← 2Chronicles (20/36) → |
1. | ಇದರ ತರುವಾಯ ಏನಾಯಿತಂದರೆ, ಮೋವಾಬಿನ ಮಕ್ಕಳೂ ಅಮ್ಮೋನಿನ ಮಕ್ಕಳೂ ಅಮ್ಮೋನ್ಯರ ಕೊಡ ಇತರರೂ ಯೆಹೋ ಷಾಫಾಟನ ಮೇಲೆ ಯುದ್ಧಮಾಡಲು ಬಂದರು. |
2. | ಆಗ ಕೆಲವರು ಬಂದು ಯೆಹೋಷಾಫಾಟನಿಗೆ--ಸಮು ದ್ರದ ಆಚೆಯಿಂದ ನಿನಗೆ ವಿರೋಧವಾಗಿ ಅರಾಮಿನ ಬಹುಗುಂಪು ಈ ಕಡೆ ಬರುತ್ತದೆ; ಇಗೋ, ಅವರು ಏಂಗೆದಿ ಎಂಬ ಹಚೆಚೋನ್ ತಾಮಾರಿನಲ್ಲಿ ಇದ್ದಾ ರೆಂದು ತಿಳಿಸಿದರು. |
3. | ಆಗ ಯೆಹೋಷಾಫಾಟನು ಭಯಪಟ್ಟು ಕರ್ತನನ್ನು ಹುಡುಕಲು ನಿರ್ಣಯಿಸಿ ಕೊಂಡು ಸಮಸ್ತ ಯೆಹೂದದಲ್ಲಿ ಉಪವಾಸಮಾಡ ಬೇಕೆಂದು ಸಾರಿಸಿದನು. |
4. | ಆದದರಿಂದ ಯೆಹೂದ ದವರು ಕರ್ತನನ್ನು ಹುಡುಕಲು ಕೂಡಿಕೊಂಡರು. ನಿಶ್ಚಯವಾಗಿ ಸಮಸ್ತ ಯೆಹೂದದ ಪಟ್ಟಣಗಳಿಂದ ಕರ್ತನನ್ನು ಹುಡುಕಲು ಬಂದರು. |
5. | ಆಗ ಯೆಹೋಷಾ ಫಾಟನು ಹೊಸ ಅಂಗಳದ ಮುಂದೆ ಕರ್ತನ ಮಂದಿರ ದಲ್ಲಿರುವ ಯೆಹೂದದ ಯೆರೂಸಲೇಮಿನ ಸಭೆಯ ಮಧ್ಯದಲ್ಲಿ ನಿಂತು--ನಮ್ಮ ಪಿತೃಗಳ ದೇವರಾದ |
6. | ಓ ಕರ್ತನೇ, ಪರಲೋಕದಲ್ಲಿರುವ ದೇವರು ನೀನಲ್ಲವೋ? ನೀನು ಜನಾಂಗಗಳ ಸಕಲ ರಾಜ್ಯಗಳ ಮೇಲೆ ಆಳುತ್ತೀಯಲ್ಲವೋ? ಯಾವನೂ ನಿನ್ನನ್ನು ಎದುರಿಸಕೂಡದ ಹಾಗೆ ನಿನ್ನ ಕೈಯಲ್ಲಿ ಶಕ್ತಿಯೂ ಪರಾಕ್ರಮವೂ ಇಲ್ಲವೋ? |
7. | ನೀನು ನಿನ್ನ ಜನವಾದ ಇಸ್ರಾಯೇಲಿನ ಎದುರಿನಿಂದ ಈ ದೇಶದ ನಿವಾಸಿಗ ಳನ್ನು ಓಡಿಸಿಬಿಟ್ಟು ಅದನ್ನು ನಿನ್ನ ಸ್ನೇಹಿತನಾದ ಅಬ್ರ ಹಾಮನ ಸಂತತಿಗೆ ಎಂದೆಂದಿಗೂ ಕೊಟ್ಟ ನೀನು ನಮ್ಮ ದೇವರಲ್ಲವೋ? |
