← 2Chronicles (30/36) → |
1. | ಆಗ ಅವರು ಇಸ್ರಾಯೇಲಿನ ದೇವರಾದ ಕರ್ತನ ಪಸ್ಕವನ್ನು ಆಚರಿಸಲು ಯೆರೂ ಸಲೇಮಿನಲ್ಲಿ ಕರ್ತನ ಆಲಯಕ್ಕೆ ಬರುವ ಹಾಗೆ ಹಿಜ್ಕೀಯನು ಸಮಸ್ತ ಇಸ್ರಾಯೇಲಿಗೂ ಯೆಹೂದಕ್ಕೂ ಹೇಳಿ ಕಳುಹಿಸಿ, ಎಫ್ರಾಯಾಮ್ಯರಿಗೂ ಮನಸ್ಸೆಯ ವರಿಗೂ ಪತ್ರಗಳನ್ನು ಬರೆದನು. |
2. | ಯೆರೂಸಲೇಮಿ ನಲ್ಲಿರುವ ಅರಸನೂ ಅವನ ಪ್ರಧಾನರೂ ಸಮಸ್ತ ಸಭೆಯೂ ಎರಡನೇ ತಿಂಗಳಲ್ಲಿ ಪಸ್ಕವನ್ನು ಆಚರಿ ಸಲು ಯೋಚಿಸಿಕೊಂಡರು. |
3. | ಯಾಕಂದರೆ ಯಾಜಕರು ತಮ್ಮನ್ನು ತಕ್ಕಹಾಗೆ ಪರಿಶುದ್ಧಮಾಡಿಕೊಳ್ಳದೆ ಇದ್ದದ್ದ ರಿಂದಲೂ ಜನರು ಯೆರೂಸಲೇಮಿಗೆ ಕೂಡಿ ಬಾರದೆ ಇದ್ದದ್ದರಿಂದಲೂ ಆ ಕಾಲದಲ್ಲಿ ಆಚರಿಸಲಾರದೆ ಇದ್ದರು. |
4. | ಈ ಕಾರ್ಯವು ಅರಸನಿಗೂ ಸಮಸ್ತ ಸಭೆ ಯವರಿಗೂ ಒಪ್ಪಿಗೆಯಾಯಿತು. |
5. | ಆದದರಿಂದ ಅವರು ಯೆರೂಸಲೇಮಿನಲ್ಲಿ ಇಸ್ರಾಯೇಲಿನ ದೇವರಾದ ಕರ್ತನಿಗೆ ಪಸ್ಕವನ್ನು ಆಚರಿಸಲು ಬರಬೇಕೆಂದು ಬೇರ್ಷೆಬವು ಮೊದಲುಗೊಂಡು ದಾನಿನ ವರೆಗೂ ಸಮಸ್ತ ಇಸ್ರಾಯೇಲಿನಲ್ಲಿ ಕೂಗಿ ಸಾರಲು ನಿರ್ಣಯಿ ಸಿದರು. ಯಾಕಂದರೆ ಬರೆಯಲ್ಪಟ್ಟ ಹಾಗೆ ಅವರು ಅದನ್ನು ಬಹು ಕಾಲದಿಂದ ಆಚರಿಸಿದ್ದಿಲ್ಲ. |
6. | ಅದೇ ಪ್ರಕಾರ ದೂತರು ಅರಸನ ಕೈಯಿಂದಲೂ ಅವನ ಪ್ರಧಾನರ ಕೈಯಿಂದಲೂ ಪತ್ರಗಳನ್ನು ತಕ್ಕೊಂಡು ಅರಸನ ಅಪ್ಪಣೆಯ ಪ್ರಕಾರ ಸಮಸ್ತ ಇಸ್ರಾಯೇಲ್ ಯೆಹೂದ ದೇಶಗಳ ಮೇಲೆ ಹೋಗಿ--ಇಸ್ರಾಯೇಲ್ ಮಕ್ಕಳೇ, ಅಬ್ರಹಾಮ್ ಇಸಾಕ್ ಇಸ್ರಾಯೇಲ್ ಕರ್ತನಾದ ದೇವರ ಕಡೆಗೆ ತಿರುಗಿರಿ. ಆಗ ಆತನೂ ಅಶ್ಶೂರಿನ ಅರಸುಗಳ ಕೈಗೆ ತಪ್ಪಿಸಿಕೊಂಡ ನಿಮ್ಮ ಉಳಿದವರ ಬಳಿಗೆ ತಿರುಗುವನು. |
