← 1Timothy (4/6) → |
1. | ಕಡೇಕಾಲಗಳಲ್ಲಿ ಕೆಲವರು ವಂಚಿಸುವ ಆತ್ಮಗಳಿಗೂ ದೆವ್ವಗಳ ಬೋಧನೆಗಳಿಗೂ ಲಕ್ಷ್ಯಕೊಟ್ಟು ನಂಬಿಕೆಯಿಂದ ತೊಲಗಿಹೋಗುವ ರೆಂದು ಆತ್ಮನು ಸ್ಪಷ್ಟವಾಗಿ ಹೇಳುತ್ತಾನೆ. |
2. | ಅವರು ಕಪಟದಲ್ಲಿ ಸುಳ್ಳಾಡುವವರೂ ತಮ್ಮ ಮನಸ್ಸಾಕ್ಷಿಯ ಮೇಲೆ ಕಾಸಿದ ಕಬ್ಬಿಣದಿಂದ ಬರೆ ಹಾಕಲ್ಪಟ್ಟವರೂ ಆಗಿದ್ದು |
3. | ಮದುವೆಯಾಗಬಾರದೆಂತಲೂ ಯಾರು ನಂಬುವವರಾಗಿದ್ದು ಸತ್ಯವನ್ನು ಗ್ರಹಿಸಿಕೊಂಡಿದ್ದಾರೋ ಅವರು ಕೃತಜ್ಞತಾಸ್ತುತಿ ಮಾಡಿ ತಿನ್ನುವದಕ್ಕೋಸ್ಕರ ದೇವರು ಉಂಟು ಮಾಡಿದ ಆಹಾರವನ್ನು ತಿನ್ನಬಾರ ದೆಂತಲೂ ಆಜ್ಞಾಪಿಸುತ್ತಾರೆ. |
4. | ದೇವರ ಪ್ರತಿಯೊಂದು ಸೃಷ್ಟಿಯೂ ಒಳ್ಳೇದಾಗಿದೆ; ಸ್ತೋತ್ರ ಮಾಡಿ ತೆಗೆದು ಕೊಳ್ಳುವ ಪಕ್ಷಕ್ಕೆ ಯಾವದನ್ನೂ ನಿರಾಕರಿಸಬಾರದು. |
5. | ದೇವರ ವಾಕ್ಯದಿಂದಲೂ ಪ್ರಾರ್ಥನೆಯಿಂದಲೂ ಅದು ಪವಿತ್ರವಾಗುತ್ತದಲ್ಲಾ. |
6. | ಈ ಸಂಗತಿಗಳನ್ನು ಸಹೋದರರಿಗೆ ತಿಳಿಸಿದರೆ ನೀನು ಅನುಸರಿಸುವ ನಂಬಿಕೆಯ ಮತ್ತು ಸುಬೋಧನೆಯ ವಾಕ್ಯಗಳಲ್ಲಿ ಪೋಷಣೆ ಹೊಂದುವವರಾಗಿ ಯೇಸು ಕ್ರಿಸ್ತನ ಒಳ್ಳೇ ಸೇವಕನಾಗಿರುವಿ. |
7. | ಆದರೆ ಅಜ್ಜೀಕಥೆಗಳಂತಿರುವ ಅಶುದ್ಧವಾದ ಆ ಕಥೆಗಳನ್ನು ನಿರಾಕರಿಸಿ ನೀನು ದೇವ ಭಕ್ತಿಯ ವಿಷಯದಲ್ಲಿಯೇ ಸಾಧನೆ ಮಾಡಿಕೋ. |
8. | ದೇಹಸಾಧನೆಯು ಸ್ವಲ್ಪ ಮಟ್ಟಿಗೆ ಲಾಭಕರವಾಗಿದೆ, ಭಕ್ತಿಯಾದರೋ ಎಲ್ಲಾ ವಿಧದಲ್ಲಿ ಲಾಭಕರವಾದದ್ದು; ಆದಕ್ಕೆ ಈಗಲೂ ಮುಂದೆ ಬರುವದಕ್ಕೂ ಜೀವಾಗ್ದಾನ ಉಂಟು. |
