← 2Chronicles (11/36) → |
1. | ರೆಹಬ್ಬಾಮನು ಯೆರೂಸಲೇಮಿಗೆ ಬಂದ ತರುವಾಯ ಅವನು ತನಗೆ ರಾಜ್ಯವನ್ನು ತಿರಿಗಿ ಬರಮಾಡುವ ಹಾಗೆ ಇಸ್ರಾಯೇಲಿಗೆ ವಿರೋಧವಾಗಿ ಯುದ್ಧಮಾಡಲು ಯೆಹೂದ ಬೆನ್ಯಾ ವಿಾನಿನವರೊಳಗಿಂದ ಯುದ್ಧಮಾಡತಕ್ಕವರಾಗಿರುವ ಆಯಲ್ಪಟ್ಟ ಲಕ್ಷದ ಎಂಭತ್ತು ಸಾವಿರ ಜನ ರನ್ನು ಕೂಡಿಸಿದಾಗ |
2. | ಕರ್ತನ ವಾಕ್ಯವು ದೇವರ ಮನುಷ್ಯನಾಗಿರುವ ಶೆಮಾಯನಿಗೆ ಉಂಟಾಯಿತು; |
3. | ಏನಂದರೆ -- ನೀನು ಯೆಹೂದದ ಅರಸನಾದ ಸೊಲೊಮೋನನ ಮಗನಾಗಿರುವ ರೆಹಬ್ಬಾಮನಿಗೂ ಯೆಹೂದ ಬೆನ್ಯಾವಿಾನ್ಯರಲ್ಲಿರುವ |
4. | ಸಮಸ್ತ ಇಸ್ರಾ ಯೇಲ್ಯರಿಗೂ ಹೇಳಬೇಕಾದದ್ದೇನಂದರೆ--ಕರ್ತನು ಹೀಗೆ ಹೇಳುತ್ತಾನೆ--ನೀವು ನಿಮ್ಮ ಸಹೋದರರಿಗೆ ವಿರೋಧವಾಗಿ ಯುದ್ಧಮಾಡುವದಕ್ಕೆ ಹೋಗ ಬೇಡಿರಿ; ಪ್ರತಿ ಮನುಷ್ಯನು ತನ್ನ ಮನೆಗೆ ಹಿಂತಿ ರುಗಲಿ. ಈ ಕಾರ್ಯವು ನನ್ನಿಂದ ಉಂಟಾಯಿತು ಅಂದನು. ಆದಕಾರಣ ಅವರು ಕರ್ತನ ವಾಕ್ಯವನ್ನು ಕೇಳಿ ಯಾರೊಬ್ಬಾಮನ ಮೇಲೆ ಹೋಗದೆ ಹಿಂತಿರುಗಿದರು. |
5. | ರೆಹಬ್ಬಾಮನು ಯೆರೂಸಲೇಮಿನಲ್ಲಿ ವಾಸಮಾಡಿ ಯೆಹೂದದಲ್ಲಿ ಕಾವಲು ಪಟ್ಟಣಗಳನ್ನು ಕಟ್ಟಿಸಿದನು. |
6. | ಯಾವವಂದರೆ ಬೇತ್ಲೆಹೇಮ್ ಏತಾಮ್ ತೆಕೋವ |
7. | ಬೇತ್ಚೂರ ಸೋಕೋ |
8. | ಅದುಲ್ಲಾಮ್ ಗತ್‌ಊರು ಮಾರೇಷ್ |
9. | ಜೀಫ್ ಅದೋರೈಮ್ ಲಾಕೀಷ್ ಅಜೇಕ |
10. | ಚೋರ್ಗ ಅಯ್ಯಾಲೋನ್ ಹೆಬ್ರೋನ್ ಕಟ್ಟಿಸಿದನು. ಇವು ಯೆಹೂದ ಬೆನ್ಯಾ ವಿಾನ್ ಪ್ರಾಂತ್ಯಗಳಲ್ಲಿ ಕೋಟೆಯುಳ್ಳ ಪಟ್ಟಣ ಗಳಾಗಿವೆ. |
