← 1Corinthians (7/16) → |
1. | ನೀವು ನನಗೆ ಬರೆದವುಗಳ ವಿಷಯ ವಾಗಿ--ಸ್ತ್ರೀಯನ್ನು ಮುಟ್ಟದಿರುವದು ಮನುಷ್ಯನಿಗೆ ಒಳ್ಳೇದು. |
2. | ಆದಾಗ್ಯೂ ಜಾರತ್ವಕ್ಕೆ ದೂರವಿರುವಂತೆ ಪ್ರತಿ ಮನುಷ್ಯನಿಗೆ ಅವನ ಸ್ವಂತ ಹೆಂಡತಿಯೂ ಪ್ರತಿ ಸ್ತ್ರೀಗೆ ಅವಳ ಸ್ವಂತ ಗಂಡನೂ ಇರಲಿ. |
3. | ಗಂಡನು ಹೆಂಡತಿಗೆ ಸಲ್ಲತಕ್ಕದ್ದನ್ನು ಸಲ್ಲಿಸಲಿ, ಹಾಗೆಯೇ ಹೆಂಡತಿಯು ಗಂಡನಿಗೆ ಸಲ್ಲಿಸಲಿ. |
4. | ಹೆಂಡತಿಗೆ ತನ್ನ ಸ್ವಂತ ದೇಹದ ಮೇಲೆ ಅಧಿಕಾರ ವಿಲ್ಲ; ಆದರೆ ಗಂಡನಿಗುಂಟು. ಹಾಗೆಯೇ ಪುರುಷನಿಗೆ ಸ್ವಂತ ದೇಹದ ಮೇಲೆ ಅಧಿಕಾರವಿಲ್ಲ; ಆದರೆ ಹೆಂಡತಿಗುಂಟು. |
5. | ಉಪವಾಸ ಮತ್ತು ಪ್ರಾರ್ಥನೆಗೆ ಮನಸ್ಸು ಕೊಡುವದಕ್ಕಾಗಿ ನೀವು ಪರಸ್ಪರ ಸಮ್ಮತಿ ಯಿಂದ ಸ್ವಲ್ಪಕಾಲ ಆಗಲಿರಬಹುದೇ ಹೊರತು ನಿಮಗೆ ದಮೆಯಿಲ್ಲದಿರುವದನ್ನು ನೋಡಿ ಸೈತಾನನು ನಿಮ್ಮನು ಶೋಧಿಸದಂತೆ ತಿರಿಗಿ ಕೂಡಿಕೊಳ್ಳಿರಿ. |
6. | ಹೀಗೆ ನಾನು ಅನುಮತಿಯಿಂದಲೇ ಮಾತನಾಡುತ್ತೇನೆ, ಆದರೆ ಆಜ್ಞೆಯಲ್ಲ. |
7. | ನಾನು ಇದ್ದಂತೆಯೇ ಎಲ್ಲರೂ ಇರ ಬೇಕೆಂದು ಇಚ್ಛಿಸುತ್ತೇನೆ. ಆದರೆ ಒಬ್ಬನು ಒಂದು ವಿಧದಲ್ಲಿ ಮತ್ತೊಬ್ಬನು ಇನ್ನೊಂದು ವಿಧದಲ್ಲಿ ಹೀಗೆ ಪ್ರತಿಯೊಬ್ಬನು ದೇವರಿಂದ ಅವನಿಗೆ ತಕ್ಕ ವರವನ್ನು ಹೊಂದಿದವನಾಗಿದ್ದಾನೆ. |
8. | ಮದುವೆಯಿಲ್ಲದವರನ್ನೂ ವಿಧವೆಯರನ್ನೂ ಕುರಿತು ನಾನು ಹೇಳುವದೇ ನಂದರೆ--ನಾನಿರುವಂತೆಯೇ ಇರುವದು ಅವರಿಗೆ ಒಳ್ಳೇದು; |
9. | ಅವರು ದಮೆಯಿಲ್ಲದವರಾದರೆ ಮದುವೆ ಮಾಡಿಕೊಳ್ಳಲಿ; ತಾಪಪಡುವದಕ್ಕಿಂತ ಮದುವೆಮಾಡಿ ಕೊಳ್ಳುವದು ಉತ್ತಮ. |
