← 2Corinthians (8/13) → |
1. | ಇದಲ್ಲದೆ ಸಹೋದರರೇ, ಮಕೆದೋನ್ಯದ ಸಭೆಗಳಿಗೆ ಅನುಗ್ರಹಿಸಲ್ಪಟ್ಟ ದೇವರ ಕೃಪೆಯನ್ನು ನಿಮಗೆ ತಿಳಿಸುತ್ತೇನೆ. |
2. | ಆ ಸಭೆಗಳವರು ಬಹಳ ಹಿಂಸೆಯನ್ನು ತಾಳುವವರಾದರೂ ವಿಪರೀತ ವಾದ ಬಡತನದಲ್ಲಿದ್ದರೂ ಬಹು ಆನಂದದಿಂದ ತುಂಬಿದವರಾಗಿ ಅತ್ಯಂತ ಔದಾರ್ಯವುಳ್ಳವರಾದರು. |
3. | ಅವರು ಶಕ್ತ್ಯಾನುಸಾರವಾಗಿ ಮಾತ್ರ ಕೊಡಲಿಲ್ಲ; ಹೌದು, ಶಕ್ತಿಯನ್ನು ವಿಾರಿ ತಮ್ಮಷ್ಟಕ್ಕೆ ತಾವೇ ಕೊಟ್ಟರು; ಇದಕ್ಕೆ ನಾನು ಸಾಕ್ಷಿ. |
4. | ಪರಿಶುದ್ಧರಿಗೆ ದಾನ ಕೊಡುವ ಅನ್ಯೋನ್ಯತೆಯಲ್ಲಿ ತಾವು ಪಾಲುಗಾರ ರಾಗುವಂತೆ ನಮ್ಮನ್ನು ಬಹಳವಾಗಿ ಬೇಡಿಕೊಂಡರು. |
5. | ನಾವು ನಿರೀಕ್ಷಿಸಿದ ಪ್ರಕಾರವಾಗಿ ಅವರು ಕೊಡದೆ ಮೊದಲು ತಮ್ಮನ್ನೇ ಕರ್ತನಿಗೆ ಒಪ್ಪಿಸಿಕೊಟ್ಟರು; ಅನಂತರ ದೇವರ ಚಿತ್ತಾನುಸಾರವಾಗಿ ನಮಗೂ ತಮ್ಮನ್ನು ಒಪ್ಪಿಸಿಕೊಟ್ಟರು. |
6. | ಹೀಗಿರಲಾಗಿ ಈ ಕೃಪಾಕಾರ್ಯವನ್ನು ಪ್ರಾರಂಭಿಸಿದ ತೀತನು ನಿಮ್ಮಲ್ಲಿ ಸಹ ಅದನ್ನು ಕೊನೆಗಾಣಿಸಬೇಕೆಂದು ನಾವು ಅವನನ್ನು ಬೇಡಿಕೊಂಡೆವು. |
7. | ಆದದರಿಂದ ನೀವು ಎಲ್ಲವುಗಳಲ್ಲಿ ಅಂದರೆ ನಂಬಿಕೆಯಲ್ಲಿಯೂ ಮಾತಿ ನಲ್ಲಿಯೂ ಜ್ಞಾನದಲ್ಲಿಯೂ ಎಲ್ಲಾ ಆಸಕ್ತಿಯಲ್ಲಿಯೂ ನಮ್ಮ ಕಡೆಗಿರುವ ನಿಮ್ಮ ಪ್ರೀತಿಯಲ್ಲಿಯೂ ಸಮೃದ್ಧರಾಗಿರುವಂತೆಯೇ ಈ ಕೃಪೆಯಲ್ಲಿಯೂ ಸಮೃದ್ಧರಾಗಿರ್ರಿ. |
8. | ನಾನು ಇದನ್ನು ಆಜ್ಞೆಯಂತೆ ಹೇಳದೆ ಇತರರ ಆಸಕ್ತಿಯನ್ನು ತೋರಿಸಿಕೊಟ್ಟು ನಿಮ್ಮ ಪ್ರೀತಿಯು ಯಥಾರ್ಥವಾದದ್ದೆಂಬದನ್ನು ಸಿದ್ಧಾಂತಪಡಿಸುವದ ಕ್ಕಾಗಿಯೇ ಹೇಳುತ್ತೇನೆ. |
9. | ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯನ್ನು ನೀವು ಅರಿತವರಾಗಿದ್ದೀರಿ; ಹೇಗಂದರೆ ಆತನು ಐಶ್ವರ್ಯವಂತನಾಗಿದ್ದರೂ ಆತನ ಬಡತನದ ಮೂಲಕ ನೀವು ಐಶ್ವರ್ಯವಂತ ರಾಗುವಂತೆ ಆತನು ನಿಮಗೋಸ್ಕರ ಬಡವನಾದನು. |
10. | ಈ ಕಾರ್ಯವನ್ನು ಕುರಿತು ನನ್ನ ಅಭಿಪ್ರಾಯವನ್ನು ತಿಳಿಸುತ್ತೇನೆ; ಇದನ್ನು ಒಂದು ವರುಷದ ಹಿಂದೆ ನಡಿಸುವದಕ್ಕೆ ತೊಡಗುವದರಲ್ಲಿಯೂ ಅದನ್ನು ನಡಿಸಬೇಕೆಂದು ಮಾಡುವದರಲ್ಲಿಯೂ ನೀವು ಮುಂದಾಗಿದ್ದದರಿಂದ ಅದು ನಿಮಗೆ ವಿಹಿತವಾಗಿದೆ. |
11. | ಈ ಕಾರ್ಯವನ್ನು ಮಾಡುವದಕ್ಕೆ ಹೇಗೆ ನಿಮ್ಮಲ್ಲಿ ಸಿದ್ದಮನಸ್ಸು ಇತ್ತೋ ಹಾಗೆಯೇ ನೆರವೇರಿಸಿರಿ; ಹೀಗೆ ನಿಮಗಿರುವದರೊಳಗಿಂದ ಆ ಕಾರ್ಯವನ್ನು ಪೂರ್ತಿ ಮಾಡಿರಿ. |
12. | ಒಬ್ಬನು ಕೊಡುವದಕ್ಕೆ ಮನಸ್ಸಿದ್ದರೆ ಅವನು ತನಗೆ ಇಲ್ಲದ್ದಕ್ಕನುಸಾರವಾಗಿ ಅಲ್ಲ, ಆದರೆ ಇರುವದಕ್ಕನುಸಾರವಾಗಿಯೇ ಕೊಟ್ಟರೆ ಅದು ಸಮರ್ಪ ಕವಾಗಿರುವದು. |
13. | ಇತರರ ಭಾರವು ಪರಿಹಾರವಾಗ ಬೇಕೆಂದೂ ನಿಮಗೆ ಭಾರವಾಗಬೇಕೆಂದೂ ನನ್ನ ತಾತ್ಪರ್ಯವಲ್ಲ. |
14. | ಸಮಾನತ್ವವಿರಬೇಕೆಂದೇ ನನ್ನ ತಾತ್ಪರ್ಯ. ಸದ್ಯಕ್ಕೆ ನಿಮ್ಮ ಸಮೃದ್ಧಿಯು ಅವರ ಕೊರತೆ ಯನ್ನು ನೀಗಿಸುತ್ತದೆ; ಮುಂದೆ ಅವರ ಸಮೃದ್ಧಿಯು ನಿಮ್ಮ ಕೊರತೆಯನ್ನು ನೀಗಿಸುವದು; ಹೀಗೆ ಸಮಾನತ್ವವುಂಟಾಗುವದು. |
15. | ಬಹಳ ಕೂಡಿಸಿದವನಿಗೆ ಏನೂ ಹೆಚ್ಚಾಗಲಿಲ್ಲ; ಸ್ವಲ್ಪವಾಗಿ ಕೂಡಿಸಿದವನಿಗೆ ಏನೂ ಕಡಿಮೆಯಾಗಲಿಲ್ಲ ಎಂದು ಬರೆದಿರುವ ಪ್ರಕಾರವಾಗುವದು. |
16. | ಆದರೆ ನಿಮ್ಮ ವಿಷಯವಾಗಿ ಅದೇ ಹಿತಚಿಂತನೆ ಯನ್ನು ದೇವರು ತೀತನ ಹೃದಯದಲ್ಲಿ ಹುಟ್ಟಿಸಿದ್ದಕ್ಕಾಗಿ ದೇವರಿಗೆ ಸ್ತೋತ್ರವಾಗಲಿ. |
17. | ಅವನು ನಿಮ್ಮ ಬಳಿಗೆ ಹೋಗಬೇಕೆಂದು ನಾವು ಕೇಳಿಕೊಂಡಾಗ ನಿಜ ವಾಗಿಯೂ ಒಪ್ಪಿದ್ದಲ್ಲದೆ ಅತ್ಯಾಸಕ್ತನಾಗಿದ್ದು ತನ್ನಷ್ಟಕ್ಕೆ ತಾನೇ ನಿಮ್ಮ ಬಳಿಗೆ ಬಂದಿದ್ದಾನೆ. |
