಯಾವ ಪಟ್ಟಣದವನೆಂದು ಕೇಳು ವನು. |
3. | ಅದಕ್ಕವನು--ನಿನ್ನ ಸೇವಕನು ಇಸ್ರಾಯೇಲ್ ಗೋತ್ರಗಳಲ್ಲಿ ಒಬ್ಬನೆಂದು ಹೇಳಿದರೆ ಅಬ್ಷಾಲೋ ಮನು ಅವನಿಗೆ--ನೋಡು, ನಿನ್ನ ಕಾರ್ಯಗಳು ಒಳ್ಳೆಯವೂ ಯುಕ್ತವೂ ಆದವುಗಳು; ಆದರೆ ಅರಸನ ಬಳಿಯಲ್ಲಿ ನಿನ್ನನ್ನು ವಿಚಾರಿಸುವದಕ್ಕೆ ಯಾವನೂ ಇಲ್ಲ. |
4. | ಇದಲ್ಲದೆ ಅಬ್ಷಾಲೋಮನು--ನಾನು ದೇಶದ ಮೇಲೆ ನ್ಯಾಯಾಧಿಪತಿಯಾಗಿ ಮಾಡಲ್ಪಟ್ಟಿದ್ದರೆ ಎಷ್ಟೋ ಒಳ್ಳೆಯದು; ಆಗ ವ್ಯಾಜ್ಯವಾದರೂ ನ್ಯಾಯವಿಚಾರಣೆ ಯಾದರೂ ಇದ್ದ ಪ್ರತಿ ಮನುಷ್ಯನು ನನ್ನ ಬಳಿಗೆ ಬಂದರೆ ನಾನು ಅವನಿಗೆ ನೀತಿಯಿಂದ ನ್ಯಾಯ ತೀರಿಸುವೆನು ಅನ್ನುವನು. |
5. | ಯಾವನಾದರೂ ತನಗೆ ವಂದಿಸುವದಕ್ಕೆ ತನ್ನ ಬಳಿಗೆ ಬಂದರೆ ತನ್ನ ಕೈಯನ್ನು ಚಾಚಿ ಅವನನ್ನು ಹಿಡಿದು ಮುದ್ದಿಟ್ಟುಕೊಳ್ಳುತ್ತಿದ್ದನು. |
6. | ಈ ಪ್ರಕಾರ ಅಬ್ಷಾಲೋಮನು ನ್ಯಾಯಕ್ಕೋಸ್ಕರ ಅರಸನ ಬಳಿಗೆ ಬರುವ ಇಸ್ರಾಯೇಲ್ಯರೆಲ್ಲರಿಗೆ ಮಾಡಿ ದನು. ಈ ರೀತಿಯಲ್ಲಿ ಅಬ್ಷಾಲೋಮನು ಇಸ್ರಾ ಯೇಲ್ಯರಿಗೆ ಮಾಡಿದನು. ಹೀಗೆ ಅಬ್ಷಾಲೋಮನು ಇಸ್ರಾಯೇಲ್ಯರ ಹೃದಯಗಳನ್ನು ಕದ್ದುಕೊಂಡನು. |
7. | ನಾಲ್ಕು ವರುಷಗಳಾದ ತರುವಾಯ ಅಬ್ಷಾಲೋ ಮನು ಅರಸನಿಗೆ--ನಾನು ಕರ್ತನಿಗೆ ಮಾಡಿಕೊಂಡಿದ್ದ ನನ್ನ ಪ್ರಮಾಣವನ್ನು ಹೆಬ್ರೋನಿನಲ್ಲಿ ಸಲ್ಲಿಸಲು ಹೋಗುವದಕ್ಕೆ ಅಪ್ಪಣೆಕೊಡಬೇಕು. |
8. | ಕರ್ತನು ನನ್ನನ್ನು ಯೆರೂಸಲೇಮಿಗೆ ತಿರಿಗಿ ನಿಜವಾಗಿಯೂ ಬರಮಾಡಿದರೆ ನಾನು ಕರ್ತನನ್ನು ಸೇವಿಸುವೆನೆಂದು ನಿನ್ನ ಸೇವಕನು ಅರಾಮ್ಯ ದೇಶದ ಗೆಷೂರಿನಲ್ಲಿ ವಾಸಿಸಿರುವಾಗ ಪ್ರಮಾಣಮಾಡಿಕೊಂಡಿದ್ದೆನು ಅಂದನು. |
