← 2Kings (24/25) → |
1. | ಅವನ ದಿವಸಗಳಲ್ಲಿ ಬಾಬೆಲಿನ ಅರಸನಾದ ನೆಬೂಕದ್ನೆಚರನು ಬಂದನು. ಯೆಹೋಯಾಕೀಮನು ಮೂರು ವರುಷ ಅವನ ಸೇವಕನಾಗಿದ್ದು ತರುವಾಯ ಅವನ ಮೇಲೆ ತಿರುಗಿ ಬಿದ್ದನು. |
2. | ಆದರೆ ಕರ್ತನು ಕಸ್ದೀಯರ, ಅರಾಮ್ಯರ, ಮೋವಾಬ್ಯರ, ಅಮ್ಮೋನ್ಯರ ಗುಂಪುಗಳನ್ನೂ ಅವನ ಮೇಲೆ ಕಳುಹಿಸಿದನು. ಕರ್ತನು ಪ್ರವಾದಿಗಳಾದ ತನ್ನ ಸೇವಕರ ಮುಖಾಂತರ ಹೇಳಿದ ಮಾತಿನ ಪ್ರಕಾರ ಯೆಹೂದವನ್ನು ನಾಶ ಮಾಡುವಂತೆ ಅದರ ಮೇಲೆ ಅವರನ್ನು ಬರಮಾಡಿದನು. |
3. | ನಿಶ್ಚಯವಾಗಿ ಕರ್ತನ ಅಪ್ಪಣೆಯಿಂದ ಇದು ಯೆಹೂದದ ಮೇಲೆ ಆಯಿತು. ಅದೇನಂದರೆ, ಮನಸ್ಸೆಯು ತನ್ನ ಎಲ್ಲಾ ಕೃತ್ಯಗಳಿಂದ ಮಾಡಿದ ಪಾಪಗಳ ನಿಮಿತ್ತ ಅವರನ್ನು ಆತನು ತನ್ನ ಸಮ್ಮುಖದಿಂದ ತೆಗೆದು ಹಾಕುವದಕ್ಕೋಸ್ಕರವೇ. |
4. | ಇದಲ್ಲದೆ ಅವನು ಚೆಲ್ಲಿದ ನಿರಪರಾಧದ ರಕ್ತದ ನಿಮಿತ್ತ ಇದು ಉಂಟಾಯಿತು. ಅವನು ನಿರಪರಾಧದ ರಕ್ತದಿಂದ ಯೆರೂಸಲೇಮನ್ನು ತುಂಬಿಸಿದ್ದನು. ಕರ್ತನು ಅದನ್ನು ಮನ್ನಿಸಲೊಲ್ಲದೆ ಇದ್ದನು. |
5. | ಯೆಹೋಯಾ ಕೀಮನ ಇತರ ಕ್ರಿಯೆಗಳೂ ಅವನು ಮಾಡಿದ ಎಲ್ಲವೂ ಯೆಹೂದದ ಅರಸುಗಳ ವೃತ್ತಾಂತಗಳ ಪುಸ್ತಕದಲ್ಲಿ ಬರೆಯಲ್ಪಡಲಿಲ್ಲವೋ? |
6. | ಯೆಹೋಯಾಕೀಮನು ತನ್ನ ಪಿತೃಗಳ ಸಂಗಡ ನಿದ್ರಿಸಿದನು; ಅವನ ಮಗನಾದ ಯೆಹೋಯಾಖೀನನು ಅವನಿಗೆ ಬದಲಾಗಿ ಅರಸ ನಾದನು. |
7. | ಆದರೆ ಐಗುಪ್ತದ ಅರಸನು ತನ್ನ ದೇಶದಿಂದ ತಿರಿಗಿ ಬರಲಿಲ್ಲ. ಯಾಕಂದರೆ ಐಗುಪ್ತದ ನದಿ ಮೊದಲು ಗೊಂಡು ಯೂಫ್ರೇಟೀಸ್ ನದಿಯ ವರೆಗೂ ಐಗು ಪ್ತದ ಅರಸನಿಗೆ ಇದ್ದದ್ದೆಲ್ಲಾ ಬಾಬೆಲಿನ ಅರಸನು ಹಿಡಿದಿದ್ದನು. |
