← 1Corinthians (8/16) → |
1. | ವಿಗ್ರಹಗಳಿಗೆ ಸಮರ್ಪಣೆ ಮಾಡುವವು ಗಳ ವಿಷಯದಲ್ಲಿ ನಮ್ಮೆಲ್ಲರಿಗೂ ಜ್ಞಾನ ವಿದೆಯೆಂದು ನಾವು ಬಲ್ಲೆವು; ಜ್ಞಾನವು ಉಬ್ಬಿಕೊಳ್ಳುತ್ತದೆ, ಆದರೆ ಪ್ರಿತಿಯು ಭಕ್ತಿವೃದ್ಧಿಯನ್ನುಂಟುಮಾಡು ತ್ತದೆ. |
2. | ಒಬ್ಬನು ತಾನು ಏನಾದರೂ ತಿಳಿದುಕೊಂಡಿ ದ್ದೇನೆಂದು ನೆನಸುವದಾದರೆ ಅವನು ತಿಳಿದುಕೊಳ್ಳ ಬೇಕಾಗಿರುವದನ್ನು ಇನ್ನೂ ತಿಳಿಯದವನಾಗಿದ್ದಾನೆ. |
3. | ಆದರೆ ಯಾವನು ದೇವರನ್ನು ಪ್ರೀತಿಸುತ್ತಾನೋ ಅವನನ್ನೇ ದೇವರು ತಿಳಿದಿದ್ದಾನೆ. |
4. | ವಿಗ್ರಹಗಳಿಗೆ ಸಮರ್ಪಣೆ ಮಾಡಿದವುಗಳನ್ನು ತಿನ್ನುವದರ ವಿಷ ಯದಲ್ಲಿ ನಾನು ಹೇಳುವದೇನಂದರೆ, ಜಗತ್ತಿನಲ್ಲಿ ವಿಗ್ರಹವು ಏನೂ ಅಲ್ಲವೆಂದೂ ಒಬ್ಬ ದೇವರಿದ್ದಾನೆ ಹೊರತು ಬೇರೆ ದೇವರಿಲ್ಲವೆಂದೂ ನಾವು ಬಲ್ಲೆವು. |
5. | ಆಕಾಶದಲ್ಲಿಯಾಗಲೀ ಭೂಮಿಯಲ್ಲಾಗಲೀ ದೇವರು ಗಳೆಂದು ಕರೆಯಲ್ಪಟ್ಟವುಗಳು ಇದ್ದಾಗ್ಯೂ (ಅನೇಕ ದೇವರುಗಳು ಮತ್ತು ಅನೇಕ ಪ್ರಭುಗಳು ಇರುತ್ತಾರೆ.) |
6. | ನಮಗಾದರೋ ಒಬ್ಬನೇ ದೇವರಿದ್ದಾನೆ; ಆತನು ತಂದೆಯೆಂಬಾತನೇ; ಆತನು ಸಮಸ್ತಕ್ಕೂ ಮೂಲ ಕಾರಣನು; ನಾವು ಆತನಲ್ಲಿ ಇದ್ದೇವೆ. ಕರ್ತನಾದ ಯೇಸು ಕ್ರಿಸ್ತನು ಒಬ್ಬನೇ; ಆತನ ಮುಖಾಂತರ ಸಮಸ್ತವೂ ಉಂಟಾಯಿತು; ನಾವು ಆತನ ಮುಖಾಂತರ ಉಂಟಾದೆವು. |
7. | ಆದರೆ ಆ ಜ್ಞಾನವು ಎಲ್ಲರಲ್ಲಿಯೂ ಇಲ್ಲ. ಕೆಲವರು ಈವರೆಗೂ ವಿಗ್ರಹದ ಬಳಿಗೆ ಹೋಗುವ ರೂಢಿಯಲ್ಲಿದ್ದದರಿಂದ ತಾವು ತಿನ್ನುವ ಪದಾರ್ಥಗಳನ್ನು ವಿಗ್ರಹಗಳಿಗೆ ಸಮರ್ಪಣೆ ಮಾಡಿದ್ದೆಂದು ತಿನ್ನುತ್ತಾರೆ; ಹೀಗೆ ಅವರ ಮನಸ್ಸು ಬಲಹೀನವಾಗಿರುವದರಿಂದ ಅಶುದ್ಧವಾಗಿದೆ. |
8. | ಆದರೆ ಆಹಾರವು ನಮ್ಮನ್ನು ದೇವರಿಗೆ ಮೆಚ್ಚಿಕೆಯಾದವರನ್ನಾಗಿ ಮಾಡಲಾರದು; ಯಾಕಂದರೆ ನಾವು ತಿಂದರೆ ನಮ ಗೇನೂ ಹೆಚ್ಚಾಗುವದಿಲ್ಲ; ಇಲ್ಲವೆ ನಾವು ತಿನ್ನದಿದ್ದರೆ ನಮಗೇನೂ ಕಡಿಮೆಯಿಲ್ಲ. |
9. | ಆದರೂ ಈ ನಿಮ್ಮ ಸ್ವಾತಂತ್ರ್ಯವು ಬಲವಿಲ್ಲದವರಿಗೆ ಒಂದು ವೇಳೆ ಅಭ್ಯಂತರ ವಾದೀತು, ಎಚ್ಚರಿಕೆಯಾಗಿರ್ರಿ. |
10. | ಜ್ಞಾನಿಯಾದ ನೀನು ವಿಗ್ರಹಾಲಯದಲ್ಲಿ ಊಟಕ್ಕೆ ಕೂತಿರುವಾಗ ನಿರ್ಬಲ ವಾದ ಮನಸ್ಸಾಕ್ಷಿಯುಳ್ಳ ಯಾವನಾದರೂ ಕಂಡರೆ ಅವನೂ ವಿಗ್ರಹಕ್ಕೆ ಸಮರ್ಪಣೆ ಮಾಡಿದ ಪದಾರ್ಥ ಗಳನ್ನು ತಿನ್ನುವದಕ್ಕೆ ಧೈರ್ಯ ತಂದುಕೊಂಡಾನಲ್ಲವೇ? |
11. | ಹೀಗೆ ಆ ಬಲಹೀನನಾದ ಸಹೋದರನು ನಿನ್ನ ಜ್ಞಾನದಿಂದ ನಾಶವಾಗುತ್ತಾನೆ; ಅವನಿಗಾಗಿಯೂ ಕ್ರಿಸ್ತನು ತನ್ನ ಪ್ರಾಣಕೊಟ್ಟನಲ್ಲವೇ? |
12. | ಹೀಗಿರಲಾಗಿ ಸಹೋದರರಿಗೆ ವಿರೋಧವಾಗಿ ಪಾಪಮಾಡಿ ಅವರ ನಿರ್ಬಲವಾದ ಮನಸ್ಸನ್ನು ನೋಯಿಸಿ ಕ್ರಿಸ್ತನಿಗೆ ವಿರೋಧವಾಗಿ ಪಾಪ ಮಾಡುವವರಾಗುತ್ತೀರಿ. |
13. | ಆದದರಿಂದ ಆಹಾರವು ನನ್ನ ಸಹೋದರನಿಗೆ ಅಭ್ಯಂತರವಾದರೆ ನಾನು ನನ್ನ ಸಹೋದರನಿಗೆ ಅಭ್ಯಂತರಪಡಿಸದಂತೆ ಎಂದಿಗೂ ಮಾಂಸ ತಿನ್ನುವದಿಲ್ಲ. |
← 1Corinthians (8/16) → |