9. | ಅರಸನು ಅವನಿಗೆ--ಸಮಾಧಾನವಾಗಿ ಹೋಗು ಅಂದನು. ಆಗ ಅವನು ಎದ್ದು ಹೆಬ್ರೋನಿಗೆ ಹೋದನು. |
10. | ಆದರೆ ಅಬ್ಷಾಲೋಮನು ಇಸ್ರಾಯೇಲಿನ ಎಲ್ಲಾ ಗೋತ್ರಗಳಿಗೆ ಪಾಳತಿಗಾರರನ್ನು ಕಳುಹಿಸಿ ಅವರಿಗೆ--ನೀವು ತುತೂರಿಯ ಶಬ್ದ ಕೇಳಿದಾಗ ಅಬ್ಷಾಲೋಮನು ಹೆಬ್ರೋನಿನಲ್ಲಿ ಆಳುತ್ತಾನೆಂದು ಹೇಳಿರಿ ಅಂದನು. |
11. | ಅಬ್ಷಾಲೋಮನ ಸಂಗಡ ಯೆರೂಸಲೇಮಿನಿಂದ ಕರೆಯಲ್ಪಟ್ಟ ಇನ್ನೂರು ಮಂದಿ ಜನರು ಹೋದರು. ಆದರೆ ಅವರು ನಿರ್ವಂಚನೆ ಯುಳ್ಳವರಾಗಿ ಏನೂ ತಿಳಿಯದೆ ಇದ್ದರು. |
12. | ಅಬ್ಷಾ ಲೋಮನು ಬಲಿಗಳನ್ನು ಅರ್ಪಿಸುತ್ತಿರುವಾಗ ದಾವೀ ದನ ಆಲೋಚನಾ ಕರ್ತನಾಗಿರುವ ಗೀಲೋವಿಯ ನಾದ ಅಹೀತೋಫೆಲನನ್ನು ಗೀಲೋವೆಂಬ ಅವನ ಪಟ್ಟಣದಿಂದ ಕರೇಕಳುಹಿಸಿದನು. ಅಬ್ಷಾಲೋಮನ ಸಂಗಡ ಕೂಡುವ ಜನರು ಆಗಾಗ್ಗೆ ಹೆಚ್ಚಿದ್ದರಿಂದ ಒಳಸಂಚಿನ ಗುಂಪು ಬಲವಾಯಿತು. |
13. | ದಾವೀದನ ಬಳಿಗೆ ಒಬ್ಬ ದೂತನು ಬಂದು --ಇಸ್ರಾಯೇಲ್ ಜನರ ಹೃದಯಗಳು ಅಬ್ಷಾ ಲೋಮನ ಕಡೆಗಾದವು ಅಂದನು. |
14. | ಆಗ ದಾವೀದನು ಯೆರೂಸಲೇಮಿನಲ್ಲಿ ತನ್ನ ಹತ್ತಿರ ಇರುವ ತನ್ನ ಎಲ್ಲಾ ಸೇವಕರಿಗೆ--ಏಳಿರಿ, ನಾವು ಓಡಿ ಹೋಗೋಣ; ಇಲ್ಲದಿದ್ದರೆ ಅಬ್ಷಾಲೋಮನ ಕೈ ಯಿಂದ ತಪ್ಪಿಸಿಕೊಂಡು ಹೋಗಲಾರೆವು; ಅವನು ಪಕ್ಕನೆ ನಮ್ಮನ್ನು ಹಿಡಿದು ನಮ್ಮ ಮೇಲೆ ಕೇಡನ್ನು ಬರಮಾಡಿ ಪಟ್ಟಣವನ್ನು ಕತ್ತಿಯಿಂದ ಹೊಡೆಯದ ಹಾಗೆ ಹೊರಟು ಹೋಗುವದಕ್ಕೆ ತ್ವರೆಮಾಡಿರಿ ಅಂದನು. |
15. | ಆಗ ಅರಸನ ಸೇವಕರು ಅರಸನಿಗೆಇಗೋ, ಅರಸನಾದ ನಮ್ಮ ಒಡೆಯನು ನಮಗೆ ಏನೇನು ಆಜ್ಞಾಪಿಸುವನೋ ಅದನ್ನು ಮಾಡುವದಕ್ಕೆ ನಿನ್ನ ಸೇವಕರು ಸಿದ್ಧರಾಗಿದ್ದೇವೆ ಅಂದರು. |