10. | ಮದುವೆ ಮಾಡಿಕೊಂಡಿರು ವವರಿಗೆ ನನ್ನ ಅಪ್ಪಣೆ ಮಾತ್ರವಲ್ಲದೆ ಕರ್ತನ ಅಪ್ಪಣೆ ಏನಂದರೆ--ಹೆಂಡತಿಯು ಗಂಡನನ್ನು ಬಿಟ್ಟು ಅಗಲ ಬಾರದು. |
11. | ಒಂದು ವೇಳೆ ಅಗಲಿದರೂ ಮದುವೆ ಯಿಲ್ಲದೆ ಇರಬೇಕು, ಇಲ್ಲವೆ ಗಂಡನ ಸಂಗಡ ಸಮಾ ಧಾನವಾಗಬೇಕು; ಗಂಡನು ಹೆಂಡತಿಯನ್ನು ಬಿಡ ಬಾರದು. |
12. | ಮಿಕ್ಕಾದವರ ವಿಷಯದಲ್ಲಿ ಕರ್ತನ ಮಾತು ಇಲ್ಲವಾದರೂ ನಾನು ಹೇಳುವದೇನಂದರೆ--ಒಬ್ಬ ಸಹೋದರನಿಗೆ ನಂಬಿಕೆಯಿಲ್ಲದ ಹೆಂಡತಿಯಿರಲಾಗಿ ಆಕೆಯು ಅವನೊಂದಿಗೆ ಇರುವದಕ್ಕೆ ಸಮ್ಮತಿಸದರೆ ಅವನು ಆಕೆಯನ್ನು ಬಿಡಬಾರದು. |
13. | ಒಬ್ಬ ಸ್ತ್ರೀಗೆ ನಂಬಿಕೆಯಿಲ್ಲದ ಗಂಡನಿರಲಾಗಿ ಅವನು ಆಕೆಯೊಂದಿಗೆ ಇರುವದಕ್ಕೆ ಸಮ್ಮತಿಸಿದರೆ ಆಕೆಯು ಅವನನ್ನು ಬಿಡ ಬಾರದು. |
14. | ಯಾಕಂದರೆ ನಂಬಿಕೆಯಿಲ್ಲದ ಗಂಡನು ತನ್ನ ಹೆಂಡತಿಯಲ್ಲಿ ಶುದ್ಧನಾಗಿದ್ದಾನೆ; ನಂಬಿಕೆಯಿಲ್ಲದ ಹೆಂಡತಿಯು ತನ್ನ ಗಂಡನಲ್ಲಿ ಶುದ್ಧಳಾಗಿದ್ದಾಳೆ. ಹಾಗಲ್ಲ ದಿದ್ದರೆ ನಿಮ್ಮ ಮಕ್ಕಳು ಅಪವಿತ್ರರಾಗುತ್ತಿದ್ದರು; ಈಗಲಾದರೋ ಅವರು ಪವಿತ್ರರಾಗಿದ್ದಾರೆ. |
15. | ಆದರೆ ನಂಬಿಕೆಯಿಲ್ಲದವನು ಅಗಲಬೇಕೆಂದಿದ್ದರೆ ಅಗಲಿ ಹೋಗಲಿ; ಇಂಥಾ ಸಂದರ್ಭಗಳಲ್ಲಿ ಸಹೋದರ ನಾಗಲಿ ಸಹೋದರಿಯಾಗಲಿ ಬದ್ಧರಲ್ಲ, ಸಮಾಧಾನ ದಲ್ಲಿರಬೇಕೆಂದು ದೇವರು ನಮ್ಮನ್ನು ಕರೆದಿದ್ದಾನೆ. |
16. | ಓ ಹೆಂಡತಿಯೇ, ನಿನ್ನ ಗಂಡನನ್ನು ರಕ್ಷಿಸುವಿಯೋ ಏನೋ ನಿನಗೇನು ಗೊತ್ತು? ಓ ಗಂಡನೇ, ನಿನ್ನ ಹೆಂಡತಿಯನ್ನು ರಕ್ಷಿಸುವಿಯೋ ಏನೋ ನಿನಗೇನು ಗೊತ್ತು? |
17. | ದೇವರು ಒಬ್ಬೊಬ್ಬನಿಗೆ ಹೇಗೆ ಹಂಚಿಕೊಟ್ಟನೋ ಮತ್ತು ಕರ್ತನು ಒಬ್ಬೊಬ್ಬನನ್ನು ಹೇಗೆ ಕರೆದನೋ ಅದಕ್ಕೆ ತಕ್ಕಂತೆ ನಡೆಯಲಿ; ಹೀಗೆ ನಾನು ಎಲ್ಲಾ ಸಭೆಗಳಲ್ಲಿಯೂ ನೇಮಕಮಾಡುತ್ತೇನೆ. |
