← 1Samuel (23/31) → |
1. | ಇಗೋ, ಫಿಲಿಷ್ಟಿಯರು ಕೆಯಾಲಾಕ್ಕೆ ವಿರೋಧವಾಗಿ ಯುದ್ಧಮಾಡಿ ಕಣಗಳನ್ನು ಕೊಳ್ಳೆಮಾಡುತ್ತಿದ್ದಾರೆಂದು ದಾವೀದನಿಗೆ ತಿಳಿಸಿದರು. |
2. | ಆದದರಿಂದ ದಾವೀದನು--ನಾನು ಈ ಫಿಲಿಷ್ಟಿ ಯರನ್ನು ಹೊಡೆಯಲು ಹೋಗಲೋ ಎಂದು ಕರ್ತ ನನ್ನು ಕೇಳಿದನು; ಅದಕ್ಕೆ ಕರ್ತನು--ನೀನು ಹೋಗಿ ಫಿಲಿಷ್ಟಿಯರನ್ನು ಹೊಡೆದು ಕೆಯಾಲಾವನ್ನು ರಕ್ಷಿಸು ಅಂದನು. |
3. | ಆಗ ದಾವೀದನ ಮನುಷ್ಯರು ಅವನಿಗೆಇಗೋ, ನಾವು ಇಲ್ಲಿ ಯೆಹೂದದಲ್ಲಿರುವಾಗಲೇ ಭಯಪಡುತ್ತೇವೆ; ಆದರೆ ನಾವು ಫಿಲಿಷ್ಟಿಯರ ಸೈನ್ಯ ಗಳಿಗೆ ವಿರೋಧವಾಗಿ ಕೆಯಾಲಾಕ್ಕೆ ಹೋದರೆ ಎಷ್ಟು ಅಧಿಕವಾದ ಭಯವಾಗುವದು ಅಂದರು. |
4. | ದಾವೀ ದನು ತಿರಿಗಿ ಕರ್ತನನ್ನು ಕೇಳಿದನು. ಅದಕ್ಕೆ ಕರ್ತನು ಪ್ರತ್ಯುತ್ತರವಾಗಿ--ನೀನೆದ್ದು ಕೆಯಾಲಾಕ್ಕೆ ಹೋಗು; ನಾನು ಫಿಲಿಷ್ಟಿಯರನ್ನು ನಿನ್ನ ಕೈಯಲ್ಲಿ ಒಪ್ಪಿಸಿಕೊಡು ವೆನು ಅಂದನು. |
5. | ಹಾಗೆಯೇ ದಾವೀದನೂ ತನ್ನ ಮನುಷ್ಯರೂ ಕೆಯಾಲಾಕ್ಕೆ ಹೋಗಿ ಫಿಲಿಷ್ಟಿಯರ ಸಂಗಡ ಯುದ್ಧಮಾಡಿ ಅವರ ದನಗಳನ್ನು ಹಿಡುಕೊಂಡು ಬಂದು ಅವರನ್ನು ಪೂರ್ಣವಾಗಿ ಸಂಹರಿಸಿದನು. ಈ ಪ್ರಕಾರ ದಾವೀದನು ಕೆಯಾಲಾದ ನಿವಾಸಿಗಳನ್ನು ರಕ್ಷಿಸಿದನು. |
6. | ಆದರೆ ಅಹೀಮೆಲೆಕನ ಮಗನಾದ ಎಬ್ಯಾತಾರನು ಕೆಯಾಲಾದಲ್ಲಿ ಇರುವ ದಾವೀದನ ಬಳಿಗೆ ಓಡಿಬಂದಾಗ ಅವನ ಕೈಯಲ್ಲಿ ಎಫೋದು ಇತ್ತು. |
7. | ದಾವೀದನು ಕೆಯಾಲಾಕ್ಕೆ ಬಂದಿದ್ದಾನೆಂದು ಸೌಲನಿಗೆ ತಿಳಿಸಲ್ಪಟ್ಟಾಗ ಸೌಲನು--ದೇವರು ಅವನನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಟ್ಟನು, ಯಾಕಂದರೆ ಅವನು ಬಾಗಲುಗಳೂ ಅಗುಳಿಗಳೂ ಇರುವ ಪಟ್ಟಣದ ಒಳಗೆ ಪ್ರವೇಶಿಸಿದ್ದರಿಂದ ಮುಚ್ಚಲ್ಪಟ್ಟಿ ದ್ದಾನೆ ಅಂದುಕೊಂಡನು. |
