← 2Corinthians (11/13) → |
1. | ನನ್ನ ಬುದ್ಧಿಹೀನತೆಯನ್ನು ನೀವು ಸ್ವಲ್ಪ ಮಟ್ಟಿಗೆ ಸಹಿಸಿಕೊಳ್ಳಬೇಕೆಂದು ನಾನು ಅಪೇಕ್ಷಿಸುತ್ತೇನೆ; ನಿಜವಾಗಿಯೂ ನನ್ನನ್ನು ಸಹಿಸಿ ಕೊಳ್ಳಿರಿ; |
2. | ದೈವಾಸಕ್ತಿಯಿಂದಲೇ ನಾನು ನಿಮ್ಮ ವಿಷಯದಲ್ಲಿ ಆಸಕ್ತನಾಗಿದ್ದೇನೆ; ನಿಮ್ಮನ್ನು ಕ್ರಿಸ್ತನೆಂಬ ಒಬ್ಬನೇ ಪುರುಷನಿಗೆ ಶುದ್ದ ಕನ್ಯೆಯಾಗಿ ಒಪ್ಪಿಸಬೇಕೆಂದು ನಿಮ್ಮನ್ನು ಆತನಿಗೆ ನಿಶ್ಚಯ ಮಾಡಿದೆನಲ್ಲಾ. |
3. | ಆದರೆ ಹವ್ವಳು ಸರ್ಪದ ಕುಯುಕ್ತಿಗೆ ಒಳಬಿದ್ದು ಹೇಗೆ ಮೋಸ ಹೋದಳೋ ಹಾಗೆಯೇ ನಿಮ್ಮ ಮನಸ್ಸುಗಳು ಕ್ರಿಸ್ತನ ವಿಷಯದಲ್ಲಿರಬೇಕಾದ ಸರಳತೆಯನ್ನು ಬಿಟ್ಟು ಕೆಟ್ಟು ಹೋದೀತೆಂದು ನನಗೆ ಭಯವುಂಟು. |
4. | ಯಾಕಂದರೆ ನಾವು ಸಾರದಿದ್ದ ಬೇರೊಬ್ಬ ಯೇಸುವನ್ನು ನಿಮ್ಮ ಬಳಿಗೆ ಬರುವವನು ಪ್ರಕಟಿಸುವಾಗಲೂ ನೀವು ಹೊಂದದೆ ಇದ್ದ ಬೇರೊಂದು ಆತ್ಮವನ್ನು ಹೊಂದುವಾಗಲೂ ಅಂಗೀಕರಿಸದಿದ್ದ ಬೇರೊಂದು ಸುವಾರ್ತೆಯನ್ನು ಸ್ವೀಕರಿಸುವಾಗಲೂ ನೀವು ಚೆನ್ನಾಗಿ ಸಹಿಸಿಕೊಳ್ಳು ತ್ತಿದ್ದೀರಿ. |
5. | ಅತಿ ಶ್ರೇಷ್ಠರಾದ ಅಪೊಸ್ತಲರೆನಿಸಿಕೊಳ್ಳು ವವರಿಗಿಂತ ನಾನು ಒಂದರಲ್ಲಾದರೂ ಕಡಿಮೆಯಾದ ವನಲ್ಲವೆಂದು ಭಾವಿಸುತ್ತೇನೆ. |
6. | ನಾನು ಮಾತನಾಡು ವದರಲ್ಲಿ ಒರಟಾಗಿದ್ದರೂ ಜ್ಞಾನದಲ್ಲಿ ಅಲ್ಲ, ಎಲ್ಲವು ಗಳಲ್ಲಿ ನಿಮ್ಮ ಮಧ್ಯದಲ್ಲಿ ನಾವು ನಮ್ಮನ್ನು ತೋರ್ಪಡಿಸಿದ್ದೇವೆ. |
7. | ನೀವು ಹೆಚ್ಚಿಸಲ್ಪಡಬೇಕೆಂದು ನನ್ನನ್ನು ನಾನೇ ತಗ್ಗಿಸಿಕೊಂಡು ದೇವರ ಸುವಾರ್ತೆಯನ್ನು ನಿಮಗೆ ಉಚಿತವಾಗಿ ಸಾರಿದ್ದು ಅಪರಾಧವೋ? |
8. | ನಿಮ್ಮ ಸೇವೆ ಮಾಡುವದಕ್ಕೋಸ್ಕರ ನಾನು ಇತರ ಸಭೆಗಳಿಂದ ಸಂಬಳ ತೆಗೆದುಕೊಂಡು ಅವುಗಳನ್ನು ಸುಲುಕೊಂಡೆನು. |
