← 2Chronicles (5/36) → |
1. | ಹೀಗೆ ಸೊಲೊಮೋನನು ಕರ್ತನ ಆಲಯಕ್ಕೊಸ್ಕರ ಮಾಡಿಸಿದ ಕೆಲಸವೆಲ್ಲಾ ಮುಗಿಸಿ ತನ್ನ ತಂದೆಯಾದ ದಾವೀದನು ಪ್ರತಿಷ್ಠೆ ಮಾಡಿದ್ದ ಬೆಳ್ಳಿಬಂಗಾರವನ್ನೂ ಎಲ್ಲಾ ಸಾಮಾನು ಗಳನ್ನೂ ದೇವರ ಆಲಯದ ಬೊಕ್ಕಸಗಳಲ್ಲಿ ಇಟ್ಟನು. |
2. | ಆಗ ಚೀಯೋನೆಂಬ ದಾವೀದನ ಪಟ್ಟಣದಿಂದ ಕರ್ತನ ಒಡಂಬಡಿಕೆಯ ಮಂಜೂಷವನ್ನು ತರುವ ನಿಮಿತ್ತ ಸೊಲೊಮೋನನು ಇಸ್ರಾಯೇಲಿನ ಮಕ್ಕಳ ಲ್ಲಿರುವ ಪ್ರಭುಗಳಾದ ತಂದೆಗಳಾಗಿರುವ ಇಸ್ರಾಯೇ ಲಿನ ಹಿರಿಯರನ್ನೂ ಗೋತ್ರಗಳ ಯಜಮಾನರನ್ನೂ ಯೆರೂಸಲೇಮಿಗೆ ಕೂಡಿ ಬರಮಾಡಿದನು. |
3. | ಆದ ದರಿಂದ ಏಳನೇ ತಿಂಗಳಿನ ಹಬ್ಬದಲ್ಲಿ ಇಸ್ರಾಯೇಲಿನ ಮನುಷ್ಯರೆಲ್ಲರೂ ಅರಸನ ಬಳಿಗೆ ಬಂದು ಕೂಡಿದರು. |
4. | ಇಸ್ರಾಯೇಲಿನ ಹಿರಿಯರೆಲ್ಲರು ಬಂದಾಗ ಲೇವಿ ಯರು ಮಂಜೂಷವನ್ನು ಎತ್ತಿಕೊಂಡರು. |
5. | ಒಡಂಬಡಿ ಕೆಯ ಮಂಜೂಷವನ್ನೂ ಸಭೆಯ ಗುಡಾರವನ್ನೂ ಗುಡಾರದಲ್ಲಿದ್ದ ಸಮಸ್ತ ಪರಿಶುದ್ಧವಾದ ಪಾತ್ರೆಗಳನ್ನೂ ತಂದರು; ಇವುಗಳನ್ನು ಯಾಜಕರೂ ಲೇವಿಯರೂ ತಂದರು. |
6. | ಆಗ ಅರಸನಾದ ಸೊಲೊಮೋನನೂ ತನ್ನ ಬಳಿಯಲ್ಲಿ ಮಂಜೂಷದ ಮುಂದೆ ಕೂಡಿಕೊಂಡ ಇಸ್ರಾಯೇಲ್ ಸಭೆಯವರೆಲ್ಲರೂ ಲೆಕ್ಕಿಸಲಾಗದ ಕುರಿ ಗಳನ್ನೂ ದನಗಳನ್ನೂ ಬಲಿಯಾಗಿ ಅರ್ಪಿಸಿದರು. |
7. | ಇದಲ್ಲದೆ ಯಾಜಕರು ಕರ್ತನ ಒಡಂಬಡಿಕೆಯ ಮಂಜೂಷವನ್ನು ಅತಿಪರಿಶುದ್ಧ ಸ್ಥಳಕ್ಕೆ ಆಲಯದ ದೈವೋಕ್ತಿ ಸ್ಥಾನಕ್ಕೆ ಕೆರೂಬಿಗಳ ರೆಕ್ಕೆಗಳ ಕೆಳಗಿದ್ದ ಅದರ ಸ್ಥಳಕ್ಕೆ ತಂದುಬಿಟ್ಟರು. |
8. | ಕೆರೂಬಿಗಳು ಮಂಜೂ ಷದ ಸ್ಥಳದ ಮೇಲೆ ತಮ್ಮ ರೆಕ್ಕೆಗಳನ್ನು ಚಾಚಿಕೊಂಡಿ ದ್ದವು; ಹೀಗೆಯೇ ಕೆರೂಬಿಗಳು ಮಂಜೂಷವನ್ನೂ ಅದರ ಕೋಲುಗಳನ್ನೂ ಮೇಲಿನಿಂದ ಮುಚ್ಚಿಕೊಂಡಿ ದ್ದವು. |