18. | ಸುನ್ನತಿ ಯಲ್ಲಿದ್ದು ಕರೆಯಲ್ಪಟ್ಟವನು ಯಾವನಾದರೂ ಇದ್ದಾನೋ? ಅವನು ಸುನ್ನತಿ ಇಲ್ಲದವನಂತಾಗ ಬಾರದು; ಸುನ್ನತಿ ಇಲ್ಲದೆ ಕರೆಯಲ್ಪಟ್ಟವನು ಯಾವ ನಾದರೂ ಇದ್ದಾನೋ? ಅವನು ಸುನ್ನತಿ ಮಾಡಿಸಿ ಕೊಳ್ಳಬಾರದು. |
19. | ಸುನ್ನತಿಯಾದರೂ ಏನೂ ಇಲ್ಲ, ಸುನ್ನತಿಯಾಗದ್ದಿದರೂ ಏನೂ ಇಲ್ಲ; ಆದರೆ ದೇವರ ಆಜ್ಞೆಗಳನ್ನು ಅನುಸರಿಸಿ ನಡೆಯುವದೇ ಆಗಿದೆ. |
20. | ದೇವರು ಕರೆದಾಗ ಪ್ರತಿಯೊಬ್ಬನು ಯಾವ ಸ್ಥಿತಿಯಲ್ಲಿದ್ದನೋ ಆ ಸ್ಥಿತಿಯಲ್ಲಿಯೇ ಇರಬೇಕು. |
21. | ಕರೆಯಲ್ಪಟ್ಟಾಗ ನೀನು ದಾಸನಾಗಿದ್ದೀಯೋ? ಅದಕ್ಕೆ ಚಿಂತಿಸಬೇಡ. ಆದರೆ ನೀನು ಸ್ವತಂತ್ರ ನಾಗುವದಾದರೆ ಅದು ಉತ್ತಮ. |
22. | ಯಾವನು ದಾಸನಾಗಿದ್ದು ಕರ್ತನಿಂದ ಕರೆಯಲ್ಪಟ್ಟಿರುವನೋ ಅವನು ಕರ್ತನಿಂದ ಸ್ವತಂತ್ರನು; ಅದೇ ಪ್ರಕಾರ ಯಾವನು ಸ್ವತಂತ್ರನಾಗಿದ್ದು ಕರೆಯಲ್ಪಟ್ಟಿರುವನೋ ಅವನು ಕ್ರಿಸ್ತನಿಗೆ ದಾಸನು. |
23. | ನೀವು ಕ್ರಯಕ್ಕೆ ಕೊಳ್ಳಲ್ಪಟ್ಟವರು, ಮನುಷ್ಯರಿಗೆ ದಾಸರಾಗಬೇಡಿರಿ. |
24. | ಸಹೋದರರೇ, ಪ್ರತಿಯೊಬ್ಬನು ಕರೆಯಲ್ಪಟ್ಟಾಗ ಯಾವ ಸ್ಥಿತಿಯಲ್ಲಿದ್ದನೋ ಅದೇ ಸ್ಥಿತಿಯಲ್ಲಿ ದೇವರೊಂದಿಗೆ ಇದ್ದುಕೊಂಡಿರಲಿ. |
25. | ಕನ್ನಿಕೆಯರನ್ನು ಕುರಿತು ನನಗೆ ಕರ್ತನಿಂದ ಯಾವ ಆಜ್ಞೆಯೂ ಇಲ್ಲ; ಆದರೆ ನಂಬಿಗಸ್ತನಾಗಿರುವದಕ್ಕೆ ಕರ್ತನಿಂದ ಕರುಣೆಯನ್ನು ಹೊಂದಿದವನಾಗಿ ನನ್ನ ನಿರ್ಣಯವನ್ನು ಹೇಳುತ್ತೇನೆ. |
26. | ಈಗಿನ ಕಷ್ಟದ ನಿಮಿತ್ತ ಹಾಗೆಯೇ ಇರುವದು ಒಳ್ಳೇದು; ಒಬ್ಬ ಮನುಷ್ಯನು ಇದ್ದ ಹಾಗೆಯೇ ಇರುವದು ಉತ್ತಮವೆಂದು ನಾನು ಭಾವಿಸುತ್ತೇನೆ. |