11. | ಇದಲ್ಲದೆ ಅವನು ಕೋಟೆಗಳನ್ನು ಬಲ ಪಡಿಸಿ ಅವುಗಳಲ್ಲಿ ನಾಯಕರನ್ನೂ ಆಹಾರ ಎಣ್ಣೆ ದ್ರಾಕ್ಷಾರಸ ಇರುವ ಉಗ್ರಾಣಗಳನ್ನೂ ಇಟ್ಟನು. |
12. | ಪ್ರತಿ ಪಟ್ಣಣದಲ್ಲಿ ಖೇಡ್ಯಗಳನ್ನೂ ಈಟಿಗಳನ್ನೂ ಇಟ್ಟು ಯೆಹೂದ ಬೆನ್ಯಾವಿಾನಿನವರು ಅವನ ಕಡೆ ಇದ್ದದ್ದರಿಂದ ಅವುಗಳನ್ನು ಬಹಳ ಭದ್ರಪಡಿಸಿದನು. |
13. | ಇದಲ್ಲದೆ ಸಮಸ್ತ ಇಸ್ರಾಯೇಲಿನಲ್ಲಿದ್ದ ಯಾಜ ಕರೂ ಲೇವಿಯರೂ ತಮ್ಮ ಸಮಸ್ತ ಪ್ರಾಂತ್ಯಗಳಿಂದ ಅವನ ಬಳಿಗೆ ಪುನಃ ಬಂದರು. |
14. | ಲೇವಿಯರು ಕರ್ತ ನಿಗೆ ಯಾಜಕ ಸೇವೆಮಾಡದ ಹಾಗೆ ಯಾರೊಬ್ಬಾ ಮನೂ ಅವನ ಮಕ್ಕಳೂ ಅವರನ್ನು ತೆಗೆದುಹಾಕಿ ಉನ್ನತ ಸ್ಥಳಗಳಿಗೋಸ್ಕರವೂ |
15. | ದೆವ್ವಗಳಿಗೋಸ್ಕರವೂ ಯಾರೊಬ್ಬಾಮನು ಮಾಡಿದ ಹೋರಿಗಳಿ ಗೋಸ್ಕರವೂ ತನಗೆ ಯಾಜಕರನ್ನು ನೇಮಿಸಿದ್ದರಿಂದ ಲೇವಿಯರು ತಮ್ಮ ಉಪನಗರಗಳನ್ನೂ ಸ್ವಾಸ್ತ್ಯಗಳನ್ನೂ ಬಿಟ್ಟು ಬಿಟ್ಟು ಯೆಹೂದಕ್ಕೂ ಯೆರೂಸಲೇಮಿಗೂ ಬಂದರು. |
16. | ಇವರ ತರುವಾಯ ಇಸ್ರಾಯೇಲಿನ ಕರ್ತನಾದ ದೇವರನ್ನು ಹುಡುಕಲು ತಮ್ಮ ಹೃದಯ ಗಳನ್ನು ಕೊಟ್ಟು ತಮ್ಮ ಪಿತೃಗಳ ದೇವರಾದ ಕರ್ತನಿಗೆ ಬಲಿ ಅರ್ಪಿಸಲು ಇಸ್ರಾಯೇಲಿನ ಸಮಸ್ತ ಗೋತ್ರ ಗಳಿಂದ ಯೆರೂಸಲೇಮಿಗೆ ಬಂದರು. |
17. | ಹೀಗೆಯೇ ಅವರು ಯೆಹೂದ ರಾಜ್ಯವನ್ನು ದೃಢಪಡಿಸಿ ಸೊಲೊ ಮೋನನ ಮಗನಾದ ರೆಹಬ್ಬಾಮನನ್ನು ಮೂರು ವರುಷಗಳ ವರೆಗೂ ಬಲಪಡಿಸಿದರು. ಯಾಕಂದರೆ ಅವರು ಮೂರು ವರುಷಗಳ ವರೆಗೂ ದಾವೀದ ಸೊಲೊಮೋನ ಇವರ ಮಾರ್ಗದಲ್ಲಿ ನಡೆದರು. |