9. | ನಾನು ನಿಮ್ಮಲ್ಲಿದ್ದು ಕೊರತೆಯುಳ್ಳವನಾಗಿದ್ದಾಗ ಯಾರ ಮೇಲೆಯೂ ಭಾರಹಾಕಲಿಲ್ಲ; ಮಕೆದೋನ್ಯ ದಿಂದ ಬಂದ ಸಹೋದರರು ನನಗೆ ಬೇಕಾದದ್ದೆಲ್ಲವನ್ನು ಕೊಟ್ಟರು; ನಾನು ನಿಮಗೆ ಯಾವದರಲ್ಲಿಯೂ ಭಾರವಾಗಿರಬಾರದೆಂದು ನೋಡಿಕೊಳ್ಳುತ್ತಿದ್ದೆನು, ಇನ್ನು ಮೇಲೆಯೂ ನೋಡಿಕೊಳ್ಳುವೆನು. |
10. | ಕ್ರಿಸ್ತನ ಸತ್ಯವು ನನ್ನಲ್ಲಿರುವದರಿಂದ ಈ ನನ್ನ ಹೊಗಳಿಕೆಯನ್ನು ಅಕಾಯದ ಪ್ರಾಂತ್ಯಗಳಲ್ಲಿ ಒಬ್ಬರೂ ನಿಲ್ಲಿಸಬಾರದು. |
11. | ಯಾಕೆ? ನಿಮ್ಮ ಮೇಲೆ ಪ್ರೀತಿ ಇಲ್ಲದ್ದರಿಂದಲೋ? ದೇವರೇ ಬಲ್ಲನು. |
12. | ಆದರೆ ನನ್ನನ್ನು ನಿಂದಿಸುವದಕ್ಕೆ ಆಸ್ಪದವನ್ನು ಹುಡುಕುವವರಿಗೆ ಯಾವ ಎಡೆಯೂ ಸಿಕ್ಕದಂತೆ ನಾನು ಮಾಡುವದನ್ನು ಇನ್ನು ಮುಂದೆಯೂ ಮಾಡುವೆನು; ಅವರು ಯಾವದರಲ್ಲಿ ಹೊಗಳು ತ್ತಾರೋ ಅದರಲ್ಲಿ ನಮ್ಮಂತೆಯೇ ಕಂಡುಬರಲಿ. |
13. | ಅಂಥವರು ಸುಳ್ಳು ಅಪೊಸ್ತಲರೂ ಮೋಸಗಾರರಾದ ಕೆಲಸದವರೂ ಕ್ರಿಸ್ತನ ಅಪೊಸ್ತಲರಂತೆ ಕಾಣಿಸಿಕೊಳ್ಳು ವದಕ್ಕೆ ತಮ್ಮನ್ನು ತಾವೇ ಮಾರ್ಪಡಿಸಿಕೊಳ್ಳುವವರೂ ಆಗಿದ್ದಾರೆ. |
14. | ಇದೇನೂ ಆಶ್ಚರ್ಯವಲ್ಲ; ಯಾಕಂದರೆ ಸೈತಾನನು ಬೆಳಕಿನ ದೂತನಂತೆ ಕಾಣಿಸಿಕೊಳ್ಳುವ ಹಾಗೆ ತನ್ನನ್ನು ತಾನೇ ಮಾರ್ಪಡಿಸಿಕೊಳ್ಳುತ್ತಾನೆ. |
15. | ಅವನ ಸೇವಕರು ಸಹ ನೀತಿಗೆ ಸೇವಕರಾಗಿ ಕಾಣಿಸಿಕೊಳ್ಳುವದಕ್ಕೆ ಮಾರ್ಪಡಿಸಿಕೊಳ್ಳುವದು ದೊಡ್ಡ ದಲ್ಲ. ಅವರ ಅಂತ್ಯವು ಅವರ ಕೃತ್ಯಗಳಿಗೆ ತಕ್ಕ ಹಾಗೆಯೇ ಆಗುವದು. |
16. | ನನ್ನನ್ನು ಬುದ್ಧಿಹೀನನೆಂದು ಯಾರೂ ನೆನಸಬಾರ ದೆಂದು ತಿರಿಗಿ ನಾನು ಹೇಳುತ್ತೇನೆ ಹಾಗೆ ನೆನಸಿದರೂ ನನ್ನನ್ನು ಬುದ್ಧಿಹೀನನಾಗಿಯಾದರೂ ಸೇರಿಸಿಕೊಳ್ಳಿರಿ; ಯಾಕಂದರೆ ನಾನು ಸಹ ಅಲ್ಪ ಸ್ವಲ್ಪ ಹೊಗಳಿಕೊಳ್ಳ ಬೇಕೆಂದಿದ್ದೇನೆ. |