8. | ಅವರು ಅದರಲ್ಲಿ ನಿವಾಸ ಮಾಡಿ ನಿನ್ನ ಹೆಸರಿಗೆ ಪರಿಶುದ್ಧವಾದ ಸ್ಥಾನವನ್ನು ಕಟ್ಟಿಸಿ |
9. | ನಿನ್ನ ಹೆಸರು ಈ ಆಲಯದಲ್ಲಿರುವದರಿಂದ ಕತ್ತಿಯೂ ನ್ಯಾಯತೀರಿಸುವ ಶಿಕ್ಷೆಯೂ ಜಾಡ್ಯವೂ ಬರವೂ ಏನಾದರೂ ನಮ್ಮ ಮೇಲೆ ಬಂದರೆ ನಾವು ಈ ಆಲಯದ ಮುಂದೆಯೂ ನಿನ್ನ ಸಮ್ಮುಖದಲ್ಲಿಯೂ ನಿಂತು ನಮ್ಮ ಇಕ್ಕಟ್ಟಿನಲ್ಲಿ ನಿನ್ನನ್ನು ಕೂಗುವಾಗ ನೀನು ಕೇಳಿ ರಕ್ಷಿಸುವವನಾಗಿದ್ದೀ ಎಂದು ಹೇಳಿದರು. |
10. | ಈಗ ಇಗೋ, ಅಮ್ಮೋನ್ ಮೋವಾಬ್, ಸೇಯಾರ್ ಬೆಟ್ಟದ ಮಕ್ಕಳನ್ನು ನೋಡು; ಇಸ್ರಾಯೇಲ್ಯರು ಐಗುಪ್ತದೇಶ ದೊಳಗಿಂದ ಹೊರಟು ಬರುವಾಗ ಅವರ ಕಡೆಗೆ ಹೋಗಲು ನೀನು ಇವರಿಗೆ ಅಪ್ಪಣೆಕೊಡದೆ ಇದ್ದದ ರಿಂದ ಇವರು ತೊಲಗಿ ಅವರನ್ನು ನಾಶಮಾಡದೆ ಹೋದರು. |
11. | ಇಗೋ, ನಮಗೆ ನೀನು ಸ್ವಾಧೀನ ಮಾಡಿಕೊಳ್ಳಲು ಕೊಟ್ಟ ನಿನ್ನ ಸ್ವಾಸ್ಥ್ಯದೊಳಗಿಂದ ಅವರು ಬಂದು ನಮ್ಮನ್ನು ಹೊರಡಿಸಬೇಕೆಂದು ನಮಗೆ ಪ್ರತೀಕಾರ ಮಾಡುತ್ತಾರೆ. |
12. | ಓ ನಮ್ಮ ದೇವರೇ, ನೀನು ಅವರಿಗೆ ನ್ಯಾಯತೀರಿಸುವದಿಲ್ಲವೋ? ನಮಗೆ ವಿರೋಧವಾಗಿ ಬರುವ ಈ ಮಹಾಗುಂಪನ್ನು ಎದು ರಿಸಲು ನಮಗೆ ಶಕ್ತಿ ಇಲ್ಲ. ನಾವು ಏನು ಮಾಡಬೇಕೋ ತಿಳಿಯಲಿಲ್ಲ. ಆದರೆ ನಮ್ಮ ಕಣ್ಣುಗಳು ನಿನ್ನ ಮೇಲೆ ಅವೆ ಅಂದರು. |
13. | ಹೀಗೆಯೇ ಯೆಹೂದದವರೆಲ್ಲರು ತಮ್ಮ ಹೆಂಡತಿಯರು, ಮಕ್ಕಳು, ಚಿಕ್ಕವರು ಸಹಿತವಾಗಿ ಕರ್ತನ ಮುಂದೆ ನಿಂತರು. |