8. | ಸೌಲನು ದಾವೀದನನ್ನೂ ಅವನ ಮನುಷ್ಯರನ್ನೂ ಮುತ್ತಿಕೊಳ್ಳುವ ಹಾಗೆ ತನ್ನವರನೆಲ್ಲಾ ಕೆಯಾಲಾಕ್ಕೆ ಯುದ್ಧಕ್ಕೆ ಹೋಗಲು ಕರೆದನು. |
9. | ಸೌಲನು ತನಗೆ ಕೇಡನ್ನು ಮಾಡಲು ಗುಟ್ಟಾಗಿ ಯೋಚಿಸುತ್ತಿದ್ದಾನೆಂದು ದಾವೀದನು ತಿಳಿದಿ ದ್ದರಿಂದ ಯಾಜಕನಾದ ಎಬ್ಯಾತಾರನಿಗೆ--ಎಫೋದನ್ನು ಇಲ್ಲಿಗೆ ತಕ್ಕೊಂಡು ಬಾ ಅಂದನು. |
10. | ದಾವೀದನುಓ ಇಸ್ರಾಯೇಲ್ ದೇವರಾದ ಕರ್ತನೇ, ಸೌಲನು ಕೆಯಾಲಾಕ್ಕೆ ಬಂದು ನನ್ನ ನಿಮಿತ್ತ ಪಟ್ಟಣವನ್ನು ಕೆಡಿಸಲು ಹುಡುಕುತ್ತಿದ್ದಾನೆಂದು ನಿನ್ನ ಸೇವಕನು ಖಂಡಿತವಾಗಿ ಕೇಳಿದನು. |
11. | ಕೆಯಾಲಾ ಪಟ್ಟಣದವರು ನನ್ನನ್ನು ಅವನ ಕೈಯಲ್ಲಿ ಒಪ್ಪಿಸಿಕೊಡುವರೋ? ನಿನ್ನ ಸೇವಕನು ಕೇಳಿದ ಹಾಗೆ ಸೌಲನು ಇಲ್ಲಿಗೆ ಬರುವನೋ? ಇಸ್ರಾಯೇಲಿನ ದೇವರಾದ ಕರ್ತನೇ, ದಯ ಮಾಡಿ ಇದನ್ನು ನಿನ್ನ ಸೇವಕನಿಗೆ ತಿಳಿಸು ಅಂದನು. ಅದಕ್ಕೆ ಕರ್ತನು--ಅವನು ಬರುವನು ಅಂದನು. |
12. | ಕೆಯಾಲಾ ಪಟ್ಟಣದವರು ನನ್ನನ್ನು ನನ್ನ ಜನರನ್ನು ಸೌಲನ ಕೈಯಲ್ಲಿ ಒಪ್ಪಿಸಿಕೊಡುವರೋ ಎಂದು ದಾವೀದನು ಕೇಳಿದಾಗ ಕರ್ತನು--ಅವರು ಒಪ್ಪಿಸಿ ಕೊಡುವರು ಅಂದನು. |
13. | ಆದದರಿಂದ ದಾವೀದನು ಹೆಚ್ಚು ಕಡಿಮೆ ಆರು ನೂರು ಮಂದಿಯಾದ ತನ್ನ ಜನರು ಎದ್ದು ಕೆಯಾಲಾವನ್ನು ಬಿಟ್ಟು ಹೊರಟು ತಾವು ಹೋಗಬೇಕಾದಲ್ಲಿಗೆ ಹೋದರು. ದಾವೀದನು ಕೆಯಾಲಾದಿಂದ ತಪ್ಪಿಸಿಕೊಂಡು ಹೋದನೆಂದು ಸೌಲನಿಗೆ ತಿಳಿಸಲ್ಪಟ್ಟಾಗ ಅವನು ಹೊರಡುವದನ್ನು ನಿಲ್ಲಿಸಿಬಿಟ್ಟನು. |
14. | ದಾವೀದನು ಅರಣ್ಯದಲ್ಲಿರುವ ಬಲವಾದ ಕೋಟೆಗಳಲ್ಲಿಯೂ ಜೀಫ್ ಎಂಬ ಅರಣ್ಯದ ಬೆಟ್ಟದ ಲ್ಲಿಯೂ ವಾಸವಾಗಿದ್ದನು. ಸೌಲನು ದಿನಾಲು ಅವ ನನ್ನು ಹುಡುಕುತ್ತಿದ್ದನು; ಆದರೆ ದೇವರು ಅವನನ್ನು ಅವನ ಕೈಯಲ್ಲಿ ಒಪ್ಪಿಸಿಕೊಡಲಿಲ್ಲ. |