27. | ಹೆಂಡತಿಯನ್ನು ಕಟ್ಟಿಕೊಂಡಿ ದ್ದೀಯೋ? ಬಿಡುಗಡೆಗಾಗಿ ಪ್ರಯತ್ನಿಸಬೇಡ; ಹೆಂಡತಿಯನ್ನು ಬಿಟ್ಟವನಾಗಿದ್ದೀಯೋ? ಹೆಂಡತಿಗಾಗಿ ಪ್ರಯತ್ನಿಸಬೇಡ. |
28. | ಒಂದು ವೇಳೆ ನೀನು ಮದುವೆ ಮಾಡಿಕೊಂಡರೂ ಪಾಪವಲ್ಲ. ಕನ್ನಿಕೆಯು ಮದುವೆ ಮಾಡಿಕೊಂಡರೂ ಪಾಪವಲ್ಲ. ಆದಾಗ್ಯೂ ಅಂಥ ವರಿಗೆ ಶರೀರಸಂಬಂಧವಾಗಿ ಕಷ್ಟ ಸಂಭವಿಸುವದು; ಇದು ನಿಮಗೆ ಉಂಟಾಗಬಾರದೆಂದು ನನ್ನ ಅಪೇಕ್ಷೆ. |
29. | ಆದರೆ ಸಹೋದರರೇ, ನಾನು ಹೇಳುವದೇ ನಂದರೆ--ಸಮಯವು ಸಂಕೋಚವಾದದ್ದರಿಂದ ಇನ್ನು ಮೇಲೆ ಹೆಂಡತಿಯುಳ್ಳವರು ಹೆಂಡತಿಯಿಲ್ಲದವ ರಂತೆಯೂ |
30. | ಅಳುವವರು ಅಳದವರಂತೆಯೂ ಸಂತೋಷಪಡುವವರು ಸಂತೋಷಪಡದವ ರಂತೆಯೂ ಕೊಂಡುಕೊಳ್ಳುವವರು ಇಲ್ಲದವ ರಂತೆಯೂ |
31. | ಲೋಕವನ್ನು ಅನುಭೋಗಿಸುವವರು ಅದನ್ನು ದುರುಪಯೋಗ ಮಾಡದವರಂತೆಯೂ ಇರಬೇಕು; ಯಾಕಂದರೆ ಈ ಲೋಕದ ಆಡಂಬರವು ಗತಿಸಿಹೋಗುತ್ತದೆ. |
32. | ಆದರೆ ನೀವು ಚಿಂತೆಯಿಲ್ಲದವರಾಗಿರಬೇಕೆಂಬದು ನನ್ನ ಇಷ್ಟ. ಮದುವೆಯಿಲ್ಲದವನು ತಾನು ಕರ್ತನನ್ನು ಹೇಗೆ ಮೆಚ್ಚಿಸಬೇಕೆಂದು ಕರ್ತನ ಕಾರ್ಯಗಳನ್ನು ಕುರಿತು ಚಿಂತಿಸುತ್ತಾನೆ. |
33. | ಮದುವೆ ಯಾದವನು ತನ್ನ ಹೆಂಡತಿಯನ್ನು ಹೇಗೆ ಮೆಚ್ಚಿಸ ಬೇಕೆಂದು ಪ್ರಪಂಚದವುಗಳನ್ನು ಕುರಿತು ಚಿಂತಿಸುತ್ತಾನೆ. |
34. | ಅದರಂತೆ ಮದುವೆಯಾದವಳಿಗೂ ಕನ್ನಿಕೆಗೂ ವ್ಯತ್ಯಾಸವುಂಟು; ಮದುವೆಯಾಗದವಳು ತಾನು ದೇಹಾತ್ಮಗಳಲ್ಲಿ ಪವಿತ್ರಳಾಗಿರಬೇಕೆಂದು ಕರ್ತನ ಕಾರ್ಯಗಳನ್ನು ಕುರಿತು ಚಿಂತಿಸುತ್ತಾಳೆ; ಮದುವೆ ಯಾದವಳು ತನ್ನ ಗಂಡನನ್ನು ಹೇಗೆ ಮೆಚ್ಚಿಸಬೇಕೆಂದು ಪ್ರಪಂಚದವುಗಳನ್ನು ಕುರಿತು |
