← 1Samuel (24/31) → |
1. | ಸೌಲನು ಫಿಲಿಷ್ಟಿಯರನ್ನು ಹಿಂದಟ್ಟಿ ತಿರಿಗಿ ಬಂದಾಗ ಇಗೋ, ದಾವೀದನು ಏಂಗೆ ದಿಯ ಅರಣ್ಯದಲ್ಲಿ ಇದ್ದಾನೆಂದು ಅವನಿಗೆ ತಿಳಿಸಲ್ಪಟ್ಟಿತು. |
2. | ಆಗ ಸೌಲನು ಎಲ್ಲಾ ಇಸ್ರಾಯೇಲಿನಲ್ಲಿ ಆದುಕೊಳ್ಳಲ್ಪಟ್ಟ ಮೂರು ಸಾವಿರ ಜನರನ್ನು ತಕ್ಕೊಂಡು ದಾವೀದನನ್ನೂ ಅವನ ಮನುಷ್ಯರನ್ನೂ ಹುಡುಕಲು ಕಾಡು ಮೇಕೆಗಳಿರುವ ಬಂಡೆಗಳಿಗೆ ಹೋದನು. |
3. | ಅವನು ಮಾರ್ಗದಲ್ಲಿ ಕುರಿ ಹಟ್ಟಿಗಳು ಇರುವ ಗವಿಯ ಬಳಿಗೆ ಬಂದು ಅದರಲ್ಲಿ ಅವನು ತನ್ನ ಕಾಲುಗಳನ್ನು ಮುಚ್ಚಿಕೊಳ್ಳಲು ಪ್ರವೇಶಿಸಿದನು. ಆದರೆ ದಾವೀದನೂ ಅವನ ಮನುಷ್ಯರೂ ಆ ಗವಿಯ ಪಕ್ಕ ದಲ್ಲಿ ಇದ್ದರು. |
4. | ದಾವೀದನ ಜನರು ಅವನಿಗೆ--ಇಗೋ, ನಾನು ನಿನ್ನ ಶತ್ರುವನ್ನು ನಿನ್ನ ಕಣ್ಣುಗಳಿಗೆ ಸರಿತೋರುವ ಹಾಗೆ ಮಾಡುವದಕ್ಕೆ ಅವನನ್ನು ನಿನ್ನ ಕೈಯಲ್ಲಿ ಒಪ್ಪಿಸಿಕೊಡುವೆನೆಂದು ಕರ್ತನು ನಿನಗೆ ಹೇಳಿದ ದಿವಸವು ಇದೇ ಅಂದರು. ಆಗ ದಾವೀದನು ಎದ್ದು ಹೋಗಿ ಏಕಾಂತವಾಗಿ ಸೌಲನ ನಿಲುವಂಗಿಯ ಅಂಚನ್ನು ಕತ್ತರಿಸಿಕೊಂಡನು. |
5. | ಹಾಗೆ ಮಾಡಿದ ಮೇಲೆ ಅವನು ಸೌಲನ ನಿಲುವಂಗಿಯ ಅಂಚನ್ನು ಕತ್ತರಿಸಿ ಕೊಂಡದ್ದರಿಂದ ದಾವೀದನ ಹೃದಯವು ಬಡು ಕೊಂಡಿತು. |
6. | ಅವನು ತನ್ನ ಮನುಷ್ಯರಿಗೆ--ಅವನು ಕರ್ತನ ಅಭಿಷಿಕ್ತನಾದದ್ದರಿಂದ ನನ್ನ ಕೈ ಅವನಿಗೆ ವಿರೋಧವಾಗಿ ಚಾಚಿ ಕರ್ತನಿಂದ ಅಭಿಷಿಕ್ತನಾದ ನನ್ನ ಒಡೆಯನಿಗೆ ಈ ಕಾರ್ಯಮಾಡುವದನ್ನು ಕರ್ತನು ತಡೆಯಲಿ ಅಂದನು. |
7. | ಹೀಗೆಯೇ ದಾವೀದನು ತನ್ನ ಮನುಷ್ಯರನ್ನು ಸೌಲನ ಮೇಲೆ ಬೀಳಗೊಡದೆ ಈ ಮಾತುಗಳಿಂದ ಅವರನ್ನು ತಡೆದನು. ಆದರೆ ಸೌಲನು ಎದ್ದು ಗವಿಯನ್ನು ಬಿಟ್ಟು ತನ್ನ ಮಾರ್ಗವಾಗಿ ಹೊರಟು ಹೋದನು. |