17. | ನಾನು ಈಗ ಆಡುವ ಮಾತುಗಳನ್ನು ಕರ್ತನ ಮಾತಿನ ಪ್ರಕಾರ ಹೇಳದೆ ಭರವಸದಿಂದ ಹೊಗಳಿಕೊಳ್ಳುವ ಬುದ್ಧಿ ಹೀನನಂತೆ ಆಡುತ್ತೇನೆ. |
18. | ಅನೇಕರು ಶಾರೀರಿಕ ರೀತಿಯಲ್ಲಿ ಹೊಗಳಿಕೊಳ್ಳು ವದರಿಂದ ನಾನೂ ಹೊಗಳಿಕೊಳ್ಳುತ್ತೇನೆ. |
19. | ನೀವು ಬುದ್ಧಿವಂತರಾಗಿದ್ದು ಬುದ್ಧಿಹೀನರನ್ನು ಸಂತೋಷದಿಂದ ಸಹಿಸಿಕೊಳ್ಳುತ್ತೀರಲ್ಲಾ. |
20. | ಒಬ್ಬನು ನಿಮ್ಮನ್ನು ತನಗೆ ವಶಮಾಡಿಕೊಂಡರೂ ಒಬ್ಬನು ನಿಮ್ಮನ್ನು ನುಂಗಿ ಬಿಟ್ಟರೂ ಒಬ್ಬನು ನಿಮ್ಮನ್ನು ಮರುಳುಗೊಳಿಸಿ ಹಿಡಿದರೂ ಒಬ್ಬನು ತನ್ನನ್ನು ಹೆಚ್ಚಿಸಿಕೊಂಡರೂ ಒಬ್ಬನು ನಿಮ್ಮ ಮುಖದ ಮೇಲೆ ಹೊಡೆದರೂ ನೀವು ಸಹಿಸಿಕೊಳ್ಳುತ್ತೀರಲ್ಲಾ. |
21. | ನಾವು ಬಲವಿಲ್ಲದವರೋ ಎಂಬಂತೆ ಅವ ಮಾನದ ವಿಷಯವಾಗಿ ನಾನು ಮಾತನಾಡುತ್ತೇನೆ. ಹೇಗಿದ್ದರೂ ಯಾವನಾದರೂ ಧೈರ್ಯವುಳ್ಳವ ನಾಗಿದ್ದರೆ (ನಾನು ಬುದ್ಧಿಹೀನನಂತೆ ಮಾತ ನಾಡುತ್ತೇನೆ) ನಾನು ಸಹ ಧೈರ್ಯವುಳ್ಳವನಾಗಿದ್ದೇನೆ. |
22. | ಅವರು ಇಬ್ರಿಯರೋ? ನಾನೂ ಇಬ್ರಿಯನು; ಅವರು ಇಸ್ರಾಯೇಲ್ಯರೊ? ನಾನೂ ಇಸ್ರಾಯೇ ಲ್ಯನು; ಅವರು ಅಬ್ರಹಾಮನ ವಂಶದವರೋ? ನಾನೂ ಅದೇ ವಂಶದವನು; |
23. | ಅವರು ಕ್ರಿಸ್ತನ ಸೇವಕರೋ? (ನಾನು ಬುದ್ಧಿಹೀನನಂತೆ ಮಾತನಾಡು ತ್ತೇನೆ) ಅವರಿಗಿಂತ ನಾನು ಹೆಚ್ಚಾಗಿ ಸೇವೆ ಮಾಡುವವ ನಾಗಿದ್ದೇನೆ; ಹೆಚ್ಚಾಗಿ ಪ್ರಯಾಸಪಟ್ಟೆನು. ಮಿತಿವಿಾರಿ ಪೆಟ್ಟುಗಳನ್ನು ತಿಂದೆನು; ಹೆಚ್ಚಾಗಿ ಸೆರೆಮನೆಗಳಲ್ಲಿ ಬಿದ್ದೆನು; ಅನೇಕ ಸಾರಿ ಮರಣಗಳಲ್ಲಿ ಸಿಕ್ಕಿಕೊಂಡೆನು. |
24. | ಐದು ಸಾರಿ ಯೆಹೂದ್ಯರಿಂದ ನನಗೆ ಒಂದು ಕಡಿಮೆ ನಾಲ್ವತ್ತು ಏಟುಗಳು ಬಿದ್ದವು; |