35. | ನಾನು ನಿಮಗೆ ಉರ್ಲುಹಾಕುವದಕ್ಕಾಗಿ ಅಲ್ಲ; ಆದರೆ ಯೋಗ್ಯವಾದದ್ದಕ್ಕಾಗಿಯೂ ನೀವು ಕರ್ತನಿಗೆ ದೃಢ ನಿಷ್ಠೆಯುಳ್ಳವರಾಗಿಯೂ ಇರುವಂತೆ ನಿಮ್ಮ ಸ್ವಂತ ಹಿತಕ್ಕಾಗಿಯೇ ಹೇಳುತ್ತೇನೆ. |
36. | ಒಬ್ಬನು ತನ್ನ ಕನ್ನಿಕೆಗೆ ಮದುವೆಯಿಲ್ಲದಿರುವದು ಮರ್ಯಾದೆಯಲ್ಲವೆಂದು ಭಾವಿಸಿದರೆ ಮತ್ತು ಆಕೆಗೆ ಪ್ರಾಯ ಕಳೆದುಹೋಗು ತ್ತದಲ್ಲಾ, ಮದುವೆಯಾಗುವದು ಅವಶ್ಯವೆಂದು ಅವನಿಗೆ ಕಂಡರೆ ತನ್ನಿಷ್ಟದಂತೆ ಮಾಡಲಿ, ಅವನು ಪಾಪಮಾಡುವದಿಲ್ಲ, ಅವರು ಮದುವೆಮಾಡಿ ಕೊಳ್ಳಲಿ. |
37. | ಆದರೆ ಒಬ್ಬನು ದೃಢಚಿತ್ತನಾಗಿದ್ದು ಬಲವಂತವೇನೂ ಇಲ್ಲದೆ ತನ್ನಿಷ್ಟವನ್ನು ನಡಿಸುವದಕ್ಕೆ ಹಕ್ಕುಳ್ಳವನಾಗಿ ತನ್ನ ಕನ್ನಿಕೆಯನ್ನು ಮದುವೆಮಾಡಿ ಕೊಡುವದಿಲ್ಲವೆಂದು ತನ್ನ ಹೃದಯದಲ್ಲಿ ನಿರ್ಣಯಿಸಿ ಕೊಂಡರೆ ಅವನು ಹಾಗೆ ಮಾಡುವದು ಒಳ್ಳೇದು. |
38. | ಹಾಗಾದರೆ ಆಕೆಯನ್ನು ಮದುವೆ ಮಾಡಿಕೊಡು ವವನು ಒಳ್ಳೇದನ್ನು ಮಾಡುತ್ತಾನೆ. ಮದುವೆಮಾಡಿ ಕೊಡದೆ ಇರುವವನು ಇನ್ನೂ ಒಳ್ಳೇದನ್ನು ಮಾಡುತ್ತಾನೆ. |
39. | ಮದುವೆಯಾದವಳು ತನ್ನ ಗಂಡನು ಜೀವದಿಂದಿ ರುವ ತನಕ ಅವನಿಗೆ ಬದ್ಧಳಾಗಿದ್ದಾಳೆ; ಗಂಡನು ಸತ್ತಿದ್ದರೆ ಆಕೆಯು ಬೇಕಾದವನನ್ನು ಮದುವೆ ಮಾಡಿಕೊಳ್ಳು ವದಕ್ಕೆ ಸ್ವತಂತ್ರಳಾಗಿದ್ದಾಳೆ; ಆದರೆ ಇದು ಕರ್ತನಲ್ಲಿ ಆಗತಕ್ಕದ್ದು. |
40. | ಆದರೂ ನನ್ನ ನಿರ್ಣಯಕ್ಕನುಸಾರ ಆಕೆಯು ಇದ್ದ ಹಾಗೆಯೇ ಇರುವದಾದರೆ ಆಕೆಯು ಭಾಗ್ಯವಂತಳು; ನನ್ನಲ್ಲಿ ದೇವರಾತ್ಮನು ಇದ್ದಾನೆಂದು ನಾನು ನೆನಸುತ್ತೇನೆ. |
← 1Corinthians (7/16) → |