18. | ರೆಹಬ್ಬಾಮನು ದಾವೀದನ ಮಗನಾದ ಯೆರೀ ಮೋತನಿಗೆ ಇಷಯನ ಮೊಮ್ಮಗಳೂ ಎಲೀಯಾಬನ ಮಗಳು ಆದ ಅಬೀಹೈಲಳಲ್ಲಿ ಹುಟ್ಟಿದ ಮಹ್ಲತ್ ಎಂಬಾಕೆಯನ್ನು ಹೆಂಡತಿಯನ್ನಾಗಿ ತೆಗೆದುಕೊಂಡನು. |
19. | ಅಬೀಹೈಲಳು ಯೆಗೂಷ್, ಶೆಮರ್ಯ, ಜಾಹಮ್ ಎಂಬ ಮಕ್ಕಳನ್ನು ಅವನಿಗೆ ಹೆತ್ತಳು. |
20. | ಇವಳ ತರು ವಾಯ ಅವನು ಅಬ್ಷಾಲೋಮನ ಮಗಳಾದ ಮಾಕ ಳನ್ನು ಹೆಂಡತಿಯಾಗಿ ತಕ್ಕೊಂಡನು. ಇವಳು ಅವನಿಗೆ ಅಬೀಯನ್ನೂ ಅತ್ತೈಯನ್ನೂ ಜೀಜನನ್ನೂ ಶೆಲೋ ವಿಾತನ್ನೂ ಹೆತ್ತಳು. |
21. | ರೆಹಬ್ಬಾಮನಿಗೆ ಹದಿನೆಂಟು ಮಂದಿ ಹೆಂಡತಿಯರೂ ಅರವತ್ತು ಮಂದಿ ಉಪ ಪತ್ನಿಯರೂ ಇದ್ದರು; ಅವನು ಇಪ್ಪತ್ತೆಂಟು ಮಂದಿ ಕುಮಾರರನ್ನೂ ಅರವತ್ತು ಮಂದಿ ಕುಮಾರ್ತೆಯರನ್ನೂ ಪಡೆದನು. ಆದರೆ ಅವನು ತನ್ನ ಎಲ್ಲಾ ಹೆಂಡತಿ ಯರಿಗಿಂತಲೂ ಉಪಪತ್ನಿಯರಿಗಿಂತಲೂ ಅಬ್ಷಾಲೋ ಮನ ಮಗಳಾದ ಮಾಕಳನ್ನು ಪ್ರೀತಿಮಾಡಿದನು. |
22. | ರೆಹಬ್ಬಾಮನು ಮಾಕಳ ಮಗನಾದ ಅಬೀಯನನ್ನು ಅವನ ಸಹೋದರರಲ್ಲಿ ನಾಯಕನಾಗಿರುವಂತೆ ಮುಖ್ಯ ಸ್ಥನಾಗಿ ಮಾಡಿದನು. ಅವನನ್ನು ಅರಸನಾಗಿ ಮಾಡಲು ಮನಸ್ಸುಳ್ಳವನಾಗಿದ್ದನು. |
23. | ಅವನು ವಿವೇಕದಿಂದ ನಡೆದು ತನ್ನ ಎಲ್ಲಾ ಮಕ್ಕಳನ್ನು ಯೆಹೂದ ಬೆನ್ಯಾವಿಾ ನಿನ ದೇಶಗಳಲ್ಲಿರುವ ಎಲ್ಲಾ ಬಲವಾದ ಪಟ್ಟಣಗ ಳಲ್ಲಿ ಚದುರಿಸಿ ಅವರಿಗೆ ಬಹಳ ದವಸಧಾನ್ಯಗಳನ್ನು ಕೊಟ್ಟನು. ಆದರೆ ಹೆಂಡತಿಯರ ಸಮೂಹವನ್ನು ಆಶಿಸಿದನು. |
← 2Chronicles (11/36) → |