← 2Chronicles (18/36) → |
1. | ಯೆಹೋಷಾಫಾಟನಿಗೆ ಐಶ್ವರ್ಯವೂ ಘನತೆಯೂ ಅಧಿಕವಾಗಿರುವಾಗ ಅವನು ಅಹಾಬನ ಸಂಗಡ ಬಂಧುತ್ವ ಮಾಡಿದನು. |
2. | ಕೆಲವು ವರುಷಗಳ ತರುವಾಯ ಅವನು ಅಹಾಬನ ಬಳಿಗೆ ಸಮಾರ್ಯಕ್ಕೆ ಹೋದನು; ಆಗ ಅಹಾಬನು ಅವನಿಗೋಸ್ಕರವೂ ಅವನ ಸಂಗಡ ಇದ್ದ ಜನರಿಗೋ ಸ್ಕರವೂ ಅನೇಕ ಕುರಿದನಗಳನ್ನು ಕೊಯಿಸಿ ತನ್ನ ಸಂಗಡ ಗಿಲ್ಯಾದಿನಲ್ಲಿರುವ ರಾಮೋತಿಗೆ ಹೋಗಲು ಪ್ರೇರೇಪಿಸಿದನು. |
3. | ಇಸ್ರಾಯೇಲಿನ ಅರಸನಾದ ಅಹಾ ಬನು ಯೆಹೂದದ ಅರಸನಾದ ಯೆಹೋಷಾಫಾಟ ನಿಗೆ--ಗಿಲ್ಯಾದಿನಲ್ಲಿರುವ ರಾಮೋತಿಗೆ ನೀನು ನನ್ನ ಸಂಗಡ ಬರುತ್ತೀಯೋ ಅಂದನು. ಅದಕ್ಕವನು--ನಾನು ನಿನ್ನ ಹಾಗೆಯೂ ನನ್ನ ಜನರು ನಿನ್ನ ಜನರ ಹಾಗೆಯೂ ಯುದ್ಧದಲ್ಲಿ ನಿನ್ನ ಸಂಗಡ ಇರು ವೆವು ಅಂದನು. |
4. | ಆದರೆ ಯೆಹೋಷಾಫಾಟನು ಇಸ್ರಾಯೇಲಿನ ಅರಸನಿಗೆ--ದಯಮಾಡಿ ಈ ಹೊತ್ತು ಕರ್ತನ ವಾಕ್ಯವನ್ನು ವಿಚಾರಿಸು ಅಂದನು. |
5. | ಆಗ ಇಸ್ರಾಯೇಲಿನ ಅರಸನು ನಾನೂರು ಮಂದಿ ಪ್ರವಾದಿ ಗಳನ್ನು ಕೂಡಿಸಿ ಅವರಿಗೆ--ನಾವು ಗಿಲ್ಯಾದಿನಲ್ಲಿರುವ ರಾಮೋತಿಗೆ ಯುದ್ಧಕ್ಕೆ ಹೋಗಬಹುದೋ ಬಾರದೋ ಅಂದನು. ಅದಕ್ಕವರು--ಹೋಗು; ದೇವರು ಅದನ್ನು ಅರಸನ ಕೈಯಲ್ಲಿ ಒಪ್ಪಿಸಿಕೊಡುವನು ಅಂದರು. |
6. | ಆದರೆ ಯೆಹೋಷಾಫಾಟನು--ಇವರ ಹೊರತಾಗಿ ನಾವು ವಿಚಾರಿಸುವ ಹಾಗೆ ಇಲ್ಲಿ ಕರ್ತನ ಪ್ರವಾದಿಯು ಯಾವನೂ ಇಲ್ಲವೋ ಅಂದನು. |
7. | ಆಗ ಇಸ್ರಾಯೇ ಲಿನ ಅರಸನು ಯೊಹೋಷಾಫಾಟನಿಗೆ -- ನಾವು ಕರ್ತನಿಂದ ವಿಚಾರಿಸುವ ಹಾಗೆ ಇಮ್ಲನ ಮಗನಾದ ವಿಾಕಾಯೆಹುನೆಂಬವನು ಇನ್ನೊಬ್ಬನಿದ್ದಾನೆ. ಆದರೆ ನಾನು ಅವನನ್ನು ಹಗೆಮಾಡುತ್ತೇನೆ; ಅವನು ನನ್ನನ್ನು ಕುರಿತು ಒಳ್ಳೆಯದನ್ನಲ್ಲ; ಕೆಟ್ಟದ್ದನ್ನೇ, ಪ್ರವಾದಿಸುತ್ತಾನೆ ಅಂದನು. ಅದಕ್ಕೆ ಯೆಹೋಷಾಫಾಟನು--ಅರಸನು ಹಾಗೆ ಅನ್ನದಿರಲಿ ಅಂದನು. |
