← 1Timothy (5/6) → |
1. | ವೃದ್ಧನನ್ನು ಗದರಿಸದೆ ತಂದೆಯೆಂದು ಭಾವಿಸಿ ಬುದ್ಧಿಹೇಳು. ಯೌವನಸ್ಥರನ್ನು ಸಹೋದರರೆಂದೂ |
2. | ವೃದ್ಧಸ್ತ್ರೀಯರನ್ನು ತಾಯಂದಿ ರೆಂದೂ ಯೌವನ ಸ್ತ್ರೀಯರನ್ನು ಪೂರ್ಣ ಪವಿತ್ರತೆ ಯಿಂದ ಸಹೋದರಿಯರೆಂದೂ ಎಣಿಸಿ ಅವರವರಿಗೆ ಬುದ್ಧಿಹೇಳು. |
3. | ನಿಜವಾಗಿಯೂ ವಿಧವೆಯಾಗಿರುವವರನ್ನು ಗೌರ ವಿಸು; ಅವರು ವಿಧವೆಯರಾಗಿದ್ದಾರಲ್ಲಾ. |
4. | ಆದರೆ ಯಾವ ವಿಧವೆಗಾದರೂ ಮಕ್ಕಳಾಗಲಿ, ಮೊಮ್ಮಕ್ಕಳಾ ಗಲಿ, ಇದ್ದರೆ ಅವರೇ ಮೊದಲು ತಮ್ಮ ಮನೆಯಲ್ಲಿ ಭಕ್ತಿ ತೋರಿಸುವದಕ್ಕೂ ತಂದೆತಾಯಿಗಳಿಗೆ ಪ್ರತ್ಯುಪ ಕಾರ ಮಾಡುವದಕ್ಕೂ ಕಲಿತುಕೊಳ್ಳಲಿ; ಇದು ದೇವರ ದೃಷ್ಟಿಯಲ್ಲಿ ಯೋಗ್ಯವಾದದ್ದೂ ಮೆಚ್ಚಿಕೆಯಾದದ್ದೂ ಆಗಿದೆ. |
5. | ನಿಜವಾಗಿಯೂ ದಿಕ್ಕಿಲ್ಲದ ವಿಧವೆಯು ದೇವರ ಮೇಲೆ ನಿರೀಕ್ಷೆಯನ್ನಿಟ್ಟು ಹಗಲಿರುಳು ವಿಜ್ಞಾಪನೆಗಳ ಲ್ಲಿಯೂ ಪ್ರಾರ್ಥನೆಗಳಲ್ಲಿಯೂ ನೆಲೆಗೊಂಡಿರುವಳು. |
6. | ಆದರೆ ಭೋಗಿಯಾಗಿರುವ ವಿಧವೆಯು ಬದುಕಿರು ವಾಗಲೂ ಸತ್ತವಳೇ. |
7. | ಅವರು ನಿಂದೆಗೆ ಗುರಿಯಾಗ ದಂತೆ ಇವುಗಳನ್ನು ಆಜ್ಞಾಪಿಸು. |
8. | ಯಾವನಾದರೂ ಸ್ವಂತದವರನ್ನು, ವಿಶೇಷವಾಗಿ ತನ್ನ ಮನೆಯವರನ್ನು ಸಂರಕ್ಷಿಸದೆ ಹೋದರೆ ಅವನು ನಂಬಿಕೆಯನ್ನು ಅಲ್ಲಗಳೆ ದವನು ನಂಬದವನಿಗಿಂತ ಕೆಟ್ಟವನೂ ಆಗಿದ್ದಾನೆ. |
9. | ವಯಸ್ಸಿನಲ್ಲಿ ಅರುವತ್ತಕ್ಕೆ ಕಡಿಮೆಯಿದ್ದ ವಿಧವೆಯರನ್ನು ವಿಧವೆಯರ ಪಟ್ಟಿಯಲ್ಲಿ ಸೇರಿಸಬೇಡ. ಅಂಥವಳಾ ದರೂ ಒಬ್ಬ ಗಂಡನಿಗೆ ಮಾತ್ರ ಹೆಂಡತಿಯಾಗಿದ್ದವಳೂ |