15. | ತನ್ನ ಪ್ರಾಣವನ್ನು ಹುಡುಕುವದಕ್ಕೆ ಸೌಲನು ಹೊರಟನೆಂದು ದಾವೀದನು ತಿಳಿದಾಗ ತಾನು ಜೀಫ್ ಎಂಬ ಅಡವಿಯೊಳಗೆ ಅರಣ್ಯದ ಒಂದು ಸ್ಥಳದಲ್ಲಿದ್ದನು. |
16. | ಆಗ ಸೌಲನ ಮಗನಾದ ಯೋನಾತಾನನು ಎದ್ದು ಅರಣ್ಯದಲ್ಲಿರುವ ದಾವೀದನ ಬಳಿಗೆ ಹೋಗಿ ದೇವರಲ್ಲಿ ಅವನ ಕೈಯನ್ನು ಬಲಪಡಿಸಿ ಅವನಿಗೆ--ಭಯಪಡಬೇಡ; |
17. | ನನ್ನ ತಂದೆಯಾದ ಸೌಲನ ಕೈ ನಿನ್ನನ್ನು ಹಿಡಿಯುವದಿಲ್ಲ. ನೀನು ಇಸ್ರಾಯೇಲಿನ ಮೇಲೆ ಅರಸನಾಗಿರುವಿ; ನಾನು ನಿನ್ನ ತರುವಾಯ ಇರುವೆನು. ಹೀಗೆ ಆಗುವದೆಂದು ನನ್ನ ತಂದೆಯಾದ ಸೌಲನು ಸಹ ತಿಳಿದಿದ್ದಾನೆ ಅಂದನು. |
18. | ಅವರಿಬ್ಬರೂ ಕರ್ತನ ಮುಂದೆ ಒಡಂಬಡಿಕೆಯನ್ನು ಮಾಡಿಕೊಂಡರು. ದಾವೀದನು ಅರಣ್ಯದಲ್ಲೇ ಉಳಿದನು; ಆದರೆ ಯೋನಾತಾನನು ತನ್ನ ಮನೆಗೆ ಹೋದನು. |
19. | ಜೀಫ್ಯರು ಗಿಬೆಯಲ್ಲಿದ್ದ ಸೌಲನ ಬಳಿಗೆ ಬಂದುದಾವೀದನು ನಮ್ಮ ಪಕ್ಷವಾಗಿಯೇ ಯೆಷಿಮೋನಿನ ದಕ್ಷಿಣದಲ್ಲಿ ಹಕೀಲಾ ಗುಡ್ಡದಲ್ಲಿರುವ ಘೋರಾರಣ್ಯ ದಲ್ಲಿ ನಮ್ಮೊಂದಿಗೆ ಅಡಗಿಕೊಂಡಿದ್ದಾನಲ್ಲವೇ? |
20. | ಅರಸನೇ, ನೀನು ನಿನ್ನ ಪ್ರಾಣದ ಇಚ್ಛೆ ಇದ್ದ ಹಾಗೆ ಇಳಿದು ಬಾ; ಅವನನ್ನು ಅರಸನ ಕೈಯಲ್ಲಿ ಒಪ್ಪಿಸಿಕೊಡುವ ಭಾರವು ನಮ್ಮದು ಅಂದರು. |
21. | ಆಗ ಸೌಲನು--ನೀವು ನನ್ನ ಮೇಲೆ ಕನಿಕರಪಟ್ಟ ಕಾರಣ ಕರ್ತನಿಂದ ನಿಮಗೆ ಆಶೀರ್ವಾದವಾಗಲಿ. |
22. | ನೀವು ದಯಮಾಡಿ ಹೋಗಿ ಅವನ ಹೆಜ್ಜೆ ಇಡುವ ಸ್ಥಳವನ್ನೂ ಅಲ್ಲಿ ಅವನನ್ನು ನೋಡಿದವರು ಯಾರು ಎಂಬದನ್ನೂ ಇನ್ನೂ ಸೂಕ್ಷ್ಮವಾಗಿ ತಿಳುಕೊಂಡು ನೋಡಿರಿ; |