14. | ಆಗ ಸಭೆಯ ಮಧ್ಯದಲ್ಲಿ ಆಸಾಫನ ಮಕ್ಕಳಲ್ಲಿ ಒಬ್ಬನಾದಂಥ, ಲೇವಿಯನಾದಂಥ, ಮತ್ತನ್ಯನ ಮಗ ನಾದ ಯೆಗೀಯೇಲನ ಮಗನಾದ ಬೆನಾಯನ ಮಗ ನಾದ ಜೆಕರೀಯನ ಮಗನಾದ ಯಹಜೀಯೇಲನ ಮೇಲೆ ಕರ್ತನ ಆತ್ಮನು ಬಂದನು. |
15. | ಆಗ ಅವನುಯೆಹೂದದ ಸಮಸ್ತರೇ, ಯೆರೂಸಲೇಮಿನ ನಿವಾಸಿ ಗಳೇ, ಅರಸನಾದ ಯೆಹೋಷಾಫಾಟನೇ, ಕೇಳಿರಿ. ಕರ್ತನು ನಿಮಗೆ ಹೀಗೆ ಹೇಳುತ್ತಾನೆ--ಈ ಮಹಾಗುಂಪಿನ ನಿಮಿತ್ತ ನೀವು ಭಯಪಡಬೇಡಿರಿ, ಹೆದರ ಬೇಡಿರಿ. ಯಾಕಂದರೆ ಯುದ್ಧವು ನಿಮ್ಮದಲ್ಲ, ದೇವ ರದೇ. |
16. | ಮಾರನೇ ದಿವಸ ನೀವು ಅವರಿಗೆ ಎದು ರಾಗಿ ಹೋಗಿರಿ. ಇಗೋ, ಅವರು ಹಚ್ಚೀಚು ಎಂಬ ಕಣಿವೆಯಿಂದ ಬರುತ್ತಾರೆ; ಯೆರೂವೇಲಿನ ಅರಣ್ಯದ ಮುಂಭಾಗದಲ್ಲಿರುವ ಹಳ್ಳದ ಅಂತ್ಯದಲ್ಲಿ ಅವರನ್ನು ಕಂಡುಕೊಳ್ಳುವಿರಿ. |
17. | ಇದರಲ್ಲಿ ನೀವು ಯುದ್ಧ ಮಾಡಲು ಅವಶ್ಯವಿಲ್ಲ; ನೀವು ನೆಲೆಯಾಗಿ ನಿಂತು ಕೊಂಡು ಕರ್ತನು ನಿಮಗೆ ಮಾಡುವ ರಕ್ಷಣೆಯನ್ನು ನೋಡಿರಿ; ಯೆಹೂದದವರೇ, ಯೆರೂಸಲೇಮಿನ ವರೇ, ಭಯಪಡಬೇಡಿರಿ, ಹೆದರಬೇಡಿರಿ; ಮಾರನೇ ದಿವಸ ಅವರೆದುರಿಗೆ ಹೊರಟು ಹೋಗಿರಿ; ಕರ್ತನು ನಿಮ್ಮ ಸಂಗಡ ಇದ್ದಾನೆ ಅಂದನು. |
18. | ಆಗ ಯೆಹೋ ಷಾಫಾಟನು ತನ್ನ ಮುಖವನ್ನು ನೆಲಕ್ಕೆ ಬಾಗಿಸಿದನು; ಯೆಹೂದದವರೆಲ್ಲರೂ ಯೆರೂಸಲೇಮಿನ ನಿವಾಸಿಗಳೆ ಲ್ಲರೂ ಕರ್ತನ ಮುಂದೆ ಅಡ್ಡಬಿದ್ದು ಕರ್ತನನ್ನು ಆರಾ ಧಿಸಿದರು. |
19. | ಇದಲ್ಲದೆ ಕೆಹಾತ್ಯರ ಮಕ್ಕಳಲ್ಲಿಯೂ ಕೋರಹಿಯರ ಮಕ್ಕಳಲ್ಲಿಯೂ ಇರುವ ಲೇವಿಯರು ಗಟ್ಟಿಯಾಗಿ ದೊಡ್ಡ ಶಬ್ದದಿಂದ ಇಸ್ರಾಯೇಲಿನ ದೇವ ರಾದ ಕರ್ತನನ್ನು ಸ್ತುತಿಸಲು ಎದ್ದು ನಿಂತರು. |
