← 1Samuel (28/31) → |
1. | ಆ ದಿವಸಗಳಲ್ಲಿ ಏನಾಯಿತಂದರೆ,ಫಿಲಿಷ್ಟಿಯರು ಇಸ್ರಾಯೇಲ್ಯರ ಮೇಲೆ ಯುದ್ಧಮಾಡಲು ತಮ್ಮ ಸೈನ್ಯವನ್ನು ಕೂಡಿಸಿ ಕೊಂಡರು. ಆಗ ಆಕೀಷನು ದಾವೀದನಿಗೆ--ನೀನೂ ನಿನ್ನ ಜನರೂ ಯುದ್ಧವನ್ನು ಮಾಡಲು ನಮ್ಮ ಸಂಗಡ ನಿಶ್ಚಯವಾಗಿ ಬರಬೇಕೆಂದು ತಿಳಿಯಲಿಲ್ಲವೋ ಅಂದನು. |
2. | ದಾವೀದನು ಆಕೀಷನಿಗೆ--ನಿಶ್ಚಯವಾಗಿ ನಿನ್ನ ದಾಸನು ಮಾಡುವದನ್ನು ತಿಳುಕೊಳ್ಳುವಿ ಅಂದನು. ಆಕೀಷನು ದಾವೀದನಿಗೆ--ಎಂದೆಂದಿಗೂ ನಾನು ನಿನ್ನನ್ನು ತಲೆಗಾವಲಿಯವನಾಗಿರಲು ಮಾಡುವೆನು ಅಂದನು. |
3. | ಸಮುವೇಲನು ಸತ್ತು ಹೋಗಿದ್ದನು; ಇಸ್ರಾಯೇ ಲ್ಯರೆಲ್ಲರೂ ಅವನಿಗೋಸ್ಕರ ಗೋಳಾಡಿ ಅವನ ಸ್ವಂತ ಪಟ್ಟಣವಾದ ರಾಮದಲ್ಲಿ ಅವನನ್ನು ಹೂಣಿಟ್ಟಿದ್ದರು. ಇದಲ್ಲದೆ ಸೌಲನು ಯಕ್ಷಿಣಿಗಾರರನ್ನೂ ಮಂತ್ರವಾದಿ ಗಳನ್ನೂ ದೇಶದಲ್ಲಿಂದ ಹೊರಡಿಸಿದ್ದನು. |
4. | ಆಗ ಫಿಲಿಷ್ಟಿ ಯರು ಕೂಡಿಕೊಂಡು ಬಂದು ಶೂನೇಮಿನಲ್ಲಿ ದಂಡಿ ಳಿದರು. ಸೌಲನು ಎಲ್ಲಾ ಇಸ್ರಾಯೇಲ್ಯರನ್ನು ಕೂಡಿಸಿ ಕೊಂಡು ಗಿಲ್ಬೋವದಲ್ಲಿ ದಂಡಿಳಿದನು. |
5. | ಆದರೆ ಸೌಲನು ಫಿಲಿಷ್ಟಿಯರ ದಂಡನ್ನು ನೋಡಿ ಭಯ ಪಟ್ಟನು; ತನ್ನ ಹೃದಯ ಬಹಳ ಹೆದರಿತು. |
6. | ಸೌಲನು ಕರ್ತನನ್ನು ಕೇಳಿಕೊಂಡಾಗ ಕರ್ತನು ಅವನಿಗೆ ಸ್ವಪ್ನಗ ಳಿಂದಲಾದರೂ ಊರೀಮಿನಿಂದಲಾದರೂ ಪ್ರವಾದಿ ಗಳಿಂದಲಾದರೂ ಪ್ರತ್ಯುತ್ತರಕೊಡಲಿಲ್ಲ. |
7. | ಆಗ ಸೌಲನು ತನ್ನ ದಾಸರಿಗೆ--ನಾನು ಅವಳ ಬಳಿಗೆ ಹೋಗಿ ವಿಚಾರಿಸುವ ಹಾಗೆ ಯಕ್ಷಿಣಿಗಾರ್ತೆಯಾದ ಒಬ್ಬ ಸ್ತ್ರೀಯನ್ನು ವಿಚಾರಿಸಿರಿ ಅಂದನು. ಅವನ ದಾಸರು ಅವನಿಗೆ--ಇಗೋ, ಏಂದೋರಿನಲ್ಲಿ ಯಕ್ಷಿಣಿ ಗಾರ್ತೆಯಾದ ಒಬ್ಬ ಸ್ತ್ರೀ ಇದ್ದಾಳೆ ಅಂದರು. |