8. | ತರುವಾಯ ದಾವೀದನು ಎದ್ದು ಗವಿ ಯಿಂದ ಹೊರಟು ಸೌಲನ ಹಿಂದೆ--ಅರಸನಾದ ನನ್ನ ಒಡೆಯನೇ ಎಂದು ಕೂಗಿದನು. ಸೌಲನು ಹಿಂದಿರುಗಿ ನೋಡಿದಾಗ ದಾವೀದನು ನೆಲದ ವರೆಗೆ ಬೊಗ್ಗಿ ವಂದಿಸಿದನು. |
9. | ದಾವೀದನು ಸೌಲನಿಗೆ--ಇಗೋ, ದಾವೀದನು ನಿನಗೆ ಕೇಡುಮಾಡ ಹುಡುಕು ತ್ತಾನೆಂದು ಹೇಳುವ ಮನುಷ್ಯರ ಮಾತುಗಳನ್ನು ಯಾಕೆ ಕೇಳುತ್ತಿದ್ದೀ? |
10. | ಇಗೋ, ಕರ್ತನು ಈ ಹೊತ್ತು ಗವಿಯಲ್ಲಿ ನಿನ್ನನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಟ್ಟನೆಂಬದನ್ನು ಈ ದಿನ ನಿನ್ನ ಕಣ್ಣುಗಳು ನೋಡಿದವು. ಕೆಲವರು ನಿನ್ನನ್ನು ಕೊಂದುಹಾಕಲು ಹೇಳಿದರು; ಆದರೆ ನನ್ನ ಕಣ್ಣು ನಿನ್ನನ್ನು ಕರುಣಿಸಿತು; ನಾನು--ಅವನು ಕರ್ತನ ಅಭಿಷಿಕ್ತನಾದದರಿಂದ ನನ್ನ ಕೈ ನನ್ನ ಒಡೆಯನಿಗೆ ವಿರೋಧವಾಗಿ ಚಾಚೆನು ಅಂದೆನು. |
11. | ಇದಲ್ಲದೆ ನನ್ನ ತಂದೆಯೇ, ನೋಡು; ಹೌದು, ನನ್ನ ಕೈಯಲ್ಲಿರುವ ನಿನ್ನ ನಿಲುವಂಗಿಯ ಅಂಚನ್ನು ನೋಡು. ನಾನು ನಿನ್ನನ್ನು ಕೊಂದುಹಾಕದೆ ನಿನ್ನ ನಿಲುವಂಗಿಯ ಅಂಚನ್ನು ಕತ್ತರಿಸಿಕೊಂಡದ್ದರಿಂದ ನನ್ನಲ್ಲಿ ಕೆಟ್ಟತನವು ದ್ರೋಹವು ಇಲ್ಲವೆಂದು ನಾನು ನಿನಗೆ ವಿರೋಧವಾಗಿ ಪಾಪಮಾಡ ಲಿಲ್ಲವೆಂದೂ ತಿಳಿದುಕೊಂಡು ನೋಡು. ಹೀಗಿದ್ದರೂ ನೀನು ನನ್ನ ಪ್ರಾಣವನ್ನು ತೆಗೆಯಲು ಬೇಟೆಯಾಡುತ್ತೀ. |
12. | ಕರ್ತನು ನನ್ನ ನಿನ್ನ ಮಧ್ಯದಲ್ಲಿ ನ್ಯಾಯತೀರಿಸಲಿ, ಕರ್ತನು ತಾನೇ ನನಗೋಸ್ಕರ ನಿನ್ನ ವಿಷಯ ಮುಯ್ಯಿಗೆ ಮುಯ್ಯಿ ಮಾಡಲಿ; ಆದರೆ ನನ್ನ ಕೈ ನಿನ್ನ ಮೇಲೆ ಇರುವದಿಲ್ಲ. |
13. | ಪೂರ್ವಿಕರು ಹೇಳಿದ ಸಾಮತಿಯ ಪ್ರಕಾರ ದುಷ್ಟರಿಂದ ದುಷ್ಟತ್ವವು ಹುಟ್ಟುವದು. ಆದರೂ ನನ್ನ ಕೈ ನಿನ್ನ ಮೇಲೆ ಇರುವದಿಲ್ಲ. |
14. | ಇಸ್ರಾಯೇಲಿನ ಅರಸನು ಯಾರನ್ನು ಬೆನ್ನಟ್ಟಿ ಹೊರಟನು? ಯಾರನ್ನು ನೀನು ಹಿಂದಟ್ಟುತ್ತೀ? ಸತ್ತನಾಯಿಯನ್ನೇ? ಒಂದು ಕೀಟವನ್ನೇ? |
