← 1John (2/5) → |
1. | ನನ್ನ ಚಿಕ್ಕಮಕ್ಕಳೇ, ನೀವು ಪಾಪಮಾಡ ದಂತೆ ಇವುಗಳನ್ನು ನಾನು ನಿಮಗೆ ಬರೆಯು ತ್ತೇನೆ. ಯಾವನಾದರೂ ಪಾಪಮಾಡಿದರೆ ತಂದೆಯ ಬಳಿಯಲ್ಲಿ ನೀತಿವಂತನಾದ ಯೇಸು ಕ್ರಿಸ್ತನು ನಮಗೆ ಪಕ್ಷವಾದಿಯಾಗಿದ್ದಾನೆ. |
2. | ಆತನು ನಮ್ಮ ಪಾಪಗಳಿಗಾಗಿ ಪ್ರಾಯಶ್ಚಿತ್ತವಾಗಿದ್ದಾನೆ; ನಮ್ಮ ಪಾಪಗಳಿಗೆ ಮಾತ್ರ ವಲ್ಲದೆ ಸಮಸ್ತ ಲೋಕದ ಪಾಪಗಳಿಗಾಗಿಯೂ ಪ್ರಾಯಶ್ಚಿತ್ತವಾಗಿದ್ದಾನೆ. |
3. | ನಾವು ಆತನ ಆಜ್ಞೆಗಳನ್ನು ಕೈಕೊಂಡು ನಡೆಯು ವದರಿಂದಲೇ ಆತನನ್ನು ಬಲ್ಲವರಾಗಿದ್ದೇವೆಂದು ತಿಳು ಕೊಳ್ಳುತ್ತೇವೆ. |
4. | ಒಬ್ಬನು--ನಾನು ಆತನನ್ನು ಬಲ್ಲೆನೆಂದು ಹೇಳಿ ಆತನ ಆಜ್ಞೆಗಳನ್ನು ಕೈಕೊಳ್ಳದಿದ್ದರೆ ಅವನು ಸುಳ್ಳುಗಾರನಾಗಿದ್ದಾನೆ; ಸತ್ಯವು ಅವನಲ್ಲಿ ಇಲ್ಲ. |
5. | ಯಾವನಾದರೂ ಆತನ ವಾಕ್ಯವನ್ನು ಕೈಕೊಂಡು ನಡೆದರೆ ಅವನಲ್ಲಿ ನಿಜವಾಗಿ ದೇವರ ಪ್ರೀತಿಯು ಪರಿಪೂರ್ಣವಾಗಿದೆ. ಇದರಿಂದಲೇ ನಾವು ಆತನಲ್ಲಿ ದ್ದೇವೆಂಬದನ್ನು ತಿಳುಕೊಳ್ಳುತ್ತೇವೆ. |
6. | ಆತನಲ್ಲಿ ನೆಲೆ ಗೊಂಡವನಾಗಿದ್ದೇನೆಂದು ಹೇಳುವವನು ಆತನು ನಡೆ ದಂತೆಯೇ ತಾನೂ ನಡೆಯುವದಕ್ಕೆ ಬದ್ಧನಾಗಿದ್ದಾನೆ. |
7. | ಸಹೋದರರೇ, ನಾನು ನಿಮಗೆ ಬರೆಯುವದು ಹೊಸ ಅಪ್ಪಣೆಯಲ್ಲ, ಮೊದಲಿನಿಂದಲೂ ನಿಮಗಿದ್ದ ಹಳೆಯ ಅಪ್ಪಣೆಯಾಗಿದೆ; ಈ ಹಳೆಯ ಅಪ್ಪಣೆಯು ಮೊದಲಿನಿಂದಲೂ ನೀವು ಕೇಳಿದ ವಾಕ್ಯವೇ. |
8. | ತಿರಿಗಿ ನಾನು ನಿಮಗೆ ಬರೆಯುವದು ಹೊಸ ಅಪ್ಪಣೆಯೇ; ಇದು ಆತನಲ್ಲಿಯೂ ನಿಮ್ಮಲ್ಲಿಯೂ ಸತ್ಯವಾಗಿದೆ; ಯಾಕಂದರೆ ಕತ್ತಲೆಯು ಕಳೆದುಹೋಗುತ್ತದೆ.ನಿಜವಾದ ಬೆಳಕು ಈಗ ಪ್ರಕಾಶಿಸುತ್ತಲಿದೆ. |
