← 2Chronicles (13/36) → |
1. | ಅರಸನಾದ ಯಾರೊಬ್ಬಾಮನ ಹದಿನೆಂಟನೇ ವರುಷದಲ್ಲಿ ಅಬೀಯನು ಯೆಹೂದದ ಮೇಲೆ ಆಳಲು ಆರಂಭಿಸಿದನು. |
2. | ಅವನು ಯೆರೂಸಲೇಮಿನಲ್ಲಿ ಮೂರು ವರುಷ ಆಳಿದನು. ಅವನ ತಾಯಿಯ ಹೆಸರು ವಿಾಕಾಯ, ಗಿಬೆಯದ ಊರೀಯೇಲನ ಮಗಳು. |
3. | ಅಬೀಯ ನಿಗೂ ಯಾರೊಬ್ಬಾಮನಿಗೂ ಯುದ್ಧ ಉಂಟಾಗಿತ್ತು. ಆಗ ಅಬೀಯನು ಯುದ್ಧಸ್ಥರಾದ ಪರಾಕ್ರಮಶಾಲಿಗಳ ಸೈನ್ಯವನ್ನು ಯುದ್ಧಕ್ಕೆ ಸಿದ್ಧಮಾಡಿದನು. ಆಯಲ್ಪಟ್ಟ ನಾಲ್ಕು ಲಕ್ಷ ಜನರಿದ್ದರು. ಯಾರೊಬ್ಬಾಮನು ಅವನಿಗೆ ಎದುರಾಗಿ ಎಂಟು ಲಕ್ಷ ಮಂದಿ ಆಯಲ್ಪಟ್ಟ ಪರಾ ಕ್ರಮಶಾಲಿಗಳನ್ನು ಯುದ್ಧಕ್ಕೆ ನಿಲ್ಲಿಸಿದನು. |
4. | ಆಗ ಅಬೀಯನು ಎಫ್ರಾಯಾಮ್ ಬೆಟ್ಟದಲ್ಲಿರುವ ಚೆಮಾರೈ ಎಂಬ ಬೆಟ್ಟದ ಮೇಲೆ ನಿಂತು--ಯಾರೊ ಬ್ಬಾಮನೇ, ಸಮಸ್ತ ಇಸ್ರಾಯೇಲೇ, ನನ್ನ ಮಾತು ಕೇಳಿರಿ. |
5. | ಇಸ್ರಾಯೇಲಿನ ದೇವರಾದ ಕರ್ತನು ಇಸ್ರಾ ಯೇಲಿನ ಮೇಲೆ ರಾಜ್ಯವನ್ನು ಎಂದೆಂದಿಗೂ ದಾವೀ ದನಿಗೆ, ಅವನಿಗೂ ಅವನ ಮಕ್ಕಳಿಗೂ ಉಪ್ಪಿನ ಒಡಂಬಡಿಕೆಯಿಂದ ಕೊಟ್ಟನೆಂದು ನೀವು ತಿಳಿಯ ತಕ್ಕ ದ್ದಲ್ಲವೋ? |
6. | ಆದರೆ ದಾವೀದನ ಮಗನಾದ ಸೊಲೊ ಮೋನನ ಸೇವಕನಾಗಿದ್ದ ನೆಬಾಟನ ಮಗನಾದ ಯಾರೋಬ್ಬಾಮನು ಎದ್ದು ತನ್ನ ಯಜಮಾನನ ಮೇ ತಿರುಗಿಬಿದ್ದಿದ್ದಾನೆ. |
7. | ಇದಲ್ಲದೆ ನಿಷ್ಪ್ರಯೋಜಕರಾದ ಬೆಲಿಯಾಳನ ಮಕ್ಕಳು ಅವನ ಬಳಿಗೆ ಕೂಡಿ ಬಂದು ಸೊಲೊಮೋನನ ಮಗನಾದ ರೆಹಬ್ಬಾಮನು ಹುಡುಗ ನಾಗಿಯೂ ಮೃದು ಹೃದಯವುಳ್ಳವನಾಗಿಯೂ ಅವ ರನ್ನು ಎದುರಿಸಲು ಬಲವಿಲ್ಲದೆ ಇರುವಾಗ ಅವ ನಿಗೆ ವಿರೋಧವಾಗಿ ತಮ್ಮನ್ನು ಬಲಪಡಿಸಿಕೊಂಡಿ ದ್ದಾರೆ. |