7. | ತಮ್ಮ ಪಿತೃಗಳ ದೇವರಾದ ಕರ್ತನಿಗೆ ಅಪರಾಧ ಮಾಡಿದಂಥ, ನೀವು ನೋಡುವ ಹಾಗೆ ನಾಶನಕ್ಕೆ ಒಪ್ಪಿಸಲ್ಪಟ್ಟಂಥ, ನಿಮ್ಮ ಪಿತೃಗಳ ಹಾಗೆಯೂ ನಿಮ್ಮ ಸಹೋದರರ ಹಾಗೆಯೂ ಇರಬೇಡಿರಿ. |
8. | ನಿಮ್ಮ ಪಿತೃ ಗಳ ಹಾಗೆ ನಿಮ್ಮ ಕುತ್ತಿಗೆಯನ್ನು ಕಠಿಣಪಡಿಸಬೇಡಿರಿ. ಕರ್ತನಿಗೆ ಕೈಕೊಟ್ಟು ಆತನು ಯುಗಯುಗಕ್ಕೂ ಪರಿಶುದ್ಧ ಮಾಡಿದ ಆತನ ಪರಿಶುದ್ಧ ಸ್ಥಾನದಲ್ಲಿ ಪ್ರವೇಶಿಸಿದ ನಿಮ್ಮ ದೇವರಾದ ಕರ್ತನನ್ನು ಸೇವಿಸಿರಿ. ಆಗ ತನ್ನ ಉಗ್ರಕೋಪವನ್ನು ಬಿಟ್ಟು ನಿಮ್ಮ ಕಡೆಗೆ ತಿರುಗುವನು. |
9. | ನೀವು ಕರ್ತನ ಕಡೆಗೆ ತಿರುಗಿದರೆ ನಿಮ್ಮ ಸಹೋದ ರರೂ ನಿಮ್ಮ ಮಕ್ಕಳೂ ತಿರಿಗಿ ಈ ದೇಶಕ್ಕೆ ಬರುವ ಹಾಗೆ ತಮ್ಮನ್ನು ಸೆರೆಯಾಗಿ ಒಯ್ದವರ ಸಮ್ಮುಖದಲ್ಲಿ ಕರುಣೆಯನ್ನು ಹೊಂದುವರು. ನಿಮ್ಮ ದೇವರಾದ ಕರ್ತನು ಕೃಪೆಯೂ ಕರುಣೆಯೂ ಉಳ್ಳವನಾಗಿದ್ದಾನೆ, ನೀವು ಆತನ ಕಡೆಗೆ ತಿರುಗಿದರೆ ಆತನು ನಿಮ್ಮ ಕಡೆ ಯಿಂದ ತನ್ನ ಮುಖ ತೊಲಗಿಸನು ಎಂದು ಹೇಳಿದರು. |
10. | ಹೀಗೆಯೇ ದೂತರು ಎಫ್ರಾಯಾಮಿನ, ಮನ ಸ್ಸೆಯ ದೇಶದಲ್ಲಿ ಜೆಬುಲೂನ್ ಪರ್ಯಂತರ ಸಂಚರಿಸಿ ಪಟ್ಟಣದಿಂದ ಪಟ್ಟಣಕ್ಕೆ ಹಾದುಹೋದರು. ಆದರೆ ಜನರು ಇವರನ್ನು ನೋಡಿ ನಕ್ಕು ಗೇಲಿ ಮಾಡಿದರು. |
11. | ಆದಾಗ್ಯೂ ಅಶೇರ, ಮನಸ್ಸೆ, ಜೆಬುಲೂನ್ ಇವರಲ್ಲಿ ಕೆಲವರು ತಮ್ಮನ್ನು ತಗ್ಗಿಸಿಕೊಂಡು ಯೆರೂಸಲೇಮಿಗೆ ಬಂದರು. |
12. | ಇದಲ್ಲದೆ ಕರ್ತನ ವಾಕ್ಯದಿಂದುಂಟಾದ ಅರಸನ ಪ್ರಧಾನರ ಆಜ್ಞೆಯನ್ನು ಕೈಕೊಳ್ಳಲು ಅವರಿಗೆ ಒಂದೇ ಹೃದಯವನ್ನು ಕೊಡಲು ದೇವರ ಕೈ ಯೆಹೂ ದದವರಲ್ಲಿ ಇತ್ತು. |
13. | ಆದದರಿಂದ ಎರಡನೇ ತಿಂಗಳಲ್ಲಿ ಹುಳಿ ಇಲ್ಲದ ರೊಟ್ಟಿಯ ಹಬ್ಬವನ್ನು ಆಚರಿಸುವದಕ್ಕೆ ಯೆರೂಸಲೇಮಿನಲ್ಲಿ ಬಹಳ ಜನರು ಕೂಡಿ ಕೊಂಡು ಮಹಾದೊಡ್ಡ ಸಭೆಯಾಯಿತು. |