9. | ಆಗ ಕೋಲುಗಳ ಕೊನೆಗಳು ದೈವೋಕ್ತಿಯ ಮುಂದೆ ಮಂಜೂಷದಿಂದ ಕಾಣಲ್ಪಡುವ ಹಾಗೆ ಕೋಲುಗಳನ್ನು ಎಳಕೊಂಡರು. ಆದರೆ ಅವು ಹೊರಗೆ ಕಾಣಲ್ಪಡಲಿಲ್ಲ. ಅದು ಅಲ್ಲಿ ಇಂದಿನ ವರೆಗೂ ಇರು ತ್ತದೆ. |
10. | ಇಸ್ರಾಯೇಲ್ ಮಕ್ಕಳು ಐಗುಪ್ತದೇಶದಿಂದ ಬಂದ ನಂತರ ಕರ್ತನು ಅವರ ಸಂಗಡ ಒಡಂಬಡಿಕೆ ಯನ್ನು ಮಾಡಿದಾಗ ಮೋಶೆಯು ಹೋರೇಬಿನ ಬಳಿ ಯಲ್ಲಿ ಮಂಜೂಷದೊಳಗೆ ಇಟ್ಟ ಕಲ್ಲಿನ ಎರಡು ಹಲಿಗೆಗಳ ಹೊರತು ಅದರಲ್ಲಿ ಮತ್ತೇನೂ ಇರಲಿಲ್ಲ. |
11. | ಇದಲ್ಲದೆ ಅಲ್ಲಿ ಇದ್ದ ಸಮಸ್ತ ಯಾಜಕರು ಪರಿಶುದ್ಧ ವಾಗಿದ್ದು ಸರದಿಗಳ ಪ್ರಕಾರ ಕಾಯದೆ ಇದ್ದದರಿಂದ |
12. | ಯಾಜಕರು ಪರಿಶುದ್ಧ ಸ್ಥಳದಿಂದ ಹೊರ ಟಾಗ ಸಂಗೀತಗಾರರಾಗಿರುವ ಲೇವಿಯರೂ ಆಸಾಫ್, ಹೇಮಾನ್, ಯೆದೂತೂನ್ ಇವರೆಲ್ಲರೂ ಅವರ ಮಕ್ಕಳೂ ಸಹೋದರರೂ ನಾರು ಮಡಿಯನ್ನು ಧರಿಸಿ ಕೊಂಡು ತಾಳ ವೀಣೆ ಕಿನ್ನರಿಗಳನ್ನು ಹಿಡಿದು ಬಲಿ ಪೀಠದ ಮೂಡಣ ಪಾರ್ಶ್ವದಲ್ಲಿ ನಿಂತುಕೊಂಡರು; ಅವರ ಸಂಗಡ ನೂರ ಇಪ್ಪತ್ತು ಮಂದಿ ಯಾಜಕರು ತುತೂರಿಗಳನ್ನು ಊದುತ್ತಾ ಇದ್ದರು. |
13. | ತುತೂರಿ ಊದುವವರೂ ಸಂಗೀತಗಾರರೂ ಕರ್ತನನ್ನು ಕೊಂಡಾ ಡುತ್ತಾ ಹೊಗಳುತ್ತಾ ಏಕವಾಗಿ ಒಂದೇ ಶಬ್ದ ಮಾಡಿ ದಾಗ ತುತೂರಿ ತಾಳ ಮೊದಲಾದ ಗೀತ ವಾದ್ಯಗಳಿಂದ ತಮ್ಮ ಶಬ್ದವನ್ನೆತ್ತಿ--ಆತನು ಒಳ್ಳೆಯವನೆಂದೂ ಆತನ ಕೃಪೆಯು ಯುಗಯುಗಕ್ಕೂ ಇರುವದೆಂದೂ ಕರ್ತನನ್ನು ಕೀರ್ತಿಸುವಾಗ ಕರ್ತನ ಆಲಯವು ಮೇಘದಿಂದ ತುಂಬಲ್ಪಟ್ಟಿತು. |
14. | ಮೇಘದ ನಿಮಿತ್ತ ಯಾಜಕರು ಸೇವೆ ಗಾಗಿ ನಿಲ್ಲಲಾರದೆ ಇದ್ದರು; ಕರ್ತನ ಮಹಿಮೆಯು ದೇವರ ಆಲಯವನ್ನು ತುಂಬಿತ್ತು. |
← 2Chronicles (5/36) → |