9. | ಬೆಳಕಿನಲ್ಲಿದ್ದೇನೆಂದು ಹೇಳಿಕೊಂಡು ತನ್ನ ಸಹೋದರನನ್ನು ದ್ವೇಷಿಸುವವನು ಈವರೆಗೂ ಕತ್ತಲೆಯಲ್ಲಿದ್ದಾನೆ. |
10. | ತನ್ನ ಸಹೋದರನನ್ನು ಪ್ರೀತಿಸುವವನು ಬೆಳಕಿನಲ್ಲಿ ನೆಲೆಗೊಂಡಿದ್ದಾನೆ ಮತ್ತು ಅವನಲ್ಲಿ ಆಟಂಕವಾದದ್ದು ಏನೂ ಇಲ್ಲ. |
11. | ಆದರೆ ತನ್ನ ಸಹೋದರನನ್ನು ದ್ವೇಷಿಸುವವನು ಕತ್ತಲೆಯಲ್ಲಿ ದ್ದಾನೆ ಮತ್ತು ಕತ್ತಲೆಯಲ್ಲಿ ನಡೆದುಕೊಳ್ಳುತ್ತಾನೆ. ಕತ್ತಲೆಯು ಅವನ ಕಣ್ಣುಗಳನ್ನು ಕುರುಡು ಮಾಡಿದ್ದರಿಂದ ತಾನು ಎಲ್ಲಿಗೆ ಹೋಗುತ್ತಾನೋ ಎಂದು ಅವನಿಗೆ ತಿಳಿಯದು. |
12. | ಚಿಕ್ಕ ಮಕ್ಕಳೇ, ಆತನ ಹೆಸರಿನ ನಿಮಿತ್ತ ನಿಮ್ಮ ಪಾಪಗಳು ಕ್ಷಮಿಸಲ್ಪಟ್ಟಿರುವದರಿಂದ ನಾನು ನಿಮಗೆ ಬರೆಯುತ್ತೇನೆ. |
13. | ತಂದೆಗಳೇ, ಆದಿಯಿಂದಿರುವಾತ ನನ್ನು ನೀವು ಬಲ್ಲವರಾಗಿರುವದರಿಂದ ನಾನು ನಿಮಗೆ ಬರೆಯುತ್ತೇನೆ; ಯೌವನಸ್ಥರೇ, ನೀವು ಕೆಡುಕನನ್ನು ಜಯಿಸಿರುವದರಿಂದ ನಿಮಗೆ ಬರೆಯುತ್ತೇನೆ; ಚಿಕ್ಕ ಮಕ್ಕಳಿರಾ, ನೀವು ತಂದೆಯನ್ನು ಬಲ್ಲವರಾಗಿರುವದ ರಿಂದ ನಿಮಗೆ ಬರೆಯುತ್ತೇನೆ. |
14. | ತಂದೆಗಳೇ, ಆದಿ ಯಿಂದಿರುವಾತನನ್ನು ನೀವು ಬಲ್ಲವರಾಗಿರುವದರಿಂದ ನಿಮಗೆ ಬರೆದಿದ್ದೇನೆ. ಯೌವನಸ್ಥರೇ, ನೀವು ಶಕ್ತರಾಗಿ ರುವದರಿಂದಲೂ ದೇವರ ವಾಕ್ಯವು ನಿಮ್ಮಲ್ಲಿ ನೆಲೆ ಗೊಂಡಿರುವದರಿಂದಲೂ ನೀವು ಕೆಡುಕನನ್ನು ಜಯಿಸಿ ರುವದರಿಂದಲೂ ನಿಮಗೆ ಬರೆದಿದ್ದೇನೆ. |