8. | ಇಸ್ರಾಯೇಲಿನ ಅರ ಸನು ಒಬ್ಬ ಅಧಿಕಾರಿಯನ್ನು ಕರೆದು ಇಮ್ಲನ ಮಗ ನಾದ ವಿಾಕಾಯೆಹುವನ್ನು ಶೀಘ್ರವಾಗಿ ಕರಕೊಂಡು ಬಾ ಅಂದನು. |
9. | ಆದರೆ ಇಸ್ರಾಯೇಲಿನ ಅರಸನೂ ಯೆಹೂದದ ಅರಸನಾದ ಯೆಹೋಷಾಫಾಟನೂ ವಸ್ತ್ರಗಳನ್ನು ಧರಿಸಿಕೊಂಡು ಸಮಾರ್ಯದ ಬಾಗಲಿನ ಮುಂದೆ ಬೈಲಿನಲ್ಲಿ ತಮ್ಮ ತಮ್ಮ ಸಿಂಹಾಸನಗಳ ಮೇಲೆ ಕುಳಿತಿದ್ದರು. ಸಕಲ ಪ್ರವಾದಿಗಳೂ ಅವರ ಮುಂದೆ ಪ್ರವಾದಿಸಿದರು. |
10. | ಆಗ ಕೆನಾನನ ಮಗನಾದ ಚಿದ್ಕೀ ಯನು ತನಗೆ ಕಬ್ಬಿಣದ ಕೊಂಬುಗಳನ್ನು ಮಾಡಿಕೊಂಡು --ಇವುಗಳಿಂದ ನೀನು ಅರಾಮ್ಯರನ್ನು ನಿರ್ಮೂಲ ಮಾಡುವ ವರೆಗೂ ಇರಿದು ಹಾಕುವಿ ಎಂದು ಕರ್ತನು ಹೇಳುತ್ತಾನೆ ಅಂದನು. |
11. | ಸಮಸ್ತ ಪ್ರವಾದಿಗಳೂ ಹಾಗೆಯೇ ಪ್ರವಾದಿಸಿ--ಗಿಲ್ಯಾದಿನಲ್ಲಿರುವ ರಾಮೋ ತಿಗೆ ಹೋಗಿ ಜಯಹೊಂದು; ಕರ್ತನು ಅದನ್ನು ಅರಸನ ಕೈಯಲ್ಲಿ ಒಪ್ಪಿಸಿಕೊಡುವನು ಅಂದರು. |
12. | ಆದರೆ ವಿಾಕಾಯೆಹುವನ್ನು ಕರೆಯುವದಕ್ಕೆ ಹೋದ ಸೇವಕನು ಅವನಿಗೆ--ಇಗೋ, ಪ್ರವಾದಿಗಳ ಮಾತುಗಳು ಒಂದೇ ಒಪ್ಪಿಗೆಯಿಂದ ಅರಸನಿಗೆ ಒಳ್ಳೇ ದನ್ನು ಪ್ರಕಟಿಸುತ್ತವೆ; ನಿನ್ನ ಮಾತು ಅವರಲ್ಲಿ ಒಬ್ಬನ ಮಾತಿನ ಹಾಗೆಯೇ ಇರಲಿ; ಒಳ್ಳೇ ಮಾತು ಆಡು ಅಂದನು. |
13. | ಅದಕ್ಕೆ ಮಿಕಾಯೆಹುವು--ಕರ್ತನ ಜೀವ ದಾಣೆ, ನನ್ನ ದೇವರು ಏನು ಹೇಳುವನೋ ಅದನ್ನು ಹೇಳುವೆನು ಅಂದನು. |