20. | ಅವರು ಉದಯದಲ್ಲಿ ಎದ್ದು ತೆಕೋವದ ಅರ ಣ್ಯಕ್ಕೆ ಹೊರಟರು. ಅವರು ಹೊರಟು ಹೋಗುತ್ತಿ ರುವಾಗ ಯೆಹೋಷಾಫಾಟನು ನಿಂತುಕೊಂಡು--ಓ ಯೆಹೂದದವರೇ, ಯೆರೂಸಲೇಮಿನ ನಿವಾಸಿಗಳೇ, ನನ್ನ ಮಾತನ್ನು ಕೇಳಿರಿ. ನಿಮ್ಮ ದೇವರಾದ ಕರ್ತನನ್ನು ನಂಬಿಕೊಳ್ಳಿರಿ, ಸ್ಥಿರವಾಗಿರ್ರಿ; ಆತನ ಪ್ರವಾದಿಗಳನ್ನು ನಂಬಿಕೊಳ್ಳಿರಿ; ಆಗ ಜಯಹೊಂದುವಿರಿ ಅಂದನು. |
21. | ಅವನು ಜನರ ಸಂಗಡ ಆಲೋಚನೆ ಮಾಡಿದ ತರುವಾಯ ಸೈನ್ಯದ ಮುಂದೆ ಅವರು ಹೊರಡುವಾಗ ಪರಿಶುದ್ಧತ್ವದ ಪ್ರಭೆಯನ್ನು ಸ್ತುತಿಸುವದಕ್ಕೆ ಕರ್ತನನ್ನು ಕೊಂಡಾಡಿರಿ, ಯಾಕಂದರೆ ಆತನ ಕೃಪೆಯು ಯುಗ ಯುಗಕ್ಕೂ ಇರುವದೆಂದು ಹೇಳುವದಕ್ಕೆ ಕರ್ತ ನಿಗೆ ಸಂಗೀತಗಾರರನ್ನು ನೇಮಿಸಿದನು. |
22. | ಅವರು ಹಾಡುವದಕ್ಕೂ ಸ್ತುತಿಸುವದಕ್ಕೂ ಆರಂಭಿಸಿದಾಗಲೇ ಕರ್ತನು ಯೆಹೂದದ ಮೇಲೆ ಬಂದ ಅಮ್ಮೋನ್, ಮೋವಾಬ್, ಸೇಯಾರ್ ಪರ್ವತಗಳ ಮಕ್ಕಳಿಗೆ ವಿರೋಧವಾಗಿ ಹೊಂಚಿಕೊಳ್ಳುವವರನ್ನು ಇಟ್ಟಿದ್ದ ರಿಂದ ಅವರು ಹೊಡೆಯಲ್ಪಟ್ಟಿದ್ದರು. |
23. | ಅಮ್ಮೋನ್, ಮೋವಾಬ್ಯರ ಮಕ್ಕಳು ಸೇಯಾರ್ ಪರ್ವತದ ನಿವಾಸಿ ಗಳನ್ನು ಸಂಪೂರ್ಣವಾಗಿ ನಾಶಮಾಡಲು ನಿಂತರು. ಅವರು ಸೇಯಾರಿನ ನಿವಾಸಿಗಳನ್ನು ಮುಗಿಸಿಬಿಟ್ಟ ತರುವಾಯ ತಾವೇ ಒಬ್ಬರನ್ನೊಬ್ಬರು ನಾಶಮಾಡಲು ಸಹಾಯ ಕೊಟ್ಟರು. |
24. | ಯೆಹೂದದವರು ಅರಣ್ಯದಲ್ಲಿ ರುವ ಬುರುಜಿನ ಸ್ಥಳಕ್ಕೆ ಬಂದಾಗ ಅವರು ಗುಂಪನ್ನು ದೃಷ್ಟಿಸಿದರು; ಇಗೋ, ಅವರಲ್ಲಿ ಒಬ್ಬನೂ ತಪ್ಪದ ಹಾಗೆ ಎಲ್ಲರೂ ನೆಲಕ್ಕೆ ಬಿದ್ದು ಹೆಣಗಳಾಗಿದ್ದರು. |