8. | ಆಗ ಸೌಲನು ತನ್ನನ್ನು ಮರೆಮಾಡಿಕೊಳ್ಳುವಂತೆ ಬದಲು ವಸ್ತ್ರಗಳನ್ನು ಧರಿಸಿ ತನ್ನ ಸಂಗಡ ಇಬ್ಬರು ಮನುಷ್ಯರನ್ನು ಕರಕೊಂಡು ರಾತ್ರಿಯಲ್ಲಿ ಆ ಸ್ತ್ರೀಯ ಬಳಿಗೆ ಬಂದು ಅವಳಿಗೆ--ನೀನು ದಯಮಾಡಿ ನಿನ್ನ ಯಕ್ಷಿಣಿ ವಿದ್ಯೆ ಯಿಂದ ಕಣಿಹೇಳು; ನಾನು ನಿನಗೆ ಹೇಳುವವನನ್ನು ನನಗೆ ಏರಿಬರುವಂತೆ ಮಾಡು ಅಂದನು. |
9. | ಆ ಸ್ತ್ರೀಯು ಅವನಿಗೆ--ಇಗೋ, ಸೌಲನು ಯಕ್ಷಿಣಿಗಾರರನ್ನೂ ಮಂತ್ರಗಾರರನ್ನೂ ದೇಶದಲ್ಲಿಂದ ತೆಗೆದುಬಿಟ್ಟನೆಂದು ನೀನು ಬಲ್ಲೆ. ಈಗ ನಾನು ಸಾಯುವದಕ್ಕೆ ಕಾರಣ ವಾಗುವ ಹಾಗೆ ಯಾಕೆ ನನ್ನ ಪ್ರಾಣಕ್ಕೆ ಉರ್ಲಿಡುತ್ತೀ ಅಂದಳು. |
10. | ಆಗ ಸೌಲನು--ಕರ್ತನ ಜೀವದಾಣೆ, ಈ ಕಾರ್ಯಕ್ಕೋಸ್ಕರ ನಿನಗೆ ದಂಡನೆ ಬಾರದು ಎಂದು ಅವಳಿಗೆ ಕರ್ತನ ಮೇಲೆ ಪ್ರಮಾಣ ಇಟ್ಟನು. |
11. | ಆಗ ಅವಳು--ನಿನಗೆ ನಾನು ಯಾರನ್ನು ಏರಿ ಬರಮಾಡ ಬೇಕು ಅಂದಳು. ಅದಕ್ಕವನು--ಸಮುವೇಲನನ್ನು ನನಗೆ ಏರಿ ಬರಮಾಡು ಅಂದನು. |
12. | ಆ ಸ್ತ್ರೀಯು ಸಮುವೇಲನನ್ನು ಕಂಡಾಗ ಮಹಾ ಶಬ್ದದಿಂದ ಕೂಗಿ ದಳು. ಆ ಸ್ತ್ರೀಯು--ಯಾಕೆ ನನ್ನನ್ನು ಮೋಸ ಮಾಡಿದಿ? ನೀನು ಸೌಲನು ಅಂದಳು. |
13. | ಅರಸನು ಅವಳಿಗೆಭಯಪಡಬೇಡ. ನೀನು ನೋಡಿದ್ದೇನು ಅಂದನು. ಆಗ ಆ ಸ್ತ್ರೀಯು ಸೌಲನಿಗೆ--ದೇವರುಗಳು ಭೂಮಿ ಯೊಳಗಿಂದ ಎದ್ದು ಬರುವದನ್ನು ನೋಡಿದೆನು ಅಂದಳು. |