16. | ಅರಸನು ಮನೆಗೆ ಕಾವಲಿರುವಂತೆ ಉಪಪತ್ನಿಗಳಾದ ಹತ್ತು ಮಂದಿ ಸ್ತ್ರೀಯರನ್ನು ಬಿಟ್ಟು ಅವನೂ ಅವನ ಮನೆ ಯವರೆಲ್ಲರೂ ಅವನ ಹಿಂದೆ ಹೊರಟು ಹೋದರು. |
17. | ಅರಸನೂ ಅವನ ಹಿಂದೆ ಎಲ್ಲಾ ಜನರೂ ಹೊರಟು ಹೋಗಿ ದೂರವಾದ ಸ್ಥಳದಲ್ಲಿ ನಿಂತರು. |
18. | ಅವನ ಎಲ್ಲಾ ಸೇವಕರೂ ಕೆರೇತ್ಯರೂ ಪೆಲೇತ್ಯರೂ ಅವನ ಹಿಂದೆ ಗತ್ ಊರಿನಿಂದ ಅವನ ಸಂಗಡ ಬಂದ ಗಿತ್ತಿಯರಾದ ಆರುನೂರು ಮಂದಿಯೂ ಅರಸನ ಮುಂದೆ ನಡೆದರು. |
19. | ಆಗ ಅರಸನು ಗಿತ್ತೀಯನಾದ ಇತ್ತೈಯನ್ನು ನೋಡಿ--ನೀನು ನಮ್ಮ ಸಂಗಡ ಬರುವದು ಯಾಕೆ? ನಿನ್ನ ಸ್ಥಳಕ್ಕೆ ಹಿಂದಿರುಗಿ ಹೋಗಿ ಅರಸನ ಸಂಗಡ ಇರು. ಯಾಕಂದರೆ ನೀನು ಸೆರೆಹಿಡಿಯಲ್ಪಟ್ಟವನಾದ ಅನ್ಯದೇಶದವನು. |
20. | ನೀನು ನಿನ್ನೆ ಬಂದವನಾದದ ರಿಂದ ನಮ್ಮ ಸಂಗಡ ಹೋಗುವದಕ್ಕೆ ನಾನು ನಿನ್ನನ್ನು ತಿರುಗಾಡಿಸುವದು ಯಾಕೆ? ನಾನು ಎಲ್ಲಿಗೆ ಹೋಗ ಬೇಕಾದರೂ ಅಲ್ಲಿಗೆ ಹೋಗುವೆನು. ನಿನ್ನ ಸಹೋದರ ರನ್ನು ಕರಕೊಂಡು ಹಿಂದಕ್ಕೆ ಹೋಗು; ಕೃಪೆಯೂ ಸತ್ಯವೂ ನಿನ್ನ ಸಂಗಡ ಇರಲಿ ಅಂದನು. |
21. | ಆದರೆ ಇತ್ತೈಯು ಅರಸನಿಗೆ ಪ್ರತ್ಯುತ್ತರವಾಗಿ--ಕರ್ತನ ಜೀವ ದಾಣೆ, ಅರಸನಾದ ನನ್ನ ಒಡೆಯನ ಜೀವದಾಣೆ--ಸಾವಾದರೂ ಬದುಕುವದಾದರೂ ಅರಸನಾದ ನನ್ನ ಒಡೆಯನು ಎಲ್ಲಿ ಇರುವನೋ ನಿಶ್ಚಯವಾಗಿ ಅಲ್ಲಿ ನಿನ್ನ ಸೇವಕನು ಇರುವನು ಅಂದನು. |
22. | ಆಗ ದಾವೀದನು ಅವನಿಗೆ--ನೀನು ಹೋಗಿ ದಾಟು ಅಂದನು. ಆದದರಿಂದ ಗಿತ್ತೀಯನಾದ ಇತ್ತೈ ಅವನ ಎಲ್ಲಾ ಜನರೂ ಅವನ ಸಂಗಡ ಇರುವ ಎಲ್ಲಾ ಚಿಕ್ಕ ವರು ಕೂಡ ದಾಟಿಹೋದರು. ಜನರೆಲ್ಲಾ ದಾಟಿ ಹೋಗುವಾಗ ದೇಶದವರೆಲ್ಲಾ ಬಹಳವಾಗಿ ಅತ್ತರು. |
23. | ಅರಸನು ಕಿದ್ರೋನ್ ಹಳ್ಳವನ್ನು ದಾಟಿದನು; ಹಾಗೆಯೇ ಅವನ ಜನರೆಲ್ಲರೂ ದಾಟಿ ಅರಣ್ಯದ ಮಾರ್ಗವಾಗಿ ನಡೆದು ಹೋದರು. |