10. | ಸತ್ಕ್ರಿಯೆಗಳನ್ನು ಮಾಡುವವಳೆಂದು ಹೆಸರುಗೊಂಡ ವಳೂ ಆಗಿರಬೇಕು; ಆಕೆಯು ಮಕ್ಕಳನ್ನು ಸಾಕಿದವಳಾ ಗಲಿ ಅತಿಥಿಸತ್ಕಾರವನ್ನು ಮಾಡಿದವಳಾಗಲಿ ಪರಿಶುದ್ಧರ ಪಾದಗಳನ್ನು ತೊಳೆದವಳಾಗಲಿ ಸಂಕಟದಲ್ಲಿ ಬಿದ್ದವರಿಗೆ ಸಹಾಯ ಮಾಡಿದವಳಾಗಲಿ ಎಲ್ಲಾ ಸತ್ಕಾರ್ಯಗಳಲಿ ಆಸಕ್ತಿಯುಳ್ಳವಳಾಗಲಿ ಆಗಿರ |
11. | ಆದರೆ ಯೌವನಸ್ಥ ವಿಧವೆಯರನ್ನು ಲೆಕ್ಕಕ್ಕೆ ಸೇರಿಸಬೇಡ; ಯಾಕಂದರೆ ಅವರು ಕ್ರಿಸ್ತನಿಗೆ ಒಳಗಾಗಲೊಲ್ಲದೆ ಮದಿಸಿ ಮದುವೆ ಮಾಡಿಕೊಳ್ಳಬೇಕೆಂದು ಇಷ್ಟಪ ಟ್ಟಾರು. |
12. | ಅಂಥವರು ತಮ್ಮ ಮೊದಲಿನ ನಂಬಿಕೆಯನ್ನು ತೊರೆದು ದಂಡನೆಗೆ ಗುರಿಯಾಗಿದ್ದಾರೆ. |
13. | ಇದಲ್ಲದೆ ಅವರು ಮನೆಯಿಂದ ಮನೆಗೆ ತಿರುಗಾಡುತ್ತಾ ಮೈಗಳ್ಳತನವನ್ನು ಕಲಿಯುತ್ತಾರೆ; ಮೈಗಳ್ಳರಾಗುವದ ಲ್ಲದೆ ಹರಟೆ ಮಾತನ್ನಾಡುವರು ಮತ್ತು ಇತರರ ಕೆಲಸ ದಲ್ಲಿ ಕೈಹಾಕುವವರಾಗಿ ಆಡಬಾರದ ಮಾತುಗಳನ್ನಾಡು ತ್ತಾರೆ. |
14. | ಆದದರಿಂದ ಯೌವನಸ್ಥ ವಿಧವೆಯರು ಮದುವೆ ಮಾಡಿಕೊಂಡು ಮಕ್ಕಳನ್ನು ಹೆತ್ತು ಮನೆಯ ಕೆಲಸ ನಡಿಸುವದೇ ನನ್ನ ಅಪೇಕ್ಷೆ; ಹಾಗೆ ಮಾಡುವದ ರಿಂದ ವಿರೋಧಿಯ ನಿಂದೆಗೆ ಆಸ್ಪದಕೊಡದೆ ಇರುವರು. |
15. | ಇಷ್ಟರೊಳಗೆ ಕೆಲವರು ದಾರಿಬಿಟ್ಟು ಸೈತಾನನನ್ನು ಹಿಂಬಾಲಿಸಿದ್ದಾರೆ. |
16. | ನಂಬುವವರಾದ ಪುರುಷನ ಇಲ್ಲವೆ ಸ್ತ್ರೀಯ ಅಧೀನತೆಯಲ್ಲಿ ವಿಧವೆಯರಿದ್ದರೆ ಅವರೇ ಅವರನ್ನು ಸಂರಕ್ಷಿಸಲಿ. ಸಭೆಯು ದಿಕ್ಕಿಲ್ಲದ ವಿಧವೆಯರಿಗೆ ಸಹಾಯಮಾಡಬೇಕಾಗಿರುವದರಿಂದ ವಿಧವೆಯರು ಆ ಭಾರವನ್ನು ಸಭೆಯ ಮೇಲೆ ಹಾಕಬಾರದು. |
17. | ಚೆನ್ನಾಗಿ ಅಧಿಕಾರ ನಡಿಸುವ ಹಿರಿಯರನ್ನು, ಅವ ರೊಳಗೆ ವಿಶೇಷವಾಗಿ ವಾಕ್ಯದಲ್ಲಿಯೂ ಬೋಧನೆ ಯಲ್ಲಿಯೂ ಕಷ್ಟಪಡುವವರನ್ನು ಇಮ್ಮಡಿಯಾದ ಮಾನಕ್ಕೆ ಯೋಗ್ಯರೆಂದು ಎಣಿಸಬೇಕು. |