8. | ಈಗ ದಾವೀದನ ಕುಮಾರರ ಕೈಯಲ್ಲಿರುವ ಕರ್ತನ ರಾಜ್ಯವನ್ನು ಎದುರಿಸುತ್ತೇವೆಂದು ನೀವು ಹೇಳಿ ಕೊಳ್ಳುತ್ತೀರಿ. ಇದಲ್ಲದೆ ನೀವು ಬಹು ಗುಂಪಾಗಿದ್ದೀರಿ. ಯಾರೋಬ್ಬಾಮನು ದೇವರುಗಳಾಗಿ ನಿಮಗೆ ಮಾಡಿದ ಬಂಗಾರದ ಕರುಗಳು ನಿಮ್ಮಲ್ಲಿ ಉಂಟು. |
9. | ನೀವು ಆರೋನನ ಮಕ್ಕಳಾದ ಕರ್ತನ ಯಾಜಕರನ್ನೂ ಲೇವಿ ಯರನ್ನೂ ತಳ್ಳಿ ಹಾಕಿ ದೇಶಗಳ ಜನರ ಹಾಗೆ ನಿಮಗೆ ಯಾಜಕರನ್ನು ಮಾಡಲಿಲ್ಲವೋ? ಯಾವನಾದರೂ ಒಂದು ಎಳೇ ಹೋರಿಯನ್ನೂ ಏಳು ಟಗರುಗಳನ್ನೂ ತಕ್ಕೊಂಡು ಬಂದು ತನ್ನನ್ನು ಪ್ರತಿಷ್ಠೆಮಾಡಿದರೆ ಅವನು ದೇವರಲ್ಲದವುಗಳಿಗೆ ಯಾಜಕನಾಗಿರುವನು. |
10. | ನಮಗಾದರೋ ಕರ್ತನು ನಮ್ಮ ದೇವರಾಗಿದ್ದಾನೆ; ನಾವು ಆತನನ್ನು ಬಿಡಲಿಲ್ಲ. ಇದಲ್ಲದೆ ಕರ್ತನಿಗೆ ಸೇವೆಮಾಡುವ ಯಾಜಕರು ಆರೋನನ ಮಕ್ಕಳು; ಲೇವಿಯರು ತಮ್ಮ ಕೆಲಸದಲ್ಲಿ ಇದ್ದಾರೆ. |
11. | ಅವರು ಪ್ರತಿ ಉದಯದಲ್ಲಿಯೂ ಸಾಯಂಕಾಲದಲ್ಲಿಯೂ ಕರ್ತನಿಗೆ ದಹನಬಲಿಗಳನ್ನೂ ಸುಗಂಧ ಧೂಪವನ್ನೂ ಸುಡುತ್ತಾರೆ. ಇದಲ್ಲದೆ ಪರಿಶುದ್ಧ ಮೇಜಿನ ಮೇಲೆ ರೊಟ್ಟಿಗಳನ್ನು ಇಡುವದುಂಟು; ಪ್ರತಿ ಸಾಯಂಕಾಲ ದಲ್ಲಿ ಬಂಗಾರದ ದೀಪಸ್ಥಂಭವನ್ನೂ ಅದರ ದೀಪ ಗಳನ್ನೂ ಸಿದ್ಧಮಾಡಿ ಹಚ್ಚುತ್ತಾರೆ. ನಾವು ನಮ್ಮ ದೇವರಾದ ಕರ್ತನ ಕಟ್ಟಳೆಯನ್ನು ಕೈಕೊಳ್ಳುತ್ತೇವೆ; ಆದರೆ ನೀವು ಆತನನ್ನು ಬಿಟ್ಟಿದ್ದೀರಿ. ಇಗೋ, ದೇವರು ತಾನೇ ಅಧಿಪತಿಯಾಗಿ ನಮ್ಮ ಸಂಗಡ ಇದ್ದಾನೆ. |
12. | ಇದಲ್ಲದೆ ನಿಮಗೆ ವಿರೋಧವಾಗಿ ಜಯಧ್ವನಿ ಮಾಡುವ ತುತೂರಿಗಳನ್ನು ಹಿಡುಕೊಂಡ ಆತನ ಯಾಜಕರು ಇದ್ದಾರೆ. ಇಸ್ರಾಯೇಲಿನ ಮಕ್ಕಳೇ, ನೀವು ನಿಮ್ಮ ಪಿತೃಗಳ ದೇವರಾದ ಕರ್ತನಿಗೆ ವಿರೋಧ ವಾಗಿ ಯುದ್ಧಮಾಡಬೇಡಿರಿ, ನೀವು ಜಯ ಹೊಂದು ವದಿಲ್ಲ ಅಂದನು. |
13. | ಆದರೆ ಯಾರೊಬ್ಬಾಮನು ಅಡಗಿಕೊಂಡವರನ್ನು ಸುತ್ತಲೂ ಅವರ ಹಿಂದೆಯೂ ಬರಮಾಡಿದನು. ಆದದರಿಂದ ಅವರು ಯೆಹೂದ ದವರ ಮುಂದೆಯೂ ಅಡಗಿಕೊಂಡವರು ಅವರ ಹಿಂದೆಯೂ ಇದ್ದರು. |
