← 1Corinthians (2/16) → |
1. | ಸಹೋದರರೇ, ನಾನಂತೂ ದೇವರ ಸಾಕ್ಷಿಯನ್ನು ತಿಳಿಸುವವನಾಗಿ ನಿಮ್ಮ ಬಳಿಗೆ ಬಂದಾಗ ವಾಕ್ಚಾತುರ್ಯದಿಂದಾಲಿ ಜ್ಞಾನದಿಂದಾಗಲಿ ಬರಲಿಲ್ಲ. |
2. | ಶಿಲುಬೆಗೆ ಹಾಕಲ್ಪಟ್ಟವನಾದ ಯೇಸು ಕ್ರಿಸ್ತನನ್ನೇ ಹೊರತು ಬೇರೆ ಯಾವದನ್ನೂ ತಿಳಿಯ ಕೂಡದೆಂದು ನಾನು ನಿಮ್ಮಲ್ಲಿ ತಿರ್ಮಾನಿಸಿ ಕೊಂಡೆನು. |
3. | ಇದಲ್ಲದೆ ನಾನು ನಿಮ್ಮ ಬಳಿಯಲ್ಲಿದ್ದಾಗ ಬಲಹೀನನೂ ಭಯಪಡುವವನೂ ಬಹುನಡುಗು ವವನೂ ಆಗಿದ್ದೆನು. |
4. | ನನ್ನ ಬೋಧನೆಯಲ್ಲಿಯೂ ಪ್ರಸಂಗದಲ್ಲಿಯೂ ಮನವೊಲಿಸುವ ಮನುಷ್ಯಜ್ಞಾನ ವಾಕ್ಯಗಳನ್ನು ನಾನು ಪ್ರಯೋಗಿಸದೆ ಆತ್ಮನ ಬಲವನ್ನು ತೋರ್ಪಡಿಸುವ ವಾಕ್ಯಗಳನ್ನೇ ಪ್ರಯೋಗಿಸಿದೆನು. |
5. | ಹೀಗೆ ನಿಮ್ಮ ನಂಬಿಕೆಯು ಮನುಷ್ಯಜ್ಞಾನವನ್ನು ಆಧಾರ ಮಾಡಿಕೊಂಡಿರದೆ ದೇವರ ಶಕ್ತಿಯನ್ನೇ ಆಧಾರ ಮಾಡಿಕೊಂಡಿರಬೇಕು. |
6. | ಆದರೂ ಪರಿಪೂರ್ಣರಾದವರಲ್ಲಿ ಜ್ಞಾನವನ್ನೇ ನಾವು ಹೇಳುತ್ತೇವೆ; ಆದಾಗ್ಯೂ ಅದು ಇಹಲೋಕದ ಜ್ಞಾನವಲ್ಲ ಇಲ್ಲವೆ ಇಲ್ಲದೆ ಹೋಗುವ ಇಹ ಲೋಕಾಧಿಪತಿಗಳ ಜ್ಞಾನವೂ ಅಲ್ಲ. |
7. | ಆದರೆ ಗುಪ್ತ ವಾಗಿದ್ದ ಜ್ಞಾನವನ್ನು ತಿಳಿಸುವಲ್ಲಿ ದೇವರ ಜ್ಞಾನವನ್ನೇ ಹೇಳುತ್ತೇವೆ; ಅದನ್ನು ದೇವರು ನಮ್ಮ ಮಹಿಮೆಗಾಗಿ ಲೋಕೋತ್ಪತ್ತಿಗಿಂತ ಮೊದಲೇ ನೇಮಿಸಿದನು. |
8. | ಇದನ್ನು (ಆ ಜ್ಞಾನವನ್ನು) ಇಹಲೋಕಾಧಿ ಪತಿಗಳಲ್ಲಿ ಯಾರೂ ಅರಿಯಲಿಲ್ಲ; ಅರಿತಿದ್ದರೆ ಅವರು ಮಹಿಮೆ ಯುಳ್ಳ ಕರ್ತನನ್ನು ಶಿಲುಬೆಗೆ ಹಾಕುತ್ತಿರಲಿಲ್ಲ. |