14. | ಆಗ ಅವನು--ಅವನ ರೂಪವೇನೆಂದು ಅವಳನ್ನು ಕೇಳಿದನು. ಅವಳು--ನಿಲುವಂಗಿಯನ್ನು ಹೊದ್ದಿರುವ ಮುದಿ ಪ್ರಾಯದವನಾದ ಒಬ್ಬ ಮನು ಷ್ಯನು ಏರಿ ಬರುತ್ತಾನೆ ಅಂದಳು. ಆದದರಿಂದ ಅವನು ಸಮುವೇಲನೆಂದು ಸೌಲನು ತಿಳಿದುಕೊಂಡು ಮೋರೆ ಕೆಳಗಾಗಿ ನೆಲದ ಮಟ್ಟಿಗೂ ಬಾಗಿ ಅಡ್ಡಬಿದ್ದನು. |
15. | ಆಗ ಸಮುವೇಲನು ಸೌಲನಿಗೆ--ನೀನು ನನ್ನನ್ನು ಏರಿ ಬರ ಮಾಡಿ ಯಾಕೆ ವಿಶ್ರಾಂತಿಯನ್ನು ಕೆಡಿಸಿದಿ ಅಂದನು. ಅದಕ್ಕೆ ಸೌಲನು--ನಾನು ಬಹಳ ಇಕ್ಕಟ್ಟಿನಲ್ಲಿದ್ದೇನೆ; ಯಾಕಂದರೆ ಫಿಲಿಷ್ಟಿಯರು ನನಗೆ ವಿರೋಧವಾಗಿ ಯುದ್ಧ ಮಾಡುತ್ತಾರೆ; ಆದರೆ ದೇವರು ನನ್ನನ್ನು ಬಿಟ್ಟುಹೋದನು. ಆತನು ಪ್ರವಾದಿಗಳ ಮುಖಾಂತರ ವಾದರೂ ಸ್ವಪ್ನದ ಮುಖಾಂತರವಾದರೂ ನನಗೆ ಪ್ರತ್ಯುತ್ತರಕೊಡಲಿಲ್ಲ; ಆದದರಿಂದ ನಾನು ಮಾಡ ಬೇಕಾದದ್ದನ್ನು ನೀನು ತಿಳಿಸುವ ಹಾಗೆ ನಿನ್ನನ್ನು ಕರೆಸಿದೆನು ಅಂದನು. |
16. | ಸಮುವೇಲನು ಅವನಿಗೆ--ಕರ್ತನು ನಿನ್ನನ್ನು ಬಿಟ್ಟುಹೋಗಿ ನಿನಗೆ ಶತ್ರುವಾಗಿರುವಾಗ ನೀನು ನನ್ನನ್ನು ಕೇಳುವದು ಯಾಕೆ? ಕರ್ತನು ನನ್ನ ಮುಖಾಂತರ ಹೇಳಿದ ಹಾಗೆಯೇ ನಿನಗೆ ಮಾಡಿದ್ದಾನೆ; |
17. | ಕರ್ತನು ರಾಜ್ಯವನ್ನು ನಿನ್ನ ಕೈಯಿಂದ ತೆಗೆದುಕೊಂಡು ಅದನ್ನು ನಿನ್ನ ನೆರೆಯವನಾದ ದಾವೀದನಿಗೆ ಕೊಟ್ಟನು. |
18. | ನೀನು ಕರ್ತನ ಮಾತನ್ನು ಕೇಳದೆ ಅಮಾಲೇಕ್ಯರ ಮೇಲೆ ಇದ್ದ ಆತನ ಉಗ್ರಕೋಪವನ್ನು ತೀರಿಸದೆ ಹೋದದರಿಂದ ಕರ್ತನು ಈ ದಿವಸದಲ್ಲಿ ನಿನಗೆ ಹೀಗೆ ಮಾಡಿದನು. |
19. | ಕರ್ತನು ನಿನ್ನ್ನ ಸಹಿತವಾಗಿ ಇಸ್ರಾಯೇಲ್ಯರನ್ನೂ ಫಿಲಿಷ್ಟಿಯರ ಕೈಯಲ್ಲಿ ಒಪ್ಪಿಸಿ ಕೊಡುವನು. ನಾಳೆ ನೀನೂ ನಿನ್ನ ಕುಮಾರರೂ ನನ್ನ ಸಂಗಡ ಇರುವಿರಿ. ಕರ್ತನು ಇಸ್ರಾಯೇಲ್ ಸೈನ್ಯವನ್ನು ಫಿಲಿಷ್ಟಿಯರ ಕೈಯಲ್ಲಿ ಒಪ್ಪಿಸಿಕೊಡುವನು ಅಂದನು. |