15. | ಲೋಕವನ್ನಾಗಲಿ ಲೋಕದಲ್ಲಿರುವವುಗಳ ನ್ನಾಗಲಿ ಪ್ರೀತಿಸಬೇಡಿರಿ. ಯಾವನಾದರೂ ಲೋಕ ವನ್ನು ಪ್ರೀತಿಸಿದರೆ ತಂದೆಯ ಪ್ರೀತಿಯು ಅವನಲ್ಲಿಲ್ಲ. |
16. | ಲೋಕದಲ್ಲಿರುವವುಗಳೆಲ್ಲವು ಅಂದರೆ ಶರೀರದಾಶೆ, ಕಣ್ಣಿನಾಶೆ, ಜೀವನದ ಗರ್ವ ಇವು ತಂದೆಗೆ ಸಂಬಂಧ ಪಟ್ಟವುಗಳಲ್ಲ, ಲೋಕಕ್ಕೆ ಸಂಬಂಧಪಟ್ಟವುಗಳಾಗಿವೆ. |
17. | ಲೋಕವು ಅದರ ಆಶೆಯೂ ಗತಿಸಿಹೋಗುತ್ತವೆ, ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು. |
18. | ಚಿಕ್ಕ ಮಕ್ಕಳೇ, ಇದು ಕಡೇ ಗಳಿಗೆಯಾಗಿದೆ;ಕ್ರಿಸ್ತವಿರೋಧಿಯು ಬರುತ್ತಾನೆಂದು ನೀವು ಕೇಳಿದ ಪ್ರಕಾರ ಈಗಲೂ ಕ್ರಿಸ್ತ ವಿರೋಧಿಗಳು ಬಹುಮಂದಿ ಇದ್ದಾರೆ; ಇದರಿಂದ ಇದು ಕಡೇ ಗಳಿಗೆಯಾಗಿದೆ ಎಂದು ನಾವು ತಿಳಿದುಕೊಳ್ಳುತ್ತೇವೆ. |
19. | ಅವರು ನಮ್ಮಿಂದ ಹೊರಟುಹೋದರು; ಆದರೆ ಅವರು ನಮ್ಮವ ರಾಗಿರಲಿಲ್ಲ. ಯಾಕಂದರೆ ಅವರು ನಮ್ಮವರಾಗಿದ್ದರೆ ನಮ್ಮ ಜೊತೆಯಲ್ಲೇ ಇರುತ್ತಿದ್ದರು. ಆದರೆ ಅವರು ನಮ್ಮಿಂದ ಹೊರಟು ಹೋದದರಿಂದ ಅವರೆಲ್ಲರೂ ನಮ್ಮವರಲ್ಲವೆಂಬದು ತೋರಿಬಂತು. |
20. | ಆದರೆ ನೀವು ಪವಿತ್ರನಾಗಿರುವಾತನಿಂದ ಅಭಿಷೇಕವನ್ನು ಹೊಂದಿದ ವರಾಗಿದ್ದು ಎಲ್ಲವನ್ನು ತಿಳಿದವರಾಗಿದ್ದೀರಿ. |
21. | ನೀವು ಸತ್ಯವನ್ನು ತಿಳಿಯದವರೆಂತಲ್ಲ, ನೀವು ಅದನ್ನು ತಿಳಿದಿರು ವದರಿಂದಲೂ ಯಾವ ಸುಳ್ಳೂ ಸತ್ಯಕ್ಕೆ ಸಂಬಂಧವಾದ ದ್ದಲ್ಲವೆಂದು ನೀವು ತಿಳಿದವರಾಗಿರುವದರಿಂದಲೂ ನಿಮಗೆ ಬರೆದೆನು. |
22. | ಯೇಸುವು ಕ್ರಿಸ್ತನೆಂದು ಅಲ್ಲಗಳೆಯುವವನೇ ಹೊರತು ಸುಳ್ಳುಗಾರನು ಯಾರು? ತಂದೆಯನ್ನೂ ಮಗನನ್ನೂ ಅಲ್ಲಗಳೆಯುವವನೇ ಕ್ರಿಸ್ತವಿರೋಧಿ ಯಾಗಿದ್ದಾನೆ. |