25. | ಯೆಹೋಷಾಫಾಟನೂ ಅವನ ಜನರೂ ಅವರ ವಸ್ತುಗಳನ್ನು ಕೊಳ್ಳೆಮಾಡಲು ಬಂದಾಗ ಅವರು ಹೆಣ ಗಳ ಬಳಿಯಲ್ಲಿ ದ್ರವ್ಯವನ್ನೂ ಪ್ರಿಯವಾದ ಆಭರಣ ಗಳನ್ನೂ ಬಹಳವಾಗಿ ಕಂಡುಕೊಂಡು ತಾವು ಹೊರ ಲಾರದಷ್ಟು ಸುಲುಕೊಂಡರು. ಕೊಳ್ಳೆಯು ಅಷ್ಟು ಅಧಿಕವಾದದರಿಂದ ಅದನ್ನು ಮೂರು ದಿವಸಗಳ ವರೆಗೂ ಸುಲುಕೊಳ್ಳುತ್ತಾ ಇದ್ದರು. |
26. | ನಾಲ್ಕನೇ ದಿವಸ ದಲ್ಲಿ ಅವರು ಬೆರಾಕವೆಂಬ ತಗ್ಗಿನಲ್ಲಿ ಕೂಡಿಕೊಂಡು ಅಲ್ಲಿ ಕರ್ತನನ್ನು ಸ್ತುತಿಸಿದರು. ಆದಕಾರಣ ಇಂದಿನ ವರೆಗೂ ಆ ಸ್ಥಳಕ್ಕೆ ಬೆರಾಕ ತಗ್ಗು ಎಂದು ಕರೆಯುತ್ತಾರೆ. |
27. | ಕರ್ತನು ಅವರ ಶತ್ರುಗಳ ಮೇಲೆ ಅವರನ್ನು ಸಂತೋ ಷಪಡುವಂತೆ ಮಾಡಿದ್ದರಿಂದ ಅವರು ಸಂತೋಷವಾಗಿ ಯೆರೂಸಲೇಮಿಗೆ ತಿರಿಗಿ ಹೋಗುವದಕ್ಕೆ ಯೆಹೂದ ಯೆರೂಸಲೇಮಿನವರೆಲ್ಲರೂ ಅವರ ಮುಂಭಾಗ ದಲ್ಲಿ ಯೆಹೋಷಾಫಾಟನೂ ಹೊರಟು |
28. | ವೀಣೆಗ ಳಿಂದಲೂ ಕಿನ್ನರಿಗಳಿಂದಲೂ ತುತೂರಿಗಳಿಂದಲೂ ಯೆರೂಸಲೇಮಿನಲ್ಲಿ ಪ್ರವೇಶಿಸಿ ಕರ್ತನ ಆಲಯಕ್ಕೆ ಬಂದರು. |
29. | ಕರ್ತನು ಇಸ್ರಾಯೇಲಿನ ಶತ್ರುಗಳ ಮೇಲೆ ಯುದ್ಧಮಾಡಿದನೆಂದು ಅವರು ಕೇಳಿದಾಗ ದೇವರ ಭಯವು ಆ ದೇಶಗಳ ಸಕಲ ರಾಜ್ಯಗಳ ಮೇಲೆ ಬಿತ್ತು. |
30. | ಆದದರಿಂದ ಯೆಹೋಷಾಫಾಟನ ರಾಜ್ಯವು ಶಾಂತವಾಗಿತ್ತು; ಅವನ ದೇವರು ಸುತ್ತಲೂ ಅವನಿಗೆ ವಿಶ್ರಾಂತಿ ಕೊಟ್ಟನು. |
31. | ಹೀಗೆ ಯೆಹೋಷಾಫಾಟನು ಯೆಹೂದದ ಮೇಲೆ ಆಳಿದನು. ಅವನು ಆಳಲು ಆರಂಭಿಸಿದಾಗ ಮೂವತ್ತೈದು ವರುಷದವನಾಗಿದ್ದು ಯೆರೂಸಲೇಮಿ ನಲ್ಲಿ ಇಪ್ಪತ್ತೈದು ವರುಷ ಆಳಿದನು. ಅವನ ತಾಯಿಯ ಹೆಸರು ಅಜೂಬಳು; ಆಕೆಯು ಶಿಲ್ಹಿಯ ಮಗಳಾ ಗಿದ್ದಳು. |