9. | ಆದರೆ ಬರೆದಿರುವ ಪ್ರಕಾರ--ದೇವರು ತನ್ನನ್ನು ಪ್ರೀತಿಸು ವವರಿಗಾಗಿ ಸಿದ್ಧಮಾಡಿರುವಂಥವುಗಳನ್ನು ಕಣ್ಣು ಕಾಣಲಿಲ್ಲ, ಕಿವಿ ಕೇಳಲಿಲ್ಲ, ಇಲ್ಲವೆ ಅವು ಮನುಷ್ಯನ ಹೃದಯದಲ್ಲಿ ಸೇರಲಿಲ್ಲ. |
10. | ನಮಗಾದರೋ ದೇವರು ತನ್ನ ಆತ್ಮನ ಮೂಲಕ ಅವುಗಳನ್ನು ಪ್ರಕಟಿಸಿದನು. ಆ ಆತ್ಮನು ಎಲ್ಲಾ ವಿಷಯಗಳನ್ನು, ಹೌದು, ದೇವರ ಅಗಾಧವಾದ ವಿಷಯಗಳನ್ನು ಕೂಡ ಪರಿಶೋಧಿಸು ವವನಾಗಿದ್ದಾನೆ. |
11. | ಮನುಷ್ಯನ ಒಳಗಿನ ವಿಷಯಗಳು ಅವನಲ್ಲಿರುವ ಆತ್ಮಕ್ಕೆ ಹೊರತು ಮತ್ತಾರಿಗೆ ತಿಳಿದಾವು? ಹಾಗೆಯೇ ದೇವರ ವಿಷಯಗಳನ್ನು ದೇವರ ಆತ್ಮನೇ ಹೊರತು ಬೇರೆ ಯಾರೂ ಗ್ರಹಿಸುವದಿಲ್ಲ. |
12. | ನಾವು ಪ್ರಾಪಂಚಿಕ ಆತ್ಮವನ್ನು ಹೊಂದದೆ ದೇವರು ನಮಗೆ ಉಚಿತವಾಗಿ ದಯಪಾಲಿಸಿರುವವುಗಳನ್ನು ತಿಳುಕೊಳ್ಳು ವದಕ್ಕಾಗಿ ದೇವರ ಆತ್ಮನನ್ನೇ ಹೊಂದಿದೆವು. |
13. | ಇವುಗಳನ್ನು ಮಾನುಷ್ಯಜ್ಞಾನವು ಕಲಿಸಿದ ಮಾತು ಗಳಿಂದ ಹೇಳದೆ ಪರಿಶುದ್ಧಾತ್ಮನು ಕಲಿಸಿಕೊಟ್ಟ ಮಾತುಗಳಿಂದ ಹೇಳಿ ಆತ್ಮ ಸಂಬಂಧವಾದವುಗಳನ್ನು ಆತ್ಮೀಕವಾದವುಗಳೊಂದಿಗೆ ಹೋಲಿಸುತ್ತೇವೆ. |
14. | ಪ್ರಾಕೃತ ಮನುಷ್ಯನು ದೇವರಾತ್ಮನ ವಿಷಯಗಳನ್ನು ಅಂಗೀಕರಿಸುವದಿಲ್ಲ; ಅವು ಅವನಿಗೆ ಹುಚ್ಚುತನವಾಗಿ ತೋರುತ್ತವೆ; ಇಲ್ಲವೆ ಅವು ಆತ್ಮವಿಚಾರದಿಂದ ತಿಳಿಯತಕ್ಕವುಗಳಾಗಿರಲಾಗಿ ಅವನು ಅವುಗಳನ್ನು ಗ್ರಹಿಸ ಲಾರನು. |
15. | ಆತ್ಮನಿಂದ ನಡಿಸಿಕೊಳ್ಳುವವನೋ ಎಲ್ಲವನ್ನು ವಿಚಾರಿಸಿ ತಿಳುಕೊಳ್ಳುತ್ತಾನೆ; ಆದರೆ ಇವನನ್ನು ಯಾವನೂ ವಿಚಾರಿಸಿ ತಿಳುಕೊಳ್ಳುವದಿಲ್ಲ. |
16. | ಕರ್ತನ ಮನಸ್ಸನ್ನು ತಿಳಿದುಕೊಂಡು ಆತನಿಗೆ ಉಪದೇಶಿಸುವವನಾರು? ನಮಗಾದರೋ ಕ್ರಿಸ್ತನ ಮನಸ್ಸು ಇರುತ್ತದೆ. |
← 1Corinthians (2/16) → |