14. | ಅವನು ಅರಸನ ಬಳಿಗೆ ಬಂದಾಗ ಅರಸನು ಅವನಿಗೆ--ವಿಾಕಾಯೆಹುವೇ, ನಾವು ರಾಮೋತ್ ಗಿಲ್ಯಾದಿಗೆ ಯುದ್ಧಕ್ಕೆ ಹೋಗಲೋ ಇಲ್ಲವೆ ನಾವು ಹೋಗುವದು ಬೇಡವೋ? ಅಂದನು. ಆಗ ಅವನು--ಹೋಗಿ ಜಯಹೊಂದಿರಿ, ಅವರು ನಿಮ್ಮ ಕೈಯಲ್ಲಿ ಒಪ್ಪಿಸಲ್ಪಡುವರು ಅಂದನು. |
15. | ಆಗ ಅರಸನು ಅವನಿಗೆ--ನೀನು ಕರ್ತನ ಹೆಸರಿನಲ್ಲಿ ಸತ್ಯ ವನ್ನಲ್ಲದೆ ಬೇರೊಂದು ನನಗೆ ಹೇಳಬಾರದೆಂದು ನಾನು ಎಷ್ಟುಸಾರಿ ನಿನಗೆ ಆಣೆ ಇಡಬೇಕು ಅಂದನು. |
16. | ಅದ ಕ್ಕವನು--ಕಾಯುವವನಿಲ್ಲದ ಕುರಿಗಳ ಹಾಗೆ ಬೆಟ್ಟಗಳ ಮೇಲೆ ಚದರಿಸಲ್ಪಟ್ಟ ಸಮಸ್ತ ಇಸ್ರಾಯೇಲ್ಯರನ್ನು ಕಂಡೆನು. ಆಗ ಕರ್ತನು--ಇವರಿಗೆ ಯಜಮಾನನು ಇಲ್ಲ; ಪ್ರತಿ ಮನುಷ್ಯನು ತನ್ನ ಮನೆಗೆ ಸಮಾಧಾನ ವಾಗಿ ತಿರುಗಲಿ ಅಂದನು. |
17. | ಆಗ ಇಸ್ರಾಯೇಲಿನ ಅರಸನು ಯೆಹೋಷಾಫಾಟನಿಗೆ--ಇವನು ನನ್ನನ್ನು ಕುರಿತು ಒಳ್ಳೇದನ್ನಲ್ಲ, ಕೆಟ್ಟದ್ದನ್ನೇ ಪ್ರವಾದಿಸುವನೆಂದು ನಾನು ನಿನಗೆ ಹೇಳಲಿಲ್ಲವೇ ಅಂದನು. |
18. | ಅದಕ್ಕೆ ವಿಾಕಾಯೆಹುವು ಹೇಳಿದ್ದೇನಂದರೆ--ಕರ್ತನ ವಾಕ್ಯ ವನ್ನು ಕೇಳು. ಕರ್ತನು ತನ್ನ ಸಿಂಹಾಸನದ ಮೇಲೆ ಕುಳಿತಿರುವದನ್ನೂ ಆಕಾಶದ ಸಮಸ್ತ ಸೈನ್ಯವು ಆತನ ಬಲಪಾರ್ಶ್ವದಲ್ಲಿಯೂ ಎಡಪಾರ್ಶ್ವದಲ್ಲಿಯೂ ನಿಂತಿರು ವದನ್ನೂ ನಾನು ಕಂಡೆನು. |
19. | ಆಗ ಕರ್ತನು--ಇಸ್ರಾ ಯೇಲಿನ ಅರಸನಾದ ಅಹಾಬನು ಹೋಗಿ ರಾಮೋತ್ ಗಿಲ್ಯಾದಿನಲ್ಲಿ ಬೀಳುವ ಹಾಗೆ ಅವನನ್ನು ಮರುಳು ಗೊಳಿಸುವವನು ಯಾರು ಅಂದನು. |
20. | ಒಬ್ಬನು ಹೀಗೆಯೂ ಮತ್ತೊಬ್ಬನು ಹಾಗೆಯೂ ಹೇಳುತ್ತಿರುವಾಗ ಒಂದು ಆತ್ಮ ಹೊರಟು ಬಂದು ಕರ್ತನ ಮುಂದೆ ನಿಂತು -- ನಾನು ಅವನನ್ನು ಮರುಳುಗೊಳಿಸುತ್ತೇನೆ ಅಂದಿತು. |