24. | ಇಗೋ, ಚಾದೋಕನೂ ಅವನ ಸಂಗಡ ಇರುವ ಎಲ್ಲಾ ಲೇವಿಯರೂ ದೇವರ ಒಡಂಬಡಿಕೆಯ ಮಂಜೂ ಷವನ್ನು ಹೊತ್ತುಕೊಂಡು ಬಂದು ಇಳಿಸಿದರು. ಆದರೆ ಎಬ್ಯಾತಾರನು ಜನರೆಲ್ಲರು ಪಟ್ಟಣದಿಂದ ದಾಟಿ ಹೋಗುವ ವರೆಗೆ ಮುಂದೆ ನಡೆಯುತ್ತಿದ್ದನು. |
25. | ಆಗ ಅರಸನು ಚಾದೋಕನಿಗೆ--ದೇವರ ಮಂಜೂಷವನ್ನು ಪಟ್ಟಣಕ್ಕೆ ತಿರಿಗಿ ತಕ್ಕೊಂಡು ಹೋಗು. ಕರ್ತನ ದೃಷ್ಟಿಯಲ್ಲಿ ಮುಂದೆ ನನಗೆ ಕೃಪೆ ದೊರಕಿದರೆ ಆತನು ನನ್ನನ್ನು ತಿರಿಗಿ ಬರಮಾಡಿ ಅದನ್ನೂ ಅದರ ವಾಸಸ್ಥಳವನ್ನೂ ನನಗೆ ತೋರಿಸುವನು. |
26. | ಒಂದು ವೇಳೆ ಆತನು--ನಿನ್ನಲ್ಲಿ ನನಗೆ ಇಷ್ಟವಿಲ್ಲವೆಂದು ಹೇಳಿ ದರೆ ಇಗೋ, ಆತನು ತನ್ನ ದೃಷ್ಟಿಗೆ ಯುಕ್ತವಾದ ಹಾಗೆ ನನಗೆ ಮಾಡಲಿ ಅಂದನು. |
27. | ಅರಸನು ಯಾಜಕ ನಾದ ಚಾದೋಕನಿಗೆ--ನೀನು ದರ್ಶಿಯಲ್ಲವೇ? ನೀನು ಸಮಾಧಾನದಿಂದ ಪಟ್ಟಣಕ್ಕೆ ತಿರಿಗಿ ಹೋಗು; ಇದಲ್ಲದೆ ನಿನ್ನ ಇಬ್ಬರು ಮಕ್ಕಳಾದ ಅಹೀಮಾಚನೂ ಎಬ್ಯಾತಾರನ ಮಗನಾದ ಯೋನಾತಾನನೂ ನಿನ್ನ ಸಂಗಡ ಹೋಗಲಿ. |
28. | ನೋಡು, ನನಗೆ ತಿಳಿಸುವದಕ್ಕೆ ನಿಮ್ಮ ಬಳಿಯಿಂದ ವರ್ತಮಾನ ಬರುವ ವರೆಗೂ ನಾನು ಅರಣ್ಯದ ಬೈಲಲ್ಲಿ ಇರುವೆನು ಅಂದನು. |
29. | ಹಾಗೆಯೇ ಚಾದೋಕನೂ ಎಬ್ಯಾತಾರನೂ ದೇವರ ಮಂಜೂಷವನ್ನು ತಿರಿಗಿ ಯೆರೂಸಲೇಮಿಗೆ ತಕ್ಕೊಂಡು ಹೋಗಿ ಅಲ್ಲಿದ್ದರು. |
30. | ದಾವೀದನು ಅಳುತ್ತಾ ತನ್ನ ತಲೆಯನ್ನು ಮುಚ್ಚಿ ಕೊಂಡು ಬರಿಗಾಲಾಗಿ ಎಣ್ಣೆ ಮರಗಳ ಗುಡ್ಡವನ್ನು ಏರಿದನು; ಅವನ ಸಂಗಡ ಇರುವ ಎಲ್ಲಾ ಜನರೂ ತಮ್ಮ ತಮ್ಮ ತಲೆಗಳನ್ನು ಮುಚ್ಚಿಕೊಂಡು ಅಳುತ್ತಾ ಮೇಲಕ್ಕೆರಿದರು. |