25. | ನಾನು ಮೂರು ಸಾರಿ ಚಡಿಗಳಿಂದ ಹೊಡಿಸಿಕೊಂಡೆನು. ಒಂದು ಸಾರಿ ನನ್ನ ಮೇಲೆ (ಕೊಲ್ಲುವದಕ್ಕೆ) ಕಲ್ಲೆಸೆದರು; ಮೂರು ಸಾರಿ ನಾನಿದ್ದ ಹಡಗು ಒಡೆದುಹೋಯಿತು; ಒಂದು ರಾತ್ರಿ ಒಂದು ಹಗಲು ಸಮುದ್ರದಲ್ಲಿ ಇದ್ದೆನು. |
26. | ಎಷ್ಟೋ ಪ್ರಯಾಣಗಳನ್ನು ಮಾಡಿದೆನು; ನೀರಿನ ಅಪಾಯಗಳು ಕಳ್ಳರ ಅಪಾಯಗಳೂ ಸ್ವಂತ ಜನರಿಂದ ಅಪಾಯಗಳೂ ಅನ್ಯಜನರಿಂದ ಅಪಾಯಗಳೂ ಪಟ್ಟಣದಲ್ಲಿ ಅಪಾಯಗಳೂ ಕಾಡಿನಲ್ಲಿ ಅಪಾಯ ಗಳೂ ಸಮುದ್ರದಲ್ಲಿ ಅಪಾಯಗಳೂ ಸುಳ್ಳು ಸಹೋ ದರರೊಳಗೆ ಇರುವಾಗ ಅಪಾಯಗಳೂ ನನಗೆ ಸಂಭವಿಸಿದವು. |
27. | ಪ್ರಯಾಸ ಪರಿಶ್ರಮಗಳಿಂದ ಆನೇಕ ಸಾರಿ ನಿದ್ದೆಗೆಟ್ಟು ಹಸಿವೆ ಬಾಯಾರಿಕೆಗಳನ್ನ ನುಭವಿಸಿ ಅನೇಕ ಸಾರಿ ಉಪವಾಸವಾಗಿಯೂ ಚಳಿಯಲ್ಲಿಯೂ ವಸ್ತ್ರವಿಲ್ಲದೆಯೂ ಇದ್ದು ಆತನನ್ನು ಸೇವಿಸಿದ್ದೇನೆ. |
28. | ಇನ್ನೂ ಬೇರೆ ಹೊರಗಿನವುಗಳಲ್ಲದೆ ಎಲ್ಲಾ ಸಭೆಗಳ ವಿಷಯವಾದ ಚಿಂತೆಯನ್ನು ಪ್ರತಿ ದಿನವೂ ನಾನು ಹೊರುತ್ತಿದ್ದೇನೆ. |
29. | ಯಾರಾದರೂ ಬಲವಿಲ್ಲದವನಾದರೆ ನಾನು ಬಲವಿಲ್ಲದವನಾಗದೆ ಇರುವೆನೋ? ಯಾರಾದರೂ ಮುಗ್ಗರಿಸಿದರೆ ನಾನು ತಾಪಪಡದೆ ಇರುವೆನೋ? |
30. | ನಾನು ಹೆಚ್ಚಳಪಡಲೇಬೇಕಾದರೆ ನನ್ನ ಬಲ ಹೀನತೆಗಳಲ್ಲಿ ಹೆಚ್ಚಳಪಡುವೆನು. |
31. | ನಾನು ಸುಳ್ಳಾಡು ವದಿಲ್ಲವೆಂದು ನಮ್ಮ ಕರ್ತನಾದ ಯೇಸುಕ್ರಿಸ್ತನ ತಂದೆಯೂ ನಿರಂತರ ಸ್ತುತಿ ಹೊಂದತಕ್ಕವನೂ ಆಗಿರುವ ದೇವರೇ ಬಲ್ಲನು. |
32. | ದಮಸ್ಕದಲ್ಲಿ ಅರಸನಾದ ಅರೇತನ ಅಧೀನದಲ್ಲಿದ್ದ ಅಧಿಪತಿಯು ನನ್ನನ್ನು ಹಿಡಿಯಬೇಕೆಂದು ದಮಸ್ಕದವರ ಪಟ್ಟಣವನ್ನು ಸೈನ್ಯದೊಂದಿಗೆ ಕಾಯುತ್ತಿದ್ದನು. |
33. | ಆಗ ನಾನು ಒಂದು ಕಲ್ಲಿಯಲ್ಲಿ ಕೂತು ಗೋಡೆಯಲ್ಲಿದ್ದ ಕಿಟಕಿ ಯೊಳಗಿಂದ ಇಳಿಸಲ್ಪಟ್ಟು ಅವನ ಕೈಯಿಂದ ತಪ್ಪಿಸಿಕೊಂಡೆನು. |
← 2Corinthians (11/13) → |