23. | ಅವನು ಬಹು ಉಪಾಯದಿಂದ ಪ್ರವರ್ತಿಸುತ್ತಾ ನೆಂದು ನನಗೆ ಹೇಳುತ್ತಾರೆ. ಅವನು ಅಡಗಿಕೊಂಡಿರುವ ಎಲ್ಲಾ ರಹಸ್ಯ ಸ್ಥಳಗಳನ್ನು ನೋಡಿ ತಿಳುಕೊಂಡು ನಿಜವಾದ ವರ್ತಮಾನವನ್ನು ನನ್ನ ಬಳಿಗೆ ತಕ್ಕೊಂಡು ಬನ್ನಿರಿ; ಆಗ ನಾನು ನಿಮ್ಮ ಸಂಗಡ ಬಂದು ಅವನು ದೇಶದಲ್ಲಿದ್ದರೆ ಯೆಹೂದದ ಸಹಸ್ರಗಳಲ್ಲಿ ಅವನನ್ನು ಹುಡುಕ ಹೋಗುವೆನು ಅಂದನು. |
24. | ಆದದರಿಂದ ಅವರು ಎದ್ದು ಸೌಲನ ಮುಂದೆ ಜೀಫಕ್ಕೆ ಹೊರಟು ಹೋದರು. ಆದರೆ ದಾವೀದನೂ ಅವನ ಜನರೂ ಯೆಷಿಮೋನಿನ ದಕ್ಷಿಣ ದಿಕ್ಕಿನ ಬೈಲಲ್ಲಿರುವ ಮಾವೋನಿನ ಅರಣ್ಯದಲ್ಲಿದ್ದರು. |
25. | ಸೌಲನೂ ಅವನ ಮನುಷ್ಯರೂ ಅವನನ್ನು ಹುಡುಕಲು ಬಂದರು. ಇದು ದಾವೀದನಿಗೆ ತಿಳಿಸಲ್ಪಟ್ಟಾಗ ಅವನು ಬಂಡೆಗೆ ಇಳಿದು ಮಾವೋನಿನ ಅರಣ್ಯದಲ್ಲಿ ವಾಸಿಸಿದನು. ಅದನ್ನು ಸೌಲನು ಕೇಳಿ ಮಾವೋನಿನ ಅರಣ್ಯದಲ್ಲಿ ದಾವೀದ ನನ್ನು ಹಿಂದಟ್ಟಿದನು. |
26. | ಸೌಲನು ಬೆಟ್ಟದ ಇನ್ನೊಂದು ಕಡೆಯಲ್ಲಿ ಹೋದನು; ದಾವೀದನೂ ಅವನ ಜನರೂ ಬೆಟ್ಟದ ಆ ಕಡೆಯಲ್ಲಿ ಹೋದರು; ಸೌಲನಿಗೆ ಭಯ ಪಟ್ಟು ತಪ್ಪಿಸಿಕೊಂಡು ಹೋಗಲು ದಾವೀದನು ತ್ವರೆ ಮಾಡುವಾಗ ಸೌಲನೂ ಅವನ ಮನುಷ್ಯರೂ ಹಿಡಿ ಯುವ ಹಾಗೆ ಅವರನ್ನು ಸುತ್ತಿಕೊಂಡರು. |
27. | ಆದರೆ ಒಬ್ಬ ದೂತನು ಸೌಲನ ಬಳಿಗೆ ಬಂದು--ನೀನು ತ್ವರೆಯಾಗಿ ಬಾ; ಯಾಕಂದರೆ ಫಿಲಿಷ್ಟಿಯರು ದೇಶದ ಮೇಲೆ ದಂಡೆತ್ತಿ ಬಂದಿದ್ದಾರೆ ಅಂದನು. |
28. | ಸೌಲನು ದಾವೀದನನ್ನು ಹಿಂದಟ್ಟುವದನ್ನು ಬಿಟ್ಟು ಫಿಲಿಷ್ಟಿಯ ರಿಗೆ ಎದುರಾಗಿ ಹೋದನು. ಆದಕಾರಣ ಆ ಸ್ಥಳಕ್ಕೆ ಶಿಲಾಹಮಹ್ಲೆಕೋತ್ ಎಂದು ಹೆಸರಿಟ್ಟರು. |
29. | ದಾವೀದನು ಆ ಸ್ಥಳವನ್ನು ಬಿಟ್ಟುಹೋಗಿ ಏಂಗೆದಿ ಯಲ್ಲಿರುವ ಬಲವಾದ ಗವಿಗಳಲ್ಲಿ ವಾಸಿಸಿದನು. |
← 1Samuel (23/31) → |