14. | ಆಗ ಅವರು ಎದ್ದು ಯೆರೂಸಲೇಮಿನಲ್ಲಿದ್ದ ಬಲಿಪೀಠಗಳನ್ನು ತೆಗೆದುಹಾಕಿದರು ಮತ್ತು ಧೂಪಪೀಠಗಳನ್ನೆಲ್ಲಾ ತೆಗೆದು ಬಿಟ್ಟು ಕಿದ್ರೋನ್ ಹಳ್ಳದಲ್ಲಿ ಹಾಕಿದರು. |
15. | ಎರಡನೇ ತಿಂಗಳ ಹದಿನಾಲ್ಕನೇ ದಿವಸದಲ್ಲಿ ಪಸ್ಕ ವನ್ನು ವಧಿಸಿದರು. ಯಾಜಕರೂ ಲೇವಿಯರೂ ಲಜ್ಜೆ ಯನ್ನು ಹೊಂದಿ ತಮ್ಮನ್ನು ಪರಿಶುದ್ಧ ಮಾಡಿಕೊಂಡು ಕರ್ತನ ಮನೆಯೊಳಗೆ ದಹನಬಲಿಗಳನ್ನು ತಂದರು. |
16. | ಇದಲ್ಲದೆ ಅವರು ದೇವರ ಮನುಷ್ಯನಾದ ಮೋಶೆ ಯ ನ್ಯಾಯಪ್ರಮಾಣದ ಹಾಗೆ ತಮ್ಮ ಪದ್ಧತಿಯ ಪ್ರಕಾರ ತಮ್ಮ ತಮ್ಮ ಸ್ಥಳದಲ್ಲಿ ನಿಂತು ಯಾಜಕರು ಲೇವಿಯರ ಕೈಯಿಂದ ರಕ್ತವನ್ನು ತೆಗೆದುಕೊಂಡು ಚಿಮುಕಿಸಿದರು. |
17. | ಯಾಕಂದರೆ ಸಭೆಯಲ್ಲಿ ಅನೇಕರು ಅಪರಿಶುದ್ಧರಾಗಿದ್ದರು, ಲೇವಿಯರು ಅಶುದ್ಧರಾದ ಎಲ್ಲರ ನಿಮಿತ್ತ ಅವರನ್ನು ಕರ್ತನಿಗೆ ಪರಿಶುದ್ಧ ಮಾಡುವ ಹಾಗೆ ಪಸ್ಕದ ಬಲಿಗಳನ್ನು ವಧಿಸುವದಕ್ಕೆ ಇದ್ದರು. |
18. | ಯಾಕಂದರೆ ಜನರಲ್ಲಿ ಅನೇಕರು--ಎಫ್ರಾ ಯಾಮ್, ಮನಸ್ಸೆ, ಇಸ್ಸಾಕಾರ್, ಜೆಬುಲೂನ್ ಇವ ರಲ್ಲಿ ಅನೇಕರು ತಮ್ಮನ್ನು ಶುದ್ಧ ಮಾಡಿಕೊಳ್ಳದೆ, ಬರೆಯಲ್ಪಟ್ಟ ಪ್ರಕಾರವಲ್ಲದೆ ಪಸ್ಕವನ್ನು ಉಂಡರು. |
19. | ಆದರೆ ಹಿಜ್ಕೀಯನು ಅವರಿಗೋಸ್ಕರ ಪ್ರಾರ್ಥಿಸಿಯಾವನಾದರೂ ಪರಿಶುದ್ಧ ಸ್ಥಾನದ ಶುದ್ಧಿಯ ಪ್ರಕಾರ ಶುಚಿಯಾಗದೆ ಇದ್ದರೂ ತನ್ನ ಪಿತೃಗಳ ಕರ್ತನಾದ ದೇವರಾಗಿರುವ ದೇವರನ್ನು ಹುಡುಕಲು ತನ್ನ ಹೃದಯ ವನ್ನು ಸಿದ್ಧಮಾಡುವವನ ಪಾಪವನ್ನು ದಯವುಳ್ಳ ಕರ್ತನು ಮುಚ್ಚಲಿ ಎಂದು ಹೇಳಿದನು. |
20. | ಕರ್ತನು ಹಿಜ್ಕೀಯನ ಮಾತು ಕೇಳಿ ಜನರನ್ನು ಗುಣಮಾಡಿದನು. |
21. | ಯೆರೂಸಲೇಮಿನಲ್ಲಿದ್ದ ಇಸ್ರಾಯೇಲಿನ ಮಕ್ಕಳು ಹುಳಿ ಇಲ್ಲದ ರೊಟ್ಟಿಯ ಹಬ್ಬವನ್ನು ಏಳು ದಿವಸ ಸಂತೋಷದಿಂದ ಆಚರಿಸಿದರು. ಇದಲ್ಲದೆ ಲೇವಿ ಯರೂ ಯಾಜಕರೂ ಮಹಾಶಬ್ದದ ವಾದ್ಯಗಳಿಂದ ಕರ್ತನಿಗೆ ಹಾಡಿ ಪ್ರತಿ ದಿನದಲ್ಲಿಯೂ ಕರ್ತನನ್ನು ಸ್ತುತಿಸಿದರು. |