9. | ಈ ಮಾತು ನಂಬತಕ್ಕದ್ದಾಗಿಯೂ ಸರ್ವಾಂಗೀಕಾರಕ್ಕೆ ಯೋಗ್ಯವಾದದ್ದಾಗಿಯೂ ಅದೆ. |
10. | ಆದದರಿಂದ ಇದಕ್ಕಾಗಿ ನಾವು ಕಷ್ಟಪಡುವವರೂ ನಿಂದೆಯನ್ನನುಭವಿಸುವವರೂ ಆಗಿದ್ದೇವೆ; ಯಾಕಂದರೆ ಎಲ್ಲಾ ಮನುಷ್ಯರಿಗೆ ವಿಶೇಷವಾಗಿ ನಂಬುವವರಿಗೆ ರಕ್ಷಕನಾಗಿರುವ ಜೀವವುಳ್ಳ ದೇವರನ್ನು ನಾವು ನಂಬಿ ದ್ದೇವೆ. |
11. | ಈ ವಿಷಯಗಳನ್ನು ಆಜ್ಞಾಪಿಸಬೇಕು ಮತ್ತು ಬೋಧಿಸಬೇಕು. |
12. | ಯೌವನಸ್ಥನೆಂದು ನಿನ್ನನ್ನು ಅಸಡ್ಡೆ ಮಾಡುವದಕ್ಕೆ ಯಾರಿಗೂ ಅವಕಾಶಕೊಡದೆ ನಂಬು ವವರಿಗೆ ನಡೆ ನುಡಿ ಪ್ರೀತಿ ಆತ್ಮ ನಂಬಿಕೆ ಶುದ್ಧತ್ವದಲ್ಲಿ ನೀನೇ ಮಾದರಿಯಾಗಿರು. |
13. | ನಾನು ಬರುವ ತನಕ ಓದುವದರಲ್ಲಿಯೂ ಎಚ್ಚರಿಸುವದರಲ್ಲಿಯೂ ಬೋಧಿ ಸುವದರಲ್ಲಿಯೂ ಲಕ್ಷ್ಯಕೊಡು. |
14. | ನಿನ್ನಲ್ಲಿರುವ ವರವನ್ನು ಅಲಕ್ಷ್ಯಮಾಡಬೇಡ; ಸಭೆಯ ಹಿರಿಯರು ಪ್ರವಾದನೆಯಿಂದ ನಿನ್ನ ಮೇಲೆ ಹಸ್ತಗಳನ್ನಿಟ್ಟಾಗ ಅದು ನಿನಗೆ ಕೊಡಲ್ಪಟ್ಟಿತಲ್ಲಾ. |
15. | ಈ ವಿಷಯಗಳನ್ನು ಧ್ಯಾನಿಸು ವವನಾಗಿರು; ನಿನ್ನನ್ನು ಸಂಪೂರ್ಣವಾಗಿ ಅವುಗಳಿಗೆ ಒಪ್ಪಿಸಿಕೊಡು; ಹೀಗೆ ನಿನಗಾದ ಲಾಭವು ಎಲ್ಲರಿಗೂ ತೋರಿಬಂದೀತು. |
16. | ನಿನ್ನ ವಿಷಯದಲ್ಲಿಯೂ ಉಪ ದೇಶದ ವಿಷಯದಲ್ಲಿಯೂ ಎಚ್ಚರಿಕೆಯಾಗಿರು. ನೀನು ಇವುಗಳಲ್ಲಿ ನಿರತನಾಗಿರು; ಹೀಗೆ ಮಾಡುವದರಿಂದ ನೀನು ನಿನ್ನನ್ನೂ ನಿನ್ನ ಉಪದೇಶ ಕೇಳುವವರನ್ನೂ ರಕ್ಷಿಸುವಿ. |
← 1Timothy (4/6) → |