8. | ಯೆಹೋಯಾಖೀನನು ಆಳಲು ಆರಂಭಿಸಿದಾಗ ಹದಿನೆಂಟು ವರುಷದವನಾಗಿದ್ದು ಯೆರೂಸಲೇಮಿನಲ್ಲಿ ಮೂರು ತಿಂಗಳು ಆಳಿದನು. ಅವನ ತಾಯಿಯು ಯೆರೂಸಲೇಮಿನ ಎಲ್ನಾತಾನನ ಮಗಳಾಗಿದ್ದು ನೆಹು ಷ್ಟಾಳೆಂಬವಳು. |
9. | ಅವನು ತನ್ನ ತಂದೆಯು ಮಾಡಿದ ಪ್ರಕಾರವೆಲ್ಲಾ ಕರ್ತನ ದೃಷ್ಟಿಗೆ ಕೆಟ್ಟದ್ದನ್ನು ಮಾಡಿದನು. |
10. | ಆ ಕಾಲದಲ್ಲಿ ಬಾಬೆಲಿನ ಅರಸನಾದ ನೆಬೂಕ ದ್ನೆಚರನ ಸೇವಕರು ಯೆರೂಸಲೇಮಿಗೆ ವಿರೋಧವಾಗಿ ಬಂದಾಗ ಆ ಪಟ್ಟಣವು ಮುತ್ತಿಗೆ ಹಾಕಲ್ಪಟ್ಟಿತು. |
11. | ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಪಟ್ಟಣಕ್ಕೆ ವಿರೋಧವಾಗಿ ಬಂದನು; ಅವನ ಸೇವಕರು ಅದನ್ನು ಮುತ್ತಿಗೆ ಹಾಕಿದರು. |
12. | ಆಗ ಯೆಹೂದದ ಅರಸನಾದ ಯೆಹೋಯಾಖೀನನೂ ಅವನ ತಾಯಿಯೂ ಸೇವ ಕರೂ ಪ್ರಧಾನರೂ ಕಂಚುಕಿಯರೂ ಅಧಿಕಾರಿಗಳ ಸಹಿತವಾಗಿ ಬಾಬೆಲಿನ ಅರಸನ ಬಳಿಗೆ ಹೋದರು. ಬಾಬೆಲಿನ ಅರಸನು ತನ್ನ ಆಳಿಕೆಯ ಎಂಟನೇ ವರುಷ ದಲ್ಲಿ ಅವನನ್ನು ಸೆರೆಹಿಡಿದನು. |
13. | ಕರ್ತನು ಹೇಳಿದ ಪ್ರಕಾರವೇ ಅವನು ಅಲ್ಲಿಂದ ಕರ್ತನ ಮನೆಯ ಎಲ್ಲಾ ಬೊಕ್ಕಸಗಳನ್ನೂ ಅರಮನೆಯ ಬೊಕ್ಕಸಗಳನ್ನೂ ಇಸ್ರಾಯೇಲಿನ ಅರಸನಾದ ಸೊಲೊಮೋನನು ಕರ್ತನ ಮನೆಯಲ್ಲಿ ಮಾಡಿದ ಬಂಗಾರದ ಎಲ್ಲಾ ಪಾತ್ರೆಗಳನ್ನೂ ತುಂಡು ತುಂಡಾಗಿ ಕತ್ತರಿಸಿಬಿಟ್ಟನು. |