18. | ಇದಲ್ಲದೆ ಸುವಾರ್ತೆಯ ವಿಷಯದಲ್ಲಿ ಎಲ್ಲಾ ಸಭೆಗಳಲ್ಲಿಯೂ ಹೆಸರುಗೊಂಡಿದ್ದ ಸಹೋದರನನ್ನು ಅವನ ಜೊತೆ ಯಲ್ಲಿ ಕಳುಹಿಸಿದ್ದೇವೆ. |
19. | ಮಾತ್ರವಲ್ಲದೆ ಈ ಕೃಪಾ ಕಾರ್ಯವು ನಮ್ಮ ಮೂಲಕ ಕರ್ತನ ಮಹಿಮೆಗಾಗಿ ನಡೆಯುವಂತೆ ನಿಮ್ಮ ಸಿದ್ಧಮನಸ್ಸನ್ನು ಪ್ರಕಟಿಸುವದಕ್ಕಾಗಿ ನಮ್ಮ ಜೊತೆಯಲ್ಲಿ ಪ್ರಯಾಣ ಮಾಡುವದಕ್ಕೆ ಇವನು ಸಹ ಸಭೆಗಳಿಂದ ಆರಿಸಲ್ಪಟ್ಟಿದ್ದಾನೆ. |
20. | ನಾವು ಪಾರುಪತ್ಯ ಮಾಡುವ ಈ ಸಮೃದ್ಧಿಯ ವಿಷಯದಲ್ಲಿ ಒಬ್ಬರೂ ನಮ್ಮ ಮೇಲೆ ತಪ್ಪುಹೊರಿಸುವದಕ್ಕೆ ಆಸ್ಪದ ವಿರಬಾರದು. |
21. | ಯಾಕಂದರೆ ಕರ್ತನ ದೃಷ್ಟಿಯಲ್ಲಿ ಮಾತ್ರವಲ್ಲದೆ ಮನುಷ್ಯರ ದೃಷ್ಟಿಯಲ್ಲಿಯೂ ಗೌರವ ವಾದವುಗಳನ್ನು ಯೋಚನೆಗೆ ತಂದುಕೊಳ್ಳುವವರಾ ಗಿದ್ದೇವೆ. |
22. | ಅವರ ಸಂಗಡ ನಮ್ಮ ಸಹೋದರನನ್ನು ಕಳುಹಿಸಿದ್ದೇವೆ;ನಾವು ಅನೇಕ ಸಮಯಗಳಲ್ಲಿಯೂ ಅನೇಕ ಕಾರ್ಯಗಳಲ್ಲಿಯೂ ಅವನನ್ನು ಪರೀಕ್ಷಿಸಿ ಆಸಕ್ತಿಯುಳ್ಳವನೆಂದು ತಿಳುಕೊಂಡಿದ್ದೇವೆ; ಈಗಲಾ ದರೋ ಅವನು ನಿಮ್ಮಲ್ಲಿಟ್ಟಿರುವ ವಿಶೇಷ ಭರವಸದಿಂದ ಇನ್ನೂ ಬಹು ಹೆಚ್ಚಾಗಿ ಆಸಕ್ತಿಯುಳ್ಳವನಾಗಿದ್ದಾನೆ. |
23. | ತೀತನನ್ನು ಕುರಿತು ಕೇಳುತ್ತೀರೋ, ಅವನು ನನ್ನ ಪಾಲುಗಾರನೂ ನಿಮ್ಮ ವಿಷಯವಾಗಿ ನನಗೆ ಜೊತೆ ಸಹಕಾರಿಯೂ ಆಗಿದ್ದಾನೆ; ನಮ್ಮ ಸಹೋದರರನ್ನು ಕುರಿತು ಕೇಳುತ್ತೀರೋ, ಅವರು ಸಭೆಗಳ ಸೇವಕರೂ ಕ್ರಿಸ್ತನಮಹಿಮೆಯೂ ಆಗಿದ್ದಾರೆ. |
24. | ಆದಕಾರಣ ನಿಮ್ಮ ಪ್ರೀತಿಯನ್ನೂ ನಿಮ್ಮ ವಿಷಯವಾಗಿರುವ ನಮ್ಮ ಹೊಗಳಿ ಕೆಯನ್ನೂ ಇವರಿಗೂ ಸಭೆಗಳಿಗೂ ವ್ಯಕ್ತಪಡಿಸಿರಿ. |
← 2Corinthians (8/13) → |