20. | ಆಗ ಸೌಲನು ನೆಲದ ಮೇಲೆ ಬೋರ್ಲ ಬಿದ್ದು ಸಮುವೇಲನ ಮಾತುಗಳಿಗೋಸ್ಕರ ಬಹಳವಾಗಿ ಭಯ ಪಟ್ಟನು. ಆ ದಿನವೆಲ್ಲಾ ಊಟ ಮಾಡದೆ ಇದ್ದದರಿಂದ ಅವನೊಳಗೆ ಶಕ್ತಿ ಇಲ್ಲದೆ ಹೋಯಿತು. |
21. | ಆಗ ಆ ಸ್ತ್ರೀಯು ಅವನ ಬಳಿಗೆ ಬಂದು ಅವನು ಬಹಳ ತಲ್ಲಣ ಪಟ್ಟನೆಂದು ನೋಡಿ ಅವನಿಗೆ--ಇಗೋ, ನಿನ್ನ ದಾಸಿಯಾದ ನಾನು ನಿನ್ನ ಮಾತನ್ನು ಕೇಳಿ ನನ್ನ ಪ್ರಾಣವನ್ನು ನನ್ನ ಕೈಯಲ್ಲಿ ಇಟ್ಟುಕೊಂಡೆನು; ನೀನು ನನಗೆ ಹೇಳಿದ ಮಾತುಗಳನ್ನು ಕೇಳಿದೆನು. |
22. | ಆದದ ರಿಂದ ಈಗ ನೀನು ನಿನ್ನ ದಾಸಿಯ ಮಾತನ್ನು ಕೇಳಿ ನೀನು ಮಾರ್ಗ ಹಿಡಿದು ನಡೆಯುವಾಗ ನಿನಗೆ ಶಕ್ತಿ ಇರುವ ಹಾಗೆ ನಾನು ನಿನ್ನ ಮುಂದೆ ಒಂದು ರೊಟ್ಟಿಯ ತುಂಡನ್ನು ಇರಿಸಲು ನನಗೆ ಅಪ್ಪಣೆ ಕೊಡು; ನೀನು ತಿನ್ನು ಅಂದಳು. |
23. | ಅದಕ್ಕವನು ಒಪ್ಪದೆ--ನಾನು ತಿನ್ನುವದಿಲ್ಲ ಅಂದನು. ಆದರೆ ಅವನ ದಾಸರೂ ಆ ಸ್ತ್ರೀಯೂ ಅವನನ್ನು ಬಲವಂತಮಾಡಿದ್ದರಿಂದ ಅವನು ಅವರ ಮಾತನ್ನು ಕೇಳಿ ನೆಲವನ್ನು ಬಿಟ್ಟು ಎದ್ದು ಮಂಚದ ಮೇಲೆ ಕುಳಿತುಕೊಂಡನು. |
24. | ಆ ಸ್ತ್ರೀಗೆ ಮನೆಯಲ್ಲಿ ಒಂದು ಕೊಬ್ಬಿದ ಕರು ಇತ್ತು; ಅವಳು ಅದನ್ನು ತ್ವರೆಯಾಗಿ ಕೊಯ್ದು, ಹಿಟ್ಟನ್ನು ಹಿಸುಕಿ ಹುಳಿ ಇಲ್ಲದ ರೊಟ್ಟಿಗಳಾಗಿ ಸುಟ್ಟು |
25. | ಸೌಲನ ಮುಂದೆಯೂ ಅವನ ದಾಸರ ಮುಂದೆಯೂ ತಂದಿ ಟ್ಟಳು. ಅವರು ಊಟ ಮಾಡಿ ಎದ್ದು ಆ ರಾತ್ರಿಯಲ್ಲೇ ಹೊರಟುಹೋದರು. |
← 1Samuel (28/31) → |