14. | ಅವನು ಯೆರೂಸಲೇಮಿನವರೆಲ್ಲರನ್ನೂ ಎಲ್ಲಾ ಪ್ರಧಾನರನ್ನೂ ಎಲ್ಲಾ ಸ್ಥಿತಿಯುಳ್ಳ ಪರಾಕ್ರಮಶಾಲಿ ಗಳನ್ನೂ ಹತ್ತು ಸಾವಿರ ಸೆರೆಯವರನ್ನೂ ಮತ್ತು ಎಲ್ಲಾ ಕೌಶಲ್ಯಗಾರರನ್ನೂ ಕಮ್ಮಾರರನ್ನೂ ಅಲ್ಲಿಂದ ಒಯ್ದನು; ದೇಶದ ಬಡವರ ಹೊರತು ಉಳಿದವರು ಯಾರೂ ಅಲ್ಲಿ ಇರಲಿಲ್ಲ. |
15. | ಯೆಹೋಯಾಖೀನನನ್ನು ಬಾಬೆ ಲಿಗೆ ಒಯ್ದನು; ಅವನು ಅರಸನ ತಾಯಿಯನ್ನೂ ಅರಸನ ಹೆಂಡತಿಯರನ್ನೂ ಅವನ ಅಧಿಕಾರಿಗಳನ್ನೂ ದೇಶದ ಬಲಶಾಲಿಗಳನ್ನೂ ಯೆರೂಸಲೇಮಿನಿಂದ ಬಾಬೆಲಿಗೆ ಸೆರೆಯಾಗಿ ಒಯ್ದನು. |
16. | ಬಾಬೆಲಿನ ಅರಸನು ಎಲ್ಲಾ ಸ್ಥಿತಿವಂತರಾದ ಏಳುಸಾವಿರ ಜನರನ್ನೂ ಕೌಶಲ್ಯಗಾರರೂ ಮತ್ತು ಕಮ್ಮಾರರೂ ಆದ ಸಾವಿರ ಜನರನ್ನೂ ಬಲವುಳ್ಳ ಯುದ್ಧ ಮಾಡತಕ್ಕವರೆಲ್ಲರನ್ನೂ ಬಾಬೆಲಿಗೆ ಸೆರೆಯಾಗಿ ಒಯ್ದನು. |
17. | ಬಾಬೆಲಿನ ಅರ ಸನು ಯೆಹೋಯಾಖೀನನ ಚಿಕ್ಕಪ್ಪನಾದ ಮತ್ತನ್ಯ ನನ್ನು ಅವನಿಗೆ ಬದಲಾಗಿ ಅರಸನನ್ನಾಗಿ ಮಾಡಿ ಅವನಿಗೆ ಚಿದ್ಕೀಯ ಎಂಬ ಹೆಸರನ್ನಿಟ್ಟನು. |
18. | ಚಿದ್ಕೀಯನು ಆಳಲು ಆರಂಭಿಸಿದಾಗ ಇಪ್ಪ ತ್ತೊಂದು ವರುಷದವನಾಗಿದ್ದು ಯೆರೂಸಲೇಮಿನಲ್ಲಿ ಹನ್ನೊಂದು ವರುಷ ಆಳಿದನು. ಅವನ ತಾಯಿ ಲಿಬ್ನದ ಯೆರೆವಿಾಯನ ಮಗಳಾಗಿದ್ದ ಹಮೂಟಲ್ ಎಂಬ ವಳು. |
19. | ಅವನು ಯೆಹೋಯಾಕೀಮನು ಮಾಡಿದ ಎಲ್ಲಾದರ ಪ್ರಕಾರ ಕರ್ತನ ದೃಷ್ಟಿಗೆ ಕೆಟ್ಟದ್ದನ್ನು ಮಾಡಿ ದನು. |
20. | ಕರ್ತನು ಅವರನ್ನು ತನ್ನ ಸಮ್ಮುಖದಿಂದ ದೊಬ್ಬಿ ಹಾಕುವ ವರೆಗೆ ಯೆರೂಸಲೇಮಿನ ಮತ್ತು ಯೆಹೂದದ ಮೇಲೆ ಉಂಟಾದ ಆತನ ಕೋಪದ ನಿಮಿತ್ತ ಚಿದ್ಕೀಯನು ಬಾಬೆಲಿನ ಅರಸನ ಮೇಲೆ ತಿರುಗಿಬಿದ್ದನು. |
← 2Kings (24/25) → |