18. | ಕಣತುಳಿ ಯುವ ಎತ್ತಿನ ಬಾಯಿ ಕಟ್ಟಬಾರದೆಂತಲೂ--ಕೆಲಸ ದವನು ತನ್ನ ಕೂಲಿಗೆ ಯೋಗ್ಯನಾಗಿದ್ದಾನೆಂತಲೂ ಬರಹದಲ್ಲಿ ಹೇಳಿದೆಯಲ್ಲಾ. |
19. | (ಸಭೆಯ) ಹಿರಿಯನ ಮೇಲೆ ಯಾರಾದರೂ ದೂರು ಹೇಳಿದರೆ ಇಬ್ಬರು ಮೂವರು ಸಾಕ್ಷಿಗಳಿದ್ದ ಹೊರತಾಗಿ ಅದನ್ನು ತೆಗೆದು ಕೊಳ್ಳಬೇಡ. |
20. | ಪಾಪಮಾಡುವವರನ್ನು ಎಲ್ಲರ ಮುಂದೆಯೇ ಗದರಿಸು; ಇದರಿಂದ ಮಿಕ್ಕಾದವರಿಗೂ ಭಯವುಂಟಾಗುವದು. |
21. | ನೀನು ವಿಚಾರಿಸುವದಕ್ಕೆ ಮೊದಲೇ ತಪ್ಪು ಹೊರಿಸದೆಯೂ ಪಕ್ಷಪಾತದಿಂದ ಏನೂ ಮಾಡದೆಯೂ ಇವುಗಳನ್ನು ಕೈಕೊಳ್ಳಬೇಕೆಂದು ದೇವರ ಮುಂದೆಯೂ ಕರ್ತನಾದ ಯೇಸು ಕ್ರಿಸ್ತನ ಮುಂದೆಯೂ ಆಯಲ್ಪಟ್ಟಿರುವ ದೂತರ ಮುಂದೆಯೂ ಖಂಡಿತವಾಗಿ ನಾನು ಹೇಳುತ್ತೇನೆ. |
22. | ಅವಸರದಿಂದ ಯಾರ ಮೇಲೆಯೂ ಹಸ್ತಾರ್ಪಣೆ ಮಾಡಬೇಡ; ಮತ್ತು ಇತರರ ಪಾಪಗಳಲ್ಲಿ ಪಾಲುಗಾರನಾಗದೆ ನೀನು ುದ್ಧನಾಗಿರುವ ಹಾಗೆ ನೋಡಿಕೋ |
23. | ಇನ್ನು ಮೇಲೆ ನೀರನ್ನು ಮಾತ್ರ ಕುಡಿಯುವವನಾಗಿರದೆ ನಿನ್ನ ಹೊಟ್ಟೆಯ ನಿಮಿತ್ತವಾಗಿಯೂ ನಿನಗೆ ಆಗಾಗ್ಗೆ ಉಂಟಾ ಗುವ ಬಲಹೀನತೆಗಳಿಗಾಗಿಯೂ ದ್ರಾಕ್ಷಾರಸವನ್ನು ಸ್ವಲ್ಪವಾಗಿ ತೆಗೆದುಕೋ. |
24. | ಕೆಲವರ ಪಾಪಗಳು ತೀರ್ಪಿಗೆ ಮೊದಲೇ ಬಹಿರಂಗವಾಗುತ್ತವೆ; ಕೆಲವರ ಪಾಪಗಳು ತರುವಾಯ ಹಿಂಬಾಲಿಸುತ್ತವೆ. |
25. | ಅದರಂತೆಯೇ ಕೆಲವರ ಒಳ್ಳೇ ಕ್ರಿಯೆಗಳು ಮೊದಲೇ ಪ್ರತ್ಯಕ್ಷವಾಗಿರುತ್ತವೆ. ಪ್ರತ್ಯಕ್ಷವಾಗದಿರುವವುಗಳು ಮರೆ ಯಾಗಿರಲಾರವು. |
← 1Timothy (5/6) → |