21. | ಆಗ ಕರ್ತನು ಅದಕ್ಕೆ--ಯಾವದರಿಂದ ಅಂದನು. ಅದು--ನಾನು ಹೊರಟು ಅವನ ಎಲ್ಲಾ ಪ್ರವಾದಿಗಳ ಬಾಯಲ್ಲಿ ಸುಳ್ಳು ಆತ್ಮವಾಗಿರುವೆನು ಅಂದಿತು. ಅದಕ್ಕೆ ಆತನು--ನೀನು ಅವನನ್ನು ಮರುಳು ಗೊಳಿಸುವಿ, ಮತ್ತು ಜಯಿಸುವಿ; ಹೊರಟುಹೋಗಿ ಹಾಗೆ ಮಾಡು ಅಂದನು. |
22. | ಆದದರಿಂದ ಇಗೋ, ಕರ್ತನು ಈ ಸಮಸ್ತವಾದ ನಿನ್ನ ಪ್ರವಾದಿಗಳ ಬಾಯಿಯಲ್ಲಿ ಸುಳ್ಳಾದ ಆತ್ಮವನ್ನು ಇಟ್ಟಿದ್ದಾನೆ. ಕರ್ತನು ನಿನ್ನನ್ನು ಕುರಿತು ಕೇಡನ್ನು ಹೇಳಿದ್ದಾನೆ ಅಂದನು. |
23. | ಆಗ ಕೆನಾನನ ಕುಮಾರನಾದ ಚಿದ್ಕೀಯನು ಸವಿಾಪಕ್ಕೆ ಬಂದು ವಿಾಕಾಯೆಹುವಿನ ಕೆನ್ನೆಯ ಮೇಲೆ ಹೊಡೆದು ಕರ್ತನ ಆತ್ಮವು ನನ್ನನ್ನು ಬಿಟ್ಟು ನಿನ್ನ ಸಂಗಡ ಮಾತಾನಾಡಲು ಯಾವ ಮಾರ್ಗವಾಗಿ ಬಂತು ಅಂದನು. ಅದಕ್ಕೆ ವಿಾಕಾಯೆಹುವು-- |
24. | ಇಗೋ, ನಿನ್ನನ್ನು ಬಚ್ಚಿಟ್ಟುಕೊಳ್ಳಲು ಒಳಕೊಠಡಿಗೆ ಹೋಗುವ ದಿವಸದಲ್ಲಿ ನೋಡುವಿ ಅಂದನು. |
25. | ಆಗ ಇಸ್ರಾಯೇ ಲಿನ ಅರಸನು--ನೀವು ವಿಾಕಾಯೆಹುವನ್ನು ಹಿಡಿದು ಪಟ್ಟಣದ ಅಧಿಪತಿಯಾದ ಆಮೋನನ ಬಳಿಗೂ ಅರಸನ ಮಗನಾದ ಯೋವಾಷನ ಬಳಿಗೂ ಅವನನ್ನು ಹಿಂದಕ್ಕೆ ಒಯ್ದು ಹೀಗೆ ಹೇಳಿರಿ-- |
26. | ಅರಸನು ಹೇಳು ವದೇನಂದರೆ--ನೀವು ಇವನನ್ನು ಸೆರೆಮನೆಯಲ್ಲಿಟ್ಟು ನಾನು ಸಮಾಧಾನವಾಗಿ ಬರುವ ಮಟ್ಟಿಗೂ ಅವನಿಗೆ ಬಾಧೆಯ ರೊಟ್ಟಿಯನ್ನೂ ಬಾಧೆಯ ನೀರನ್ನೂ ತಿನ್ನಲು ಕೊಡಿರಿ ಅಂದನು. |
27. | ಅದಕ್ಕೆ ವಿಾಕಾಯೆಹುವುನೀನು ಸಮಾಧಾನದಿಂದ ಬಂದೇ ಬರುವದಾದರೆ ಕರ್ತನು ನನ್ನ ಮುಖಾಂತರ ಮಾತನಾಡಲಿಲ್ಲ ಎಂದು ಹೇಳಿ--ಜನರೇ, ನೀವೆಲ್ಲರು ಕೇಳಿರಿ ಅಂದನು. |
28. | ಹೀಗೆಯೇ ಇಸ್ರಾಯೇಲಿನ ಅರಸನೂ ಯೆಹೂ ದದ ಅರಸನಾದ ಯೆಹೋಷಾಫಾಟನೂ ರಾಮೋತ್ ಗಿಲ್ಯಾದಿಗೆ ಹೋದರು. |