14. | ಯೆಹೂದದವರು ಹಿಂದಕ್ಕೆ ನೋಡಿದಾಗ ಇಗೋ, ಯುದ್ಧವು ಅವರ ಮುಂದೆಯೂ ಹಿಂದೆಯೂ ಇತ್ತು. ಆಗ ಅವರು ಕರ್ತನಿಗೆ ಕೂಗಿದರು, ಯಾಜಕರು ತುತೂರಿಗಳನ್ನು ಊದಿದರು. |
15. | ಇದಲ್ಲದೆ ಯೆಹೂದದ ಮನುಷ್ಯರು ಆರ್ಭಟಿಸಿದರು; ಯೆಹೂದದ ಮನುಷ್ಯರು ಆರ್ಭಟಿ ಸಿದಾಗ ಏನಾಯಿತಂದರೆ, ದೇವರು ಅಬೀಯನ ಮತ್ತು ಯೆಹೂದದವರ ಮುಂದೆ ಯಾರೊಬ್ಬಾಮ ನನ್ನೂ ಸಮಸ್ತ ಇಸ್ರಾಯೇಲನ್ನೂ ಹೊಡೆದನು. |
16. | ಇಸ್ರಾಯೇಲಿನ ಮಕ್ಕಳು ಯೆಹೂದದವರ ಎದುರಿ ನಿಂದ ಓಡಿಹೋದರು. ದೇವರು ಅವರನ್ನು ಅವರ ಕೈಯಲ್ಲಿ ಒಪ್ಪಿಸಿದನು. |
17. | ಅಬೀಯನೂ ಅವನ ಜನರೂ ಅವರಲ್ಲಿ ಬಹಳ ಮಂದಿಯನ್ನು ಹತಮಾಡಿ ದರು. ಇಸ್ರಾಯೇಲಿನವರಲ್ಲಿ ಐದು ಲಕ್ಷ ಮಂದಿ ಆಯಲ್ಪಟ್ಟವರು ಹತವಾದರು. |
18. | ಹೀಗೆ ಆ ಕಾಲದಲ್ಲಿ ಇಸ್ರಾಯೇಲಿನ ಮಕ್ಕಳು ತಗ್ಗಿಸಲ್ಪಟ್ಟರು. ಯೆಹೂದನ ಮಕ್ಕಳು ತಮ್ಮ ಪಿತೃಗಳ ದೇವರಾದ ಕರ್ತನ ಮೇಲೆ ಆತುಕೊಂಡಿದ್ದರಿಂದ ಜಯಹೊಂದಿದರು. |
19. | ಅಬೀ ಯನು ಯಾರೊಬ್ಬಾಮನನ್ನು ಹಿಂದಟ್ಟಿ ಅವನಿಂದ ಬೇತೇಲ್, ಯೆಷಾನಾ, ಎಫ್ರೋನ್ ಎಂಬ ಪಟ್ಟಣ ಗಳನ್ನೂ ಅವುಗಳ ಗ್ರಾಮಗಳನ್ನೂ ತೆಗೆದುಕೊಂಡನು. |
20. | ಯಾರೊಬ್ಬಾಮನು ಅಬೀಯನ ದಿನಗಳಲ್ಲಿ ತಿರಿಗಿ ಶಕ್ತಿಯನ್ನು ಹೊಂದಲಿಲ್ಲ. ಕರ್ತನು ಅವನನ್ನು ಹೊಡೆ ದದ್ದರಿಂದ ಅವನು ಸತ್ತನು. |
21. | ಆದರೆ ಅಬೀಯನು ಬಲಗೊಂಡು ಹದಿನಾಲ್ಕು ಮಂದಿ ಹೆಂಡತಿಯರನ್ನು ಮದುವೆಮಾಡಿಕೊಂಡು ಇಪ್ಪತ್ತೆರಡು ಮಂದಿ ಕುಮಾರರನ್ನೂ ಹದಿನಾರು ಮಂದಿ ಕುಮಾರ್ತೆಯರನ್ನೂ ಪಡೆದನು. |
22. | ಅಬೀ ಯನ ಮಿಕ್ಕಾದ ಕ್ರಿಯೆಗಳೂ ಅವನ ನಡತೆಗಳೂ ಮಾತುಗಳೂ ಪ್ರವಾದಿಯಾದ ಇದ್ದೋನನ ವರ್ತ ಮಾನಗಳಲ್ಲಿ ಬರೆಯಲ್ಪಟ್ಟಿವೆ. |
← 2Chronicles (13/36) → |