31. | ಅಹೀತೋಫೆಲನು ಅಬ್ಷಾಲೋ ಮನ ಬಳಿಯಲ್ಲಿ ಒಳಸಂಚಿನವರ ಸಂಗಡ ಇದ್ದಾ ನೆಂದು ದಾವೀದನಿಗೆ ತಿಳಿಸಲ್ಪಟ್ಟಾಗ ದಾವೀದನು--ಕರ್ತನೇ, ಅಹೀತೋಫೆಲನ ಆಲೋಚನೆಯನ್ನು ಹುಚ್ಚುತನವಾಗ ಮಾಡು ಅಂದನು. |
32. | ದಾವೀದನು ಪರ್ವತದ ತುದಿಗೆ ಬಂದು ಅಲ್ಲಿ ದೇವರನ್ನು ಆರಾಧಿಸಿ ದಾಗ ಏನಾಯಿತಂದರೆ ಇಗೋ, ಅರ್ಕೀಯನಾದ ಹೂಷೈ ತನ್ನ ಅಂಗಿಯನ್ನು ಹರಿದುಕೊಂಡು ತನ್ನ ತಲೆಯ ಮೇಲೆ ಮಣ್ಣು ಹೊಯ್ದುಕೊಂಡು ಅವನನ್ನು ಎದುರುಗೊಳ್ಳಲು ಬಂದನು. |
33. | ಆಗ ದಾವೀದನು ಅವನಿಗೆ--ನೀನು ನನ್ನ ಸಂಗಡ ಬಂದರೆ ನನಗೆ ಭಾರವಾಗಿರುವಿ; ನೀನು ಪಟ್ಟಣಕ್ಕೆ ತಿರಿಗಿ ಹೋಗಿ ಅಬ್ಷಾಲೋಮನಿಗೆ--ಅರಸನೇ, ನಾನು ನಿನ್ನ ಸೇವಕ ನಾಗಿರುವೆನು. |
34. | ನಾನು ಇಂದಿನ ವರೆಗೂ ಹೇಗೆ ನಿನ್ನ ತಂದೆಗೆ ಸೇವಕನಾಗಿದ್ದೆನೋ ಹಾಗೆಯೇ ಈಗ ನಿನ್ನ ಸೇವಕನಾಗಿರುವೆನು ಎಂದು ಹೇಳುವುದಾದರೆ ನೀನು ನನಗೋಸ್ಕರ ಅಹೀತೋಫೆಲನ ಆಲೋಚನೆ ಯನ್ನು ವ್ಯರ್ಥಮಾಡಬಹುದು. |
35. | ಅಲ್ಲಿ ಯಾಜಕ ರಾದ ಚಾದೋಕನೂ ಎಬ್ಯಾತಾರನೂ ನಿನ್ನ ಬಳಿಯಲ್ಲಿ ಲ್ಲವೋ? ಆದದರಿಂದ ನೀನು ಅರಸನ ಮನೆಯಲ್ಲಿ ಯಾವ ವರ್ತಮಾನವನ್ನು ಕೇಳುತ್ತೀಯೋ ಅದನ್ನು ಯಾಜಕರಾದ ಚಾದೋಕನಿಗೂ ಎಬ್ಯಾತಾರನಿಗೂ ತಿಳಿಸು. |
36. | ಇಗೋ, ಅಲ್ಲಿ ಅವರ ಸಂಗಡ ಅವರ ಇಬ್ಬರು ಮಕ್ಕಳು ಇದ್ದಾರೆ: ಚಾದೋಕನ ಮಗನಾದ ಅಹೀಮಾಚನೂ ಎಬ್ಯಾತಾರನ ಮಗನಾದ ಯೋನಾ ತಾನನೂ. ನೀವು ಕೇಳಿದ ವರ್ತಮಾನವನ್ನೆಲ್ಲಾ ಅವರ ಮೂಲಕ ನನಗೆ ಹೇಳಿ ಕಳುಹಿಸಬೇಕು ಅಂದನು. |
37. | ಹಾಗೆಯೇ ದಾವೀದನ ಸ್ನೇಹಿತನಾದ ಹೂಷೈ ಪಟ್ಟಣಕ್ಕೆ ಬಂದನು; ಅಬ್ಷಾಲೋಮನು ಯೆರೂಸಲೇಮಿಗೆ ಬಂದನು. |
← 2Samuel (15/24) → |