32. | ಅವನು ತನ್ನ ತಂದೆಯಾದ ಆಸನ ಮಾರ್ಗ ದಲ್ಲಿ ನಡೆದು ಅದನ್ನು ಬಿಟ್ಟುಬಿಡದೆ ಕರ್ತನ ಸಮ್ಮುಖ ದಲ್ಲಿ ಸರಿಯಾದದ್ದನ್ನು ಮಾಡಿದನು. |
33. | ಆದರೆ ಉನ್ನತ ಸ್ಥಳಗಳು ಇನ್ನೂ ತೆಗೆದುಹಾಕಲ್ಪಡಲಿಲ್ಲ. ಜನರು ತಮ್ಮ ಹೃದಯಗಳನ್ನು ತಮ್ಮ ಪಿತೃಗಳ ದೇವರ ಕಡೆಗೆ ಇನ್ನೂ ಸಿದ್ಧಮಾಡಿರಲಿಲ್ಲ; |
34. | ಯೆಹೋಷಾಫಾಟನ ಇತರ ಕ್ರಿಯೆಗಳು, ಮೊದಲನೆಯವುಗಳೂ ಕಡೆಯವುಗಳೂ ಇಗೋ, ಇಸ್ರಾಯೇಲಿನ ಅರಸುಗಳ ಪುಸ್ತಕದಲ್ಲಿ ಹೇಳಲ್ಪಟ್ಟ ಹನಾನೀಯ ಮಗನಾದ ಯೇಹೂವಿನ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ. |
35. | ಇದರ ತರುವಾಯ ಯೆಹೂದದ ಅರಸನಾದ ಯೆಹೋಷಾಫಾಟನು ಇಸ್ರಾಯೇಲಿನ ಅರಸನೂ ಬಹು ದುಷ್ಟನಾಗಿ ನಡೆದವನೂ ಆದ ಅಹಜ್ಯನ ಸಂಗಡ ಸಹವಾಸಮಾಡಿದನು. |
36. | ಇದಲ್ಲದೆ ತಾರ್ಷಿ ಷಿಗೆ ಹೋಗುವ ನಿಮಿತ್ತ ಹಡಗುಗಳನ್ನು ಮಾಡಿಸಲು ಅವನ ಸಂಗಡ ಸೇರಿಕೊಂಡನು. ಅವರು ಎಚ್ಯೋನ್ಗೆಬೆ ರಿನಲ್ಲಿ ಹಡಗುಗಳನ್ನು ಮಾಡಿಸಿದನು. |
37. | ಆಗ ಮಾರೇ ಷಾದವನಾಗಿರುವ ದೋದಾವಾಹುವಿನ ಮಗನಾದ ಎಲೀಯೆಜರನು ಯೆಹೋಷಾಫಾಟನಿಗೆ ವಿರೋಧ ವಾಗಿ ಪ್ರವಾದಿಸಿ--ನೀನು ಅಹಜ್ಯನ ಸಂಗಡ ಸೇರಿ ಕೊಂಡಿದ್ದರಿಂದ ಕರ್ತನು ನಿನ್ನ ಕ್ರಿಯೆಗಳನ್ನು ಹಾಳು ಮಾಡಿಬಿಟ್ಟನೆಂದು ಹೇಳಿದನು. ಹಡಗುಗಳು ತಾರ್ಷಿ ಷಿಗೆ ಹೋಗ ಕೂಡದ ಹಾಗೆ ಒಡೆಯಲ್ಪಟ್ಟವು. |
← 2Chronicles (20/36) → |