29. | ಆಗ ಇಸ್ರಾಯೇಲಿನ ಅರ ಸನು ಯೆಹೋಷಾಫಾಟನಿಗೆ--ನಾನು ನನ್ನನ್ನು ಮರೆ ಮಾಜಿ ಯುದ್ಧದಲ್ಲಿ ಪ್ರವೇಶಿಸುವೆನು; ಆದರೆ ನೀನು ನಿನ್ನ ವಸ್ತ್ರಗಳನ್ನು ಧರಿಸಿಕೊಂಡಿರು ಅಂದನು. ಹಾಗೆಯೇ ಇಸ್ರಾಯೇಲಿನ ಅರಸನು ತನ್ನನ್ನು ಮರೆಮಾಜಿದನು; ಅವರು ಯುದ್ಧಕ್ಕೆ ಹೋದರು. |
30. | ಆದರೆ ಅರಾಮಿನ ಅರಸನು ತನ್ನ ರಥಗಳ ಮೇಲೆ ಅಧಿಕಾರವುಳ್ಳವರಿಗೆನೀವು ಹಿರಿಕಿರಿಯರ ಸಂಗಡ ಯುದ್ಧಮಾಡದೆ ಇಸ್ರಾ ಯೇಲಿನ ಅರಸನ ಸಂಗಡವೇ ಯುದ್ಧಮಾಡಿರಿ ಎಂದು ಆಜ್ಞಾಪಿಸಿದ್ದನು. |
31. | ಆದದರಿಂದ ರಥಗಳ ಅಧಿಪತಿ ಗಳು ಯೆಹೋಷಾಫಾಟನನ್ನು ನೋಡಿದಾಗ--ನಿಶ್ಚ ಯವಾಗಿ ಇವನೇ ಇಸ್ರಾಯೇಲಿನ ಅರಸನೆಂದು ಹೇಳಿ ಅವನ ಸಂಗಡ ಯುದ್ಧಮಾಡುವದಕ್ಕೆ ಸುತ್ತಿಕೊಂಡರು. ಯೆಹೋಷಾಫಾಟನು ಕೂಗಿಕೊಳ್ಳಲು ಕರ್ತನು ಅವ ನಿಗೆ ಸಹಾಯಕೊಟ್ಟನು. ಇದಲ್ಲದೆ ದೇವರು ಅವರನ್ನು ಅವನ ಕಡೆಯಿಂದ ತೊಲಗಿಸಿದನು. |
32. | ಅವನು ಇಸ್ರಾ ಯೇಲಿನ ಅರಸನಲ್ಲವೆಂದು ರಥಗಳ ಅಧಿಪತಿಗಳು ನೋಡಿ ಅವನನ್ನು ಬಿಟ್ಟು ತಿರುಗಿಕೊಂಡರು. |
33. | ಆದರೆ ಒಬ್ಬನು ಗುರಿಯಿಡದೆ ಬಿಲ್ಲಿಗೆ ಬಾಣ ವನ್ನೇರಿಸಿ ಇಸ್ರಾಯೇಲಿನ ಅರಸನನ್ನು ಕವಚದ ಸಂದು ಗಳಲ್ಲಿ ಹೊಡೆದನು. ಆದದರಿಂದ ಅವನು ತನ್ನ ಸಾರಥಿಗೆ--ನೀನು ನಿನ್ನ ಕೈಯನ್ನು ತಿರುಗಿಸಿ ನನ್ನನ್ನು ಸೈನ್ಯದೊಳಗಿಂದ ಆಚೇಕಡೆ ತೆಗೆದುಕೊಂಡು ಹೋಗು; ನಾನು ಗಾಯಪಟ್ಟಿದ್ದೇನೆ ಅಂದನು. |
34. | ಆ ದಿನ ಯುದ್ಧ ಪ್ರಬಲವಾದದರಿಂದ ಇಸ್ರಾಯೇಲಿನ ಅರ ಸನು ಸಾಯಂಕಾಲದ ವರೆಗೂ ಅರಾಮ್ಯರಿಗೆ ಎದುರಾಗಿ ರಥದಲ್ಲೇ ಆತುಕೊಂಡಿದ್ದು ಸೂರ್ಯನು ಅಸ್ತಮಿಸಿ ದಾಗ ಸತ್ತನು. |
← 2Chronicles (18/36) → |