15. | ಕರ್ತನು ನ್ಯಾಯಾಧಿಪತಿಯಾಗಿದ್ದು ನನಗೂ ನಿನಗೂ ನ್ಯಾಯತೀರಿಸಿ ನನ್ನ ವ್ಯಾಜ್ಯವನ್ನು ನೋಡಿ ವ್ಯಾಜ್ಯವಾಡಿ ನನ್ನನ್ನು ನಿನ್ನ ಕೈಗೆ ತಪ್ಪಿಸಿಬಿಡಲಿ ಅಂದನು. |
16. | ದಾವೀದನು ಈ ಮಾತುಗಳನ್ನು ಸೌಲನಿಗೆ ಹೇಳಿ ತೀರಿಸಿದಾಗ ಸೌಲನು--ನನ್ನ ಕುಮಾರನಾದ ದಾವೀದನೇ, ಇದು ನಿನ್ನ ಸ್ವರವಲ್ಲವೋ ಅಂದನು; ಸೌಲನು ಸ್ವರವೆತ್ತಿ ಗಟ್ಟಿಯಾಗಿ ಅತ್ತನು. |
17. | ದಾವೀದನಿಗೆ--ನೀನು ನನಗಿಂತ ನೀತಿವಂತನು; ನೀನು ನನಗೆ ಒಳ್ಳೇದನ್ನು ಮಾಡಿದಿ; ಆದರೆ ನಾನು ನಿನಗೆ ಕೇಡನ್ನು ಮಾಡಿದೆನು. |
18. | ಕರ್ತನು ನನ್ನನ್ನು ನಿನ್ನ ಕೈಯಲ್ಲಿ ಒಪ್ಪಿಸಿ ಕೊಟ್ಟಾಗ ನೀನು ನನ್ನನ್ನು ಕೊಂದುಹಾಕದೆ ಇದದ್ದ ರಿಂದ ನೀನು ನನಗೆ ಉಪಕಾರಮಾಡಿದ್ದನ್ನು ಈ ಹೊತ್ತು ತೋರಿಸಿದಿ. |
19. | ಯಾವನಾದರೂ ತನ್ನ ಶತ್ರು ವನ್ನು ಹಿಡಿದುಕೊಂಡರೆ ಅವನನ್ನು ಸುರಕ್ಷಿತವಾಗಿ ಬಿಟ್ಟುಬಿಡುವನೋ? ಆದದರಿಂದ ಈ ಹೊತ್ತು ನೀನು ನನಗೆ ಮಾಡಿದ್ದಕ್ಕೆ ಬದಲಾಗಿ ದೇವರು ನಿನಗೆ ಒಳ್ಳೇ ದನ್ನು ಮಾಡಲಿ. |
20. | ಇಗೋ, ನೀನು ನಿಶ್ಚಯವಾಗಿ ಅರಸನಾಗುವಿ ಎಂದೂ ಇಸ್ರಾಯೇಲಿನ ರಾಜ್ಯವು ನಿನ್ನ ಕೈಯಲ್ಲಿ ಸ್ಥಿರಮಾಡಲ್ಪಡುವದೆಂದೂ ನಾನು ಚೆನ್ನಾಗಿ ಬಲ್ಲೆನು. |
21. | ಆದದರಿಂದ ನೀನು ನನ್ನ ತರುವಾಯ ನನ್ನ ಸಂತಾನವನ್ನು ನಿರ್ಮೂಲ ಮಾಡುವದಿಲ್ಲವೆಂದೂ ನನ್ನ ತಂದೆಯ ಮನೆಯಲ್ಲಿ ನನ್ನ ಹೆಸರನ್ನು ನಾಶ ಮಾಡುವದಿಲ್ಲವೆಂದೂ ನನಗೆ ಕರ್ತನ ಹೆಸರಿನಿಂದ ಪ್ರಮಾಣಮಾಡು ಅಂದನು. |
22. | ಹಾಗೆಯೇ ದಾವೀ ದನು ಸೌಲನಿಗೆ ಪ್ರಮಾಣಮಾಡಿದನು. ಆಗ ಸೌಲನು ತನ್ನ ಮನೆಗೆ ಹೋದನು. ಆದರೆ ದಾವೀದನೂ ಅವನ ಜನರೂ ಭದ್ರವಾದ ಸ್ಥಳಕ್ಕೆ ಏರಿ ಹೋದರು. |
← 1Samuel (24/31) → |