23. | ಯಾವನು ಮಗನನ್ನು ಅಲ್ಲಗಳೆ ಯುವನೋ ಅವನು ತಂದೆಗೆ ಸೇರಿದವನಲ್ಲ; ಯಾವನು ಮಗನನ್ನು ಒಪ್ಪಿಕೊಳ್ಳುವನೋ ಅವನು ತಂದೆಗೂ ಸೇರಿದವನಾಗಿದ್ದಾನೆ. |
24. | ನೀವಂತೂ ಯಾವದನ್ನು ಮೊದಲಿನಿಂದ ಕೇಳಿದ್ದೀರೋ ಅದು ನಿಮ್ಮಲ್ಲಿ ನೆಲೆಗೊಂಡಿರಲಿ. ಮೊದಲಿನಿಂದ ನೀವು ಕೇಳಿದ್ದು ನಿಮ್ಮಲ್ಲಿ ನೆಲೆಗೊಂಡಿದ್ದರೆ ನೀವು ಸಹ ಮಗನಲ್ಲಿಯೂ ತಂದೆಯಲ್ಲಿಯೂ ನೆಲೆಗೊಂಡಿ ರುತ್ತೀರಿ. |
25. | ನಿತ್ಯಜೀವದ ವಾಗ್ದಾನವೇ ಆತನು ನಮಗೆ ಮಾಡಿದ ವಾಗ್ದಾನವಾಗಿದೆ. |
26. | ನಿಮ್ಮನ್ನು ವಂಚಿಸುವವರ ವಿಷಯವಾಗಿ ಇವು ಗಳನ್ನು ನಾನು ನಿಮಗೆ ಬರೆದಿದ್ದೇನೆ. |
27. | ಆದರೆ ಆತನಿಂದ ನೀವು ಹೊಂದಿದ ಅಭಿಷೇಕವು ನಿಮ್ಮಲ್ಲಿ ನೆಲೆಗೊಂಡಿರುವದರಿಂದ ಯಾವನಾದರೂ ನಿಮಗೆ ಉಪದೇಶಮಾಡುವದು ಅವಶ್ಯವಿಲ್ಲ. ಆ ಅಭಿಷೇಕವೇ ಎಲ್ಲಾ ವಿಷಯಗಳಲ್ಲಿ ನಿಮಗೆ ಉಪದೇಶ ಮಾಡುವಂಥ ದಾಗಿದ್ದು ಸತ್ಯವಾಗಿದೆ. ಸುಳ್ಳಲ್ಲ, ಅದು ನಿಮಗೆ ಉಪದೇಶ ಮಾಡಿದ ಪ್ರಕಾರವೇ ಆತನಲಿ |
28. | ಚಿಕ್ಕ ಮಕ್ಕಳೇ, ಆತನು ಪ್ರತ್ಯಕ್ಷನಾಗು ವಾಗ ನಾವು ಆತನ ಆಗಮನದಲ್ಲಿ ಆತನ ಮುಂದೆ ನಿಲ್ಲಲು ನಾಚಿಕೆಪಡದೆ ಧೈರ್ಯದಿಂದಿರುವಂತೆ ಆತನಲ್ಲಿ ನೆಲೆಗೊಂಡಿರ್ರಿ. |
29. | ಆತನು ನೀತಿವಂತನಾಗಿ ದ್ದಾನೆಂಬದು ನಿಮಗೆ ಗೊತ್ತಾಗಿದ್ದರೆ ನೀತಿಯನ್ನು ಅನುಸರಿಸುವ ಪ್ರತಿಯೊಬ್ಬನು ಆತನಿಂದ ಹುಟ್ಟಿದವನಾಗಿದ್ದಾನೆಂದು ನೀವು ತಿಳಿದಿದ್ದೀರಿ. |
← 1John (2/5) → |