22. | ಇದಲ್ಲದೆ ಹಿಜ್ಕೀಯನು ಕರ್ತನ ಉತ್ತ ಮವಾದ ಬೋಧನೆಯನ್ನು ಬೋಧಿಸಿದ ಸಮಸ್ತ ಲೇವಿ ಯರಿಗೆ ಸಮಾಧಾನವಾಗಿ ಮಾತನಾಡಿದನು. ಅವರು ಹಬ್ಬವನ್ನು ಏಳು ದಿನಗಳ ಪರ್ಯಂತರ ಭೋಜನ ಮಾಡುತ್ತಾ ಸಮಾಧಾನದ ಬಲಿಗಳನ್ನು ಅರ್ಪಿಸುತ್ತಾ ತಮ್ಮ ಪಿತೃಗಳ ದೇವರಾದ ಕರ್ತನಿಗೆ ಅರಿಕೆಮಾಡುತ್ತಾ ಆಚರಿಸಿದ್ದರು. |
23. | ಆದರೆ ಸಮೂಹವೆಲ್ಲಾ ಮತ್ತೂ ಏಳು ದಿವಸ ಆಚರಿಸುವದಕ್ಕೆ ಯೋಚಿಸಿಕೊಂಡ ಮೇಲೆ ಏಳು ದಿವಸಗಳು ಸಂತೋಷವಾಗಿ ಆಚರಿಸಿದರು. |
24. | ಯೆಹೂದದ ಅರಸನಾದ ಹಿಜ್ಕೀಯನು ಸಭೆಗೆ ಸಾವಿರ ಹೋರಿಗಳನ್ನೂ ಏಳು ಸಾವಿರ ಕುರಿಗಳನ್ನೂ ಕೊಟ್ಟನು. ಇದಲ್ಲದೆ ಪ್ರಧಾನರು ಕೂಟಕ್ಕೆ ಸಾವಿರ ಹೋರಿಗಳನ್ನೂ ಹತ್ತು ಸಾವಿರ ಕುರಿಗಳನ್ನೂ ಕೊಟ್ಟರು. ಯಾಜಕರಲ್ಲಿ ಅನೇಕರು ತಮ್ಮನ್ನು ಪರಿಶುದ್ಧ ಮಾಡಿ ಕೊಂಡರು. |
25. | ಯೆಹೂದದ ಸಭೆಯವರೆ ಲ್ಲರೂ ಯಾಜಕರೂ ಲೇವಿಯರೂ ಇಸ್ರಾಯೇಲಿನಿಂದ ಬಂದ ಸಮಸ್ತ ಸಭೆಯೂ ಇಸ್ರಾಯೇಲಿನ ದೇಶದಿಂದ ಬಂದ ಪರದೇಶಿಗಳೂ ಯೆಹೂದದಲ್ಲಿ ವಾಸವಾಗಿರುವವರೂ ಸಂತೋಷಪಟ್ಟರು. |
26. | ಇಸ್ರಾ ಯೇಲಿನ ಅರಸನಾಗಿರುವ ದಾವೀದನ ಮಗನಾದ ಸೊಲೊಮೋನನ ಕಾಲ ಮೊದಲುಗೊಂಡು ಯೆರೂ ಸಲೇಮಿನಲ್ಲಿ ಇದರ ಹಾಗೆ ನಡೆದಿರಲಿಲ್ಲವಾದದ ರಿಂದ ಹೀಗೆಯೇ ಯೆರೂಸಲೇಮಿನಲ್ಲಿ ಮಹಾ ಸಂತೋಷ ಉಂಟಾಗಿತ್ತು. |
27. | ಆಗ ಲೇವಿಯರಾದ ಯಾಜಕರೂ ಎದ್ದು ಜನರನ್ನು ಆಶೀರ್ವದಿಸಿದರು. ಅವರ ಶಬ್ದವು ಕೇಳಲ್ಪಟ್ಟಿತು. ಅವರ ಪ್ರಾರ್ಥನೆಯು ಆತನ ಪರಿಶುದ್ಧವಾದ ನಿವಾಸಸ್ಥಾನಕ್ಕೆ ಅಂದರೆ ಪರಲೋಕಕ್ಕೆ ಮುಟ್ಟಿತು. |
← 2Chronicles (30/36) → |